Viral video: ಭೀಕರ ಅಪಘಾತವಾದ್ರೂ ಕಾರಿನಲ್ಲಿದ್ದವರೆಲ್ಲಾ ಸೇಫ್... ಇದು ಟಾಟಾ ಕಾರಲ್ಲ!
ಬಸ್‌ಗೆ ಮುಖಾಮುಖಿ ಡಿಕ್ಕಿಯಾದ್ರೂ ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿರುವ ಘಟನೆ ಹರಿಯಾಣದ ರೆವಾರಿ ಜಿಲ್ಲೆಯ ಪಹಲ್ವಾಸ್ ಪ್ರದೇಶದಲ್ಲಿ ಸಂಭವಿಸಿದೆ. ಮೂವರು ಪ್ರಯಾಣಿಕರು ಒಳಗಿರುವಾಗ ವೇಗವಾಗಿ ಬಂದ ಹರಿಯಾಣ ರೋಡ್‌ವೇಸ್ ಬಸ್ ಕಾರಿನ ಬದಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರು ಬಸ್‌ನ ಅಡಿಯಲ್ಲಿ ಸಿಲುಕಿದ್ರೂ ಪ್ರಯಾಣಿಕರು ಪಾರಾಗಿದ್ದಾರೆ.
ಈ ಕುರಿತ ವಿಡಿಯೋ ಕೂಡ ವೈರಲ್ ಆಗಿದ್ದು, ನಿಖಿಲ್ ರಾಣಾ ಎಂಬಾತ ತನ್ನ ಯ್ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈಗ ಎಲ್ಲರಿಗೂ ಕಾಡಿತ್ತಿರುವ ಪ್ರಶ್ನೆ ಕಾರು ಯಾವುದೆ ಎಂಬುದು ಅಲ್ಲವೇ? ಈ ಅಪಘಾತಕ್ಕೆ ತುತ್ತಾಗಿರುವುದು ಫೋಕ್ಸ್‌ವ್ಯಾಗನ್ ಪೋಲೊ. ಈ ಪೊಲೊದಲ್ಲಿ ಮೂವರು ಪ್ರಯಾಣಿಕರಿದ್ದರು, ಬಸ್ ಮುಖಾಮುಖಿ ಡಿಕ್ಕಿ ಹೊಡೆದ ನಂತರವೂ ಪವಾಡ ಸದೃಷವಾಗಿ ಪಾರಾಗಿದ್ದಾರೆ.

ಈ ಅಪಘಾತವು ಜೂನ್ 26, 2023 ರಂದು ಹರಿಯಾಣದ ರೆವಾರಿ ಜಿಲ್ಲೆಯ ಪಹಲ್ವಾಸ್ ಪ್ರದೇಶದಲ್ಲಿ ಸಂಭವಿಸಿದೆ. ವೀಡಿಯೊ ಪ್ರಕಾರ, ಮೂವರು ಪ್ರಯಾಣಿಕರು ಒಳಗಿರುವಾಗ ವೇಗವಾಗಿ ಬಂದ ಹರಿಯಾಣ ರೋಡ್‌ವೇಸ್ ಬಸ್ ಕಾರಿನ ಬದಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಫೋಕ್ಸ್‌ವ್ಯಾಗನ್ ಪೊಲೊ ಉರುಳಿದ್ದು, ಬಸ್‌ನ ಅಡಿಗೆ ಸಿಲುಕಿ ಅದರ ಬಂಪರ್ ಪೊಲೊ ಮೇಲೆ ನಿಂತಿದೆ.
ಅಪಘಾತದ ತೀವ್ರತೆಯ ಹೊರತಾಗಿಯೂ, ಕಾರಿನಲ್ಲಿದ್ದ ಮೂವರೂ ಸಣ್ಣಪುಟ್ಟ ಗಾಯಗಳೊಂದಿಗೆ ಹೊರ ಬಂದಿದ್ದಾರೆ. ಡಿಕ್ಕಿ ಹೊಡೆದ ಬಸ್‌ನಲ್ಲಿ ಯಾರಾದರೂ ಪ್ರಯಾಣಿಕರಿದ್ದರೇ ಎಂಬುದು ಸ್ಪಷ್ಟವಾಗಿಲ್ಲ. ಅಪಘಾತದ ನಂತರ ತಮ್ಮ ವಸ್ತುಗಳನ್ನು ಹಿಂಪಡೆಯಲು ಪ್ರಯಾಣಿಕರಲ್ಲಿ ಒಬ್ಬರು ಮತ್ತೆ ಕಾರಿನೊಳಗೆ ಹೋಗಿರುವುದಾಗಿ ವೀಡಿಯೊ ಹಂಚಿಕೊಂಡ ವ್ಯಕ್ತಿ ತಿಳಿಸಿದ್ದಾರೆ.

ಅಪಘಾತಕ್ಕೆ ನಿಖರವಾದ ಕಾರಣ ತಿಳಿದಿಲ್ಲವಾದ್ರೂ ಇದು ಫೋಕ್ಸ್‌ವ್ಯಾಗನ್ ಪೋಲೋದ ನಿರ್ಮಾಣ ಗುಣಮಟ್ಟವನ್ನು ಎತ್ತಿ ತೋರಿಸುತ್ತದೆ. ಎ ಪಿಲ್ಲರ್ ಮತ್ತು ಕಾರಿನ ಬಾಗಿಲುಗಳು ಹಾನಿಗೊಳಗಾಗಿದ್ದರೂ, ಪ್ರಯಾಣಿಕರನ್ನು ಸುರಕ್ಷಿತವಾಗಿಡುವಲ್ಲಿ ಯಶಸ್ವಿಯಾಗಿದೆ. ಫೊಕ್ಸ್‌ವ್ಯಾಗನ್ ಪೋಲೊ ಸುರಕ್ಷತಾ ಪರೀಕ್ಷೆಯಲ್ಲಿ 4- ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಆದ್ರೆ ಕಾರು ಸದ್ಯಕ್ಕೆ ಮಾರಾಟದಲ್ಲಿಲ್ಲವಾದ್ರೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದೆ.
ಪೋಲೋ 4-ಸ್ಟಾರ್ ರೇಟಿಂಗ್: ವೋಕ್ಸ್‌ವ್ಯಾಗನ್ ಪೋಲೊ NCAP ನಿಂದ ನಾಲ್ಕು-ಸ್ಟಾರ್ ರೇಟಿಂಗ್ ಪಡೆದಿದೆ. ಹಿಂದೆ 2014 ರಲ್ಲಿ, ವೋಕ್ಸ್‌ವ್ಯಾಗನ್ ಪೋಲೊ ಪರೀಕ್ಷೆಗೆ ಒಳಗಾದಾಗ ಶೂನ್ಯ-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿತ್ತು. ಬಳಿಕ ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ವರ್ಧನೆಗಳೊಂದಿಗೆ ಸಜ್ಜುಗೊಳಿಸುವ ಮೂಲಕ ಫೋಕ್ಸ್‌ವ್ಯಾಗನ್ ಪೊಲೊ ಗ್ಲೋಬಲ್ NCAP ನಿಂದ ಪ್ರಭಾವಶಾಲಿ ನಾಲ್ಕು-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆಯಿತು.

ಬಸ್ ಚಾಲಕನ ನಿಯಂತ್ರಣ ತಪ್ಪಿ ಪೋಲೋಗೆ ಡಿಕ್ಕಿ ಹೊಡೆದಿದೆಯೇ ಅಥವಾ ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ರಸ್ತೆಗಳು ತೇವವಾಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು, ಈ ಪರಿಸ್ಥಿತಿಯಲ್ಲಿ ಬಸ್‌ನ ಟೈರ್‌ಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ವೇಗವು ಹೆಚ್ಚಾಗಿರುವುದರಿಂದ ನಿಯಂತ್ರಣ ಕಲೆದುಕೊಂಡಿರಬಹುದು ಎಂಬುದು ನಮ್ಮ ಅಭಿಪ್ರಾಯ.
ಟ್ರಕ್ ಅಥವಾ ಬಸ್‌ನಂತಹ ಭಾರೀ ವಾಹನಗಳ ಹಿಂದೆ ನೀವು ಎಂದಾದರೂ ಚಾಲನೆ ಮಾಡುತ್ತಿದ್ದರೆ, ಸ್ವಲ್ಪ ದೂರವನ್ನು ಕಾಯ್ದುಕೊಳ್ಳುವುದು ಯಾವಾಗಲೂ ಒಳ್ಳೆಯದು. ಒಂದು ವೇಳೆ ಓವರ್‌ಟೇಕ್ ಮಾಡುವಂತಿದ್ದರೇ ಮುಂದಿನ ರಸ್ತೆ ಖಾಲಿಯಾಗಿರುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಬಸ್ ಚಾಲಕನು ನಿಮ್ಮ ವಾಹನವನ್ನು ನೋಡಿದ್ದಾನೆ ಎಂದು ಖಚಿತಪಡಿಸಿಕೊಳ್ಳಿ. ಎಡಭಾಗದಿಂದ ಓವರ್‌ಟೇಕ್ ಮಾಡುವುದನ್ನು ಬಿಟ್ಟುಬಿಡಿ.
ಇನ್ನು ಬೃಹತ್ ವಾಹನಗಳ ಚಾಲಕರು ಹೆಚ್ಚು ಜಾಗರೂಕರಾಗಿರಬೇಕು, ಬೇಜವಾಬ್ದಾರಿಯು ಅವರ ಜೀವಕ್ಕೆ ಮಾತ್ರವಲ್ಲದೆ ಇತರ ಪ್ರಯಾಣಿಕರ ಜೀವಕ್ಕೂ ಕುತ್ತು ತರುತ್ತದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾರಿಗೂ ಏನು ಆಗಿಲ್ಲ ಫೋಕ್ಸ್‌ವ್ಯಾಗನ್ ಪೊಲೊದ ನಿರ್ಮಾಣ ಗುಣಮಟ್ಟವು ಬಹುಶಃ ಎಲ್ಲಾ ಮೂರು ಪ್ರಯಾಣಿಕರು ಈ ಅಪಘಾತದಿಂದ ಪಾರಾಗಲು ಒಂದು ಕಾರಣವಾಗಿರಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ.


Click it and Unblock the Notifications