Video: ಇನ್ಮುಂದೆ ಮನೆಯೊಳಗೆ ನೇರವಾಗಿ ಬರುತ್ತೆ ಮೆಟ್ರೋ... ಕಾರು, ಬೈಕ್, ಬಸ್ ಬೇಕಾಗಿಯೇ ಇಲ್ಲ

ಪ್ರತಿಯೊಬ್ಬ ಪೋಷಕರು ಬೆಳಗ್ಗೆ ಎದ್ದಕೊಡಲೇ ತಮ್ಮ ಮಕ್ಕಳನ್ನು ಶಾಲೆಗೆ ಬಿಡುಲು ಸಾಕಷ್ಟು ಹರಸಾಹಸ ಪಡುತ್ತಿರುತ್ತಾರೆ. ಅದಕ್ಕಾಗಿ ಒಂದಿಲ್ಲೊಂದು ವಾಹನವನ್ನು ಅವಲಂಭಿಸಲೇಬೇಕು. ಆದರೆ, ಮನೆಯೊಳಗೆ ಮಕ್ಕಳನ್ನು ಶಾಲೆಗೆ ಕರೆ ತರಲು, ಬಿಡಲು ನೇರವಾಗಿ ಮೆಟ್ರೋ ರೈಲು ಬಂದರೆ ಹೇಗಿರುತ್ತೆ? ಆ ಕಲ್ಪನೆಯೇ ಎಷ್ಟು ಚೆಂದಾ ಅಲ್ವಾ..

ಇದೀಗ ಅಂತಹದೇ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಕಳೆದ ಶುಕ್ರವಾರ, ಟ್ವಿಟ್ಟರ್‌ನಲ್ಲಿ ತನ್ಸು ಯೆಗೆನ್ ಎಂಬ ಬಳಕೆದಾರರೊಬ್ಬರು ಈ ಸಣ್ಣ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಮೆಟ್ರೋವೊಂದು ಪುಟ್ಟ ಬಾಲಕನನ್ನು ನೇರವಾಗಿ ತನ್ನ ಮನೆಗೆ ಡ್ರಾಪ್ ಮಾಡುತ್ತದೆ. ಆ ವಿಡಿಯೋ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದ್ದು, ಬರೋಬ್ಬರಿ 6.6 ಮಿಲಿಯನ್ ಜನರು ನೋಡಿದ್ದರು. ಜೊತೆಗೆ 45,000ಕ್ಕೂ ಹೆಚ್ಚು ಲೈಕ್ ಪಡೆದುಕೊಂಡಿತ್ತು. 9,062 ಬಾರಿ ರೀ-ಟ್ವಿಟ್ ಆಗಿದೆ.

