ವೇಗದಲ್ಲಿ ವಂದೇ ಭಾರತ್ ಅನ್ನು ಮೀರಿಸಲಿದೆಯಾ ಚಿರತೆ? ಉತ್ತರ ಕೇಳಿದ್ರೆ ಷಾಕ್ ಆಗ್ತೀರ!

ಭಾರತೀಯ ರೈಲ್ವೆಯ ರಾಜಧಾನಿ, ಡುರೊಂಟೊ, ತೇಜಸ್, ವಂದೇ ಭಾರತ್ ಇವೆಲ್ಲವೂ ಪ್ರೀಮಿಯಂ ರೈಲುಗಳಾಗಿವೆ. ಅದರಲ್ಲೂ ವಂದೇ ಭಾರತ್ ಇತ್ತೀಚಿನ ತಂತ್ರಜ್ಞಾನನೊಂದಿಗೆ ಹೊಸ ಸೇರ್ಪಡೆಯಾಗಿದ್ದು, ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿದೆ. ಆದರೂ ಇದು ಭಾರತದ ಅತ್ಯಂತ ವೇಗದ ರೈಲೇ ಎಂಬ ಸಂದೇಹ ಹಲವರಲ್ಲಿದೆ. ಈ ರೈಲು ವೇಗದಲ್ಲಿ ಚಿರತೆಯನ್ನು ಸೋಲಿಸಬಲ್ಲದೇ?

ವಂದೇ ಭಾರತ್ ಕೇವಲ ವೇಗಕ್ಕೆ ಮಾತ್ರ ಜನಪ್ರಿಯವಾಗಿಲ್ಲ. ಪ್ರಯಾಣಿಕರ ಆರಾಮದ ದೃಷ್ಟಿಯಿಂದಲೂ, ವಂದೇ ಭಾರತ್ ಅನೇಕರಿಗೆ ಮೊದಲ ಆಯ್ಕೆಯಾಗಿದೆ. ವಂದೇ ಭಾರತ್ ಜಿಪಿಎಸ್ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆಯನ್ನು ಸಹ ಹೊಂದಿದೆ. ಇದಲ್ಲದೆ, ವೈ-ಫೈ ಸೇವೆ ಮತ್ತು ಆರಾಮದಾಯಕ ಆಸನಗಳು ಪ್ರಯಾಣಿಕರಿಗೆ ಉತ್ತಮ ಅನುಭವವನ್ನು ನೀಡುತ್ತವೆ. ಜೊತೆಗೆ ಆಸನಗಳು 180 ಡಿಗ್ರಿ ತಿರುಗಬಲ್ಲವು. ಪ್ರಯಾಣಿಕರು ಈ ರೈಲಿನ ಜೈವಿಕ ನಿರ್ವಾತ (Biological vacuum) ವ್ಯವಸ್ಥೆಯಲ್ಲಿ ಮಾಡಿದ ಶೌಚಾಲಯಗಳನ್ನು ಇಷ್ಟಪಡುತ್ತಾರೆ. ವಂದೇ ಭಾರತ್ ಬೋಗಿಗಳು ಸೌಂಡ್ ಪ್ರೂಫ್ ಆಗಿವೆ. ಎಲ್ಲವೂ ಸರಿ, ಇದರ ವೇಗದ ಕಥೆಯೇನು ಅಂತೀರಾ... ಬನ್ನಿ ನೋಡೋಣ.

Vande Bharat vs Cheetah

ವಂದೇ ಭಾರತ್‌ ಸೆಮಿ ಹೈಸ್ಪೀಡ್ ರೈಲು ಆಗಿರುವುದರಿಂದ ಗರಿಷ್ಠ ವೇಗವು ಗಂಟೆಗೆ 160 ಕಿ.ಮೀ ಇದೆ. ಪುಶ್-ಪುಲ್ ವೈಶಿಷ್ಟ್ಯದಿಂದಾಗಿ ಈ ರೈಲಿನ ವೇಗವು ತುಂಬಾ ಹೆಚ್ಚಾಗಿದೆ. ವಿಶ್ವದ ಅತಿ ವೇಗದ ಪ್ರಾಣಿಯಾದ ಚಿರತೆ ಗಂಟೆಗೆ 130 ಕಿಲೋಮೀಟರ್ ವೇಗವನ್ನು ಹೊಂದಿದೆ. ಅಂದರೆ, ವಂದೇ ಭಾರತ್ ಎಕ್ಸ್ಪ್ರೆಸ್ ವೇಗದ ವಿಷಯದಲ್ಲಿ ಚಿರತೆಯನ್ನು ಸೋಲಿಸಬಹುದು.

ನಿಜಕ್ಕೆ ವಂದೇ ಭಾರತ್ ಗರಿಷ್ಠ ವೇಗವು ಗಂಟೆಗೆ 180 ಕಿ.ಮೀ ತಲುಪುವ ಸಾಮರ್ಥ್ಯವಿದೆ. ಆದರೆ ಆ ವೇಗವನ್ನು ಬೆಂಬಲಿಸುವ ಬಲಿಷ್ಟ ಗುಣಮಟ್ಟದ ಹಳಿಗಳು ಬೇಕಾಗಿರುವುದರಿಂದ ವೇಗವನ್ನು ಸದ್ಯ ಮಿತಿಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ವಂದೇ ಭಾರತ್ ಅದರ ಟಾಪ್ ಸ್ಪೀಡ್‌ನಲ್ಲಿ ಚಲಿಸಲಿದೆ. ಅಂದರೆ ವಂದೇ ಭಾರತ್ ಗರಿಷ್ಟ ವೇಗದಲ್ಲಿ ಚಲಿಸಲು ಭಾರತೀಯ ರೈಲ್ವೇ ಎಲ್ಲಾ ವ್ಯವಸ್ಥೆಗಳನ್ನು ಮಾಡಲಿದೆ.

