ದುಬಾರಿ ಬೆಲೆಯ ಸೂಪರ್‍‍ಕಾರುಗಳು ದುಬೈನಲ್ಲಿ ಹೆಚ್ಚು.. ಏಕೆ ಗೊತ್ತಾ?

ಭಾರತೀಯರು ಕಾರುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುವ ವಾಹನವೆಂದು ಮಾತ್ರ ಪರಿಗಣಿಸುತ್ತಾರೆ. ಈ ಕಾರಣಕ್ಕೆ ಭಾರತದ ರಸ್ತೆಗಳಲ್ಲಿ ಐಷಾರಾಮಿ ಹಾಗೂ ಸೂಪರ್‍‍ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವುದಿಲ್ಲ.

ದುಬಾರಿ ಬೆಲೆಯ ಸೂಪರ್‍‍ಕಾರುಗಳು ದುಬೈನಲ್ಲಿ ಹೆಚ್ಚು.. ಏಕೆ ಗೊತ್ತಾ?

ಭಾರತದಲ್ಲಿ ಕಂಡು ಬರುವ ಕಾರುಗಳು ಸಾಮಾನ್ಯ ಬಜೆಟ್ ಕಾರುಗಳಾಗಿರುತ್ತವೆ. ಎಲ್ಲಾ ಭಾರತೀಯರು ದುಬಾರಿ ಬೆಲೆಯ ಸೂಪರ್‍‍‍ಕಾರುಗಳನ್ನು ಖರೀದಿಸುವಷ್ಟು ಶ್ರೀಮಂತರಲ್ಲ ಎಂಬುದು ಇದಕ್ಕೆ ಮುಖ್ಯ ಕಾರಣವಾಗಿದೆ. ಆದರೆ ದುಬೈನ ಜನರು ಸಾಕಷ್ಟು ಶ್ರೀಮಂತರಾಗಿದ್ದಾರೆ.

ದುಬಾರಿ ಬೆಲೆಯ ಸೂಪರ್‍‍ಕಾರುಗಳು ದುಬೈನಲ್ಲಿ ಹೆಚ್ಚು.. ಏಕೆ ಗೊತ್ತಾ?

ದುಬೈನ ಜನರು ಹೊಂದಿರುವ ಐಷಾರಾಮಿ ಜೀವನವನ್ನು ನೋಡಿದರೆ ಎಂತಹವರಿಗಾದರೂ ಹೊಟ್ಟೆ ಕಿಚ್ಚು ಬರದೇ ಇರದು. ಐಷಾರಾಮಿ ಕಾರುಗಳು ಅವರಿಗೆ ಸಾಮಾನ್ಯವಾಗಿವೆ. ದುಬೈನ ರಸ್ತೆಗಳಲ್ಲಿ ಐಷಾರಾಮಿ ಕಾರುಗಳನ್ನು, ಸೂಪರ್‍‍ಕಾರುಗಳನ್ನು ಹಾಗೂ ಸ್ಪೋರ್ಟ್ಸ್ ಕಾರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಾಣಬಹುದು.

ದುಬಾರಿ ಬೆಲೆಯ ಸೂಪರ್‍‍ಕಾರುಗಳು ದುಬೈನಲ್ಲಿ ಹೆಚ್ಚು.. ಏಕೆ ಗೊತ್ತಾ?

ಭಾರತದ ರಸ್ತೆಗಳಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣುವಂತೆ ದುಬೈ ರಸ್ತೆಗಳಲ್ಲಿ ಐಷಾರಾಮಿ ಕಾರುಗಳನ್ನು ಕಾಣಬಹುದು. ದುಬೈ ರಸ್ತೆಗಳಲ್ಲಿ ಲ್ಯಾಂಬೊರ್ಗಿನಿ, ಫೆರಾರಿ, ಪೋರ್ಷೆ, ಮಸೆರಾಟಿ, ರೋಲ್ಸ್ ರಾಯ್ಸ್, ಬೆಂಟ್ಲಿ, ಮರ್ಸಿಡಿಸ್ ಬೆಂಝ್, ಬಿ‍ಎಂ‍‍ಡಬ್ಲ್ಯು ಹಾಗೂ ಆಡಿ ಕಾರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು.

ದುಬಾರಿ ಬೆಲೆಯ ಸೂಪರ್‍‍ಕಾರುಗಳು ದುಬೈನಲ್ಲಿ ಹೆಚ್ಚು.. ಏಕೆ ಗೊತ್ತಾ?

ದುಬೈನಲ್ಲಿ ಎರಡು ರೀತಿಯ ಜನರಿದ್ದಾರೆ. ಅವರಲ್ಲಿ ಮೊದಲನೇ ರೀತಿಯ ಜನರು ಕಾರು ಪ್ರಿಯರಾಗಿದ್ದು, ಪರ್ಫಾಮೆನ್ಸ್ ಕಾರುಗಳನ್ನು ಡ್ರೈವ್ ಮಾಡಲು ಬಯಸುತ್ತಾರೆ. ಆದ ಕಾರಣ ದುಬಾರಿ ಬೆಲೆಯ ಸೂಪರ್‍‍ಕಾರುಗಳನ್ನು ಖರೀದಿಸುತ್ತಾರೆ.

ದುಬಾರಿ ಬೆಲೆಯ ಸೂಪರ್‍‍ಕಾರುಗಳು ದುಬೈನಲ್ಲಿ ಹೆಚ್ಚು.. ಏಕೆ ಗೊತ್ತಾ?

ಎರಡನೇ ರೀತಿಯ ಜನರು ಕಾರುಗಳನ್ನು ತಮ್ಮ ಪ್ರತಿಷ್ಟೆಯ ವಿಷಯವಾಗಿ ತೆಗೆದುಕೊಳ್ಳುತ್ತಾರೆ. ಈ ರೀತಿಯ ಜನರು ಬೆಲೆ ಎಷ್ಟೇ ಆದರೂ ತಲೆಕೆಡಿಸಿಕೊಳ್ಳದೇ ದುಬಾರಿ ಬೆಲೆಯ ಸೂಪರ್‍‍ಕಾರುಗಳನ್ನು ಖರೀದಿಸುತ್ತಾರೆ.

ದುಬಾರಿ ಬೆಲೆಯ ಸೂಪರ್‍‍ಕಾರುಗಳು ದುಬೈನಲ್ಲಿ ಹೆಚ್ಚು.. ಏಕೆ ಗೊತ್ತಾ?

ದುಬೈಗೆ ಹೋಗುವ ಯಾರೇ ಆದರೂ ಅಲ್ಲಿನ ಜನರ ಬಳಿಯಿರುವ ಈ ಕಾರುಗಳನ್ನು ನೋಡಿ ಹೊಟ್ಟೆ ಕಿಚ್ಚು ಪಡುವುದು ಖಚಿತ. ಅಷ್ಟಕ್ಕೂ ದುಬೈ ಜನರಿಗೆ ದುಬಾರಿ ಬೆಲೆಯ ಕಾರುಗಳನ್ನು ಖರೀದಿಸಲು ಹೇಗೆ ಸಾಧ್ಯವಾಗುತ್ತದೆ? ಈ ಕಾರುಗಳನ್ನು ಖರೀದಿಸಲು ಹಣ ಎಲ್ಲಿಂದ ಬರುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ದುಬಾರಿ ಬೆಲೆಯ ಸೂಪರ್‍‍ಕಾರುಗಳು ದುಬೈನಲ್ಲಿ ಹೆಚ್ಚು.. ಏಕೆ ಗೊತ್ತಾ?

ಆದಾಯ ತೆರಿಗೆ ಇಲ್ಲ

ಯು‍ಎ‍ಇ ದೇಶದಲ್ಲಿ ಸದ್ಯಕ್ಕೆ ಯಾವುದೇ ಆದಾಯ ತೆರಿಗೆಯನ್ನು ವಿಧಿಸುತ್ತಿಲ್ಲ. ಜನರು ಎಷ್ಟೇ ಆದಾಯವನ್ನು ಗಳಿಸಿದರೂ ಅದಕ್ಕೆ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಆದಾಯ ತೆರಿಗೆಯನ್ನು ಜಾರಿಗೆ ತರಲಾಗುವುದು ಎಂಬ ವದಂತಿಗಳು ಹಬ್ಬಿದ್ದವು. ಆದರೆ ಅಲ್ಲಿನ ಸರ್ಕಾರಿ ಅಧಿಕಾರಿಗಳು ಈ ವದಂತಿಯನ್ನು ಅಲ್ಲಗಳೆದಿದ್ದಾರೆ.

MOST READ: ರೂ. 1,300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

ದುಬಾರಿ ಬೆಲೆಯ ಸೂಪರ್‍‍ಕಾರುಗಳು ದುಬೈನಲ್ಲಿ ಹೆಚ್ಚು.. ಏಕೆ ಗೊತ್ತಾ?

ಇದರ ಜೊತೆಗೆ ಅಲ್ಲಿರುವ ವ್ಯಾಟ್ ತೆರಿಗೆ ಕೇವಲ 5% ಆಗಿದೆ. ಅಲ್ಲಿನ ಸರ್ಕಾರಿ ನೌಕರರಿಗೆ ಹೆಚ್ಚು ಸಂಬಳ ನೀಡಲಾಗುತ್ತದೆ. ಈ ಕಾರಣಕ್ಕೆ ಅಲ್ಲಿ ಹೆಚ್ಚು ಆದಾಯವಿದ್ದು, ತಮಗೆ ಬೇಕಾದ ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ.

