ಕಾರಿನ ಚಕ್ರ ಹಿಮ್ಮುಖವಾಗಿ ಚಲಿಸಿದಂತೆ ಕಾಣತ್ತೆ. ಏಕೆ ಗೊತ್ತೆ...?

Written By:

ಸಾಮಾನ್ಯವಾಗಿ ರಸ್ತೆಯ ಪಕ್ಕದಲ್ಲಿ ಚಲಿಸುತ್ತಿರುವಾಗ ಅಥವಾ ಎಲ್ಲಿಯಾದರೂ ಹೋಗುತ್ತಿರುವ ವೇಳೆಯಲ್ಲಿ ನೀವು ಕಾರಿನ ಚಕ್ರವನ್ನು ಗಮನಿಸಿದ್ದಾರೆ ಖಂಡಿತವಾಗಿ ನಿಮಗೆ ಆಶ್ಚರ್ಯವಾಗುವುದರಲ್ಲಿ ಅನುಮಾನವಿಲ್ಲ.

ಕಾರಿನ ಚಕ್ರ ಹಿಮ್ಮುಖವಾಗಿ ಚಲಿಸಿದಂತೆ ಕಾಣತ್ತೆ. ಏಕೆ ಗೊತ್ತೆ...?

ಕಾರು ಮುಂದೆ ಹೋಗುತ್ತಿದೆ ಎಂದರೆ ಅದರ ಚಕ್ರ ಕೂಡ ಮುಂದಕ್ಕೆ ಚಲಿಸಿದಂತೆ ಕಾಣಬೇಕು ಆದರೆ ಅದಕ್ಕೆ ತದ್ವಿರುದ್ಧವೆಂಬಂತೆ ಹಿಮ್ಮುಖವಾಗಿ ಚಲಿಸಿದಂತೆ ಕಾಣುತ್ತದೆ. ಯಾಕಪ್ಪ ಹೀಗೆ ಕಾಣತ್ತೆ ಅಂತ ಕೇಳ್ತೀರಾ ? ಖಂಡಿತ ಅದಕ್ಕೆ ಒಂದು ವೈಜ್ಞಾನಿಕ ಕಾರಣ ಇದೆ.

ಕಾರಿನ ಚಕ್ರ ಹಿಮ್ಮುಖವಾಗಿ ಚಲಿಸಿದಂತೆ ಕಾಣತ್ತೆ. ಏಕೆ ಗೊತ್ತೆ...?

ಆ ಕಾರಣವೇನು ಗೊತ್ತೇ, ಅದುವೇ ಸ್ಟ್ರಾಬೊಸ್ಕೋಪಿಕ್ ಪರಿಣಾಮ ಎನ್ನಲಾಗುತ್ತದೆ. ವಿಸ್ತಾರವಾದ ವಿವರಕ್ಕೆ ಮುಂದೆ ಓದಿ.

ಕಾರಿನ ಚಕ್ರ ಹಿಮ್ಮುಖವಾಗಿ ಚಲಿಸಿದಂತೆ ಕಾಣತ್ತೆ. ಏಕೆ ಗೊತ್ತೆ...?

ಸಾಮಾನ್ಯವಾಗಿ ಮಾನವನ ಕಣ್ಣು ತೀರಾ ಸೂಕ್ಷ್ಮವಾದ ಅಂಗಾಂಗ ಎನ್ನಬಹುದು, ಕಣ್ಣಿಗೆ ತನ್ನದೇ ಆದ ಮಿತಿ ಇರುತ್ತದೆ.

ಕಾರಿನ ಚಕ್ರ ಹಿಮ್ಮುಖವಾಗಿ ಚಲಿಸಿದಂತೆ ಕಾಣತ್ತೆ. ಏಕೆ ಗೊತ್ತೆ...?

ಕಣ್ಣಿಗೆ ಇಷ್ಟು ದೂರ ನೋಡಬೇಕು, ಇಷ್ಟು ಹೊತ್ತು ವಿಶ್ರಾಂತಿ ಬೇಕು ಎಂಬೆಲ್ಲಾ ಕಟ್ಟುಪಾಡುಗಳಿವೆ, ಅದನ್ನು ಮೀರಿ ಅಸಾಧ್ಯವಾದ ಕೆಲಸವನ್ನು ಮಾಡುವುದಕ್ಕೆ ಕಣ್ಣು ಒಪ್ಪುವುದಿಲ್ಲ.

ಕಾರಿನ ಚಕ್ರ ಹಿಮ್ಮುಖವಾಗಿ ಚಲಿಸಿದಂತೆ ಕಾಣತ್ತೆ. ಏಕೆ ಗೊತ್ತೆ...?

