ಕಾರು ಖರೀದಿದಾರರ ನೆಚ್ಚಿನ ಬಣ್ಣ ಯಾವುದು ಗೊತ್ತಾ?

ಸತತ ಒಂಬತ್ತನೇ ವರ್ಷವೂ ಕಾರಿನ ಬಣ್ಣವನ್ನು ಆಯ್ಕೆ ಮಾಡಲು ಗ್ರಾಹಕರ ಆದ್ಯತೆಯಲ್ಲಿ ಬಿಳಿ ಬಣ್ಣವು ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಗ್ಲೋಬಲ್ ಆಟೋಮೋಟಿವ್ ಕೋಟಿಂಗ್‍‍ನ ಪ್ರಮುಖ ಕಂಪನಿಯಾದ ಆಕ್ಸಲ್ಟಾ ತನ್ನ ವರದಿಯನ್ನು ಬಿಡುಗಡೆಗೊಳಿಸಿದೆ.

ಕಾರು ಖರೀದಿದಾರರ ನೆಚ್ಚಿನ ಬಣ್ಣ ಯಾವುದು ಗೊತ್ತಾ?

ಗ್ಲೋಬಲ್ ಆಟೋಮೋಟಿವ್ ಕಲರ್ ಪಾಪ್ಯುಲಾರಿಟಿ ವರದಿಯ ಪ್ರಕಾರ 2019ರಲ್ಲಿ ಬಿಳಿ (38%), ಕಪ್ಪು (19%) ಹಾಗೂ ಗ್ರೇ (13%) ಬಣ್ಣಗಳು ಮೊದಲ ಮೂರು ಸ್ಥಾನವನ್ನು ಪಡೆದಿವೆ. 2011ರಿಂದ ಬಿಳಿ ಬಣ್ಣವು ವಿಶ್ವದಾದ್ಯಂತವಿರುವ ಕಾರುಗಳ ಪೈಕಿ ಮೊದಲ ಸ್ಥಾನದಲ್ಲಿದೆ.

ಕಾರು ಖರೀದಿದಾರರ ನೆಚ್ಚಿನ ಬಣ್ಣ ಯಾವುದು ಗೊತ್ತಾ?

ಈ ವರ್ಷ, ಸಿಲ್ವರ್ ಬಣ್ಣವು ಟಾಪ್ 3 ಸ್ಥಾನದಿಂದ ಹೊರಬಿದ್ದಿದ್ದು, ಅಗ್ರ ಮೂರು ಬಣ್ಣಗಳಿಂದ ಹೊರಗುಳಿದಿದೆ. ಸಿಲ್ವರ್ ಒಂದು ದಶಕಕ್ಕೂ ಹೆಚ್ಚು ಕಾಲ ಟಾಪ್ 3 ಸ್ಥಾನದಲ್ಲಿತ್ತು. ಇದೇ ಮೊದಲ ಬಾರಿಗೆ 10%ನಷ್ಟು ಕಡಿಮೆ ಜನಪ್ರಿಯತೆಯನ್ನು ಹೊಂದಿದೆ.

ಕಾರು ಖರೀದಿದಾರರ ನೆಚ್ಚಿನ ಬಣ್ಣ ಯಾವುದು ಗೊತ್ತಾ?

ಈ ಸಮೀಕ್ಷೆಯ ಪ್ರಕಾರ ಗ್ರೇ ಬಣ್ಣವು ವಿಶ್ವದ ಎಲ್ಲ ಭಾಗಗಳಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಬಿಳಿ, ಕಪ್ಪು, ಗ್ರೇ ಹಾಗೂ ಸಿಲ್ವರ್ ಬಣ್ಣಗಳು ಟಾಪ್ 4 ಸ್ಥಾನಗಳಲ್ಲಿವೆ. ಇದರಿಂದಾಗಿ ಜಾಗತಿಕವಾಗಿ 80% ಮಾರುಕಟ್ಟೆ ಪಾಲನ್ನು ಹೊಂದಿವೆ.

ಕಾರು ಖರೀದಿದಾರರ ನೆಚ್ಚಿನ ಬಣ್ಣ ಯಾವುದು ಗೊತ್ತಾ?

