ಬಂತು ಆಕರ್ಷಕ ಪೋಕ್ಸ್‌ವಾಗನ್ ವರ್ಟಿಸ್ ಕನ್ವರ್ಟಬಲ್: ಆದರೆ ಭಾರತೀಯರಿಗೆ ಯಾಕೆ ಈ ಅನ್ಯಾಯ!
ಜರ್ಮನ್ ಕಾರು ತಯಾರಿಕಾ ಕಂಪನಿಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಹಳಷ್ಟು ವರ್ಷಗಳಿಂದ ತನ್ನ ಛಾಪನ್ನು ಮೂಡಿಸಿಕೊಂಡು ಬರುತ್ತಿರುವ ಕಾರು ಕಂಪನಿಗಳಲ್ಲಿ ಫೋಕ್ಸ್‌ವಾಗನ್ ಸಹ ಒಂದು. ಫೋಕ್ಸ್‌ವಾಗನ್‌ನ ಪೋಲೋ, ವರ್ಟಿಸ್, ಟೈಗುನ್ ಕಾರುಗಳು ಭಾರತೀಯರ ನೆಚ್ಚಿನ ಕಾರುಗಳಾಗಿದೆ. ಇದರಲ್ಲಿ ಪೋಕ್ಸ್‌ವಾಗನ್ ವರ್ಟಿಸ್ ಬಗ್ಗೆ ಹೊಸ ಸುದ್ದಿಯೊಂದು ಬಂದಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ.
ಹೌದು, ಫೋಕ್ಸ್‌ವಾಗನ್‌ನ ಪ್ರಸಿದ್ದ ಕಾರು ಮಾಡೆಲ್ ಆದ ಪೋಕ್ಸ್‌ವಾಗನ್ ವರ್ಟಿಸ್ ಬಗ್ಗೆ ಹೊಸ ಸುದ್ದಿ ಬಂದಿದ್ದು, ಸುದ್ದಿ ತಿಳಿದ ಜನ ಇದನ್ನು ಮೊದಲು ನಂಬುವುದೋ ಬಿಡುವುದೋ ಎಂಬ ಕನ್‌ಫ್ಯೂಷನ್‌ನಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಪೋಕ್ಸ್‌ವಾಗನ್ ಇತ್ತೀಚೆಗಷ್ಟೇ ಬ್ರೆಝಿಲ್‌ನಲ್ಲಿ ವರ್ಟಿಸ್ ಕಾರಿನ ಕನ್ವರ್ಟಬಲ್ (Volkswagen Virtus Convertible) ಮಾದರಿಯನ್ನು ಅನಾವರಣ ಗೊಳಿಸಿತ್ತು. ಇದನ್ನು ಕಂಡ ಆಟೋಮೊಬೈಲ್ ಪ್ರೀಯರು ಇದರ ಬಗ್ಗೆ ಸಾಕಷ್ಟು ನೆಚ್ಚಿನ ಮಾತುಗಳನ್ನು ಆಡುತ್ತಿದ್ದಾರೆ.

ಈ ಸ್ಪೆಷಲ್ ವರ್ಷನ್ ಅನ್ನು ಫೋಕ್ಸ್‌ವಾಗನ್, ಸಾಒ ಬೆರ್ನಾರ್ಡೋಲಿ ಇರುವ ಫೋಕ್ಸ್‌ವಾಗನ್ ಫ್ಯಾಕ್ಟರಿಗೆ ಬ್ರೆಝಿಲ್‌ನ ಅಧ್ಯಕ್ಷ ಲೂಯಿಸ್ ಇನಾಸಿಯೋ ಲುಲ ಡಾ ಸಿಲ್ವ ಭೇಟಿ ನೀಡಿದ್ದಾಗ ಅವರ ಮುಂದೆ ವರ್ಟಿಸ್ ಕನ್ವರ್ಟಬಲ್ ಅನ್ನು ಇಟ್ಟರು. ಇದನ್ನು ಕಂಡ ಅಲ್ಲಿನ ಅಧ್ಯಕ್ಷರೂ ಸಹ ಈ ಕಾರಿನ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ.
ಈ ಕಾರಿನ ಎಂಜಿನ್ ಮತ್ತು ಇತರ ವಿಷಯಗಳನ್ನು ಗಮನಿಸುವುದಾದರೆ, ಇದು ಬ್ರೆಸಿಲಿಯನ್ ಸ್ಪೆಕ್ ಕಾರಾಗಿದ್ದು ಇದರಲ್ಲಿ 1.4-litre TSI ಪೆಟ್ರೋಲ್ ಎಂಜಿನ್ ಬರುತ್ತಿದ್ದು, ಇದು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವುದಿಲ್ಲ ಎಂದು ತಿಳಿದು ಬಂದಿದೆ. ಈಗಿರುವ ವರ್ಟಿಸ್ ಕಾರಿನ ಅದೇ ಡಿಸೈನ್ ಅಂಶಗಳನ್ನು ಈ ಕಾರು ಒಳಗೊಂಡಿದ್ದು, ರೂಫ್ ಅನ್ನು ತೆಗೆದು ಅದಕ್ಕೆ ಕನ್ವರ್ಟಬಲ್ ವ್ಯವಸ್ಥೆಯನ್ನು ಮಾಡಲಾಗಿದೆ.

ಭಾರತದಲ್ಲಿ ಸಿಗುತ್ತಿರುವ ಪೋಕ್ಸ್‌ವಾಗನ್ ವರ್ಟಿಸ್ ಬಗ್ಗೆ ನೊಡುವುದಾದರೆ, ಈ ವರ್ಟಸ್ ಕಾರಿನ ಉತ್ಪಾದನೆಯು ಪುಣೆಯಲ್ಲಿರುವ ಕಂಪನಿಯ ಚಕನ್ ಸ್ಥಾವರದಲ್ಲಿ ನಡೆಯುತ್ತಿದೆ. ಫೋಕ್ಸ್‌ವ್ಯಾಗನ್ ಟೈಗನ್ ಕಾಂಪ್ಯಾಕ್ಟ್ ಎಸ್‍ಯುವಿ ನಂತರ ಭಾರತ 2.0 ಯೋಜನೆಯ ಅಡಿಯಲ್ಲಿ ಬಿಡುಗಡೆಯಾದ ಫೋಕ್ಸ್‌ವ್ಯಾಗನ್‌ನ ಎರಡನೇ ಮಾದರಿಯಾಗಿದೆ. ಭಾರತದಲ್ಲಿ ಹಲವರ ನೆಚ್ಚಿನ ಸೆಡಾನ್ ಇದು ಎಂಬ ಮಾತಿಗೆ ಹಲವರ ಸಹಮತವಿದೆ.
ಫೋಕ್ಸ್‌ವ್ಯಾಗನ್ ವರ್ಟಸ್ ಪೆಟ್ರೋಲ್-ಮಾತ್ರ ಸೆಡಾನ್ ಆಗಿದ್ದು, ಈ ಕಾರಿನಲ್ಲಿ 1.0-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಎಂಜಿನ್‌ಗಳನ್ನು ಹೊಂದಿವೆ. ಇದರಲ್ಲಿ 1.0 ಲೀಟರ್ TSI ಪೆಟ್ರೋಲ್ ಎಂಜಿನ್ 114 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ ಆಯ್ಕೆಯ 6-ಸ್ಪೀಡ್ ಟಾರ್ಕ್ ಕರ್ನ್ವಾಟರ್ ಅನ್ನು ಪಡೆಯುತ್ತದೆ.

ಇದರೊಂದಿಗೆ 1.5 ಲೀಟರ್ TSI ಪೆಟ್ರೋಲ್ ಎಂಜಿನ್ 148 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ DSG ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ, ಫೋಕ್ಸ್‌ವ್ಯಾಗನ್ ವರ್ಟಸ್ ಕಾರನ್ನು ವೆಂಟೊಗೆ ಬದಲಿಯಾಗಿ ಕಾಂಪ್ಯಾಕ್ಟ್ ಸೆಡಾನ್ ಅನ್ನು ವಿಶೇಷವಾಗಿ ಭಾರತೀಯ ಮಾರುಕಟ್ಟೆಗಾಗಿ ವಿನ್ಯಾಸಗೊಳಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications