ಪಾಕ್ ಉಗ್ರರ ವಿರುದ್ಧ ರಹಸ್ಯ ಕ್ಷಿಪಣಿ ವಿಧ್ವಂಸಕ ಹಡಗು ನಿಯೋಜಿಸಿದ ಅಮೆರಿಕ
ಪಾಕಿಸ್ತಾನದ ಜೊತೆ ಅಂತರವನ್ನು ಕಾಪಾಡಿಕೊಂಡಿರುವ ಅಮೆರಿಕ ಕಳೆದ ಕೆಲವು ವರ್ಷಗಳಿಂದ ಭಾರತದತ್ತ ಒಲವು ತೋರಿದೆ. ಭಾರತದ ಜೊತೆಗೆ ಉಭಯ ದೇಶಗಳ ಬಾಂಧವ್ಯ ವೃದ್ಧಿಗೆ ಅಮೆರಿಕ ಸಹಮತ ವ್ಯಕ್ತಪಡಿಸಿದರೂ ಅಲ್ಲಿನ ಪ್ರತಿಯೊಂದು ನಡೆಯನ್ನು ಎಚ್ಚರಿಕೆಯಿಂದ ಕಾಣಬೇಕಿದೆ. ಒಂದೆಡೆ ಭಾರತ ವಿಶ್ವ ರಾಷ್ಟ್ರಗಳ ಸಾಲಿನಲ್ಲಿ ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವುದು ಇನ್ನೊಂದೆಡೆ ಪಾಕಿಸ್ತಾನ ಭಯೋತ್ಪಾದನೆಯ ನೆಲೆಯಾಗಿ ಕೆಟ್ಟ ಹೆಸರನ್ನು ಮಾಡಿರುವುದರಿಂದ ಅಮೆರಿಕಗೆ ಭಾರತದ ಜೊತೆ ಸಂಬಂಧ ವೃದ್ಧಿಸಿಕೊಳ್ಳದೇ ಅನ್ಯ ದಾರಿಯಿಲ್ಲ. ಈ ನಡುವೆ ಅಮೆರಿಕ ಕ್ಷಿಪಣಿ ವಿಧ್ವಂಸಕ ಯುದ್ಧ ಹಡಗನ್ನು ನಿರ್ಮಿಸುವ ಮೂಲಕ ಈಗಲೂ ವಿಶ್ವದ ದೊಡ್ಡಣ್ಣ ತಾನೇ ಎಂಬುದನ್ನು ನಿರೂಪಿಸಲು ಹೊರಟಿದೆ.

ಬಾಲ್ಟಿಮೋರ್ ಬಂದರಿನಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕದ ನಾವಿಕ ಸೇನೆಯು ಸಕಲ ಸಿದ್ಧತೆಗಳಿಂದ ಕೂಡಿದ ಗೈಡಡ್ ಮಿಸೈಲ್ ನಾಶಕ ಡಿಡಿಜಿ 100 ಯುಎಸ್ ಎಸ್ ಝುಮ್ ವಾಲ್ಟ್ ಯುದ್ಧ ಹಡಗನ್ನು ನಿಯೋಜಿಸಿದೆ.

ಅಮೆರಿಕ ನೌಕಾಪಡೆಯ ಅತ್ಯಂತ ದೊಡ್ಡ ಮತ್ತು ಸಂಕೀರ್ಣವಾದ ಕ್ಷಿಪಣಿ ನಾಶಕಗಳಲ್ಲಿ ಇದೂ ಒಂದಾಗಿದ್ದು, ಬರೋಬ್ಬರಿ 4.4 ಬಿಲಿಯನ್ ಅಮೆರಿಕನ್ ಡಾಲರ್ ಗಳಷ್ಟು ಬೆಲೆ ಬಾಳುತ್ತದೆ.

ಭದ್ರತಾ ವಿಭಾಗದಲ್ಲಿ ಆಗಸದಷ್ಟು ಮೇಲಕ್ಕೆ ನೆಗೆದಿರುವ ಅಮೆರಿಕವೀಗ, ಅತ್ಯಾಧುನಿಕ ಯುದ್ಧ ಹಡಗುಗಳನ್ನು ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ.

ರಹಸ್ಯ ಚಲನವಲನ
610 ಅಡಿ ಉದ್ದದ ಈ ಯುದ್ಧ ಹಡಗು ನುಣುಪಾಯಿಗೂ ಹೆಚ್ಚು ಕೋನಿಯ ಆಕಾರವನ್ನು ಗಿಟ್ಟಿಸಿಕೊಂಡಿದೆ. ಇತರೆ ಹಡಗುಗಳನ್ನು ಹೋಲಿಸಿದಾಗ ನಿಶಬ್ದವಾಗಿ ಸಂಚರಿಸುವ ರಹಸ್ಯ ಚಲನವಲನವನ್ನು ಹೊಂದಿದೆ.

