Vande Bharat ಫುಲ್ ಟ್ರೋಲ್... ವೈರಲ್ ವಿಡಿಯೋ ನಿಜ, ಖಡಕ್ ಉತ್ತರ ನೀಡಿದ ರೈಲ್ವೆ!

Vande Bharat ಎಕ್ಸ್‌ಪ್ರೆಸ್ ರೈಲನ್ನು ಸಾಮಾನ್ಯ ರೈಲು ಎಂಜಿನ್ ಎಳೆದೊಯ್ಯುವ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ಇದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಫುಲ್ ಟ್ರೋಲ್ ಮಾಡಲಾಗುತ್ತಿದೆ. ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ಹೊಸ ಮಾರ್ಗವೆಂದು ಎಲ್ಲೆಡೆ ಟ್ರೋಲ್ ಮಾಡುತ್ತಿರುವ ಬೆನ್ನಲ್ಲೇ ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಸಾಮಾನ್ಯ ರೈಲು ಎಂಜಿನ್‌ನಿಂದ ಎಳೆಯುವುದನ್ನು ತೋರಿಸುವ 25 ಸೆಕೆಂಡ್‌ಗಳ ವಿಡಿಯೋ ಟ್ವಿಟರ್‌ನಲ್ಲಿ ತುಂಬಾ ವೈರಲ್ ಆಗಿದೆ. ಜನರು ಕೂಡ ಅದರ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸುತ್ತಿದ್ದು, ವಂದೇ ಭಾರತ್ ಡಬಲ್ ಎಂಜಿನ್ ಹೊಂದಿದೆ. ಟಿಕೆಟ್ ಬೆಲೆ ಹೆಚ್ಚಿಸಿ ಹೀಗೆ ಮಾಡಿದ್ರೆ ಇಲಾಖೆಗೆ ಇದು ಸ್ವಲ್ಪ ಮಿತವ್ಯಯಕಾರಿ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

vande-bharat-train-troll-video-railway-department-clarified

ವಂದೇ ಭಾರತ್‌ನ ಎಂಜಿನ್ ಭಾಗವು ಸಾಮಾನ್ಯ ರೈಲುಗಳಿಗಿಂತಲೂ ಕಡಿಮೆ ಗೇಜ್ ಹೊಂದಿರುತ್ತದೆ. ಹಾಗೆಯೇ ಕಬ್ಬಿಣದ ಪ್ರಮಾಣವನ್ನು ತಗ್ಗಿಸಿರುವುದರಿಂದ ಗುಣಮಟ್ಟ ಕೂಡ ಕಡಿಮೆ ಇರುತ್ತದೆ. ಇದಕ್ಕೂ ಕಾರಣವಿದೆ ವಂದೇ ಭಾರತ್ ರೈಲು ನಿರ್ದಿಷ್ಟ ವೇಗದಲ್ಲಿ ಪ್ರಯಾಣಿಸಲು ಹಾಗೂ ತುರ್ತು ಸಂದರ್ಭಗಳಲ್ಲಿ ಸಾಮಾನ್ಯ ರೈಲುಗಳಿಗಿಂತ ವೇಗವಾಗಿ ನಿಯಂತ್ರಿಸಲು ಇದು ಅನುಕೂಲಕರವಾಗಿರುತ್ತದೆ.

ಆದ್ರೆ ಈ ಹಿಂದೆ ವಂದೇ ಭಾರತ್ ರೈಲು ಕೆಲ ಪ್ರಾಣಿಗಳಿಗೆ ಡಿಕ್ಕಿಯಾದಾಗ ರೈಲುಗಳ ಮುಂಭಾಗವು ಹಾನಿಯಾಗಿತ್ತು. ಆದ್ರೆ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿರಲಿಲ್ಲ. ಈಗ ಇದನ್ನೇ ಗುರಿಯಾಗಿಸಿಕೊಂಡು ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ವಂದೇ ಭಾರತಕ್ಕೆ ಹೊಸ ಮಾರ್ಗ ಎಂದು ಹೇಳುತ್ತಾ ಈ ವಿಡಿಯೋವನ್ನು ಹೆಚ್ಚಾಗಿ ಷೇರ್ ಮಾಡಲಾಗುತ್ತಿದೆ.

vande-bharat-train-troll-video-railway-department-clarified

ನಿಧಾನವಾಗಿ ಚಲಿಸುವ ರೈಲನ್ನು ವೇಗವಾಗಿ ಚಲಿಸುವ ರೈಲು ಎಳೆದುಕೊಂಡು ಹೋಗುವುದನ್ನು ನೋಡಿ ಯಾರು ನಗುವುದಿಲ್ಲ ಹೇಳಿ? ಎಂದೆಲ್ಲಾ ವ್ಯಂಗ್ಯ ಮಾಡುತ್ತಿದ್ದವರಿಗೆ ಇಲಾಖೆ ಸ್ಪಷ್ಟನೆ ನೀಡಿದೆ. ಇದನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ರೂ ಚಿಂತಿಸದೆ ಇದು ಸುಳ್ಳು ಮಾಹಿತಿ ಎಂದು ರೈಲ್ವೇ ಆಡಳಿತ ತಳ್ಳಿಹಾಕಿದೆ.