Vande Bharat vs Cheetah

ವಂದೇ ಭಾರತ್ ಮೆಟ್ರೋ ಸಿದ್ಧ: ಪಂಜಾಬ್‌ನ ಕಪುರ್ತಲಾದಲ್ಲಿರುವ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ ಮಂಗಳವಾರ ಮೊದಲ ವಂದೇ ಭಾರತ್ ಮೆಟ್ರೋ ರೈಲಿನ ಕೆಲವು ಕೋಚ್‌ಗಳನ್ನು ಹೊರತರಲಾಗಿದೆ. ಆ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಜುಲೈನಲ್ಲಿ ಈ ರೈಲು ಪ್ರಾಯೋಗಿಕ ಸಂಚಾರ (Trail Run)ವನ್ನು ನಡೆಸುವ ನಿರೀಕ್ಷೆಯಿದ್ದು, ಪ್ರಸ್ತುತ 50 ರೈಲುಗಳನ್ನು ತಯಾರಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ 400 ವಂದೇ ಮೆಟ್ರೋ ರೈಲುಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಅತ್ಯಾಧುನಿಕವಾಗಿ ವಿನ್ಯಾಸಗೊಳಿಸಲಾಗಿರುವ ಈ ರೈಲುಗಳು 100 ರಿಂದ 250 ಕಿಲೋಮಿಟರ್ ವ್ಯಾಪ್ತಿಯೊಳಗೆ ಓಡಾಟವನ್ನು ನಡೆಸಲಿವೆ ಎಂದು ವರದಿಯಾಗಿದೆ.

ವಂದೇ ಮೆಟ್ರೋ 12 ಕೋಚ್‌ಗಳನ್ನು ಹೊಂದಿಲಿದ್ದು, ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ 16 ಕೋಚ್‌ಗಳಿಗೆ ಹೆಚ್ಚಿಸಬಹುದು ಎನ್ನಲಾಗಿದೆ. ದೇಶಾದ್ಯಂತ 124 ಪ್ರಮುಖ ನಗರಗಳನ್ನು ಸಂಪರ್ಕಿಸಲಿದ್ದು, ಲಕ್ನೋ-ಕಾನ್ಪುರ, ಆಗ್ರಾ-ಮಥುರಾ ಹಾಗೂ ತಿರುಪತಿ-ಚೆನ್ನೈ ಮಾರ್ಗದಲ್ಲಿ ಮೊದಲಿಗೆ ಸಂಚಾರವನ್ನು ನಡೆಸಲಿದೆ ಎಂದು ಹೇಳಲಾಗಿದೆ. ವಂದೇ ಭಾರತ್ ಮೆಟ್ರೋ ರೈಲು ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಒಳಭಾಗ (Inside) ಬಹಳ ವಿಶಾಲವಾಗಿದೆ.

ಜೊತೆಗೆ ಸ್ವಯಂ ಚಾಲಿತ ಬಾಗಿಲನ್ನು ಪಡೆದಿದೆ. ಪ್ರತಿನಿತ್ಯ ಒಂದು ನಗರದಿಂದ ಮತ್ತೊಂದು ನಗರಕ್ಕೆ ಕೆಲಸಕ್ಕೆ ತೆರಳುವ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು, ವೇಗವಾಗಿ ಸಂಚಾರಿಸುವ ಈ ರೈಲುಗಳಲ್ಲಿ ಆರಾಮದಾಯಕವಾಗಿ ಪ್ರಯಾಣಿಸಬಹುದು. ನೂತನ ವಂದೇ ಮೆಟ್ರೋ ರೈಲಿನ ಕೋಚ್‌ವೊಂದರಲ್ಲಿ 280 ಜನರು (ಕುಳಿತು ಮತ್ತು ನಿಂತುಕೊಂಡು) ಪ್ರಯಾಣಿಸಬಹುದು.

ಹೊಸ ವಂದೇ ಭಾರತ್ ಮೆಟ್ರೋದಲ್ಲಿ ವೀಲ್ ಚೇರ್‌ನ್ನು ಸುಲಭವಾಗಿ ತೆಗೆದುಕೊಂಡು ಹೋಗಬಹುದಾದ ಶೌಚಾಲಯವಿರಲಿದ್ದು, ಅಪಾಯ ಎದುರಾದಾಗ ಲೋಕೋ ಪೈಲೆಟ್ ಜೊತೆಯಲ್ಲಿ ಪ್ರಯಾಣಿಕರು ಮಾತನಾಡಲು ಟಾಕ್ ಬ್ಯಾಕ್ ಸಿಸ್ಟಮ್‌ನ್ನು ಹೊಂದಿರಲಿದೆ. ಸುರಕ್ಷತೆಗಾಗಿ ಫೇರ್ - ಸ್ಮೋಕ್ ಡಿಟೆಕ್ಷನ್ ಮತ್ತು ಕವಚ್ ಸಿಸ್ಟಮ್ ಇರಲಿದೆ ಎಂದು ಈ ಹಿಂದೆ ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದರು.

More from DriveSpark

Article Published On: Saturday, May 11, 2024, 10:27 [IST]
English summary
Vande bharat vs cheetah which one will win if race begins
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+