ಝಮ್ ವಾಲ್ಟ್ ಹಡಗನ್ನು ಪತ್ತೆ ಹಚ್ಚುವುದು ಅಷ್ಟು ಸುಲಭವಲ್ಲ. ಇನ್ನೊಂದೆಡೆ ಇದು ರಡಾರು ನೆರವಿನಿಂದ ಶತ್ರು ದಾಳಿಯನ್ನು ನಿಖರವಾಗಿ ಗುರುತಿಸಿ ದಾಳಿಯಿಡುವ ಶಕ್ತಿಯನ್ನು ಹೊಂದಿದೆ.

ಇದರಲ್ಲಿರುವ ಪವರ್ ಫುಲ್ ಗನ್ ವ್ಯವಸ್ಥೆಯು, 600ರಷ್ಟು ರಾಕೆಟ್ ನಿಯಂತ್ರಿತ ಸ್ಪೋಟಕಗಳನ್ನು 111 ಕೀ.ಮೀ. ದೂರದ ವರೆಗೂ ಗುರಿಯಿಡುವ ಸಾಮರ್ಥ್ಯವನ್ನು ಹೊಂದಿದೆ.

ಶಕ್ತಿ
15,000 ಟನ್ ಗಳಷ್ಟು ಭಾರವನ್ನು ಹೊಂದಿರುವ ಝುಮ್ ವಾಲ್ಟ್ ಯುದ್ಧ ಹಡಗು, ಅತ್ಯಾಧುನಿಕ ಮುಂದುವರಿದ ರಕ್ಷಣಾ ತಂತ್ರಗಾರಿಕೆಯನ್ನು ಪಡೆದಿದೆ. ಇದು 78 ಮೆಗಾವ್ಯಾಟ್ ಶಕ್ತಿಯನ್ನು ಉತ್ಪಾದಿಸುತ್ತದೆ.

ಲೇಸರ್ ಬಳಕೆ ಮತ್ತು ನಿರ್ದೇಶನದ ಶಕ್ತಿ ಶಸ್ತ್ರಾಸ್ತ್ರ ವ್ಯವಸ್ಥೆಗಳು ಇದರಲ್ಲಿದೆ. ಹಾಗಾಗಿ ಈ ಬಲಶಾಲಿ ಯುದ್ಧ ಹಡಗಿನ ಸಾಮರ್ಥ್ಯವನ್ನು ಅಳೆಯುವುದು ಅಥವಾ ತಾರತಮ್ಯ ಮಾಡುವುದು ಅಸಾಧ್ಯ.

ಕ್ಷಿಪಣಿ
ತೋಮಾಹಾಕ್ ಕ್ರೂಸ್ ಕ್ಷಿಪಣಿ, ಇವಾಲ್ವಡ್ ಸೀ ಸ್ಪಾರೋ ಮಿಸೈಲ್, ಸ್ಟ್ಯಾಂಡರ್ಡ್ ಸರ್ಫೆಸ್ ಟು ಏರ್ ಮಿಸೈಲ್, 80 ಮಿಸೈಲ್ ಟ್ಯೂಬ್ ಗಳಿಂದ ಆ್ಯಂಟಿ ಸಬ್ ಮರೈನ್ ರಾಕೆಟ್ ದಾಳಿಯನ್ನಿಡಲು ಝಮ್ ವಾಲ್ಟ್ ಸಕ್ಷಮವಾಗಿದೆ.

ಚಾಲನೆ
ಅಸಾಂಪ್ರದಾಯಿಕ ಶೈಲಿಯಲ್ಲಿ ಮುಂದಕ್ಕೆ ತಳ್ಳುವುದರಿಂದ ಹಡಗು ಬಹಳ ಸಲೀಸಾಗಿ ಮುಂದಕ್ಕೆ ತೆರಳಲು ಸಹಾಯವಾಗುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ನಾವಿಕರು
147ರಷ್ಟು ಅಧಿಕಾರಿಗಳು ಮತ್ತು ನಾವಿಕರು ಇದರಲ್ಲಿ ಸಂಚರಿಸಬಹುದಾಗಿದೆ. 1930ರ ಬಳಿಕ ಅತಿ ಕಡಿಮೆ ಸಿಬ್ಬಂದಿಗಳನ್ನು ಇದರಲ್ಲಿ ನೇಮಕ ಮಾಡಲಾಗಿದೆ.

ನಾವಿಕರು ಎಲ್ಲ ರೀತಿಯ ತರಬೇತಿಯ ತರಬೇತಿಗಳನ್ನು ಪಡೆದಿರುತ್ತಾರೆ. ಹಾಗಾಗಿ ಅಗತ್ಯ ಬಂದ ಸಂದರ್ಭದಲ್ಲಿ ಪರಸ್ಪರ ಹಂಚಿಕೊಳ್ಳುತ್ತಾರೆ. ಅವರಿಗೆ ಖಾಸಗಿ ಕೊಠಡಿ ವ್ಯವಸ್ಥೆಯನ್ನು ಕೊಡಲಾಗುತ್ತದೆ.

ನಾಮಕರಣ
ಅಮೆರಿಕದ ನಾವಿಕ ಅಧಿಕಾರಿ ಹಾಗೂ ಚೀಫ್ ಆಫ್ ನೇವಲ್ ಓಪರೇಷನ್ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಅತಿ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಯ ದಿವಂಗತ ಎಲ್ಮೊ ರಸ್ಸೆಲ್ ಬಡ್ ಝಮ್ ವಾಲ್ಟ್ ಜೂನಿಯರ್ (1920-2000) ಅವರ ಸ್ಮರಣಾರ್ಥವಾಗಿ ಅವರ ಹೆಸರನ್ನು ಇದಕ್ಕಿಡಲಾಗಿದೆ.

ಎರಡನೇ ಲೋಕ ಮಹಾಯುದ್ಧದಲ್ಲಿ ಬೆಳ್ಳಿ ಪದಕಕ್ಕೆ ಅರ್ಹವಾಗಿರುವ ಅವರು ವಿಯೆಟ್ನಾ ಯುದ್ಧದಲ್ಲಿ ಚಿಕ್ಕ ಬೋಟ್ ಗಳನ್ನು ಕಮಾಂಡ್ ಮಾಡಿದ್ದರು.

ಜನಾಂಗೀಯತೆ ಮತ್ತು ಲಿಂಗಭೇದಭಾವದ ಹೋರಾಡಿರುವ ಅವರು ಅಮೆರಿಕ ನಾವಿಕ ಪಡೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳಿಗೆ ಕಾರಣವಾಗಿದ್ದರು.

ಹಡಗಿನ ಮೇಲಂಸ್ತಿನಲ್ಲಿ ಕ್ಯಾಪ್ಟನ್ ಗಾಗಿ 180 ಡಿಗ್ರಿ ವಿಂಡೋ, ಕುರ್ಚಿ ಜೊತೆಗೆ ಕಣ್ಗಾವಲು ಮಾಡಲು ಅನೇಕ ವಿಡಿಯೋಗಳನ್ನು ಲಗತ್ತಿಸಲಾಗಿದೆ.

ಬೃಹತ್ ಆಕಾರವನ್ನು ಪಡೆದರೂ ಮೀನುಗಾರಿಕಾ ಬೋಟ್ ಗೆ ಸದೃಶ್ಯವಾಗಿ ಇದನ್ನು ನಿರ್ಮಿಸಲಾಗಿದೆ. ಹಾಗಾಗಿ ಒಂದೇ ನೋಟದಲ್ಲಿ ಇದರ ಅಪಾಯವನ್ನು ಮನಗಾಣುವುದು ಕಷ್ಟಸಾಧ್ಯವಾಗಿದೆ.

ಆಳವಾದ ನೀರಿನಲ್ಲಿ ಯುದ್ಧ, ಭೂಮಿ ದಾಳಿಯಲ್ಲಿ ಸೈನ್ಯಕ್ಕೆ ಬೆಂಬಲ, ಗಾಳಿ ವಿರೋಧಿ, ಮೇಲ್ಮೆ ವಿರೋಧಿ ಹಾಗೂ ಸಾರದೊಳಗಿನ ಯುದ್ಧ ಸಾಮರ್ಥ್ಯವನ್ನು ಇದೂ ಪಡೆದಿದೆ.

ಇವನ್ನೂ ಓದಿ:
01. ಮೋದಿ ಎಫೆಕ್ಟ್; ಭಾರತದೊಂದಿಗೆ ಮಿಲಿಟರಿ ಒಪ್ಪಂದಕ್ಕೆ ವಿಶ್ವ ರಾಷ್ಟ್ರಗಳ ಪೈಪೋಟಿ
02. ಚೀನಾ-ಪಾಕ್ ಮಾಸ್ಟರ್ ಪ್ಲಾನ್‌ಗೆ ಭಾರತದ 'ತೇಜಸ್' ಖಡಕ್ ಜವಾಬ್
03. ಸೇತುವೆ ಅಡಿಯಿಂದ ಅತ್ಯಾದ್ಭುತವಾಗಿ ಯುದ್ಧ ವಿಮಾನ ಹಾರಿಸಿದ ಪೈಲಟ್


Click it and Unblock the Notifications








