ವ್ಯಾಗನರ್ ಕಾರನ್ನು ರೇಂಜ್ ರೋವರ್ ಮಾಡಿದ ಮಾಸ್ಟರ್ ಮೈಂಡ್: ರೇಂಜ್‌ರೋವರೇ ಕಕ್ಕಾಬಿಕ್ಕಿ!
ಸಾಮಾನ್ಯವಾಗಿ ಚೀನಾ ಕಾರು ನಿರ್ಮಾಣ ಕಂಪನಿಗಳು ಹಲವಾರು ಪ್ರಸಿದ್ದ ಬ್ರಾಂಡ್‌ಗಳ ಕಾರುಗಳನ್ನು ಕಾಪಿ ಮಾಡಿಕೊಂಡು ಅದೇ ರೀತಿಯ ಕಾರುಗಳನ್ನು ನಿರ್ಮಾಣ ಮಾಡಿ ಕಡಿಮೆ ಖರ್ಚುಗೆ ಬಿಡುಗಡೆ ಮಾಡುವುದನ್ನು ನಾವೆಲ್ಲಾ ಕಂಡಿದ್ದೇವೆ. ಆದರೆ ಇಲ್ಲೊಂದು ಗ್ಯಾರೇಜ್ ವಿಶಿಷ್ಟವಾದ ಪ್ರಯೊಗವೊಂದನ್ನು ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಇಲ್ಲೊಂದು ಗ್ಯಾರೇಜ್ ಒಂದು ಸಣ್ಣ ಹ್ಯಾಚ್‌ಬ್ಯಾಕ್ ಕಾರನ್ನು ತೆಗೆದುಕೊಂಡು ಅದನ್ನು ರೀ ಡಿಸೈನ್ ಮಾಡಿ ಬಹುಕೋಟಿ ಕಾರಾದ ರೇಂಜ್ ರೋವರ್ ಕಾರನ್ನು ಹೋಲುವ ಎಲೆಕ್ಟ್ರಿಕ್ ಕಾರೊಂದನ್ನು ತಯಾರಿಸಿದ್ದಾರೆ. ಮೂಲತಃ ವ್ಯಕ್ತಿ ಬಾಂಗ್ಲಾ ದೇಶದ ಗ್ಯಾರೇಜ್ ಎಂದು ತಿಳಿದು ಬಂದಿದ್ದು, ಇವರ ಈ ಹೊಸ ಕೆಲಸಕ್ಕೆ ಎಲ್ಲರು ತಲೆದೂಗಿದ್ದು ಇದನ್ನು ತಯಾರಿಸಿದ ವ್ಯಕ್ತಿಯ ಮಾಸ್ಟರ್ ಮೈಂಡ್ ಮುಂದೆ ದೊಡ್ಡ ವ್ಯಕ್ತಿ ಆಗುವುದರಲ್ಲಿ ಸಂಶಯವಿಲ್ಲ ಎಂದು ಹಲವರು ಈಗಾಗಲೇ ಭವಿಷ್ಯ ನುಡಿದಿದ್ದಾರೆ.

ಈ ಕುರಿತಾಗಿನ ಫೋಟೋಗಳನ್ನು ಕಾರ್ ಕ್ರೇಝ್ ಇಂಡಿಯಾ ಎಂಬ ಇನ್ಸ್ಟಾಗ್ರಾಂ ಪೇಜ್ ತನ್ನ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಎಲ್ಲರನ್ನೂ ಇದು ಆಕರ್ಷಿಸುತ್ತಿದೆ. ಫೋಟೋದಲ್ಲಿ ಇರುವಂತೆ ವ್ಯಾಗನಾರ್ ಆರ್ ಕಾರಿನ ರೀತಿಯಲ್ಲಿರುವ ಹ್ಯಾಚ್‌ಬಾಕ್ ಅನ್ನು ಈ ರೀತಿ ಮಾಡಿಫೈ ಮಾಡಲು ಬಳಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಈ ಕಾರನ್ನು ಬಾಂಗ್ಲಾ ದೇಶದ ಪಲ್ಕಿ ಮೋಟಾರ್ಸ್ ಎಂಬ ಸಂಸ್ಥೆ ತಯಾರಿಸಿದೆ.
ಪಲ್ಕಿ ಮೋಟಾರ್ಸ್ ಎಂಬುದು ಬಾಂಗ್ಲಾ ದೇಶದ ಎಲೆಕ್ಟ್ರಿಕ್ ವಾಹನ ನಿರ್ಮಾಣ ಮಾಡುವ ಸ್ಟಾರ್ಟಪ್ ಕಂಪನಿ. ಬಾಂಗ್ಲಾ ದೇಶದಲ್ಲಿ ಎಲೆಕ್ಟ್ರಿಕ್ ವಾಹನ ನಿರ್ಮಾಣ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡುವತ್ತ ಹೆಜ್ಜೆ ಇಡುತ್ತಿದ್ದಾರೆ. ಪಲ್ಕಿ ಮೋಟಾರ್ಸ್ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಕಾರು ಮತ್ತು ಇತರ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವತ್ತ ಹೆಜ್ಜೆ ಇಟ್ಟಿದ್ದು, ಆದಷ್ಟು ಬೇಗ ತನ್ನ ಗುರಿಯನ್ನು ತಲುಪುವ ವಿಶ್ವಾಸವನ್ನು ಹೊಂದಿದೆ.

ಇನ್ನು ಚಿತ್ರದಲ್ಲಿ ಕಾಣುತ್ತಿರುವ ರೇಂಜ್ ರೋವರ್ ರೀತಿಯಲ್ಲಿರುವ ಕಾರಿನ ಬಹುತೇಕ ಬಿಡಿ ಭಾಗಗಳನ್ನು ಚೀನಾದಿಂದ ಆಮದು ಮಾಡಿಕೊಂಡಿದೆ ಎಂಬ ಮಾಹಿತಿಯಿದ್ದು, ಬಾಂಗ್ಲಾ ದೇಶದಲ್ಲಿ ಇದನ್ನು ಕೂಡಿಸಿ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಚಿತ್ರದಲ್ಲಿ ಕಾಣುತ್ತಿರುವ ರೇಂಜ್ ರೋವರ್ ರೀತಿಯ ಕಾರಿನಲ್ಲಿ ನಾಲ್ಕು ಡೋರ್‌ಗಳಿದ್ದು, ರೇಂಜ್ ರೋವರ್ ಕಾರಿನ ಮುಂಭಾಗದ ವಿನ್ಯಾಸವನ್ನು ಹೊಂದಿದೆ. ಆದರೆ ಗಾತ್ರದಲ್ಲಿ ರೇಂಜ್ ರೋವರ್ ಕಾರುಗಳಿಗೆ ಹೋಲಿಸಿದರೆ ತೀರಾ ಚಿಕ್ಕದಾಗಿದೆ.
ಮಾಹಿತಿಗಳ ಪ್ರಕಾರ ಈ ಕಾರನ್ನು ಆಟೋ ರಿಕ್ಷಾಗಳಿಗೆ ಬದಲಾಗಿ ಹೊರತಂದಿದ್ದು ನಮ್ಮಲ್ಲಿ ಬಜಾಜ್ ಕ್ಯೂಟ್ ಎಂಬ ವಾಹನದ ಸೆಗ್ಮೆಂಟ್ ಅನ್ನು ಹೋಲುತ್ತದೆ. ಮುಖ್ಯವಾಗಿ ಆಟೋ ರಿಕ್ಷಾ ಡ್ರೈವರ್‌ಗಳನ್ನು ಈ ವಾಹನಕ್ಕೆ ಆಕರ್ಷಿಸುವ ಕೆಲಸ ಮಾಡುತ್ತಿದ್ದು ಆ ಮೂಲಕ ಮಾರುಕಟ್ಟೆಯಲ್ಲಿ ತಮ್ಮ ಸ್ಥಾನವನ್ನು ಕಂಡು ಕೊಳ್ಳುವ ಯತ್ನದಲ್ಲಿದೆ ಬಾಂಗ್ಲಾ ದೇಶದ ಈ ಕಲ್ಕಿ ಮೋಟಾರ್ಸ್.
ಇನ್ನು ನಮ್ಮಲ್ಲಿರುವ ಬಜಾಜ್ ಕ್ಯೂಟ್ ಬಗ್ಗೆ ನೋಡುವುದಾದರೆ, ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಬಜಾಜ್ ಆಟೋದ ಪ್ರಮುಖ ವಾಹನವಾಗಿರುವ ಕ್ಯೂಟ್ (Bajaj Qute) ಕೇವಲ ವಾಣಿಜ್ಯ ಉದ್ದೇಶಗಳಿಗೆ ಮಾತ್ರ ಖರೀದಿಸಲು ಸಿಗುತ್ತಿದೆ. ಮೂಲಗಳ ಪ್ರಕಾರ, ಶೀಘ್ರದಲ್ಲೇ ಇದನ್ನು ವೈಯಕ್ತಿಕ ಬಳಕೆಗೆ ಗ್ರಾಹಕರು ಕೊಂಡುಕೊಳ್ಳಬಹುದು.
ನೂತನ ಕ್ಯೂಟ್ ಈ ವರ್ಷ ಮತ್ತಷ್ಟು ಅತ್ಯಾಕರ್ಷಕ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬರುವ ಸಾಧ್ಯತೆಯಿದ್ದು, ಹಿಂದಿನ ಮಾದರಿಗೆ ಹೋಲಿಸಿದರೆ, 17 kg ಹೆಚ್ಚಿನ ತೂಕವನ್ನು ಹೊಂದಿರಬಹುದು ಎಂದು ಹೇಳಲಾಗಿದೆ. ಆದರೆ, ಇದರ ಬೆಲೆ ಎಷ್ಟಿರಲಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಬಹುತೇಕ ಅತಿ ಕಡಿಮೆ ದರದಲ್ಲಿ ಖರೀದಿದಾರರಿಗೆ ಸಿಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications