ಇನ್ನೂ ಈ ಕಣ್ಣಲ್ಲಿ ಏನೇನ್ ನೋಡ್ಬೇಕೊ! ಇದು ಮನೆಯಲ್ಲಮ್ಮ ಮಹಾತಾಯಿ ಟ್ರೈನ್: Viral Video
ದೆಹಲಿ ಮೆಟ್ರೋ ಇತ್ತಿಚೆಗೆ ಯಾವುದೋ ಒಂದು ಕಾರಣಕ್ಕೆ ಸುದ್ದಿಯಾಗ್ತಿದೆ. ಯುವತಿಯೊಬ್ಬರು ಮೆಟ್ರೋ ಕೋಚ್‌ನಲ್ಲಿ ಪ್ರಯಾಣಿಸುವಾಗ ಹೇರ್ ಸ್ಟ್ರೈಟ್ನರ್ ಬಳಸುತ್ತಿರುವ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ನೆಟ್ಟಿಗರು ಇನ್ನೂ ಈ ಕಣ್ಣಲ್ಲಿ ಏನೇನ್ ನೋಡ್ಬೇಕೊ! ಇದು ಮನೆಯಲ್ಲಮ್ಮ ಮಹಾತಾಯಿ ಟ್ರೈನ್ ಎಂದು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ದೆಹಲಿ ಮೆಟ್ರೋ ರೈಲು ನಿಗಮವು ತಮ್ಮ ನಿಯಮಗಳು ಮತ್ತು ನಿಬಂಧನೆಗಳನ್ನು ಕಾರ್ಯಗತಗೊಳಿಸುವಲ್ಲಿ ವಿಫಲವಾಗಿದೆ ಎಂದು ಪದೆ ಪದೇ ಸಾಭೀತಾಗುತ್ತಿದೆ. ದೆಹಲಿ ಮೆಟ್ರೋ ಇತ್ತೀಚೆಗೆ ಪ್ರಯಾಣಿಕರ ವಿಚಿತ್ರ ಚೇಷ್ಟೆಗಳಿಂದ ಸುದ್ದಿಯಲ್ಲಿದೆ. ಪ್ರಯಾಣಿಕರು ನೃತ್ಯ ಮಾಡುವುದರಿಂದ ಹಿಡಿದು ರೊಮ್ಯಾನ್ಸ್ ಮಾಡುವ Viral Video ಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ಇದೀಗ, ದೆಹಲಿ ಮೆಟ್ರೋದಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾದ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಯುವತಿಯು ಮೆಟ್ರೋ ಕೋಚ್‌ನಲ್ಲಿ ಪ್ರಯಾಣಿಸುತ್ತಾ ಹೇರ್ ಸ್ಟ್ರೈಟ್ನರ್ ಬಳಸುತ್ತಿರುವುದನ್ನು ನೋಡಬಹುದು. ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಚಾರ್ಜ್ ಮಾಡಲು ಮೆಟ್ರೋ ಒದಗಿಸಿದ ಆಸನದ ಮೇಲಿರುವ ಸಾಕೆಟ್‌ಗೆ, ಹೇರ್ ಸ್ಟ್ರೈಟ್ನರ್ ಅನ್ನು ಪ್ಲಗ್ ಮಾಡಿ ಕೂದಲನ್ನು ಸ್ಟ್ರೈಟ್ನಿಂಗ್ ಮಾಡುತ್ತಿರುವುದನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದಾರೆ.
ಯುವತಿಯ ಈ ಚೇಷ್ಟೆಗೆ ಇತರ ಪ್ರಯಾಣಿಕರು ದಂಗಾಗಿದ್ದಾರೆ. ಜೂನ್ 17 ರಂದು ಹಸ್ನಾ ಜರೂರಿ ಹೈ (@HasnaZarooriHai) ಎಂಬ ಮೀಮ್ ಪೇಜ್‌ನ ಟ್ವಿಟರ್‌ನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, 1.69 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಟ್ವಿಟರ್ ಬಳಕೆದಾದರರು ಈ ವಿಚಿತ್ರ ವಿಡಿಯೋ ಕಂಡು ದೆಹಲಿ ಮೆಟ್ರೋ ಬಗ್ಗೆ ಹಾಗೂ ಯುವತಿಯ ಬಗ್ಗೆ ಮಾಡಿರುವ ಕಮೆಂಟ್‌ಗಳು ಕೂಡ ವೈರಲ್ ಆಗಿವೆ.

