ನಮಗೆ ಯಾರ ಪ್ರಚಾರವು ಬೇಕಿಲ್ಲ.. ಕ್ರಾಂತಿ ಸಿನಿಮಾಗಾಗಿ ಅಭಿಮಾನಿ ಮಾಡಿದ ಕೆಲಸಕ್ಕೆ ಮೆಚ್ಚಿದ 'ಡಿ ಬಾಸ್'
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ದಚ್ಚು ಫ್ಯಾನ್ಸ್ ತಮ್ಮದೇ ಪುಟಗಳನ್ನು ರಚಿಸಿದ್ದಾರೆ. ಇಲ್ಲಿ ದರ್ಶನ್ ರ ಹೊಸ ಸಿನಿಮಾದ ಅಪ್ಡೇಟ್ ಸಂಬಂಧಿಸಿದ ಪೋಸ್ಟ್ ಗಳನ್ನು ಶೇರ್ ಮಾಡುತ್ತಿರುತ್ತಾರೆ. ಸದ್ಯ ಬಹುನಿರೀಕ್ಷಿತ 'ಕ್ರಾಂತಿ' ಸಿನಿಮಾದ ಬಗ್ಗೆ ಫುಲ್ ಹೈಪ್ ಕ್ರಿಯೇಟ್ ಆಗಿದೆ.
ರಾಬರ್ಟ್ ಸಿನಿಮಾದ ಯಶಸ್ಸಿನ ಬಳಿಕ ನಟ ದರ್ಶನ್ ನಟಿಸುತ್ತಿರುವ ಚಿತ್ರವೇ ಕ್ರಾಂತಿ, ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಈ ಚಿತ್ರ ರೆಡಿಯಾಗುತ್ತಿದ್ದು, ಸ್ಟಾರ್ ನಿರ್ದೇಶಕ ವಿ.ಹರಿಕೃಷ್ಣ ಆಕ್ಷನ್ ಕಟ್ ಹೇಳುತ್ತಿರುವ 55ನೇ ಸಿನಿಮಾ ಇದಾಗಿದ್ದು, ದರ್ಶನ್ ನಟನೆಯ ಯಜಮಾನ ಚಿತ್ರಕ್ಕೆ ಬಂಡವಾಳ ಹೂಡಿದ್ದ ಬಿ.ಸುರೇಶ್ ಮತ್ತು ಶೈಲಜಾ ನಾಗ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇಂದು ಸಂಜೆ ಸಿನಿಮಾದ 'ಧರಣಿ' ಥೀಮ್ ಸಾಂಗ್ ರಿಲೀಸ್ ಆಗಲಿದೆ. ಜನವರಿ 26, 2023ರಂದು ಕ್ರಾಂತಿ ಚಿತ್ರ ಅದ್ದೂರಿಯಾಗಿ ರಿಲೀಸ್ ಆಗಲಿದೆ.

ಈಗಾಗಲೇ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ರ ಕ್ರಾಂತಿ ಸಿನಿಮಾದ ಕ್ರೇಜ್ ಎಲ್ಲೆಡೆ ಹೆಚ್ಚಾಗಿದ್ದು, ಅಭಿಮಾನಿಗಳು ತಾವಾಗಿಯೇ ಸಿನಿಮಾ ಪ್ರಚಾರದಲ್ಲಿ ತೊಡಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದೀಗ ದರ್ಶನ್, ತಮ್ಮ ಫ್ಯಾನ್ಸ್ ಜೊತೆ ಇರುವ ಫೋಟೋವೊಂದು ಎಲ್ಲೆಡೆ ಹರಿದಾಡುತ್ತಿದ್ದು, ಅದನ್ನು ಲೈಕ್ ಮಾಡುತ್ತಿದ್ದಾರೆ. ಅಭಿಮಾನಿಗಳು ದರ್ಶನ್ ಅವರಿಗೆ ಉಡುಗೊರೆ ಕೊಟ್ಟಿದ್ದಾರೆಯೇ, ಇಲ್ಲವೇ ದಚ್ಚು ತಮ್ಮ ಫ್ಯಾನ್ಸ್ ಗಳಿಗೆ ಏನೆಂದರೂ ಗಿಫ್ಟ್ ನೀಡಿದ್ದಾರೆಯೇ, ಅಲ್ಲ, ಇದು ಬೇರೆಯೇ..
