Just In
Don't Miss!
- News
ಹುಣಸೋಡು ಜಿಲೆಟಿನ್ ಸ್ಪೋಟ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
- Sports
ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಿಕ್ ಸ್ಟಾರ್ಟ್ ಮೂಲಕ ಆನ್ ಆಗುತ್ತದೆ ಈ ಮಿನಿ ಕಾರು
ಫೋಕ್ಸ್‌ವ್ಯಾಗನ್ ಬೀಟಲ್ ಕಾರಿನ ಮಿನಿ ಆವೃತ್ತಿಯನ್ನು ರಚಿಸಿರುವ ಕಾರಣಕ್ಕೆ ಕೇರಳದ ರಾಕೇಶ್ ಬಾಬು ಎಂಬುವವರು ಕಳೆದ ಕೆಲವು ತಿಂಗಳುಗಳಿಂದ ಇಂಟರ್ ನೆಟ್ ನಲ್ಲಿ ಜನಪ್ರಿಯರಾಗಿದ್ದಾರೆ. ಅವರು ತಯಾರಿಸಿರುವ ಫೋಕ್ಸ್‌ವ್ಯಾಗನ್ ಮಿನಿ ಬೀಟಲ್ ಕಾರು ನೋಡುಗರ ಗಮನ ಸೆಳೆದಿದೆ.

ಫೋಕ್ಸ್‌ವ್ಯಾಗನ್ ಬೀಟಲ್ ಕಾರಿನ ಮಿನಿ ಆವೃತ್ತಿಯನ್ನು ಹೇಗೆ ರಚಿಸಲಾಯಿತು, ಈ ಕಾರಿನಲ್ಲಿ ಯಾವ ಬಿಡಿಭಾಗಗಳನ್ನು ಅಳವಡಿಸಲಾಗಿದೆ ಎಂಬುದಕ್ಕೆ ಸಂಬಂಧಿಸಿದ ಕೆಲವು ವೀಡಿಯೊಗಳನ್ನು ರಾಕೇಶ್ ಬಾಬು ಬಿಡುಗಡೆಗೊಳಿಸಿದ್ದಾರೆ. ಈ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಲ್ಪಟ್ಟಿವೆ.

ಈಗ ರಾಕೇಶ್ ಬಾಬು ಇತ್ತೀಚೆಗೆ ಮತ್ತೊಂದು ವೀಡಿಯೊವನ್ನು ಬಿಡುಗಡೆಗೊಳಿಸಿದ್ದಾರೆ. ಈ ವೀಡಿಯೊವನ್ನು ಸುಡಸ್ ಕಸ್ಟಮ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ರಾಕೇಶ್ ಬಾಬು ಕಾರಿಗೆ ಬಾಟಲ್ ನಲ್ಲಿ ಪೆಟ್ರೋಲ್ ಹಾಕುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಈ ವೀಡಿಯೊವನ್ನು ಫೋಕ್ಸ್‌ವ್ಯಾಗನ್ ಬೀಟಲ್‌ನ ಮಿನಿ ಆವೃತ್ತಿ ಇನ್ನೂ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಪರೀಕ್ಷಿಸುವಾಗ ತೆಗೆಯಲಾಗಿದೆ. ಸುದೀರ್ಘ ವಿರಾಮದ ನಂತರ ರಾಕೇಶ್ ಬಾಬು ಈ ಮಿನಿ ಫೋಕ್ಸ್‌ವ್ಯಾಗನ್ ಬೀಟಲ್ ಕಾರನ್ನು ಚಾಲನೆ ಮಾಡುತ್ತಿರುವ ಕಾರಣಕ್ಕೆ ವೀಡಿಯೊ ಮಾಡಿದ್ದಾರೆ.

