ಮನಲಿ ಹೆದ್ದಾರಿಯಲ್ಲಿ ಭಾರಿ ಪ್ರಮಾಣದ ಗುಡ್ಡ ಜರಿತ ಸೃಷ್ಟಿಸಿದ ಅವಾಂತರ
ಚಂಡೀಗಡದಿಂದ ಮನಲಿ ಸಂಪರ್ಕಿಸುವ ಹಿಮಾಚಲ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 21ರಲ್ಲಿ ಭಾರಿ ಪ್ರಮಾಣದ ಗುಡ್ಡ ಕುಸಿತದ ಪರಿಣಾಮ ಕೆಲ ಹೊತ್ತು ಸವಾರರಲ್ಲಿ ಆತಂಕ ಕ್ಷಣ ಸೃಷ್ಟಿಯಾಗಿರುವುದು ವರದಿಯಾಗಿದೆ.
Also Read: ಭಾರತದ ಅತ್ಯಂತ ಅಪಾಯಕಾರಿ 15 ರಸ್ತೆಗಳು
ಗುಡ್ಡ ಪ್ರದೇಶದ ಮಣ್ಣು ಇನ್ನಷ್ಟು ಕುಸಿಯುವ ಸಾಧ್ಯತೆಯಿದ್ದು, ಈ ಮಾರ್ಗವಾಗಿ ತೆರಳುವ ಪ್ರಯಾಣಿಕರಲ್ಲಿ ಭಯದ ವಾತಾವರಣವನ್ನುಂಟು ಮಾಡಿದೆ.

ಸೋಮವಾರ ಬೆಳಗ್ಗೆ ಮಂಡಿ ಜಿಲ್ಲೆಯ ಹನೊಗಿ ದೇವಸ್ಥಾನದ ಸಮೀಪದಲ್ಲಿ ಹಾದು ಹೋಗುವ ಚಂಡೀಗಡ-ಮನಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ಸಂಭವಿಸಿತ್ತು.

ಆದರೆ ಅದೃಷ್ಟವಶಾತ್ ಯಾವುದೇ ವಾಹನ ಪ್ರಯಾಣಿಕರಿಗೆ ಅಪಾಯ ಎದುರಾಗಿಲ್ಲ ಎಂಬುದು ತಿಳಿದು ಬಂದಿಲ್ಲ.

ಮಣ್ಣು ಜರಿತದ ಪರಿಣಾಮ ಈ ಮಾರ್ಗವಾಗಿ ಸಂಚಾರಕ್ಕೆ ಅಡ್ಡಿಯಾಗಿದ್ದು, ಮಂಡಿ-ಕೊಟಲ-ಬಜ್ಜುರಾ ಮೂಲಕ ಬದಲಿ ಮಾರ್ಗ ಹಿಡಿಯುವಂತೆ ಸೂಚಿಸಲಾಗಿದೆ.

ಪ್ರಸ್ತುತ ಲೋಕೋಪಯೋಗಿ ಇಲಾಖೆಯ (PWD) ಜೊತೆ ಕೈ ಜೋಡಿಸಿಕೊಂಡಿರುವ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI), ಮಣ್ಣು ತೆರವುಗೊಳಿಸಿ ರಸ್ತೆ ಸಂಚಾರ ಮುಕ್ತಗೊಳಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.

ನಿಮ್ಮ ಮಾಹಿತಿಗಾಗಿ, ಸಾಹಸ ವಾಹನ ಪ್ರಿಯರು ಹಾಗೂ ಪ್ರವಾಸಿಗರು ಈ ಮಾರ್ಗವಾಗಿ ಹೆಚ್ಚು ಚಲಿಸುತ್ತಾರೆ. ಆದರೆ ದೇವರ ದಯೆಯಿಂದ ಮಣ್ಣು ಕುಸಿತದ ವೇಳೆ ವಾಹನಗಳು ರಸ್ತೆಯಲ್ಲಿರಲಿಲ್ಲ.

ಗುಡ್ಡದ ಬದಿಯಲ್ಲೇ ನದಿ ಹಾದು ಹೋಗುತ್ತಿದ್ದು, ಇಲ್ಲಿಗೂ ಭಾರಿ ಪ್ರಮಾಣದ ಮಣ್ಣು ಜರಿತವುಂಟಾಗಿದೆ.

ಮನಲಿ-ಕುಲ್ಲು ಹೈವೇಯಲ್ಲಿ ಸಂಭವಿಸಿರುವ ಮಣ್ಣು ಕುಸಿತದ ವಿಡಿಯೋವನ್ನು ಲೇಖನದ ಕೆಳಭಾಗದಲ್ಲಿ ಕೊಡಲಾಗಿದೆ. ಇದನ್ನು ವೀಕ್ಷಿಸಲು ಮರೆಯದಿರಿ.

ದಿ ಗ್ರೇಟ್ ಹಿಮಾಲಯನ್ ರೈಡ್; 21 ಅಮೂಲ್ಯ ಟಿಪ್ಸ್ ಓದಲು ಇಲ್ಲಿ ಕ್ಲಿಕ್ಕಿಸಿ


Click it and Unblock the Notifications