ರೈಲ್ವೆ ಇಲಾಖೆ ಸ್ಪಷ್ಟನೆ: ವಂದೇ ಭಾರತ್ ರೈಲನ್ನು ಸೇವೆಗೆ ತರುವ ಮೊದಲು ಈ ವಿಡಿಯೋವನ್ನು ಮಾಡಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ರೈಲನ್ನು ಆರಂಭದಲ್ಲಿ ಟ್ರ್ಯಾಕ್‌ಗಳಿಗೆ ಸೇರಿಸಿದಾಗ, ಅದರ ಮಾರ್ಗವನ್ನು ನಿರ್ಧರಿಸುವವರೆಗೆ ಅದನ್ನು ಮತ್ತೊಂದು ಎಂಜಿನ್‌ನಿಂದ ಎಳೆಯಲಾಗುತ್ತದೆ. ಗೊತ್ತುಪಡಿಸಿದ ಮಾರ್ಗವನ್ನು ತಿಳಿಯುವವರೆಗೆ ಪ್ರಯೋಗಗಳ ಸಮಯದಲ್ಲಿ ರೈಲನ್ನು ಹೀಗೆ ಕಾರ್ಯಚರಿಸಲಾಗುತ್ತದೆ.

vande-bharat-train-troll-video-railway-department-clarified

ಆದ್ದರಿಂದಲೇ ಹಳೆಯ ಮಾದರಿಯ ರೈಲು ಎಂಜಿನ್‌ಗಳ ಮೂಲಕ ವಂದೇ ಭಾರತ್ ರೈಲನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಎಳೆಯಲಾಗುತ್ತಿದೆ. ಕೇವಲ ಪರೀಕ್ಷಾರ್ಥ ಸಂಚಾರಕ್ಕಾಗಿ ಮಾಡಿರುವ ವ್ಯವಸ್ಥೆ ಇದಾಗಿದ್ದು, ರೈಲು ಓಡುವಾಗ ರೈಲಿನೊಳಗೆ ಪ್ರಯಾಣಿಕರು ಇರುವುದಿಲ್ಲ. ಹಾಗೆಯೇ ರೈಲು ಹಳಿಯಲ್ಲಿ ಓಡುತ್ತಿರುವಾಗ ಸಮಸ್ಯೆ ಇದೆಯೇ ಎಂಬುದನ್ನು ಇದೇ ವೇಳೆ ಪರಿಶೀಲಿಸಲಾಗುತ್ತದೆ ಎಂದು ರೈಲ್ವೆ ವಿವರಿಸಿದೆ.

ಸಂಬಂಧಿತ ವಿಡಿಯೋ, ವಂದೇ ಭಾರತ್ ರೈಲು ಕಾರ್ಯಾಚರಣೆಗೂ ಮುನ್ನ ತೆಗೆಯಲಾಗಿದೆ ಎನ್ನಲಾಗಿದೆ. ಹಳೆಯ ವಿಡಿಯೋ ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈಗಾಗಲೇ ವಿಶ್ವದ ಹಲವು ದೇಶಗಳಲ್ಲಿ ಬುಲೆಟ್ ರೈಲುಗಳು ಸೇವೆ ಸಲ್ಲಿಸುತ್ತಿವೆ. ಭಾರತದಲ್ಲೂ ಬುಲೆಟ್ ರೈಲುಗಳನ್ನು ತರುವ ಮೊದಲ ಹಂತವೇ ವಂದೇ ಭಾರತ್ ರೈಲುಗಳು, ಆದ್ರೆ ಆರಂಭದಲ್ಲೇ ಈ ರೈಲುಗಳು ಟೀಕೆಗೆ ಗುರಿಯಾಗುತ್ತಿರುವುದರ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

More from DriveSpark

Article Published On: Saturday, July 1, 2023, 11:35 [IST]
English summary
Vande bharat train troll video railway department clarified
Read more on ರೈಲು train
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+