ಬಣ್ಣಗಳ ಆದ್ಯತೆಯು ಕಳೆದ ವರ್ಷ ಸ್ವಲ್ಪ ಬದಲಾಗಿದೆ. ಯುರೋಪ್‍‍ನಲ್ಲಿ ಬಿಳಿ ಬಣ್ಣವು 1% ನಷ್ಟು ಕಡಿಮೆಯಾಗಿದ್ದು, ಗ್ರೇ ಬಣ್ಣವು 2%ನಷ್ಟು ಹೆಚ್ಚಾಗಿದೆ. ಇದರಿಂದಾಗಿ ಗ್ರೇ ಬಣ್ಣವು ಮೊದಲ ಬಾರಿಗೆ ಯುರೋಪಿನಲ್ಲಿ ಅಗ್ರಸ್ಥಾನವನ್ನು ಪಡೆದಿದೆ.

ಕಾರು ಖರೀದಿದಾರರ ನೆಚ್ಚಿನ ಬಣ್ಣ ಯಾವುದು ಗೊತ್ತಾ?

ಕಳೆದ ವರ್ಷ ಯುರೋಪ್‍‍ನ ಎಸ್‍‍ಯುವಿ ವಲಯದಲ್ಲಿ ಗ್ರೇ ಬಣ್ಣಕ್ಕೆ ಬೇಡಿಕೆ ಹೆಚ್ಚಿದ ನಂತರ, ಈ ವರ್ಷ ಕಾಂಪ್ಯಾಕ್ಟ್ / ಸ್ಪೋರ್ಟ್ ಸೆಗ್‍‍ಮೆಂಟಿನಲ್ಲಿ 5%ನಷ್ಟು ಬೆಳವಣಿಗೆಯಾಗಿದೆ. ಯುರೋಪಿನಲ್ಲಿ ಇದೇ ಮೊದಲ ಬಾರಿಗೆ, ಗ್ರೇ ಬಣ್ಣವು ದೀರ್ಘಕಾಲದಿಂದ ನೆಚ್ಚಿನ ಬಣ್ಣವಾಗಿರುವ ಬಿಳಿ ಬಣ್ಣವನ್ನು ಹಿಂದಿಕ್ಕಿದೆ.

ಕಾರು ಖರೀದಿದಾರರ ನೆಚ್ಚಿನ ಬಣ್ಣ ಯಾವುದು ಗೊತ್ತಾ?

ಯುರೋಪಿಯನ್ನರು ಗ್ರೇ ಬಣ್ಣವನ್ನು ತಮ್ಮ ಭಾವನೆಯನ್ನು ವ್ಯಕ್ತಪಡಿಸಲು ಬಳಸುತ್ತಾರೆ ಎಂದು ಯುರೋಪ್, ಮಧ್ಯಪ್ರಾಚ್ಯ ಹಾಗೂ ಆಫ್ರಿಕಾದ ಕಲರ್ ಡಿಸೈನರ್ ಆದ ಎಲ್ಕೆ ಡಿರ್ಕ್ಸ್ ಹೇಳಿದ್ದಾರೆ. ಬೇರೆ ಕಡೆಗಳಲ್ಲಿ ಬಿಳಿ ಬಣ್ಣವು ಅಗ್ರಸ್ಥಾನದಲ್ಲಿದೆ.

ಕಾರು ಖರೀದಿದಾರರ ನೆಚ್ಚಿನ ಬಣ್ಣ ಯಾವುದು ಗೊತ್ತಾ?

ಏಷ್ಯಾದಲ್ಲಿ ಬಿಳಿ ಬಣ್ಣದ ಜನಪ್ರಿಯತೆಯು 1%ನಷ್ಟು ಹೆಚ್ಚಾಗಿದ್ದು, ಒಟ್ಟಾರೆಯಾಗಿ 49%ನಷ್ಟು ಜನಪ್ರಿಯತೆಯನ್ನು ಹೊಂದಿದೆ. ಚೀನಾದವರ ಆದ್ಯತೆಗಳು ಆಧುನಿಕ ಹಾಗೂ ಸ್ವಚ್ಛವಾಗಿರುವ ಕಾರಣಕ್ಕೆ ಬಿಳಿ ಬಣ್ಣವನ್ನು ಹೆಚ್ಚು ಬಯಸುತ್ತಾರೆ ಎಂದು ಚೀನಾದ ಕಲರ್ ಡಿಸೈನರ್ ಅನ್ನಿ ಯು ಹೇಳುತ್ತಾರೆ.

ಕಾರು ಖರೀದಿದಾರರ ನೆಚ್ಚಿನ ಬಣ್ಣ ಯಾವುದು ಗೊತ್ತಾ?

ಭಾರತದಲ್ಲಿರುವ 33% ಜನರು ಬಿಳಿ ಬಣ್ಣವನ್ನು ಬಯಸುತ್ತಾರೆ. ಇದರಲ್ಲಿ 26% ಸಾಲಿಡ್ ವೈಟ್ ಆದರೆ 7% ಪರ್ಲ್ ವೈಟ್ ಆಗಿದೆ. ಸಿಲ್ವರ್ ಬಣ್ಣವನ್ನು 31% ಜನರು ಬಯಸುತ್ತಾರೆ. ಗ್ರೇ ಬಣ್ಣವನ್ನು 12%ನಷ್ಟು ಜನರು ಇಷ್ಟ ಪಡುತ್ತಾರೆ.

ಕಾರು ಖರೀದಿದಾರರ ನೆಚ್ಚಿನ ಬಣ್ಣ ಯಾವುದು ಗೊತ್ತಾ?

ಉತ್ತರ ಅಮೇರಿಕಾ ಹಾಗೂ ದಕ್ಷಿಣ ಅಮೆರಿಕಾದಲ್ಲಿ ಬಿಳಿಯ ಬಣ್ಣವು ಅಗ್ರ ಸ್ಥಾನದಲ್ಲಿಯೇ ಮುಂದುವರೆದಿದೆ. ಇದರ ಜೊತೆಗೆ ಗ್ರೇ ಬಣ್ಣದ ವಾಹನಗಳನ್ನು ಹೊಂದುವವರ ಸಂಖ್ಯೆಯೂ ಸಹ ಹೆಚ್ಚಿನ ಪ್ರಮಾಣದಲ್ಲಿದೆ.

ಕಾರು ಖರೀದಿದಾರರ ನೆಚ್ಚಿನ ಬಣ್ಣ ಯಾವುದು ಗೊತ್ತಾ?

ಅಗ್ರ ನಾಲ್ಕು ಬಣ್ಣಗಳಾದ ಬಿಳಿ, ಕಪ್ಪು, ಗ್ರೇ ಹಾಗೂ ಸಿಲ್ವರ್ ಪ್ರಪಂಚಾದ್ಯಂತ ಇನ್ನು ಹೆಚ್ಚಿನ ಜನಪ್ರಿಯತೆಯನ್ನು ಹೊಂದಿವೆ ಎಂದು ಲಾಕ್ಹಾರ್ಟ್‍‍ರವರು ಹೇಳಿದರು. ಇತರ ಬಣ್ಣಗಳು ಸಹ ಹೆಚ್ಚಿನ ಜನಪ್ರಿಯತೆಯನ್ನು ಹೊಂದುತ್ತಿವೆ. ಕಳೆದ ವರ್ಷದವರೆಗೂ ಈ ಬಣ್ಣಗಳ ಬಗ್ಗೆ ಯಾರೂ ಯೋಚಿಸಿರಲಿಲ್ಲ.

ಕಾರು ಖರೀದಿದಾರರ ನೆಚ್ಚಿನ ಬಣ್ಣ ಯಾವುದು ಗೊತ್ತಾ?

ಇದರಿಂದಾಗಿ ಗ್ರಾಹಕರು ತಮ್ಮ ವಾಹನದ ಬಣ್ಣವನ್ನು ಬದಲಾಯಿಸಲು ಆರಂಭಿಸಿರುವುದು ಕಂಡು ಬರುತ್ತದೆ. ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ನಮ್ಮ ವಾಹನಗಳ ಗ್ರಾಹಕರೊಂದಿಗೆ ಪಾಲುದಾರರಾಗಲು ಆಕ್ಸಲ್ಟಾ ಸಿದ್ಧವಾಗಿದೆ ಎಂದು ಹೇಳಿದರು.

ಕಾರು ಖರೀದಿದಾರರ ನೆಚ್ಚಿನ ಬಣ್ಣ ಯಾವುದು ಗೊತ್ತಾ?

ಉತ್ತರ ಅಮೆರಿಕಾದಲ್ಲಿ ಕೆಂಪು ಬಣ್ಣವು 9%ನಷ್ಟು ಜನಪ್ರಿಯವಾಗಿದ್ದರೆ, ಬ್ರೌನ್ / ಬೀಜ್ ಬಣ್ಣಗಳು ರಷ್ಯಾದಲ್ಲಿ 12%ನಷ್ಟು ಜನಪ್ರಿಯತೆಯನ್ನು ಹೊಂದಿವೆ. ಗ್ರಾಹಕರ ಆಯ್ಕೆ ಹಾಗೂ ಪ್ರಾಡಕ್ಟ್ ಬ್ರ್ಯಾಂಡಿಂಗ್‌ನಲ್ಲಿ ಬಣ್ಣವು ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಕಾರು ಖರೀದಿದಾರರ ನೆಚ್ಚಿನ ಬಣ್ಣ ಯಾವುದು ಗೊತ್ತಾ?

ಇಂದಿನ ರಸ್ತೆಗಳಲ್ಲಿ ನೀಲಿ, ಕೆಂಪು ಮತ್ತು ಬ್ರೌನ್ / ಬೀಜ್ ಬಣ್ಣಗಳಲ್ಲಿರುವ ವಾಹನಗಳು ಎದ್ದು ಕಾಣುತ್ತವೆ ಎಂದು ಲಾಕ್ಹಾರ್ಟ್ ಹೇಳಿದರು. ಉತ್ತರ ಅಮೆರಿಕಾ ಹಾಗೂ ಯುರೋಪ್‍‍ನಲ್ಲಿ 10% ವಾಹನಗಳನ್ನು ಹೊಂದಿರುವ ನೀಲಿ ಬಣ್ಣವು ಹೆಚ್ಚು ಜನಪ್ರಿಯವಾಗಿದೆ.

ಕಾರು ಖರೀದಿದಾರರ ನೆಚ್ಚಿನ ಬಣ್ಣ ಯಾವುದು ಗೊತ್ತಾ?

ವಿವಿಧ ಭಾಗಗಳಲ್ಲಿ ಜನಪ್ರಿಯವಾಗಿರುವ ಬಣ್ಣಗಳು

ಆಫ್ರಿಕಾ - ಸಿಲ್ವರ್ ಹಾಗೂ ಬಿಳಿ ಬಣ್ಣಗಳು ಜೊತೆಯಾಗಿ 58%ನಷ್ಟು ಜನಪ್ರಿಯತೆಯನ್ನು ಹೊಂದಿವೆ.

ಏಷ್ಯಾ - ಪರ್ಲ್ ವೈಟ್ ಬಣ್ಣಗಳು ಈ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿವೆ.

ಯುರೋಪ್ - ಗ್ರೇ ಅತ್ಯಂತ ಜನಪ್ರಿಯ ಬಣ್ಣವಾಗಿದ್ದು, ಹೆಚ್ಚಿನ ಅವಧಿಯಿಂದ ಜನಪ್ರಿಯವಾಗಿದ್ದ ಬಿಳಿ ಬಣ್ಣವನ್ನು ಹಿಂದಿಕ್ಕಿದೆ.

ಉತ್ತರ ಅಮೆರಿಕಾ - ನೀಲಿ ಬಣ್ಣವು 2%ನಷ್ಟು ಹೆಚ್ಚಾಗಿದ್ದು, ಒಟ್ಟು ವಾಹನಗಳ ಪೈಕಿ 10% ವಾಹನಗಳು ನೀಲಿ ಬಣ್ಣವನ್ನು ಹೊಂದಿವೆ.

ರಷ್ಯಾ - 12%ನಷ್ಟು ವಾಹನಗಳು ಬೀಜ್ / ಬ್ರೌನ್ ಬಣ್ಣಗಳನ್ನು ಹೊಂದಿವೆ.

ದಕ್ಷಿಣ ಅಮೆರಿಕಾ - ಸಿಲ್ವರ್ ಬಣ್ಣವು ಹೆಚ್ಚಾಗುತ್ತಿರುವ ಏಕೈಕ ಪ್ರದೇಶವಿದು.

Most Read Articles

Kannada
English summary
White is the most popular colour for car buyers across the world - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X