ಬೆಂಗಳೂರಿನಿಂದ ಇಲ್ಲಿಗೆ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್?.. ಫುಲ್ ಎಂಜಾಯ್, ಬಾಳೆ ಎಲೆ ಊಟ!

ಕರ್ನಾಟಕವು ಸೇರಿದಂತೆ ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಸೆಮಿ - ಹೈಸ್ಪೀಡ್ ರೈಲಾಗಿ ಯಶಸ್ವಿಯಾಗಿ ಓಡಾಟವನ್ನು ನಡೆಸುತ್ತಿದೆ. ಶೀಘ್ರದಲ್ಲಿಯೇ ಬೆಂಗಳೂರು ಹಾಗೂ ಕೇರಳದ ಎರ್ನಾಕುಲಂ ನಡುವೆ ಈ ರೈಲು ಕಾರ್ಯಚರಣೆಯನ್ನು ಶುರು ಮಾಡಲಿದೆ ಎಂದು ವರದಿಯಾಗಿದೆ.

ಸಾರ್ವತ್ರಿಕ ಲೋಕಸಭಾ ಚುನಾವಣೆ ಮುಗಿದ ಬಳಿಕ, ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚರಿಸಲಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಈ ರೈಲು ಎರ್ನಾಕುಲಂ (Ernakulam) ನಿಲ್ದಾಣದಿಂದ ಬೆಳಗ್ಗೆ 5 ಗಂಟೆಗೆ ಹೊರಟು ಮಧ್ಯಾಹ್ನ 1.35ರ ಸುಮಾರಿಗೆ ಬೆಂಗಳೂರನ್ನು ತಲುಪುತ್ತದೆ ಎನ್ನಲಾಗಿದೆ.

Vande Bharat Express Starts Soon Bengaluru to Ernakulam Expected 7 Hours Journey

ಬೆಂಗಳೂರಿನಿಂದ ಮಧ್ಯಾಹ್ನ 2.05ಕ್ಕೆ ಸಂಚಾರವನ್ನು ಆರಂಭಿಸಲಿದ್ದು, ರಾತ್ರಿ 10:45ರ ಸುಮಾರಿಗೆ ಎರ್ನಾಕುಲಂಗೆ ಹೋಗುತ್ತದೆ. ಮಾರ್ಗ ಮಧ್ಯೆ ತ್ರಿಶೂರ್, ಪಾಲಕ್ಕಾಡ್, ಕೊಯಮತ್ತೂರು, ಈರೋಡ್ ಹಾಗೂ ಸೇಲಂ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗುತ್ತದೆ ಎಂದು ಹೇಳಲಾಗಿದೆ. ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿ ಮತ್ತು ಪ್ರಯಾಣ ದರದ ಕುರಿತ ವಿವರಗಳು ಬಹುತೇಕ ಮುಂದಿನ ತಿಂಗಳು ಲಭ್ಯವಾಗಲಿವೆ.

ಬೆಂಗಳೂರು ಮತ್ತು ಎರ್ನಾಕುಲಂ ನಡುವೆ 583 ಕಿಲೋಮೀಟರ್ ಅಂತರವಿದ್ದು, ವಂದೇ ಭಾರತ್ ಎಕ್ಸ್‌ಪ್ರೆಸ್ ಸುಮಾರು 7 ಗಂಟೆಗಳಲ್ಲಿ ಈ ದೂರವನ್ನು ಕ್ರಮಿಸಲಿದೆ ಎಂದು ತಿಳಿದುಬಂದಿದೆ. ಸದ್ಯ ಬೆಂಗಳೂರು - ಎರ್ನಾಕುಲಂ ಮಧ್ಯೆ ವೇಗದ ರೈಲಾಗಿ ಓಡಾಟ ನಡೆಸುತ್ತಿರುವ ಎರ್ನಾಕುಲಂ ಇಂಟರ್‌ಸಿಟಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಬೆಂಗಳೂರಿನಿಂದ ಬೆಳಗ್ಗೆ 6.10ಕ್ಕೆ ಹೊರಟು ಸಂಜೆ 4.55ಕ್ಕೆ ಎರ್ನಾಕುಲಂನ್ನು ತಲುಪುತ್ತದೆ.