ಮೆಟ್ರೋದಲ್ಲಿ ಮಹಿಳೆಯರ ಜಗಳ: ಇಬ್ಬರು ಮಹಿಳೆಯರು ತೀವ್ರವಾಗಿ ಹೊಡೆದಾಡಿದ್ದ ದೃಶ್ಯಗಳು ಎಲ್ಲೆಡೆ ವೈರಲ್ ಆಗಿದ್ದವು. ಈ ಇಬ್ಬರು ರೈಲನ್ನು ಯುದ್ಧಭೂಮಿಯನ್ನಾಗಿ ಮಾಡಿದ್ದರು. ಈ ಇಬ್ಬರ ನಡುವಿನ ಗಲಾಟೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಪಕ್ಕಾ ಗಲ್ಲಿ ರೌಡಿಗಳಂತೆ ವರ್ತಿಸಿದ್ದು, ಒಬ್ಬಾಕೆ ಬಾಟಲಿ ಹಿಡಿದು ಬಂದರೆ ಮತ್ತೊಬ್ಬಾಕೆ ತನ್ನ ಶೂ ಕೈಗೆತ್ತಿಕೊಂಡು ಜಗಳಕ್ಕೆ ನಿಂತಿದ್ದರು.
ಮೆಟ್ರೋದಲ್ಲಿ ರೊಮ್ಯಾನ್ಸ್: ದೆಹಲಿ ಮೆಟ್ರೋ ಸ್ಟೇಷನ್‌ನಲ್ಲಿ ಇತ್ತಿಚೆಗೆ ಪ್ರೇಮಿಗಳು ರೊಮ್ಯಾನ್ಸ್ ಮಾಡುವ ವಿಡಿಯೋ ಕೂಡ ವೈರಲ್ ಆಗಿತ್ತು. ಅಲ್ಲೊಬ್ಬ, ಇಲ್ಲೊಬ್ಬ ಪ್ರಯಾಣಿಕರು ಕಾಣಿಸಿಕೊಳ್ಳುತ್ತಿದ್ದರೂ ಪ್ರೇಮಿಗಳು ಇದ್ಯಾವುದನ್ನು ಲೆಕ್ಕಿಸದೇ ಚುಂಬಿಸುವ ದೃಷ್ಯಗಳನ್ನು ಸೆರೆಹಿಡಿಯಲಾಗಿತ್ತು. ಇದಾದ ಬಳಿಕ ಅಲ್ಲಿನ ಸರ್ಕಾರ ಒಂದೆರಡು ದಿನಕ್ಕೆ ಪೊಲೀಸರನ್ನು ನೇಮಿಸಿ ಎಚ್ಚರ ವಹಿಸಿದರಾದ್ರೂ ಈಗ ಮತ್ತೆ ಅದೇ ವರಸೆಯಾಗಿದೆ.
ಮೆಟ್ರೋದಲ್ಲಿ ರೀಲ್ಸ್: ಉತ್ತರ ಭಾರತದಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಫೇಮಸ್ ಆಗಲು ಮೆಟ್ರೋ ರೈಲಿನಲ್ಲಿ ರೀಲ್ಸ್ ಮಾಡೋ ಹುಚ್ಚು ಹೆಚ್ಚಾಗಿತ್ತು. ಇತರ ಪ್ರಯಾಣಿಕರಿಗೆ ತೊಂದರೆ ಕೊಡುತ್ತಾ ದೆಹಲಿ ಮೆಟ್ರೋ ರೈಲುಗಳಲ್ಲಿ ನೃತ್ಯ ಮಾಡುವ ಹಲವು ವಿಡಿಯೋಗಳು ಇಂದಿಗೂ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಏನೇ ಮಾಡಿದ್ರೂ ಇಂತಹ ಕೃತ್ಯಗಳಿಗೆ ಬ್ರೇಕ್ ಹಾಕುವಲ್ಲಿ ಅಲ್ಲಿನ ಸರ್ಕಾರ ವಿಫಲವಾಗುತ್ತಿದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications