video viral: ರೀಲ್ಸ್ ಮಾಡಲು ಟ್ರಾಫಿಕ್ ನಿಲ್ಲಿಸಿದ ಶ್ರೀಮಂತ: ಪೊಲೀಸ್ ಕ್ರಮಕ್ಕೆ ಜನರ ಆಗ್ರಹ!
ಪ್ರಭಾವಿಗಳು ಸಾರ್ವಜನಿಕ ರಸ್ತೆಗಳಲ್ಲಿ ಸ್ಟಂಟ್ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ಇತ್ತೀಚೆಗೆ ಇಸುಜು ವಿ-ಕ್ರಾಸ್ ಕಾರಿನೊಂದಿಗೆ ರೀಲ್ ಮಾಡುವ ಸಲುವಾಗಿ, ದೆಹಲಿಯ ಫ್ಲೈಓರ್‌ನಲ್ಲಿ ಸಂಚಾರವನ್ನು ನಿಲ್ಲಿಸಿದ ವೀಡಿಯೊ ವೈರಲ್ ಆಗಿದೆ. ಇದನ್ನು ನೋಡಿದ ಹಲವರು ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಆಗ್ರಹಿಸಿದ್ದಾರೆ.
ದೆಹಲಿಯ ಪಶ್ಚಿಮ ವಿಹಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವೈರಲ್ ವೀಡಿಯೊದಲ್ಲಿ ರಸ್ತೆಯಲ್ಲಿ ಹಲವಾರು ವಾಹನಗಳು ಸಾಲಾಗಿ ನಿಂತಿದ್ದು, ಅವುಗಳು ಮುಂದೆ ಹೋಗಲು ದಾರಿ ಬಿಡದೆ ಮಾಡಿಫೈಗೊಳಿಸಿದ ಇಸುಜು ವಿ-ಕ್ರಾಸ್ ಪಿಕಪ್ ರಸ್ತೆಯ ಮಧ್ಯದಲ್ಲಿ ನಿಂತಿರುವುದನ್ನು ನೋಡಬಹುದು. ಯಾವುದೇ ಎಚ್ಚರಿಕೆಯಿಲ್ಲದೆ, ಮಾಲೀಕ ಕಾರನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿದ್ದಾನೆ.

ಕಾರಿನಿಂದ ಇಬ್ಬರು ಪುರುಷರು ಪಿಕಪ್ ನಿಂದ ಹೊರಬಂದಿದ್ದು ಅದರಲ್ಲೊಬ್ಬ ವ್ಯಕ್ತಿ ಭಾರವಾದ ಚಿನ್ನದ ಆಭರಣಗಳನ್ನು ಧರಿಸಿದ್ದ. ಈತ ಪುಣೆಯ ಚಿನ್ನದ ಮನುಷ್ಯನೆಂದು ಖ್ಯಾತಿ ಪಡೆದಿರುವ ಸನ್ನಿ ವಾಘ್ಚುರೆ ಅವರಂತೆಯೇ, ದೆಹಲಿಯ ಹೊಸ ಗೋಲ್ಡ್ ಮ್ಯಾನ್ ಎಂಬ ಖ್ಯಾತಿ ಪಡೆಯುವ ಉದ್ದೇಶದಿಂದ ಈ ವಿಡಿಯೋವನ್ನು ಮಾಡಿದ್ದಾನೆ ಎನ್ನಲಾಗಿದೆ.
ಈತ ಉದ್ದೇಶಪೂರ್ವಕವಾಗಿಯೇ ಸಂಚಾರವನ್ನು ನಿರ್ಬಂಧಿಸಲು ನಿರ್ಧರಿಸಿರುವುದು ವಿಡಿಯೋದಿಂದ ಸ್ಪಷ್ಟವಾಗಿದೆ. ಈ ವಿಡಿಯೋ ನಂತರ, ಅದೇ ರಸ್ತೆಯಲ್ಲಿ ಮುಂಭಾಗದ ಬಾಗಿಲುಗಳನ್ನು ತೆರೆದುಕೊಂಡು ಕಾರನ್ನು ಓಡಿಸಿದ್ದಾರೆ. ಡ್ರೈವಿಂಗ್ ಮಾಡುವಾಗ ಚಾಲಕ ಮತ್ತೊಮ್ಮೆ ಕ್ಯಾಮೆರಾಗೆ ಪೋಸ್ ನೀಡುವುದನ್ನು ಕಾಣಬಹುದು. ಅವರು ರಸ್ತೆಯಲ್ಲಿ ಅಜಾಗರೂಕತೆಯಿಂದ ಕಾರನ್ನು ಓಡಿಸುವುದನ್ನು ಸಹ ಕಾಣಬಹುದು.

ಈ ವೀಡಿಯೊ ವೈರಲ್ ಆದ ನಂತರ, ಪೊಲೀಸರು ಕ್ರಮ ಕೈಗೊಳ್ಳುವಂತೆ ನೆಟ್ಟಿಗರಿಂದ ಹಲವಾರು ಕಮೆಂಟ್‌ಳು ಬಂದಿವೆ. ಅವರಲ್ಲಿ ಹಲವರು ದೆಹಲಿ ಪೊಲೀಸರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಟ್ಯಾಗ್ ಮಾಡಿದ್ದಾರೆ. ಆದರೆ ದೆಹಲಿ ಪೊಲೀಸರು ಈ ವಿಷಯದ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ.
ಪೊಲೀಸರು ಅವರನ್ನು ಹಿಡಿಯುವುದಿಲ್ಲ ಎಂದು ಅವರಿಗೆ ತುಂಬಾ ವಿಶ್ವಾಸವಿದೆ. ಒಂದು ವೇಳೆ ಅವರನ್ನು ಪತ್ತೆಹಚ್ಚಿದರೂ, ಅದು ಹೆಸರಿಗೆ ಮಾತ್ರ. ಇಂಥಾ ಜನ ಪಾಠ ಕಲಿಯುವುದಿಲ್ಲ, ಇಂತಹ ಚಟುವಟಿಕೆಗಳಲ್ಲಿ ತೊಡಗುವುದನ್ನು ಕೂಡ ಬಿಡುವುದಿಲ್ಲ. ಕಾನೂನು ಎಂಬುದು ಸಾಮಾನ್ಯ ಜನರಿಗೆ ಮಾತ್ರ, ಇದು ಶ್ರೀಮಂತರಿಗೆ ವರ್ತಿಸುವುದಿಲ್ಲ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಸಾರ್ವಜನಿಕ ರಸ್ತೆಗಳು ಎಲ್ಲರಿಗೂ ಸೇರಿದ್ದಾಗಿವೆ, ಇಂತಹ ಸಾಹಸಗಳನ್ನು ಮಾಡಲು ಇದು ಯಾರಿಗೂ ಸ್ಥಳವಲ್ಲ. ಇಸುಜು ಚಾಲಕ ಇತರ ರಸ್ತೆ ಬಳಕೆದಾರರಿಗೆ ಅನಾನುಕೂಲತೆಯನ್ನು ಸೃಷ್ಟಿಸಿದ್ದಲ್ಲದೆ, ವಾಹನಗಳು ಪರಸ್ಪರ ಡಿಕ್ಕಿ ಹೊಡೆಯುವ ಸಾಧ್ಯತೆಗಳಿಗೂ ಕಾರಣವಾಗುತ್ತಿದ್ದ. ಅದೃಷ್ಟವಶಾತ್ ಆ ರಸ್ತೆಯಲ್ಲಿ ಯಾವುದೇ ಅನಾಹುತ ನಡೆದಿಲ್ಲ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ನೀವು ನಿಜವಾಗಿಯೂ ಅಂತಹ ಸ್ಟಂಟ್‌ಗಳನ್ನು ಮಾಡಲು ಬಯಸಿದರೆ, ನಿಮ್ಮ ಖಾಸಗಿ ಸ್ಥಳ ಅಥವಾ ಮುಚ್ಚಿದ ರಸ್ತೆಗಳು ಮತ್ತು ಟ್ರ್ಯಾಕ್‌ಗಳನ್ನು ಹುಡುಕಿಕೊಳ್ಳುವುದು ಉತ್ತಮ. ದೆಹಲಿ ಪೊಲೀಸರು ಈ ವಾಹನವನ್ನು ಪತ್ತೆಹಚ್ಚಿ ಬೇಜವಾಬ್ದಾರಿ ನಡವಳಿಕೆಗಾಗಿ ಭಾರಿ ದಂಡವನ್ನು ವಿಧಿಸುತ್ತಾರೆ ಎಂಬ ನಂಬಿಕೆಯಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications