Vande Bharat Metro: ವಂದೇ ಭಾರತ್ ಮೆಟ್ರೋ ಶೀಘ್ರ ಹಳಿಗೆ.. ಈ ಮಾರ್ಗದಲ್ಲಿ ಸಂಚಾರ, ವಿಶೇಷತೆಗಳೇನು?

ಭಾರತದಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್‌ (Vande Bharat Express) ಪ್ರೀಮಿಯಂ ಸೆಮಿ-ಹೈಸ್ಪೀಡ್ ರೈಲಾಗಿ ಯಶಸ್ವಿಯಾಗಿ ಓಡಾಟವನ್ನು ನಡೆಸುತ್ತಿದ್ದು, ಪ್ರಯಾಣಿಕರಿಂದಲೂ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈಲ್ವೆ ಇಲಾಖೆಯು ಹತ್ತಿರದ ನಗರಗಳ ನಡುವೆ ದಿನನಿತ್ಯ ಕೆಲಸ ಕಾರ್ಯಗಳಿಗೆ ಪ್ರಯಾಣಿಸುವವರಿಗೂ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಂದೇ ಭಾರತ್ ಮೆಟ್ರೋ (Vande Bharat Metro) ರೈಲುಗಳನ್ನು ಅಭಿವೃದ್ಧಿಪಡಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನೇತೃತ್ವದಲ್ಲಿ 3.0 ಸರ್ಕಾರವು ಅಸ್ತಿತ್ವಕ್ಕೆ ಬಂದಿದ್ದು, ನೂತನ ವಂದೇ ಮೆಟ್ರೋ ಶೀಘ್ರದಲ್ಲಿಯೇ ಹಳಿಗೆ ಬರುವ ನಿರೀಕ್ಷೆಯಿದೆ.

ಮುಂಬರಲಿರುವ ಕೆಲವೇ ತಿಂಗಳಲ್ಲಿ ಸಂಚಾರವನ್ನು ಶುರು ಮಾಡಲಿರುವ ಹೊಸ ವಂದೇ ಭಾರತ್ ಮೆಟ್ರೋ, ವಿವಿಧ ರಾಜ್ಯಗಳಿಗೆ ಸೇರಿರುವ ಪ್ರಮುಖ ನಗರಗಳ ನಡುವೆ ಸಂಪರ್ಕವನ್ನು ಕಲ್ಪಿಸಲಿದೆ. ಈ ರೈಲು ಮುಂಬೈ-ಸಬ್ಅರ್ಬನ್ ಸಿಟಿಗಳು (ಅಂಧೇರಿ, ಬೊರಿವಲಿ ಮತ್ತು ಕುರ್ಲಾ), ಕಾನ್ಪುರ-ಲಕ್ನೋ, ದೆಹಲಿ-ಮೀರತ್,ಮುಂಬೈ-ಲೋನಾವಲಾ, ವಾರಣಾಸಿ-ಪ್ರಯಾಗರಾಜ್, ಪುರಿ-ಭುವನೇಶ್ವರ ಹಾಗೂ ಆಗ್ರಾ-ಮಥುರಾ ಮಧ್ಯೆ ಓಡಾಟವನ್ನು ಆರಂಭಿಸಲಿದೆ ಎಂದು ವರದಿಯಾಗಿದೆ.

Vande Bharat Metro Start Soon This Route Details

ವಂದೇ ಭಾರತ್ ಮೆಟ್ರೋ ಎಲ್ಲಿ ತಯಾರಿಕೆ: ಪಂಜಾಬ್‌ನ ಕಪುರ್ತಲಾದಲ್ಲಿರುವ ರೈಲ್ ಕೋಚ್ ಫ್ಯಾಕ್ಟರಿ (Rail Coach Factory)ಯಲ್ಲಿ ವಂದೇ ಭಾರತ್ ಮೆಟ್ರೋ ರೈಲನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಬಹುತೇಕ ಜುಲೈ ತಿಂಗಳಲ್ಲಿ ನೂತನ ರೈಲು ಪರೀಕ್ಷಾರ್ಥ ಓಡಾಟವನ್ನು ನಡೆಸಲಿದೆ ಎನ್ನಲಾಗಿದೆ. ಸದ್ಯ 50 ರೈಲುಗಳನ್ನು ತಯಾರಿಸಲಾಗುತ್ತಿದೆ. ಮುಂಬರುವ ತಿಂಗಳಲ್ಲಿ 400 ವಂದೇ ಮೆಟ್ರೋ ರೈಲುಗಳನ್ನು ಸಿದ್ದಪಡಿಸಲು ಭಾರತೀಯ ರೈಲ್ವೆ ಉದ್ದೇಶಿಸಿದೆ ಎಂದು ತಿಳಿದುಬಂದಿದೆ.