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋದಲ್ಲಿ ದರ್ಶನ್ ಅಭಿಮಾನಿಯಾಗಿರುವ ಬೈಕರ್ ಅವಿನಾಶ್ ತಮ್ಮ ಮೆಚ್ಚಿನ ನಟನಿಗಾಗಿ ತಮ್ಮ ಬೈಕ್ (ಜಾವಾ ಯೆಜ್ಡಿ ಇರಬಹುದು) ಹಾಗೂ ಹೈಲ್ಮೆಟ್ ಮೇಲೆ 'ಕ್ರಾಂತಿ' ಸಿನಿಮಾದ ಪೋಸ್ಟರ್ ಇರುವ ಸ್ಟಿಕರ್ ಅನ್ನು ಮಿರರ್, ಫ್ಯೂಯಲ್ ಟ್ಯಾಂಕ್ ಸೇರಿದಂತೆ ಸ್ಥಳಾವಕಾಶವಿರುವ ಎಲ್ಲ ಕಡೆ ಅಂಟಿಸಿದ್ದಾರೆ. ಈ ಮೂಲಕ ಕ್ರಾಂತಿ ಚಿತ್ರದ ಪ್ರಚಾರಕ್ಕಾಗಿ ಇಡೀ ರಾಜ್ಯವನ್ನು ಸುತ್ತಲಿದ್ದಾರೆ. ಅವರ ಈ ಕಾರ್ಯಕ್ಕೆ ಸ್ವತಃ ದರ್ಶನ್ ಅವರೇ ಬೈಕ್ ಚಾಲನೆ ಮಾಡುವ ಮೂಲಕ ಬೆಂಬಲಿಸಿದ್ದಾರಂತೆ.
ಅಲ್ಲದೆ, ನಟ ದರ್ಶನ್ ಅವರು ಬೈಕ್ ಕಾರುಗಳ ಮೇಲೆ ವಿಪರೀತವಾದ ಇಂಟ್ರೆಸ್ಟ್ ಇದ್ದು, ಅವರ ಗ್ಯಾರೇಜ್ ನಲ್ಲಿ ಹಲವು ಐಷಾರಾಮಿ ವಾಹನಗಳಿವೆ. ಹಮ್ಮರ್ ಹೆಚ್3, ಲ್ಯಾಂಬೋರ್ಗಿನಿ ಅವೆಂಟಾಡೋರ್ ಎಸ್ ರೋಡ್‌ಸ್ಟರ್, ಲ್ಯಾಂಬೋರ್ಗಿನಿ ಉರುಸ್, ಲ್ಯಾಂಬರ್ಗಿನಿ ಸಾರೋಟು, ಜಾಗ್ವಾರ್ ಎಕ್ಸ್‌ಕೆಆರ್-ಎಸ್, ಪೋರ್ಷೆ ಮಕೇನ್, ಆಡಿ ಕ್ಯೂ7, ರೇಂಜ್ ರೋವರ್ ಇವೋಕ್, ಆಡಿ ಟಿಟಿ, ಫೋರ್ಡ್ ಮಸ್ಟ್ಯಾಂಗ್, ಮಿನಿ ಕೂಪರ್, ಬಿಎಂಡಬ್ಲ್ಯೂ, ಫಾರ್ಚೂನರ್ ಹಾಗೂ ಐ - 20 ಕಾರುಗಳಿವೆ.
ಇಷ್ಟೇ ಅಲ್ಲದೆ, ನಟ ದರ್ಶನ್ ಅವರಿಗೆ ಬೈಕ್ ಓಡಿಸುವುದು ಎಂದರೆ ತುಂಬಾ ಅಚ್ಚುಮೆಚ್ಚು. ಅವರು ಆಗಾಗ್ಗೆ ಬೈಕ್ ರೈಡ್ ಅನ್ನು ಮಾಡುತ್ತಿರುತ್ತಾರೆ. ಸ್ನೇಹಿತರೊಂದಿಗೆ ಬೈಕ್ ಟ್ರಿಪ್ ಮಾಡಲು ತೆರಳುವ ದರ್ಶನ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಇಷ್ಟೇಅಲ್ಲದೆ, ನಟ ಧರ್ಮ ಕೀರ್ತಿರಾಜ್ ಖರೀದಿಸಿದ್ದ ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 500ಎಕ್ಸ್ ಬೈಕ್ ಅನ್ನು ರಾತ್ರಿ ವೇಳೆ ರೈಡ್ ಮಾಡುವ ದರ್ಶನ್ ಅವರು ಗಮನ ಸೆಳೆದಿದ್ದರು. ಇದನೆಲ್ಲ ನೋಡಿದರೆ ಅವರಿಗೆ ಎಷ್ಟು ಆಟೋಮೊಬೈಲ್ ಕ್ರೇಜ್ ಇದೆ ಎಂಬುದು ಗೊತ್ತಾಗುತ್ತದೆ.
ಕಳೆದ ತಿಂಗಳು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಲ್ಯಾಂಬೋರ್ಗಿನಿ ಉರುಸ್ ದುಬಾರಿ ಐಷಾರಾಮಿ ಕಾರು ಆಗಿದೆ. ಸದ್ಯ ಈ ಕಾರಿನ ಬೆಲೆ ಬರೋಬ್ಬರಿ 4.22 ಕೋಟಿ ರೂ. ಇದೆ. ಈ ಉರುಸ್ ಸ್ಟ್ಯಾಂಡರ್ಡ್ ಮಾದರಿಯು 4.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿದ್ದು, 657 BHP ಪವರ್, 850 NM ಟಾರ್ಕ್ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ಮೂರು ಡ್ರೈವ್ ಮೋಡ್ ಒಳಗೊಂಡಿದೆ. ಅಲ್ಲದೇ, ಐ - 20 ಕಾರಿನ ಬೆಲೆ ಈಗ 7.07 ಲಕ್ಷ ರೂ.ನಿಂದ ಆರಂಭವಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications