Virat Kohli ಸ್ವಂತ ಹಣದಿಂದ ಖರೀದಿಸಿದ ಮೊದಲ ಕಾರು ಟಾಟಾ ಸಫಾರಿ: ಇದನ್ನೇ ಖರೀದಿಸಲು ಕಾರಣವೇನು ಗೊತ್ತಾ?
ವಿರಾಟ್ ಕೊಹ್ಲಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಬ್ಯಾಟ್ ಹಿಡಿದರೆ ಬೌಂಡರಿಗಳ ಸುರಿಮಳೆ ಸುರಿಸುವ ಕೊಹ್ಲಿ ಕ್ರಿಕೆಟ್ ಅಂಗಳದ ಕಿಂಗ್ ಆಗಿ ರಾಜ್ಯಭಾರ ಆರಂಭಿಸಿದ್ದಾರೆ. ಕ್ರಿಕೆಟ್ ಅಂಗಳದಲ್ಲಿ ವಿರಾಟ ರೂಪ ತೋರಿಸುವ ಕೊಹ್ಲಿ ಎಂದೆಂದಿಗೂ ಕಿಂಗೇ. ಅಲ್ಲದೇ ಇವರು ನಮ್ಮ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ.
ಕ್ರಿಕೆಟ್ ಆಟಗಾರರು ಹೆಚ್ಚು ಕಾರ್ ಕ್ರೇಜ್ ಹೊಂದಿರುತ್ತಾರೆ. ವಿರಾಟ್ ಕೊಹ್ಲಿ ಅವರು ಕೂಡ ಹೆಚ್ಚು ಕಾರ್ ಕ್ರೇಜ್ ಹೊಂದಿದ್ದಾರೆ. ಅವರು ಇಂದು ಹಲವಾರು ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಆದರೆ ವಿರಾಟ್ ಸ್ವಂತ ಹಣದಿಂದ ಖರೀದಿಸಿದ ಮೊದಲ ಕಾರು ಯಾವುದು ಗೊತ್ತಾ? ಅದು ಬೇರೆ ಯಾವುದೇ ಅಲ್ಲ ಅದು ಸ್ವದೇಶಿ ಟಾಟಾ ಸಫಾರಿ ಆಗಿದೆ. ಇತ್ತೀಚೆಗೆ ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ಸಂದರ್ಶನದಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ಜತಿನ್ ಸಪ್ರು ಅವರೊಂದಿಗೆ ವಿರಾಟ್ ಕೊಹ್ಲಿ ಅವರ ಸಂದರ್ಶನವನ್ನು ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ, ವಿರಾಟ್ ಕೊಹ್ಲಿ, ನಾನು ನನ್ನ ಸ್ವಂತ ಹಣದಿಂದ ಖರೀದಿಸಿದ ಮೊದಲ ಕಾರು ಸಫಾರಿ, ಈ ಸಫಾರಿ ಕಾರನ್ನು ಖರೀದಿಸಲು ಕಾರಣವೆಂದರೆ ಫೀಚರ್ಸ್ ಮಾತ್ರವಲ್ಲದೆ ರಸ್ತೆಯಲ್ಲಿ ಓಡಿಸುವಾಗ ಜನರು ತಾವಾಗಿಯೇ ದಾರಿ ಬಿಟ್ಟುಕೊಡುತ್ತಾರೆ ಎಂಬ ಭಾವನೆಯಿಂದ ನಾನು ಈ ಕಾರನ್ನು ಖರೀದಿಸಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ಈ ಕಾರಿನಲ್ಲಿ ನಡೆದ ಘಟನೆಯೊಂದನ್ನು ಕೂಡ ಹಂಚಿಕೊಂಡಿದ್ದಾರೆ. ವರದಿಗಳ ಪ್ರಕಾರ, ಅವರ ಹಿರಿಯ ಸಹೋದರ ವಿಕಾಸ್ ಈ ಕಾರನ್ನು ಓಡಿಸುತ್ತಿದ್ದರು. ಅವನು ಕಾರನ್ನು ಪಂಪ್‌ಗೆ ತೆಗೆದುಕೊಂಡು ಹೋಗಿ ಇಂಧನ ತುಂಬಿಸಿದರು. ಆದರೆ ಅಲ್ಲಿ ಇರುವ ಪಂಪ್ ಉದ್ಯೋಗಿ ಡೀಸೆಲ್ ಕಾರಿಗೆ ಪೆಟ್ರೋಲ್ ತುಂಬಿಸಿದ್ದರು. ನಂತರ ಈ ಕಾರು ದಾರಿಯಲ್ಲಿ ನಿಂತುಹೋಗುತ್ತೆ ಮತ್ತು ನಂತರ ಟ್ಯಾಂಕ್ ಖಾಲಿ ಮಾಡಿ ಸರಿ ಮಾಡಬೇಕಾಯಿತು.
ವಿರಾಟ್ ಕೊಹ್ಲಿ ಮುಂಚೆ ಸ್ಪೋಟ್ಸ್ ಕಾರುಗಳನ್ನು ಹೆಚ್ಚು ಇಷ್ಟಪಡುತಿದ್ದಾರೆ. ಆದ್ರೆ ಈಗ ಫ್ಯಾಮಿಲ್ ಮ್ಯಾನ್ ಆದ ನಂತರ ವಿರಾಟ್ ಕೊಹ್ಲಿ ಅವರು ಕಾರು ಖರೀದಿಸುವಾಗ ಏನೆಲ್ಲಾ ವಿಷಯಗಳನ್ನು ನೋಡುತ್ತಾರೆ ಎಂಬುದನ್ನು ತಿಳಿಸಿದ್ದಾರೆ. ಅವರು ಫ್ಯಾಮಿಲಿ ಕಾರ್ ಅನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ಅವರು ಹೇಳುತ್ತಾರೆ. ಅವನು ಕಾರಿನಲ್ಲಿನ ಸ್ಪೇಸ್ ನೋಡುತ್ತಾನೆ. ಇದಲ್ಲದೇ ಕಾರನ್ನು ನೋಡಿ ಅದು ಆರಾಮದಾಯಕವಾಗಿದೆಯೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳುತ್ತಾರೆ.
ವಿರಾಟ್ ಪ್ರಸ್ತುತ ನಾಲ್ಕು ಕಾರುಗಳನ್ನು ಹೊಂದಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಇದರೊಂದಿಗೆ, ಅವರು ತಮ್ಮ ಸಿಬ್ಬಂದಿ ಬಳಸುವ ಎಲೆಕ್ಟ್ರಿಕ್ ಕಾರನ್ನು ಹೊಂದಿದ್ದಾರೆ. ಕೊಹ್ಲಿ ಖುದ್ದಾಗಿ ಆಡಿ ಕಾರ್ ಕಂಪೆನಿಯ ರಾಯಭಾರಿಯೂ ಸಹ ಹೌದು. ಹೀಗಾಗಿಯ ಅವರಿಗೆ ಒಂದಷ್ಟು ದುಬಾರಿ ಕಾರುಗಳು ಉಡುಗೊರೆಯಾಗಿ ಸಿಕ್ಕರೆ, ಇನ್ನೊಂದಷ್ಟು ಕಾರುಗಳನ್ನು ಅವರೇ ಖರೀದಿಸಿದ್ದಾರೆ.
ಪ್ರಸ್ತುತ ಮುಂಬೈನಲ್ಲಿ ನೆಲೆಯಾಗಿರುವ ವಿರಾಟ್ ತಮ್ಮ ದೆಹಲಿಯಲ್ಲಿರುವ ಮನೆಯಲ್ಲಿ ಸಾಕಷ್ಟು ಐಷಾರಾಮಿ ಹಾಗೂ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಇನ್ನು Audi R8 LMX ಎಂಬುದು ವಿರಾಟ್ ಕೊಹ್ಲಿ ಬಳಿ ಇರುವ ಕಾರು ಕಲೆಕ್ಷನ್‌ಗಳಲ್ಲಿಯೇ ಅತ್ಯಂತ ವೇಗದ ಕಾರು. ಈ ಸೂಪರ್ ಕಾರ್‌ನ ಬೆಲೆ ಬರೋಬ್ಬರಿ 2.97 ಕೋಟಿ ರೂಪಾಯಿಗಳು. ಇನ್ನು ಈ ಕಾರ್‌ನ ಇಂಜಿನ್ ಬಗ್ಗೆ ನೋಡುವುದಾದರೆ, 5.2 ಲೀಟರ್ V10 ಇಂಜಿನ್‌ನೊಂದಿಗೆ ಬರುತ್ತದೆ.
ಇದರಲ್ಲಿ ಆಲ್ ವ್ಹೀಲ್ ಡ್ರೈವ್ ವ್ಯವಸ್ಥೆ ಇರುವುದರಿಂದ ಈ ಗಾಡಿಯ ಇಂಜಿನ್ ಸಾಮರ್ಥ್ಯವು ಕಾರಿನ ಎಲ್ಲಾ ಚಕ್ರಗಳಿಗೂ ಸಮನಾಗಿ ಹಂಚಿಕೆಯಾಗುತ್ತದೆ. ಹಾಗಾಗಿ ಈ ಕಾರಿನ ಸವಾರಿಯ ಅನುಭವವನ್ನು ವರ್ಣಿಸಲಸಾಧ್ಯ. ಈ ಕಾರು ವಿಶ್ವದಲ್ಲೇ ಕೇವಲ 99 ಯೂನಿಟ್ ಮಾತ್ರ ಇದೆ. ಅದರಲ್ಲಿ ಒಂದು ಕಾರು ನಮ್ಮ ವಿರಾಟ್ ಬಳಿ ಇದ್ದು, ಇಡೀ ದಕ್ಷಿಣ ಏಷಿಯಾದಲ್ಲೇ ಇರುವಂತಹ ಏಕೈಕ Audi R8 LMX ಕಾರು ಇದಾಗಿದೆ.


Click it and Unblock the Notifications








