ಅಪರೂಪದ ವಿಡಿಯೋ: ಮುಂಬೈ ರಸ್ತೆಗಳಲ್ಲಿ ರತನ್ ಟಾಟಾ ಡ್ರೈವಿಂಗ್ ಕ್ರೇಜ್ ನೋಡಿ...

ಅಪರೂಪದ ವಿಡಿಯೋ: ಮುಂಬೈ ರಸ್ತೆಗಳಲ್ಲಿ ರತನ್ ಟಾಟಾ ಡ್ರೈವಿಂಗ್ ಕ್ರೇಜ್ ನೋಡಿ...

85 ವರ್ಷದ ಈ ಕೈಗಾರಿಕೋದ್ಯಮಿ ಭಾರತೀಯ ಬ್ರಾಂಡ್‌ನ ಹಲವಾರು ಉದ್ಯಮಗಳನ್ನು ಯಶಸ್ವಿಯಾಗಿ ಮುನ್ನಡೆಸಿದವರು. ಈ ನಡುವೆಯೂ ರತನ್ ಟಾಟಾ ಆಟೋಮೊಬೈಲ್ ಉತ್ಸಾಹಿ ಎಂದೂ ಹೆಸರುವಾಸಿಯಾಗಿದ್ದಾರೆ. ರತನ್ ಟಾಟಾ ಅವರು ತಮ್ಮ Mercedes-Benz SL500 ಕನ್ವರ್ಟಿಬಲ್ ಕಾರನ್ನು ಮುಂಬೈ ರಸ್ತೆಗಳಲ್ಲಿ ಓಡಿಸುವ ಹಳೆಯ ವಿಡಿಯೋವನ್ನು ತೇಜಸ್ ಛತ್ರಿವಾಲಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈ ವೀಡಿಯೊದಲ್ಲಿ, ರತನ್ ಟಾಟಾ ಅವರು ತಮ್ಮ Mercedes-Benz SL500 ಕನ್ವರ್ಟಿಬಲ್ ಅನ್ನು ಮುಂಬೈ ರಸ್ತೆಗಳಲ್ಲಿ ಓಡಿಸಿದ್ದಾರೆ.

ಅಪರೂಪದ ವಿಡಿಯೋ: ಮುಂಬೈ ರಸ್ತೆಗಳಲ್ಲಿ ರತನ್ ಟಾಟಾ ಡ್ರೈವಿಂಗ್ ಕ್ರೇಜ್ ನೋಡಿ...

ಇದು ಸಿಲ್ವರ್ ಬಣ್ಣದ ಎಡಗೈ ಡ್ರೈವ್‌ 2-ಬಾಗಿಲಿನ ಕನ್ವರ್ಟಿಬಲ್ ವಾಹನವಾಗಿದೆ. ಈ ವಿಡಿಯೋದಲ್ಲಿ ಸಹ-ಪ್ರಯಾಣಿಕರ ಸೀಟಿನಲ್ಲಿ ಇನ್ನೊಬ್ಬ ವ್ಯಕ್ತಿ ಕುಳಿತಿದ್ದಾನೆ. ಟಾಟಾ ಅವರು ನಿರಂತರವಾಗಿ ಕಾರಿನಲ್ಲಿ ಅವರೊಂದಿಗೆ ಮಾತನಾಡುತ್ತಿರುವುದು ಕಂಡುಬರುವುದರಿಂದ ಅವರು ಚಾಲಕ ಅಥವಾ ಭದ್ರತಾ ಸಿಬ್ಬಂದಿಯಂತೆ ಕಾಣುವುದಿಲ್ಲ. ಆ ವ್ಯಕ್ತಿ ಅವರ ಆಪ್ತ ಕಾರ್ಯದರ್ಶಿಯಾಗಿರುವ ಸಾಧ್ಯತೆ ಇದೆ. ಈ ವೀಡಿಯೊದಲ್ಲಿ ಕಂಡುಬರುವ SL500 ಸುಮಾರು 306 bhp ಪವರ್ ಉತ್ಪಾದಿಸುವ 5.0 ಲೀಟರ್ V8 ಎಂಜಿನ್‌ನಿಂದ ಚಾಲಿತವಾಗಿದೆ.

ಅಪರೂಪದ ವಿಡಿಯೋ: ಮುಂಬೈ ರಸ್ತೆಗಳಲ್ಲಿ ರತನ್ ಟಾಟಾ ಡ್ರೈವಿಂಗ್ ಕ್ರೇಜ್ ನೋಡಿ...

ಈ SL500 ಹೊರತುಪಡಿಸಿ, ರತನ್ ಟಾಟಾ ಅವರ ಗ್ಯಾರೇಜ್‌ನಲ್ಲಿ ಇನ್ನೂ ಹಲವು ಕಾರುಗಳ ಸಂಗ್ರಹವಿದೆ. ಅವರಿಗೆ ಕನ್ವರ್ಟಿಬಲ್ ಕಾರುಗಳೆಂದರೆ ಬಹಳ ಇಷ್ಟ. ಒಂದು ಕಾರು ಕಂಪನಿಯ ಉದ್ಯಮಿಯು ತಮ್ಮ ಬ್ರಾಂಡ್ ಕಾರುಗಳನ್ನೇ ಹೆಚ್ಚಾಗಿ ಬಳಸುವ ಮೂಲಕ ಅವರ ಕಾರುಗಳ ಬಗ್ಗೆ ಜನರಲ್ಲಿ ಹೆಚ್ಚು ಆಸಕ್ತಿ ಮೂಡಿಸುತ್ತಾರೆ. ಆದರೆ ರತನ್ ಟಾಟಾ ಅವರು ತಮ್ಮ ಬ್ರಾಂಡ್‌ ಜೊತೆಗೆ ಇತರ ಬ್ರಾಂಡ್‌ನ ಕಾರುಗಳನ್ನು ಕೂಡ ಹೆಚ್ಚಾಗಿ ಬಳಸುತ್ತಾರೆ. ಅವರ ಗ್ಯಾರೇಜ್‌ನಲ್ಲಿರುವ ಕಾರುಗಳನ್ನು ಇಲ್ಲಿ ನೋಡೋಣ.

ಅಪರೂಪದ ವಿಡಿಯೋ: ಮುಂಬೈ ರಸ್ತೆಗಳಲ್ಲಿ ರತನ್ ಟಾಟಾ ಡ್ರೈವಿಂಗ್ ಕ್ರೇಜ್ ನೋಡಿ...

ಫೆರಾರಿ ಕ್ಯಾಲಿಫೋರ್ನಿಯಾ, ಕ್ರಿಸ್ಲರ್ ಸೆಬ್ರಿಂಗ್

ರತನ್ ಟಾಟಾ ಅವರು ರೆಡ್ ಶೇಡ್‌ನಲ್ಲಿನ ಫೆರಾರಿ ಕ್ಯಾಲಿಫೋರ್ನಿಯಾ ಹಾರ್ಡ್ ಟಾಪ್ ಅನ್ನು ಹೊಂದಿದ್ದಾರೆ. ಮುಂಬೈ ರಸ್ತೆಗಳಲ್ಲಿ ಅವರು ಈ ಕಾರನ್ನು ಓಡಿಸುವುದನ್ನು ಆಗಾಗ್ಗೆ ಕಾಣಬಹುದು. ಕಾರು 4.3 ಲೀಟರ್ V8 ನಿಂದ ಚಾಲಿತವಾಗಿದೆ. ಇದು 490 bhp ಪವರ್ ಮತ್ತು 504 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮತ್ತೊಂದು ಲೆಜೆಂಡರಿ ಕಾರಾದ ಕ್ರಿಸ್ಲರ್ ಸೆಬ್ರಿಂಗ್ ಕಾರಿನ ಯಾವುದೇ ಫೋಟೋಗಳು ಲಭ್ಯವಿಲ್ಲ, ಆದರೆ ರತನ್ ಟಾಟಾ ಅವರೇ ಸಂದರ್ಶನವೊಂದರಲ್ಲಿ ಈ ಕಾರನ್ನು ಹೊಂದಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ.

ಅಪರೂಪದ ವಿಡಿಯೋ: ಮುಂಬೈ ರಸ್ತೆಗಳಲ್ಲಿ ರತನ್ ಟಾಟಾ ಡ್ರೈವಿಂಗ್ ಕ್ರೇಜ್ ನೋಡಿ...

ಟಾಟಾ ನೆಕ್ಸನ್, ಹೋಂಡಾ ಸಿವಿಕ್

ದುಬಾರಿ ಕಾರುಗಳ ಜೊತೆಗೆ, ರತನ್ ಟಾಟಾ ಸಣ್ಣ ಕಾರುಗಳನ್ನು ಸಹ ಹೊಂದಿದ್ದಾರೆ. ಅವರ ಒಡೆತನದ ಟಾಟಾ ನೆಕ್ಸಾನ್ ಪ್ರೀ ಫೇಸ್ ಲಿಫ್ಟ್ ಮಾಡೆಲ್ ಅನ್ನು ಹೊಂದಿದ್ದಾರೆ. ಇದು 1.5 ಲೀಟರ್ ಟರ್ಬೊ ಡೀಸೆಲ್ ರೂಪಾಂತರವಾಗಿದ್ದು 108 Bhp ಮತ್ತು 260 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಾಗೆಯೇ ಬಿಳಿ ಬಣ್ಣದ ಹೋಂಡಾ ಸಿವಿಕ್ ಸೆಡಾನ್ ಅನ್ನು ಸಹ ಹೊಂದಿದ್ದರು. ಪ್ರತಿದಿನ ಕಚೇರಿಗೆ ಪ್ರಯಾಣಿಸಲು ಬಳಸುತ್ತಿದ್ದರು. ಇದು 130 bhp ಮತ್ತು 172 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ 1.8 ಲೀಟರ್ V-TEC ಎಂಜಿನ್ ಅನ್ನು ಒಳಗೊಂಡಿದೆ.

ಅಪರೂಪದ ವಿಡಿಯೋ: ಮುಂಬೈ ರಸ್ತೆಗಳಲ್ಲಿ ರತನ್ ಟಾಟಾ ಡ್ರೈವಿಂಗ್ ಕ್ರೇಜ್ ನೋಡಿ...

ಲ್ಯಾಂಡ್ ರೋವರ್ ಫ್ರೀಲ್ಯಾಂಡರ್

ರತನ್ ಟಾಟಾ ಅವರು ತಮ್ಮ ಗ್ಯಾರೇಜ್‌ನಲ್ಲಿ ಯಾವುದೇ ರೇಂಜ್ ರೋವರ್‌ಗಳನ್ನು ಹೊಂದಿಲ್ಲ. ಆದರೆ ಅವರು ಲ್ಯಾಂಡ್ ರೋವರ್ ಫ್ರೀಲ್ಯಾಂಡರ್ ಅನ್ನು ಹೊಂದಿದ್ದಾರೆ, ಇದು ಪ್ರಮುಖ ಸಮಾರಂಭಗಳು ಅಥವಾ ಕೆಲಸದ ಸಮಯದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಹಿಂದೆ ಹಲವು ಬಾರಿ ರಸ್ತೆಗಳಲ್ಲಿ ಪ್ರಯಾಣಿಸುವಾಗ ಈ ಕಾರಿನ ಸಮೇತ ಕಾಣಿಸಿಕೊಂಡಿರುವ ಹಲವು ವಿಡಿಯೋಗಳನ್ನು ನಾವು ಸೊಷಿಯಲ್ ಮೀಡಿಯಾದಲ್ಲಿ ನೋಡಬಹುದು.

ಅಪರೂಪದ ವಿಡಿಯೋ: ಮುಂಬೈ ರಸ್ತೆಗಳಲ್ಲಿ ರತನ್ ಟಾಟಾ ಡ್ರೈವಿಂಗ್ ಕ್ರೇಜ್ ನೋಡಿ...

Mercedes-Benz W124, Mercedes-Benz S-ಕ್ಲಾಸ್

ರತನ್ ಟಾಟಾ ಅವರು ಕ್ಲಾಸಿಕ್ Mercedes-Benz W124 ಸೆಡಾನ್ ಅನ್ನು ಹೊಂದಿದ್ದಾರೆ. ಅವರ ಗ್ಯಾರೇಜ್‌ನಲ್ಲಿರುವ ಇತರ ಹಲವು ವಾಹನಗಳಂತೆ, ಇದು ಎಂದಿಗೂ ರಸ್ತೆಯಲ್ಲಿ ಕಂಡುಬಂದಿಲ್ಲ. ಆದರೆ ಇದು ಅವರ ಗ್ಯಾರೇಜ್‌ನಲ್ಲಿ ಉತ್ತಮವಾಗಿ ನಿರ್ವಹಿಸಲ್ಪಡುತ್ತದೆ. ರತನ್ ಟಾಟಾ ಅವರ ಎಸ್-ಕ್ಲಾಸ್ ಸೆಡಾನ್ ಕಪ್ಪು ಬಣ್ಣದ್ದಾಗಿದ್ದು, ಇದು ಮರ್ಸಿಡಿಸ್-ಬೆಂಝ್‌ನ ಪ್ರಮುಖ ಲಿಮೋಸಿನ್ ಆಗಿದೆ. ಇದರಲ್ಲಿ ಸಾಕಷ್ಟು ಐಷಾರಾಮಿ ಪೀಚರ್‌ಗಳನ್ನು ಹೊಂದಿದೆ.

ಅಪರೂಪದ ವಿಡಿಯೋ: ಮುಂಬೈ ರಸ್ತೆಗಳಲ್ಲಿ ರತನ್ ಟಾಟಾ ಡ್ರೈವಿಂಗ್ ಕ್ರೇಜ್ ನೋಡಿ...

ಟಾಟಾ ಇಂಡಿಗೋ ಮರಿನಾ, ಟಾಟಾ ನ್ಯಾನೋ EV (ಕಸ್ಟಮ್ ಬಿಲ್ಟ್)

ರತನ್ ಟಾಟಾ ವಾಸ್ತವವಾಗಿ ಈ ಸ್ಟೇಷನ್ ವ್ಯಾಗನ್ ಅನ್ನು ಖರೀದಿಸಿದ್ದು ತಮಗಾಗಿ ಅಲ್ಲ, ಬದಲಿಗೆ ಅವರ ನಾಯಿಗಳಿಗಾಗಿ. ನಾಯಿಗಳಿಗೆ ಹೆಚ್ಚಿನ ಸ್ಥಳಾವಕಾಶ ಕಲ್ಪಿಸಲು ಕ್ಯಾಬಿನ್ ಅನ್ನು ಮಾರ್ಪಡಿಸಲಾಗಿದೆ. ಅಂದರೆ ಕಾರಿನಿಂದ ಆಸನಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಕೊನೆಯದಾಗಿ ಎಲೆಕ್ಟ್ರಿಕ್ ವಾಹನಗಳ ಪವರ್‌ಟ್ರೇನ್ ಪರಿಹಾರಗಳಲ್ಲಿ ವ್ಯವಹರಿಸುವ ಕಂಪನಿಯಾದ ಎಲೆಕ್ಟ್ರಾ ಇವಿ ಟಾಟಾ ನ್ಯಾನೋ ಆಧಾರಿತ ಎಲೆಕ್ಟ್ರಿಕ್ ವಾಹನವನ್ನು ನಿರ್ಮಿಸಿದೆ. ಇದನ್ನು ರತನ್ ಟಾಟಾ ಅವರ ಪ್ರತಿಕ್ರಿಯೆಗಾಗಿ ನ್ಯಾನೋ EV ಅನ್ನು ವಿತರಿಸಿದ್ದಾರೆ.

More from DriveSpark

Article Published On: Monday, February 20, 2023, 15:10 [IST]
English summary
Watch ratan tata driving craze on mumbai roads
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+