ವಂದೇ ಭಾರತ್ ಸ್ಲೀಪರ್ ಕೋಚ್ ಶೀಘ್ರದಲ್ಲೇ ಬರಲಿದೆ... ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಭಾರತದ ರೈಲ್ವೆ ವಲಯದಲ್ಲಿ ಹೊಸ ಕ್ರಾಂತಿಯೆಂದರೆ ಅದು ವಂದೇ ಭಾರತ್ ರೈಲುಗಳಾಗಿವೆ. ಆಧುನಿಕ ತಂತ್ರಜ್ಞಾನ, ಆರಮದಾಯಕ ಆಸನಗಳು, ಸೌಕರ್ಯಯುತ ಪ್ರಯಾಣ ಸೇರಿದಂತೆ ಕಡಿಮೆ ಪ್ರಯಾಣ ಸಮಯವನ್ನು ಹೊಂದಿರುವುದರಿಂದ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿವೆ. ಇದೀಗ ಈ ರೈಲುಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ರೈಲ್ವೆ ಸಜ್ಜಾಗಿದೆ.

ಇಲ್ಲಿಯವರೆಗೆ ಚೇರ್ ಕಾರ್ ಬೋಗಿಗಳಿಗೆ ಸೀಮಿತವಾಗಿದ್ದ ವಂದೇ ಭಾರತ್ ರೈಲುಗಳು ಶೀಘ್ರದಲ್ಲೇ ಸ್ಲೀಪರ್ ಕೋಚ್‌ಗಳನ್ನು ಹೊಂದಬಹುದು. ಇದಕ್ಕಾಗಿ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ಕೋಚ್‌ಗಳನ್ನು ರಚಿಸಲು ಕೆಲಸ ಮಾಡುತ್ತಿದೆ, ಮುಂದಿನ ವರ್ಷಕ್ಕೆ ಸಿದ್ಧವಾಗಲಿದೆ ಎಂದು ವರದಿಯಾಗಿದೆ.

vande-bharat-sleeper-coach-coming-soon

ಭಾರತದಲ್ಲಿ ರೈಲ್ವೆಯನ್ನು ವಿಶ್ವದೇಶಗಳಂತೆ ಅತ್ಯಾಧುನಿಕವಾಗಿ ಮಾಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿಕೊಂಡಿದೆ. ಅದರಂತೆ ವಂದೇ ಭಾರತ್ ಮೊದಲ ಹಂತವಾಗಿ ಕಾರ್ಯಚರಣೆಯಲ್ಲಿ ತೊಡಗಿದೆ. ಮುಂಬರುವ ವರ್ಷಗಳಲ್ಲಿ ಒಂದೊಂದಾಗಿ ಬೆಳವಣಿಯಾಗುವ ಮುನ್ಸೂಚನೆಗಳಿವೆ. ಇದರ ಭಾಗವಾಗಿ ವಂದೇ ಭಾರತ್‌ನ ಸ್ಲೀಪರ್ ಕೋಚ್‌ಗಳನ್ನು ತರಲು ರೈಲ್ವೆ ಸಜ್ಜಾಗಿದೆ.

ವರದಿಯ ಪ್ರಕಾರ, ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL) ಮತ್ತು ರಷ್ಯಾದ TMH ವಂದೇ ಭಾರತ್ ರೈಲುಗಳ 120 ಸ್ಲೀಪರ್ ಆವೃತ್ತಿಗಳನ್ನು ತಯಾರಿಸಲು ಒಪ್ಪಂದಕ್ಕೆ ಸಹಿ ಹಾಕಿವೆ. ಈ ಮೂಲಕ ICF 2024 ರಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸ್ಲೀಪರ್ ರೂಪಾಂತರದ ಮಾದರಿಗಳನ್ನು ಹೊರತರಬಹುದು ಎನ್ನಲಾಗಿದೆ.

vande-bharat-sleeper-coach-coming-soon

ಪ್ರಸ್ತುತ, ಭಾರತೀಯ ರೈಲ್ವೆಯು 25 ಮಾರ್ಗಗಳಲ್ಲಿ 50 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ನಿರ್ವಹಿಸುತ್ತಿದೆ. ಸದ್ಯ ಐಸಿಎಫ್‌ನಲ್ಲಿ ಉತ್ಪಾದನೆಯಲ್ಲಿರುವ ವಂದೇ ಭಾರತ್ ರೈಲುಗಳು ಈಗ 25 ವರ್ಧನೆಗಳೊಂದಿಗೆ ಬರಲಿವೆ ಎಂದು ಇತ್ತೀಚೆಗೆ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್)ಗೆ ಇತ್ತೀಚೆಗೆ ಭೇಟಿ ನೀಡಿದ್ದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ರೈಲ್ವೇ ಸಚಿವಾಲಯವು ವಂದೇ ಭಾರತ್ ರೈಲುಗಳ ಪ್ರಯಾಣಿಕರಿಗೆ ವರ್ಧಿತ ಪ್ರಯಾಣದ ಅನುಭವವನ್ನು ಒದಗಿಸಲು ಕೆಲಸ ಮಾಡುತ್ತಿದೆ. ಇದರ ಭಾಗವಾಗಿ ಹೈಸ್ಪೀಡ್ ರೈಲುಗಳು ಈಗ 25 ಸುಧಾರಣೆಗಳನ್ನು ಹೊಂದಿದ್ದು, ರೈಲುಗಳಲ್ಲಿ ಹೆಚ್ಚಿನ ಸುರಕ್ಷತೆ ಮತ್ತು ಸೌಕರ್ಯವನ್ನು ಖಚಿತಪಡಿಸುತ್ತವೆ ಎಂದರು. ಹಾಗದ್ರೆ ಆ ಸುಧಾರಣೆಗಳು ಯಾವುವು ಎಂಬುದನ್ನು ಕೆಳಗೆ ನೋಡೋಣ.

vande-bharat-sleeper-coach-coming-soon

ಸುಧಾರಿತ ಹವಾನಿಯಂತ್ರಣ, ಆಸನಗಳ ಕೆಳಗೆ ಮೊಬೈಲ್ ಚಾರ್ಜಿಂಗ್ ಸೌಲಭ್ಯದ ಉತ್ತಮ ನಿಯೋಜನೆ, ಆಪ್ಟಿಮೈಸ್ಡ್ ಕುಶನ್, ನೀರು ಚಿಮ್ಮುವುದನ್ನು ತಪ್ಪಿಸಲು ಶೌಚಾಲಯಗಳಲ್ಲಿ ಆಳವಾದ ವಾಶ್ ಬೇಸಿನ್‌ಗಳು, ಎಕ್ಸಿಕ್ಯೂಟಿವ್ ಚಾರ್ ಕಾರ್‌ಗಳಲ್ಲಿ ವಿಸ್ತೃತ ಫುಟ್‌ರೆಸ್ಟ್‌ಗಳು ಸೇರಿದಂತೆ ಎಕ್ಸಿಕ್ಯೂಟಿವ್ ಚೇರ್ ಕಾರ್‌ನಲ್ಲಿ ಸೀಟ್ ಬಣ್ಣ ಈಗಿರುವ ಕೆಂಪು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾಗಲಿದೆ.

ಇವಿಷ್ಟೆ ಅಲ್ಲದೇ, ವೀಲ್‌ಚೇರ್‌ಗಳಿಗೆ ಸುರಕ್ಷಿತೆ, ರೋಲರ್ ಬ್ಲೈಂಡ್ ಫ್ಯಾಬ್ರಿಕ್ನಲ್ಲಿ ಸುಧಾರಣೆ, ಶೌಚಾಲಯಗಳು ಮತ್ತು ಬೇಸಿನ್‌ಗಳಲ್ಲಿ ಉತ್ತಮ ನೀರಿನ ಹರಿವು, ಶೌಚಾಲಯಗಳಲ್ಲಿ ಸುಧಾರಿತ ಬೆಳಕು, ಟಾಯ್ಲೆಟ್ ಹಿಡಿಕೆಗಳು, ಮ್ಯಾಗಜೀನ್ ಬ್ಯಾಗ್‌ಗಳು, ತುರ್ತು ಪರಿಸ್ಥಿತಿಯಲ್ಲಿ ಸುಧಾರಿತ ಸುತ್ತಿಗೆ ಬಾಕ್ಸ್ ಹಾಗೂ ತುರ್ತು ಟಾಕ್‌ಬ್ಯಾಕ್ ಘಟಕ, ಸುಧಾರಿತ ಬೆಂಕಿ ಪತ್ತೆ ವ್ಯವಸ್ಥೆ ಹಾಗೂ ಲಗೇಜ್ ರ್ಯಾಕ್ ಲೈಟ್‌ಗಳಿಗಾಗಿ ಸ್ಮೂತ್ ಕಂಟ್ರೋಲ್‌ಗಳೊಂದಿಗೆ ಬರಲಿದೆ.

More from DriveSpark

Article Published On: Tuesday, July 25, 2023, 8:30 [IST]
English summary
Vande bharat sleeper coach coming soon
Read more on ರೈಲು train
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+