ದುಬಾರಿ ಬೆಲೆಯ ಸೂಪರ್‍‍ಕಾರುಗಳು ದುಬೈನಲ್ಲಿ ಹೆಚ್ಚು.. ಏಕೆ ಗೊತ್ತಾ?

ಕಾರುಗಳ್ಳರ ಭಯವಿಲ್ಲ

ಕಾರುಗಳ್ಳತನ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಸಾಮಾನ್ಯವಾದ ಸಂಗತಿಯಾಗಿದೆ. ಜೊತೆಗೆ ಹೊಟ್ಟೆಕಿಚ್ಚಿನಿಂದ ಕಾರುಗಳನ್ನು ಹಾಳು ಮಾಡುವುದು ಸಹ ಸಾಮಾನ್ಯ. ಆದರೆ ದುಬೈನಲ್ಲಿ ಈ ರೀತಿಯ ಯಾವುದೇ ಸಮಸ್ಯೆಗಳಿಲ್ಲ. ಕಾರುಗಳ್ಳತನ ಹಾಗೂ ಕಾರುಗಳನ್ನು ಹಾಳು ಮಾಡುವುದಕ್ಕೆ ದುಬೈನಲ್ಲಿ ಉಗ್ರ ಶಿಕ್ಷೆಯನ್ನು ವಿಧಿಸಲಾಗುತ್ತದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ದುಬಾರಿ ಬೆಲೆಯ ಸೂಪರ್‍‍ಕಾರುಗಳು ದುಬೈನಲ್ಲಿ ಹೆಚ್ಚು.. ಏಕೆ ಗೊತ್ತಾ?

ದುಬೈ ಪ್ರಪಂಚದಲ್ಲಿರುವ ಅತ್ಯಂತ ಸುರಕ್ಷಿತ ದೇಶಗಳಲ್ಲಿ ಒಂದು. ಈ ಕಾರಣಕ್ಕೆ ಅಲ್ಲಿನ ಜನರು ಕಾರುಗಳ ಕಳ್ಳತನದ ಬಗ್ಗೆ ಅಥವಾ ಕಾರುಗಳು ಹಾಳಾಗುತ್ತವೆ ಎಂದು ಹೆದರುವುದಿಲ್ಲ. ಅವರು ತಮಗೆ ಇಷ್ಟ ಬಂದ ಐಷಾರಾಮಿ ಕಾರುಗಳನ್ನು ಖರೀದಿಸಿ ತಮ್ಮ ಜೀವನವನ್ನು ಎಂಜಾಯ್ ಮಾಡುತ್ತಾರೆ. ಅಲ್ಲಿನ ಕಾನೂನು ಜನರಿಗೆ ಹಾಗೂ ಅವರ ವಸ್ತುಗಳಿಗೆ ರಕ್ಷಣೆ ನೀಡುತ್ತದೆ.

ದುಬಾರಿ ಬೆಲೆಯ ಸೂಪರ್‍‍ಕಾರುಗಳು ದುಬೈನಲ್ಲಿ ಹೆಚ್ಚು.. ಏಕೆ ಗೊತ್ತಾ?

ಅಗ್ಗದ ಇಂಧನ

ನಮ್ಮ ದೇಶದಲ್ಲಿ ಕಾರು ಖರೀದಿಸುವ ಮುನ್ನ ಮೈಲೇಜ್ ಬಗ್ಗೆ ಯೋಚನೆ ಮಾಡುತ್ತಾರೆ. ಪೆಟ್ರೋಲ್ ಡೀಸೆಲ್‍‍ಗೆ ಎಷ್ಟು ಖರ್ಚಾಗುತ್ತದೆ ಎಂದು ಚಿಂತಿಸುತ್ತಾರೆ. ಅದರಲ್ಲೂ ಸೂಪರ್‍‍ಕಾರುಗಳು ಹೆಚ್ಚು ಮೈಲೇಜ್ ನೀಡುವುದೇ ಇಲ್ಲ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ದುಬಾರಿ ಬೆಲೆಯ ಸೂಪರ್‍‍ಕಾರುಗಳು ದುಬೈನಲ್ಲಿ ಹೆಚ್ಚು.. ಏಕೆ ಗೊತ್ತಾ?

ಆದರೆ ದುಬೈನಲ್ಲಿರುವವರು ಪೆಟ್ರೋಲ್ ಡೀಸೆಲ್ ಬೆಲೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಪ್ರಪಂಚದ ಬೇರೆ ದೇಶಗಳಿಗೆ ಹೋಲಿಸಿದರೆ ಯು‍ಎ‍‍ಇಯಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ತುಂಬಾ ಕಡಿಮೆ. ಅಲ್ಲಿನ ಜನರು ಹೆಚ್ಚು ಸೂಪರ್ ಕಾರುಗಳನ್ನು ಖರೀದಿಸಲು ಇದೂ ಸಹ ಒಂದು ಕಾರಣ.