ಸಾಮಾನ್ಯವಾಗಿ ಕಾರುಗಳಲ್ಲಿ ಫ್ಯೂಯಲ್ ಟ್ಯಾಂಕ್ ಕ್ಯಾಪ್'ಗಳನ್ನು ಸೈಡ್'ನಲ್ಲಿ ನೀಡಲಾಗಿರುತ್ತದೆ. ಆದರೆ ಈ ಮಿನಿ ಫೋಕ್ಸ್‌ವ್ಯಾಗನ್ ಬೀಟಲ್ ಕಾರಿನ ರೂಫ್ ಮೇಲೆ ಫ್ಯೂಯಲ್ ಟ್ಯಾಂಕ್ ಕ್ಯಾಪ್ ನೀಡಲಾಗಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ಕಾರಿನಲ್ಲಿರುವ ಫ್ಯೂಯಲ್ ಟ್ಯಾಂಕ್ 4 ಲೀಟರ್ ಸಾಮರ್ಥ್ಯವನ್ನು ಹೊಂದಿದೆ. ರಾಕೇಶ್ ಬಾಬು ಈ ವೀಡಿಯೊದಲ್ಲಿ ಈ ಕಾರಿನ ಭಾಗಗಳ ಬಗ್ಗೆ ವಿವರಿಸಿದ್ದಾರೆ. ಈ ಕಾರಿನಲ್ಲಿರುವ ಹೆಡ್‌ಲೈಟ್‌ಗಳನ್ನು ಬಜಾಜ್ ಆಟೋ ರಿಕ್ಷಾದಿಂದ ತೆಗೆದುಕೊಳ್ಳಲಾಗಿದೆ.

ಈ ಕಾರಿನಲ್ಲಿ 2 ಸ್ಟ್ರೋಕ್ ಎಂಜಿನ್ ಬಳಸಲಾಗಿದೆ. ಈ ಎಂಜಿನ್ ಅನ್ನು ಸುಜುಕಿ ಸಮುರಾಯ್ ಬೈಕಿನಿಂದ ತೆಗೆದುಕೊಳ್ಳಲಾಗಿದೆ. ಇನ್ನು ಟ್ರಾನ್ಸ್'ಮಿಷನ್ ಯೂನಿಟ್ ಅನ್ನು ರಾಕೇಶ್ ಬಾಬುರವರೇ ವಿನ್ಯಾಸಗೊಳಿಸಿದ್ದಾರೆ. ಮಿನಿ ಕಾರ್ ಆಗಿರುವ ಕಾರಣಕ್ಕೆ ಈ ಕಾರಿನಲ್ಲಿ ಕೇವಲ ಇಬ್ಬರು ಮಾತ್ರ ಕುಳಿತುಕೊಳ್ಳಬಹುದು.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ
ಪೆಟ್ರೋಲ್ ತುಂಬಿಸಿದ ನಂತರ ರಾಕೇಶ್ ಬಾಬು ಈ ಕಾರನ್ನು ಸೆಲ್ಫ್ ಸ್ಟಾರ್ಟ್ ಮೂಲಕ ಆನ್ ಮಾಡಲು ಪ್ರಯತ್ನಿಸಿದರು. ಆದರೆ ಕಾರು ಹಲವು ದಿನಗಳಿಂದ ಮೂಲೆಯಲ್ಲಿದ್ದ ಕಾರಣಕ್ಕೆ ಸೆಲ್ಫ್ ಸ್ಟಾರ್ಟ್ ಮೂಲಕ ಆನ್ ಆಗಲಿಲ್ಲ. ಈ ಕಾರಣಕ್ಕೆ ರಾಕೇಶ್ ಬಾಬುರವರ ಸ್ನೇಹಿತರೊಬ್ಬರು ಕಿಕ್‌ಸ್ಟಾರ್ಟ್ ಮೂಲಕ ಕಾರನ್ನು ಆನ್ ಮಾಡಿದರು.

ಸಾಮಾನ್ಯ ಕಾರುಗಳಂತೆ ಈ ಮಿನಿ ಫೋಕ್ಸ್‌ವ್ಯಾಗನ್ ಬೀಟಲ್ ಕಾರಿನಲ್ಲಿ ಆಕ್ಸಲರೇಟರ್, ಬ್ರೇಕ್, ಕ್ಲಚ್ ಪೆಡಲ್ ಹಾಗೂ ಗೇರ್ ಲಿವರ್'ಗಳನ್ನು ಅಳವಡಿಸಲಾಗಿದೆ. ಅದ್ಭುತವಾದ ಮಿನಿ ಫೋಕ್ಸ್‌ವ್ಯಾಗನ್ ಬೀಟಲ್ ಕಾರನ್ನು ತಯಾರಿಸಿದ ರಾಕೇಶ್ ಬಾಬು ಅವರನ್ನು ಅಭಿನಂದಿಸಲೇಬೇಕು.