ಹೀಗಿರುವಾಗ ಮನುಷ್ಯನ ಕಣ್ಣುಗಳು ಹೆಚ್ಚು ವೇಗವಾಗಿ ಚಲಿಸುವ ವಾಹನದ ಚಕ್ರಗಳನ್ನಾಗಲಿ, ಹೆಲಿಕಾಪ್ಟರ್ ರೆಕ್ಕೆಗಳನ್ನಾಗಲಿ ಗುರುತಿಸುವಲ್ಲಿ ವಿಫಲವಾಗುತ್ತವೆ.ನಿಮಗೆ ಗೊತ್ತೇ ? ಮಾನವನ ಕಣ್ಣು ಒಂದು ಸೆಕೆಂಡಿನಲ್ಲಿ ಒಂದು ಚಿತ್ರವನ್ನು ಸರಿ ಸುಮಾರು ಹತ್ತರಿಂದ ಹನ್ನೆರಡು ಸಾರಿ ಚಿತ್ರಿಸಿಕೊಂಡು ಬಿಂದುವಿನ ಸಾಲು ನಿರ್ಮಿಸಿಕೊಳ್ಳಲು ಮಾತ್ರ ಶಕ್ತವಾಗಿದೆ.

ಕಾರಿನ ಚಕ್ರ ಹಿಮ್ಮುಖವಾಗಿ ಚಲಿಸಿದಂತೆ ಕಾಣತ್ತೆ. ಏಕೆ ಗೊತ್ತೆ...?

ನಮ್ಮ ಮೆದುಳು ಕಣ್ಣು ನೋಡಿದ ಬಿಂದುಗಳ ಸಾಲುಗಳನ್ನು ಒಟ್ಟುಗೂಡಿಸಿ ಒಂದು ದೃಶ್ಯವನ್ನಾಗಿ ಮಾರ್ಪಾಡು ಮಾಡುತ್ತದೆ.

ಕಾರಿನ ಚಕ್ರ ಹಿಮ್ಮುಖವಾಗಿ ಚಲಿಸಿದಂತೆ ಕಾಣತ್ತೆ. ಏಕೆ ಗೊತ್ತೆ...?

ಒಮ್ಮೆ ಯೋಚಿಸಿ, ಒಂದು ಕಾರು ಅತಿ ವೇಗವಾಗಿ ಚಲಿಸುತ್ತಿದ್ದರೆ, ಅದರ ವೇಗಕ್ಕೆ ಸರಿದೂಗುವಂತ ಕ್ಷಮತೆ ಇಲ್ಲದ ಕಾರಣ ಕಣ್ಣಿಗೆ ಎಷ್ಟು ಸಾಧ್ಯವೋ ಅಷ್ಟು ದೃಶ್ಯಗಳನ್ನು ಮಾತ್ರ ಶೇಖರಿಸಿಟ್ಟುಕೊಳ್ಳುತ್ತದೆ.

ಕಾರಿನ ಚಕ್ರ ಹಿಮ್ಮುಖವಾಗಿ ಚಲಿಸಿದಂತೆ ಕಾಣತ್ತೆ. ಏಕೆ ಗೊತ್ತೆ...?

ಆದ್ದರಿಂದ ಚಕ್ರ ಎಷ್ಟು ತಿರುಗಿದರೂ ಸಹ ಕಣ್ಣು ಹೆಚ್ಚು ದೃಶ್ಯಗಳನ್ನು ತೆಗೆದುಕೊಳ್ಳದೆ, ಕೆಲವೇ ಕೆಲವು ಚಿತ್ರಗಳನ್ನು ಶೇಖರಿಸಿಟ್ಟುಕೊಂಡು ಮೆದುಳಿಗೆ ರವಾನೆ ಮಾಡುತ್ತದೆ, ಇದೆ ಕಾರಣಕ್ಕೆ ನಿಮಗೆ ಚಕ್ರ ಓಡುತ್ತಿದ್ದರೂ ಸಹ ನಿಂತಂತೆ ಮತ್ತು ಹಿಮ್ಮುಖವಾಗಿ ಚಲಿಸಿದಂತೆ ಕಾಣುತ್ತದೆ.

ವೇಗಕ್ಕೆ ಮತ್ತೊಂದು ಹೆಸರು ಎಂಬಂತಿರುವ ಕೆಟಿಎಂ ಆರ್.ಸಿ16 ಬೈಕಿನ ಚಿತ್ರಗಳನ್ನು ವೀಕ್ಷಿಸಿ.

English summary
Here’s the explanation as to why car wheels appear to spin backwards when travelling fast.
Story first published: Friday, February 24, 2017, 16:50 [IST]
Please Wait while comments are loading...

Latest Photos