ದುಬಾರಿ ಬೆಲೆಯ ಸೂಪರ್‍‍ಕಾರುಗಳು ದುಬೈನಲ್ಲಿ ಹೆಚ್ಚು.. ಏಕೆ ಗೊತ್ತಾ?

ಅತ್ಯುತ್ತಮ ರಸ್ತೆಗಳು

ಭಾರತವೂ ಸೇರಿದಂತೆ ಕೆಲವು ದೇಶಗಳ ರಸ್ತೆಗಳಲ್ಲಿ ಸೂಪರ್‍‍ಕಾರುಗಳನ್ನು ಚಾಲನೆ ಮಾಡುವುದು ನಿಜಕ್ಕೂ ಕಷ್ಟದ ಕೆಲಸ. ಈ ರಸ್ತೆಗಳು ಸೂಪರ್‍‍ಕಾರುಗಳನ್ನು ಚಲಾಯಿಸುವುದಕ್ಕೆ ಯೋಗ್ಯವಾಗಿರುವುದಿಲ್ಲ. ಈ ಕಾರಣಕ್ಕೆ ಭಾರತದಲ್ಲಿ ಶ್ರೀಮಂತರು ಸಹ ಸೂಪರ್‍‍ಕಾರುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಾರೆ.

ದುಬಾರಿ ಬೆಲೆಯ ಸೂಪರ್‍‍ಕಾರುಗಳು ದುಬೈನಲ್ಲಿ ಹೆಚ್ಚು.. ಏಕೆ ಗೊತ್ತಾ?

ಭಾರತದ ರಸ್ತೆಗಳಲ್ಲಿ ವೇಗವಾಗಿ ಚಲಿಸಿದರೆ ಅಪಘಾತಗಳಾಗುವುದು ಸಹಜ. ಆದರೆ ದುಬೈನಲ್ಲಿರುವ ರಸ್ತೆಗಳನ್ನು ಗುಣಮಟ್ಟದಿಂದ ತಯಾರಿಸಲಾಗಿದ್ದು, ಅಪಘಾತಗಳಾಗುವುದು ಅಪರೂಪ. ಅಲ್ಲಿನ ರಸ್ತೆಗಳಲ್ಲಿ ರಸ್ತೆ ಗುಂಡಿಗಳಿರುವುದಿಲ್ಲ.

ದುಬಾರಿ ಬೆಲೆಯ ಸೂಪರ್‍‍ಕಾರುಗಳು ದುಬೈನಲ್ಲಿ ಹೆಚ್ಚು.. ಏಕೆ ಗೊತ್ತಾ?

ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ

ದುಬೈನಲ್ಲಿರುವ ಶ್ರೀಮಂತರು ದುಬಾರಿ ಬೆಲೆಯ ಹೊಸ ಐಷಾರಾಮಿಗಳನ್ನು ಖರೀದಿಸುತ್ತಾರೆ. ಅಲ್ಲಿಯೂ ಸಹ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಕೊಳ್ಳುವವರಿದ್ದಾರೆ. ಈ ಸೂಪರ್‍‍ಕಾರುಗಳು ಅವರಿಗೆ ಸರಿಹೊಂದುವಂತಹ ಬೆಲೆಯಲ್ಲಿ ದೊರೆಯುತ್ತವೆ.

ದುಬಾರಿ ಬೆಲೆಯ ಸೂಪರ್‍‍ಕಾರುಗಳು ದುಬೈನಲ್ಲಿ ಹೆಚ್ಚು.. ಏಕೆ ಗೊತ್ತಾ?

ಇದರ ಜೊತೆಗೆ ದುಬೈನಲ್ಲಿ ಕಾರು ಸಾಲವನ್ನು ಸುಲಭವಾಗಿ ನೀಡಲಾಗುತ್ತದೆ. ಕಾರು ಸಾಲದ ಮೇಲೆ ಕಡಿಮೆ ಪ್ರಮಾಣದ ಬಡ್ಡಿಯನ್ನು ವಿಧಿಸಲಾಗುತ್ತದೆ. ಇಷ್ಟೆಲ್ಲಾ ಸೌಲಭ್ಯಗಳಿದ್ದ ಮೇಲೆ ದುಬೈನ ಜನರು ದುಬಾರಿ ಬೆಲೆಯ, ಐಷಾರಾಮಿ, ಸೂಪರ್‍‍‍ಕಾರುಗಳನ್ನು ಖರೀದಿಸುವುದು ಸಹಜ.

Most Read Articles

Kannada
English summary
Why there are so many sports cars and Super cars in Dubai. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X