Video: ಇನ್ಮುಂದೆ ಮನೆಯೊಳಗೆ ನೇರವಾಗಿ ಬರುತ್ತೆ ಮೆಟ್ರೋ... ಕಾರು, ಬೈಕ್, ಬಸ್ ಬೇಕಾಗಿಯೇ ಇಲ್ಲ

ಈ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಕುರ್ಚಿ ಮೇಲೆ ಕುಳಿತು ಮೊಬೈಲ್ ಫೋನ್ ಅನ್ನು ನೋಡುತ್ತಿರುತ್ತಾರೆ. ಕೆಲವೇ ಸೆಕೆಂಡುಗಳ ಬಳಿಕ, ಅವರ ಅಪಾರ್ಟ್ಮೆಂಟ್ ಕೊಠಡಿಯ ಒಂದು ಭಾಗವು ಪಕ್ಕಕ್ಕೆ ಹೋಗುವಂತೆ ಕಂಡುಬರುತ್ತದೆ. ಅಲ್ಲಿ ಮೆಟ್ರೋ ರೈಲಿನ ಟ್ರ್ಯಾಕ್ ಕಾಣಿಸುತ್ತದೆ. ಅಲ್ಲಿಗೆ ನೇರ ಪ್ರವೇಶವನ್ನು ಹೊಂದಿರುವ ಮೆಟ್ರೋದಿಂದ ಸಿಲಿಂಡರಾಕಾರದ ಎಲಿವೇಟರ್ ತೆರೆದುಕೊಳ್ಳುತ್ತದೆ. ಅದರಿಂದ ಶಾಲೆಗೆ ತೆರಳಿದ್ದ ಚಿಕ್ಕ ಹುಡುಗನೊಬ್ಬ ಪಟ್ಟನೇ ಹೊರಬಂದು ತನ್ನ ತಾಯಿಯನ್ನು ಅಪ್ಪಿಕೊಳ್ಳತ್ತಾನೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಿರುವ ಈ ವಿಡಿಯೋ ಎಲ್ಲಡೆ ತುಂಬಾ ಸದ್ದು ಮಾಡುತ್ತಿದ್ದು, ಯಾವುದೇ ವೈರಲ್ ವಿಡಿಯೋಗಳಿಗೆ ಬಹುತೇಕ ಟ್ವಿಟರ್ ಬಳಕೆದಾರರು ತಮ್ಮ ವಿಭಿನ್ನ ಪ್ರತಿಕ್ರಿಯೆಗಳನ್ನು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಈ ರೀತಿ ಮನೆಯೊಳಗೆ ಮೆಟ್ರೋ ರೈಲು ಬರುವ ಪರಿಕಲ್ಪನೆಯನ್ನು ಟೀಕೆ ಮಾಡಿ ಬೈಯುತ್ತಿದ್ದು, ಇದನ್ನು 'ಅಸಂಬದ್ಧ' ಎಂದು ಕರೆದರೆ, ಮತ್ತೆ ಹಲವಾರು ಇದೊಂದು 'ಅದ್ಭುತ' ಕಲ್ಪನೆಯೇ ಸರಿ ಎಂದು ತಾವು ಲೈಕ್ ಮಾಡಿ ಹೊಗಳಿದ್ದಾರೆ.

ನೆಟ್ಟಿಗನೊಬ್ಬರು 'ಅಸಮರ್ಥ, ಸುರಕ್ಷಿತವಲ್ಲ, ನಿಧಾನ, ನಿರ್ವಹಣೆ ದುಃಸ್ವಪ್ನ, ಅಸಂಬದ್ಧವಾಗಿ ದುಬಾರಿ' ಆಗಿದೆ ಎಂದು ಕಾಮೆಂಟ್ ಮಾಡಿದ್ದರೆ, 'ಇದು ನಿಜವೇ? ನಮ್ಮಲೇಕೆ ಆಗಬಾರದು?' ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. 'ಈ ಮೆಟ್ರೋ ಉಪಯುಕ್ತವಾಗಿರಬಹುದು. ಆದರೆ, ರೈಲು ಬಂದಾಗ ನೀವು ನೆಲದ ಮೇಲೆ ನಡೆಯುತ್ತಿದ್ದರೆ ಏನು? ಅಯ್ಯೋ!' ಎಂದು ಇನ್ನೊಬ್ಬರು ಹೇಳಿದ್ದು, ಇದೊಂದು 'ಅದ್ಭುತ ಕಲ್ಪನೆ' ಎಂದು ಹಲವಾರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು 'ಅತ್ಯಂತ ಅಪಾಯಕಾರಿ. ಆದರೆ, ಅದ್ಭುತವಾಗಿದೆ' ಎಂದು ಹೇಳಿದ್ದಾರೆ.

ಯೆಗೆನ್ ಅವರಿಗೆ ಟ್ವಿಟರ್‌ನಲ್ಲಿ ಬರೋಬ್ಬರಿ 1.2 ಮಿಲಿಯನ್ ಫಾಲೋವರ್ಸ್ ಇದ್ದು,ಆಸಕ್ತಿದಾಯಕ ಪೋಸ್ಟ್‌ ಶೇರ್ ಮಾಡುವ ಖ್ಯಾತಿಗಳಿಸಿದ್ದಾರೆ. ಕಳೆದ ತಿಂಗಳು, ಚೀನಾದ ಡ್ರೈವಿಂಗ್ ಪರೀಕ್ಷೆಯನ್ನು ತೋರಿಸುವ ಮತ್ತೊಂದು ಆಕರ್ಷಕ ವೀಡಿಯೊವನ್ನು ಹಂಚಿಕೊಂಡಿದ್ದರು, ಇದು ಭಾರೀ ವೈರಲ್ ಆಗಿತ್ತು. ಹಲವರು ಚಾಲಕರ ಚಾಲನಾ ಕೌಶಲ್ಯವನ್ನು ಶ್ಲಾಘಿಸಿದರೆ, ಇತರರು ವಿವಿಧ ದೇಶಗಳ ಚಾಲನಾ ಪರೀಕ್ಷೆ ವಿಡಿಯೋ ಮತ್ತು ಚಿತ್ರಗಳನ್ನು ಹಂಚಿಕೊಂಡಿದ್ದರು. ಈ ವಿಡಿಯೋ 10 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿತ್ತು. ಜೊತೆಗೆ 180,000 ಮಂದಿ ಲೈಕ್ ಮಾಡಿದ್ದರು.

ಇಷ್ಟೇ ಅಲ್ಲದೆ, ಸದ್ಯ ವಿಶ್ವದೆಲ್ಲೆಡೆ ಬುಲೆಟ್ ರೈಲುಗಳದ್ದೇ ಸದ್ದು, ಆದರೆ, ಭಾರತದ 'ವಂದೇ ಭಾರತ್' ರೈಲು ಈ ಬುಲೆಟ್ ರೈಲಿನ ದಾಖಲೆಯನ್ನು ಮುರಿದಿದೆ. ಇದು ಕೆಲ ತಿಂಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿತ್ತು. ಟ್ರಯಲ್ ಸಮಯದಲ್ಲಿ ವಂದೇ ಭಾರತ್ ರೈಲು 0-100 kmph ವೇಗವನ್ನು 52 ಸೆಕೆಂಡುಗಳಲ್ಲಿ (ಹಿಂದಿನ ಆವೃತ್ತಿಯು 54.6 ಸೆಕೆಂಡು) ವೇಗವನ್ನು ಪಡಿದುಕೊಂಡಿತ್ತು. ರೈಲು ಐದು ಗಂಟೆ 14 ನಿಮಿಷಗಳಲ್ಲಿ ಅಹಮದಾಬಾದ್‌ನಿಂದ ಮುಂಬೈಗೆ 491 ಕಿಮೀ ತಡೆರಹಿತ ದೂರವನ್ನು ಗರಿಷ್ಠ 130 ಕಿಮೀ ವೇಗದಲ್ಲಿ ತಲುಪಿತ್ತು.

ಮೇಕ್-ಇನ್-ಇಂಡಿಯಾ ಪರಿಕಲ್ಪನೆಯಲ್ಲಿ ವಂದೇ ಭಾರತ್ ರೈಲುಗಳು ರೆಡಿಯಾಗಿದ್ದು, ಪ್ರತಿ ರೈಲು 16 ಎಸಿ ಕೋಚ್‌ಗಳನ್ನು 180-ಡಿಗ್ರಿ ರಿವಾಲ್ವಿಂಗ್ ಕುರ್ಚಿ, 1,128 ಪ್ರಯಾಣಿಕರ ಆಸನ ಸಾಮರ್ಥ್ಯವನ್ನು ಹೊಂದಿದೆ. ಆಗಸ್ಟ್ 2023 ರೊಳಗೆ 75 ವಂದೇ ಭಾರತ್ ರೈಲುಗಳನ್ನು ತಯಾರಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ. ಸದ್ಯ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡು ಚೆನ್ನೈ, ಬೆಂಗಳೂರು ಮತ್ತು ಮೈಸೂರು ನಡುವೆ ಈಗಾಗಲೇ ಸಂಚಾರ ಆರಂಭ ಮಾಡಿದೆ.

Most Read Articles

Kannada
English summary
Video From now on metro will come directly to the house no need for car bike bus
Story first published: Tuesday, December 6, 2022, 13:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X