ಸಾಗರದಲ್ಲಿ ಕುರ್ಚಿಯ ಮೇಲೆ ಫೈಟರ್ ಜೆಟ್ ಲ್ಯಾಂಡ್ ಮಾಡಿದ ಪೈಲಟ್
ಅಪಾಯವನ್ನು ಅರಿತ ಅಮೆರಿಕ ಸೇನೆಯ ಪೈಲಟ್ ಧೈರ್ಯ ಕೈಬಿಡದೆ ಅತೀವ ಬುದ್ಧಿವಂತಿಕೆಯಿಂದ ಯುದ್ದ ಜೆಟ್ ವಿಮಾನವನ್ನು ಸಾಗರದ ಯುದ್ಧ ಹಡಗಿನಲ್ಲಿ ಕುರ್ಚಿಯ ಮೇಲೆ ಲ್ಯಾಂಡ್ ಮಾಡುವ ಮೂಲಕ ಪ್ರಶಂಸೆಗೆ ಪಾತ್ರವಾಗಿದ್ದಾರೆ.
ಫೈಟರ್ ಜೆಟ್ ವಿಮಾನದ ಫ್ರಂಟ್ ಲ್ಯಾಂಡಿಂಗ್ ಗೇರ್ ವೈಫಲ್ಯದಿಂದಾಗಿ ಸಹಜ ಲ್ಯಾಂಡಿಂಗ್‌ಗೆ ತೊಡಕುಂಟಾಗಿತ್ತು. ಬಳಿಕ ಪೈಲಟ್ ಕುರ್ಚಿಯ ಸಹಾಯದಿಂದ ಸಮಾನಾಂತರವಾಗಿ ವಿಮಾನ ಕೆಳಕ್ಕಿಳಿಸುವ ಮೂಲಕ ಅಪಾಯದಿಂದ ಪಾರಾಗಿದ್ದಾರೆ.

ಹೇಳಿ ಕೇಳಿ ಇದು ಅಮೆರಿಕದಲ್ಲಿ ನಡೆದ ಹಳೆಯ ಘಟನೆಯಾಗಿದೆ. ಆದರೂ ರೋಚಕ ವೀಡಿಯೋ ಎಲ್ಲರಲ್ಲೂ ಬಹಳ ಕುತೂಹಲವನ್ನುಂಟು ಮಾಡುತ್ತಿದೆ. [ಅಂತಿಮ ಸ್ಲೈಡರ್ ನಲ್ಲಿ ರೋಚಕ ವಿಡಿಯೋ ವೀಕ್ಷಿಸಲು ಮರೆಯದಿರಿ]

ಅಮೆರಿಕ ನಾವಿಕ ಸೇನೆಗೆ ಸೇರಿದ ಪೈಲಟ್ ಕ್ಯಾಪ್ಟನ್ ವಿಲಿಯಮ್ ಮಹೋನಿ ಫೈಟರ್ ಜೆಟ್ ಸುರಕ್ಷಿತವಾಗಿ ಲ್ಯಾಂಡ್ ಮೂಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಎವಿ-8ಬಿ ಫೈಟರ್ ಜೆಟ್ ನಲ್ಲಿ ಹಾರಾಟ ನಡೆಸಿದ್ದ ಪೈಲಟ್ ಹಿಂತಿರುಗುವ ವೇಳೆಯಲ್ಲಿ ಲ್ಯಾಂಡಿಂಗ್ ಗೇರ್ ವೈಫಲ್ಯಕ್ಕೊಳಗಾಗಿತ್ತು. ತಕ್ಷಣವೇ ವಿಮಾನವನ್ನು ನಿಧಾನಗೊಳಿಸಿ ನಿಯಂತ್ರಣಕ್ಕೆ ತಂದಿದ್ದರು.

ಬಳಿಕ ಹಡಗಿನಲ್ಲಿರುವ ನಿಯಂತ್ರಣ ಅಧಿಕಾರಿಗಳ ಜೊತೆಗೆ ಸಂಪರ್ಕ ಸಾಧಿಸಿರುವ ಅವರು ಕುರ್ಚಿಯ ಬೆಂಬಲ ನೀಡುವಂತೆ ಬೇಡಿಕೊಂಡರು.

ಇದಾದ ಬಳಿಕ 20 ಅಡಿ ಎತ್ತರದಿಂದ ನಿಧಾನವಾಗಿ ವಿಮಾನದ ತುದಿ ಭಾಗವನ್ನು ಕುರ್ಚಿಯ ಮೇಲ್ಬಾಗಕ್ಕಿಳಿಸಿದರು. ಹೀಗೆ ಸಂಭವನೀಯ ಅನಾಹುತವನ್ನು ತಪ್ಪಿಸಿದರು.

ಅಷ್ಟಕ್ಕೂ ಇದು ಅಂತಿಥ ಸಾಧಾರಣ ಕುರ್ಚಿ ಆಗಿರಲಿಲ್ಲ. ಬರೋಬ್ಬರಿ 22,000 ಪೌಂಡುಗಳಷ್ಟು ಭಾರದ ಫೈಟರ್ ಜೆಟ್ ವಿಮಾನದ ತುದಿ ಭಾಗದ ಭಾರವನ್ನು ಸಮರ್ಥವಾಗಿ ಎದುರಿಸಿದೆ.

ಹಾಗೊಂದು ವೇಳೆ ಅವಘಡ ಸಂಭವಿಸಿದ್ದಲ್ಲಿ ಯುದ್ಧ ಜೆಟ್ ವಿಮಾನಕ್ಕೆ ಬೆಂಕಿ ತಗಲುವ ಭೀತಿ ಕಾಡುತ್ತಿತ್ತು. ಸದ್ಯ ಅಪಾರ ನಾಶನಷ್ಟವನ್ನು ತಪ್ಪಿಸಲಾಗಿದೆ.
ರೋಚಕ ವಿಡಿಯೋ ವೀಕ್ಷಿಸಿ


Click it and Unblock the Notifications