ಎಷ್ಟು ಕಿಲೋಮೀಟರ್ ಸಂಚಾರ: ಈ ವಂದೇ ಭಾರತ್ ಮೆಟ್ರೋ, ಅತ್ಯಾಧುನಿಕ ರೀತಿಯಲ್ಲಿ ವಿನ್ಯಾಸ (ಡಿಸೈನ್)ವನ್ನು ಹೊಂದಿರಲಿದ್ದು, 100 ರಿಂದ 250 ಕಿ.ಮೀ ವ್ಯಾಪ್ತಿಯೊಳಗೆ ಸಂಚಾರವನ್ನು ಮಾಡಲಿದೆ. ಒಟ್ಟು 12 ಕೋಚ್‌ಗಳನ್ನು ಒಳಗೊಂಡಿರಲಿದ್ದು, ಪ್ರಯಾಣಿಕರ ದಟ್ಟಣೆ ಅಧಿಕವಾದರೆ 16 ಕೋಚ್‌ಗಳವೆರೆಗೂ ಹೆಚ್ಚಿಸಬಹುದು ಎಂದು ಹೇಳಲಾಗಿದೆ.

Vande Bharat Metro Start Soon This Route Details

ವಂದೇ ಭಾರತ್ ಮೆಟ್ರೋ ವಿಶೇಷತೆಗಳು: ಇದು ಸಂಪೂರ್ಣ ಹವಾನಿಯಂತ್ರಿತವಾಗಿರಲಿದ್ದು, ಪ್ರತಿ ಕೋಚ್‌ನಲ್ಲಿ 250 ಜನರು ಸುಲಭವಾಗಿ ಪ್ರಯಾಣಿಸಬಹುದು. ಸುರಕ್ಷತೆಗಾಗಿ ಅಗ್ನಿ ಪತ್ತೆ ವ್ಯವಸ್ಥೆ ಹೊಂದಿರಲಿದ್ದು, ಸ್ವಯಂ ಚಾಲಿತ ಬಾಗಿಲು ಮತ್ತು ಆರಾಮದಾಯಕ ಆಸನಗಳನ್ನು ಕೂಡ ಪಡೆದಿರಲಿದೆ. ಕರ್ನಾಟಕದ ಬೆಂಗಳೂರು - ತುಮಕೂರು, ಬೆಂಗಳೂರು - ಮೈಸೂರು ಮಧ್ಯೆಯೂ ವಂದೇ ಭಾರತ್ ಮೆಟ್ರೋ ಕಾರ್ಯಚರಣೆಯನ್ನು ನಡೆಸಿದರೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

ವಂದೇ ಭಾರತ್ ಸ್ಲೀಪರ್ ಬರಲಿದೆ: ರೈಲ್ವೆ ಇಲಾಖೆಯು ದೂರದ ಊರುಗಳನ್ನು ಸಂಪರ್ಕಿಸಲು ವಂದೇ ಭಾರತ್ ಸ್ಲೀಪರ್ (Vande Bharat Sleeper) ರೈಲುಗಳನ್ನು ತಯಾರಿಸುತ್ತಿದೆ. ಈ ರೈಲು ಕೂಡ ಶೀಘ್ರದಲ್ಲಿಯೇ ಹಳಿಗೆ ಬರಲಿದ್ದು, ಗಂಟೆಗೆ 160 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ ಎನ್ನಲಾಗಿದೆ. ಒಟ್ಟು 16 ಕೋಚ್‌ಗಳನ್ನು ಒಳಗೊಂಡಿರಲಿದ್ದು, 823 ಬರ್ತ್‌ಗಳನ್ನು ಪಡೆದಿರುವ ಸಾಧ್ಯತೆಯಿದೆ.

Vande Bharat Metro Start Soon This Route Details

ವಂದೇ ಭಾರತ್ ಎಕ್ಸ್‌ಪ್ರೆಸ್‌ ಹೇಗಿದೆ: ಪ್ರಸ್ತುತ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಕಾರ್ಯಚರಣೆಯನ್ನು ನಡೆಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ (Vande Bharat Express), ಗರಿಷ್ಠ ವೇಗದಲ್ಲಿ ಓಡಾಟವನ್ನು ನಡೆಸಲಿದ್ದು, ಸುರಕ್ಷತೆಗಾಗಿ ಕವಾಚ್ ವ್ಯವಸ್ಥೆಯನ್ನು ಹೊಂದಿದೆ. ಇದರಲ್ಲಿ ಪ್ರಯಾಣಿಕರಿಗೂ ಅತ್ಯಾಧುನಿಕ ಸೌಕರ್ಯವನ್ನು ಕಲ್ಪಿಸಲಾಗಿದೆ. ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಿರುವ ಈ ರೈಲಿನ ಸೀಟುಗಳು ಬಹಳಷ್ಟು ಆರಾಮದಾಯವಾಗಿದ್ದು, ಜೈವಿಕ ಶೌಚಾಲಯ ಹಾಗೂ ಸ್ವಯಂಚಾಲಿತ ಬಾಗಿಲು ಒಳಗೊಂಡಂತೆ ಹತ್ತಾರು ಸೌಲಭ್ಯಗಳಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, June 12, 2024, 21:09 [IST]
English summary
Vande bharat metro start soon this route details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+