Vande Bharat Express Starts Soon Bengaluru to Ernakulam Expected 7 Hours Journey

ಎರ್ನಾಕುಲಂನಿಂದ ಬೆಳಗ್ಗೆ 9.10ಕ್ಕೆ ಸಂಚಾರವನ್ನು ಆರಂಭಿಸಿದರೆ, ಸಂಜೆ 7.50ಕ್ಕೆ ಬೆಂಗಳೂರಿಗೆ ಬರುತ್ತದೆ. ಪ್ರಯಾಣದ ಅವಧಿಯು 9 ಗಂಟೆಯಿದೆ. ಕೇರಳದ ರಾಜಧಾನಿ ಕೊಚ್ಚಿಗೆ ಅಂಟಿಕೊಂಡಿರುವ ಎರ್ನಾಕುಲಂನಲ್ಲಿ ನೋಡಲು ಕಡಲ ಕಿನಾರೆ ಸೇರಿದಂತೆ ಹಲವು ಪ್ರವಾಸಿ ತಾಣಗಳಿದ್ದು, ಭರ್ಜರಿ ಮೀನೂಟಕ್ಕೂ ಹೆಸರುವಾಸಿಯಾಗಿದೆ. ಅಲ್ಲಿಗೆ ಪ್ರವಾಸ ಹೋಗಲು ಪ್ಲ್ಯಾನ್ ಮಾಡುವವರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರವನ್ನು ಶುರು ಮಾಡಿದ ಮೇಲೆ ಹೆಚ್ಚಿನ ಅನುಕೂಲವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಪ್ರಸ್ತುತ ಕೇರಳದಲ್ಲಿ 2 ವಂದೇ ಭಾರತ್ ಎಕ್ಸ್‌ಪ್ರೆಸ್‌ (Vande Bharat Express)ಗಳು ಓಡಾಟವನ್ನು ನಡೆಸುತ್ತಿವೆ. ಒಂದು ರೈಲು, ತಿರುವನಂತಪುರಂ - ಕಾಸರಗೋಡು ನಡುವೆ ಸಂಚಾರವನ್ನು ಮಾಡುತ್ತಿದೆ. ಮತ್ತೊಂದು ರೈಲು ತಿರುವನಂತಪುರಂ - ಮಂಗಳೂರು ಮಧ್ಯೆ ಯಶಸ್ವಿಯಾಗಿ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಸಾರ್ವಜನಿಕರಿಂದಲೂ ಕೂಡ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದಾರೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ಸೆಮಿ ಹೈಸ್ಪೀಡ್ ರೈಲು ಎಂದು ಹೆಸರುವಾಸಿಯಾಗಿರುವುದರಿಂದ ಗರಿಷ್ಠ ವೇಗದಲ್ಲಿ ಸಂಚರಿಸುವ ಮೂಲಕ ಪ್ರಯಾಣಿಕರನ್ನು ಬೇಗನೆ ಗಮ್ಯ ಸ್ಥಾನವನ್ನು ತಲುಪಿಸುತ್ತದೆ. ಇದರಲ್ಲಿ ಓಡಾಟ ನಡೆಸುವವರಿಗೆ ವಿಮಾನದಂತಹ ಐಷಾರಾಮಿ ಸೌಲಭ್ಯವನ್ನು ಒದಗಿಸಲಾಗುತ್ತದೆ. ಈ ರೈಲು ಸಂಪೂರ್ಣ ಹವಾ ನಿಯಂತ್ರಿತ ಕೋಚ್‌ಗಳು, ಆರಾಮದಾಯಕ ಆಸನಗಳು, ವೈಫೈ ವ್ಯವಸ್ಯೆ, ಸ್ವಯಂ ಚಾಲಿತ ಬಾಗಿಲುಗಳು ಮತ್ತು ಅಗ್ನಿ ನಿರೋಧಕ ಸಾಧನಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, May 6, 2024, 17:38 [IST]
English summary
Vandeb bharat express starts soon bengaluru to ernakulam expected 7 hours journey
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+