Tata: ಅಂತರಾಷ್ಟ್ರೀಯ ಕಾರಿಗೆ ಭಾರತದ ಗುಣಮಟ್ಟ ಪರಿಚಯಿಸಿದ ಟಾಟಾ! ವಿಡಿಯೋ...
ಭಾರತದಲ್ಲಿ ಟಾಟಾ (Tata) ಕಾರುಗಳು ನಿರ್ಮಾಣ ಗುಣಮಟ್ಟದಲ್ಲಿ ಭಾರೀ ಜನಪ್ರಿಯತೆ ಪಡೆದಿವೆ. ಹಾಗೆಯೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುಣಮಟ್ಟ, ಪ್ರೀಮಿಯಂ ಹಾಗೂ ಪರ್ಫಾಮೆನ್ಸ್ ಆಧಾರಿತ ಕಾರುಗಳನ್ನು ನೀಡುವಲ್ಲಿ ಫೋಕ್ಸ್‌ವ್ಯಾಗನ್ (Volkswagen) ವಿಶ್ವಾದ್ಯಂತ ಹೆಸರು ಮಾಡಿದೆ. ಈ ಬ್ರಾಂಡ್ ಭಾರತದಲ್ಲೂ ತನ್ನ ಅತ್ಯುತ್ತಮ ಕಾರುಗಳನ್ನು ಮಾರಾಟ ಮಾಡುತ್ತಿದೆ. ಅದರಲ್ಲಿ ಫೊಲೋ ಕೂಡ ಒಂದು, ಸದ್ಯ ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಆದರೂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಇದು ಅತ್ಯುತ್ತಮ ಪರ್ಫಾಮೆನ್ಸ್ ಕಾರಾಗಿ ಇಂದಿಗೂ ಮುಂದುವರಿಯುತ್ತಿದೆ. ಇತ್ತೀಚೆಗೆ ಪೋಲೋ ಹಾಗೂ ಟಾಟಾ ನೆಕ್ಸಾನ್ ನಡೆವೆ ಡಿಕ್ಕಿಯಾಗಿರುವ ವಿಡಿಯೋ ವೈರಲ್ ಆಗಿದೆ.
ಟಾಟಾ ನೆಕ್ಸಾನ್ ಮತ್ತು ಫೋಕ್ಸ್ ವ್ಯಾಗನ್ ಪೊಲೊ ನಡುವಿನ ಅಪಘಾತವನ್ನು ತೋರಿಸುವ ವೀಡಿಯೊದಲ್ಲಿ, ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಹಿಂಭಾಗಕ್ಕೆ ಫೋಕ್ಸ್ ವ್ಯಾಗನ್ ಪೊಲೊ ಹ್ಯಾಚ್ ಬ್ಯಾಕ್ ಡಿಕ್ಕಿ ಹೊಡೆದಿದೆ. ಈ ನಿರ್ದಿಷ್ಟ ಪೊಲೊದ ಸಂಪೂರ್ಣ ಮುಂಭಾಗವು ಹಾನಿಯಾಗಿದೆ. ಹೆಚ್ಚಿನ ಹಾನಿಯು ಮುಂಭಾಗದ ಬಲ ಭಾಗದಲ್ಲಿತ್ತು, ಸಂಪೂರ್ಣ ಹೆಡ್ ಲೈಟ್, ಬಂಪರ್ ಮತ್ತು ಬಾನೆಟ್ ನಾಶವಾಗಿವೆ.

ಈ ಅಪಘಾತದಲ್ಲಿ ಟಾಟಾ ನೆಕ್ಸಾನ್ ಇವಿ ಯಾವುದೇ ಹಾನಿಯಿಲ್ಲದೆ ಹೊರಬಂದಿದೆ. ಇದು ಅತ್ಯಂತ ಸುರಕ್ಷಿತ ಕಾರು ಎಂದು ಅಂತರ್ಜಾಲದಲ್ಲಿ ಹಲವರು ಶ್ಲಾಘಿಸುತ್ತಿದ್ದಾರೆ. ಆದರೆ ಎರಡೂ ವಾಹನಗಳಲ್ಲಿನ ಪ್ರಯಾಣಿಕರು ಸಂಪೂರ್ಣವಾಗಿ ಸುರಕ್ಷಿತರಾಗಿದ್ದಾರೆ. ಪೊಲೊ ಮುಭಾಗಕ್ಕೆ ಮಾತ್ರ ತೀವ್ರ ಹಾನಿಯಾಗಿದ್ದು, ಒಳಭಾಗಕ್ಕೆ ಯಾವುದೇ ಹಾನಿಯಾಗಿಲ್ಲ ಎಂಬುದನ್ನು ಗಮನಿಸಬೇಕು.
ಫೋಕ್ಸ್‌ವ್ಯಾಗನ್ ಕಾರುಗಳು ಅಸುರಕ್ಷಿತವೇ?: ಜನರು ಸೋಷಿಯಲ್ ಮೀಡಿಯಾದಲ್ಲಿ ಕೇವಲ ಕಾರಿನ ಪ್ಯಾನಲ್ ಗಳು ಮುರಿದರೆ ಅವನ್ನು ಅಸುರಕ್ಷಿತ ಎಂದು ಭಾವಿಸುತ್ತಿದ್ದಾರೆ. ಆದರೆ ಕಾರಿನ ಸುರಕ್ಷತಾ ಗುಣಮಟ್ಟವು ಕ್ರ್ಯಾಶ್ ಬಾರ್‌ಗಳು, ಕ್ರಂಬಲ್ ವಲಯಗಳು ಮತ್ತು ಗಟ್ಟಿಮುಟ್ಟಾದ ಚಾಸಿಸ್‌ನ ರಚನಾತ್ಮಕ ಘಟಕಗಳ ಮೇಲೆ ಅವಲಂಬಿತವಾಗಿರುತ್ತದೆ.

ಹಾಗಾಗಿ ವಾಹನದ ಸುರಕ್ಷತೆಗೂ ಬಾಹ್ಯ ಬಾಡಿ ಪ್ಯಾನಲ್‌ಗಳಿಗೂ ಯಾವುದೇ ಸಂಬಂಧವಿಲ್ಲ. ಕಾರಿನ ಹೊರಭಾಗದಲ್ಲಿರುವ ಎಲ್ಲಾ ತೆಳುವಾದ ಬಾಡಿ ಪ್ಯಾನೆಲ್‌ಗಳು ಆಕರ್ಷಕ ಡಿಸೈನ್‌ಗಾಗಿ ಮಾತ್ರ ವಿನ್ಯಾಸಗೊಳಿಸಿರುತ್ತಾರೆ. ಇವು ವಾಹನವನ್ನು ಸುರಕ್ಷಿತವಾಗಿಸುವಲ್ಲಿ ಯಾವುದೇ ಪಾತ್ರವನ್ನು ವಹಿಸುವುದಿಲ್ಲ. ಹಾಗಾಗಿ ಒಂದು ವೇಳೆ ಟಾಟಾ ನೆಕ್ಸಾನ್ ಹೋಗಿ ಪೊಲೊ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದರೆ, ಅದು ಸಹ ಇದೇ ರೀತಿಯಲ್ಲಿ ಹಾನಿಯಾಗುತ್ತಿತ್ತು.
ಟಾಟಾ ನೆಕ್ಸಾನ್ 5-ಸ್ಟಾರ್ ಸುರಕ್ಷತಾ-ರೇಟಿಂಗ್ ವಾಹನವಾಗಿದ್ದರೂ, ಈ ನಿರ್ದಿಷ್ಟ ಅಪಘಾತಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಗಮನಿಸಬೇಕು. ಅಪಘಾತದ ಸಮಯದಲ್ಲಿ ಪ್ರಯಾಣಿಕರ ಕ್ಯಾಬಿನ್ ಹಾನಿಯಾಗದಂತೆ ಸುರಕ್ಷತೆ ನೀಡಿದರೆ ಆ ಕಾರು ಗುಣಮಟ್ಟದ್ದಾಗಿರುತ್ತದೆ. ಈ ಅಪಘಾತದಲ್ಲೂ ಪೊಲೋ ಇಂಟೀರಿಯರ್ ಯಾವುದೇ ಹಾನಿಯಾಗಿಲ್ಲ ಎಂಬುದನ್ನು ಗಮನಿಸಬೇಕು.
ಫೋಕ್ಸ್‌ವ್ಯಾಗನ್ ಕಾರುಗಳು ಕೂಡ ಉತ್ತಮ ಗುಣಮಟ್ಟದ ಕಾರುಗಳಾಗಿದ್ದು, ತುಸು ದುಬಾರಿಯಾಗಿರುತ್ತವೆ. ಹಾಗೆಯೇ ಸ್ವದೇಶಿ ನಿರ್ಮಿತ ಟಾಟಾ ಕಾರುಗಳು ಅಗ್ಗದ ಬೆಲೆಗೆ 5-ಸ್ಟಾರ್ ಸುರಕ್ಷತಾ ರೇಟಿಂಗ್ ಕಾರುಗಳನ್ನು ನೀಡುತ್ತಿರುವುದು ಮೆಚ್ಚುಗೆಯ ಸಂಗತಿಯಾಗಿದೆ. ಈ ಎರಡೂ ಬ್ರಾಂಡ್‌ಗಳ ಅಪಘಾತ ಹಾಗೂ ಅವುಗಳ ನಿರ್ಮಾಣ ಗುಣಮಟ್ಟದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications