ಗೋ ಕಾರ್ಟ್ ಅಡ್ವೆಂಚರ್ ವೇಳೆ ದುರಂತ- ತಲೆಗೂದಲು ಸಿಲುಕಿ 28 ವರ್ಷದ ಮಹಿಳೆ ಸಾವು..

ಅಡ್ವೆಂಚರ್‌ನಲ್ಲಿ ಭಾಗವಹಿಸುವಾಗ ಸಾಕಷ್ಟು ಎಚ್ಚರಿಕೆ ವಹಿಸುವುದು ಒಳಿತು. ಇಲ್ಲವಾದ್ರೆ ಒಂದು ಸಣ್ಣ ತಪ್ಪು ಕೂಡಾ ಪ್ರಾಣಕ್ಕೆ ಕುತ್ತು ತರುವುದರಲ್ಲಿ ಯಾವುದೇ ಅನುಮಾನವಿಲ್ಲ.

By Praveen

ಅಡ್ವೆಂಚರ್‌ನಲ್ಲಿ ಭಾಗವಹಿಸುವಾಗ ಸಾಕಷ್ಟು ಎಚ್ಚರಿಕೆ ವಹಿಸುವುದು ಒಳಿತು. ಇಲ್ಲವಾದ್ರೆ ಒಂದು ಸಣ್ಣ ತಪ್ಪು ಕೂಡಾ ಪ್ರಾಣಕ್ಕೆ ಕುತ್ತು ತರುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದಕ್ಕೆ ತಾಜಾ ಉದಾಹರಣೆ ಅಂದ್ರೆ ಪಂಜಾಬ್‌ನ ಪಿಂಜೋರ್ ನಗರದಲ್ಲಿ ನಡೆದ ಈ ಘಟನೆಯೇ ಸಾಕ್ಷಿ.

ಗೋ ಕಾರ್ಟ್ ಅಡ್ವೆಂಚರ್ ವೇಳೆ ದುರಂತ- ತಲೆಗೂದಲು ಸಿಲುಕಿ 28 ವರ್ಷದ ಮಹಿಳೆ ಸಾವು..

ಬಥಿಂಡಾ ಮೂಲದ ಮಹಿಳೆಯೊಬ್ಬರು ಗೋ ಕಾರ್ಟ್ ಅಡ್ವೆಂಚರ್‌ಗೆ ಹೋದಾಗ ಚಕ್ರಕ್ಕೆ ಕೂದಲು ಸಿಲುಕಿಕೊಂಡು ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದ್ದು, 28 ವರ್ಷದ ಪುನೀತ್ ಕೌರ್ ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

Recommended Video

New Maruti Swift Launch: Price; Mileage; Specifications; Features; Changes
ಗೋ ಕಾರ್ಟ್ ಅಡ್ವೆಂಚರ್ ವೇಳೆ ದುರಂತ- ತಲೆಗೂದಲು ಸಿಲುಕಿ 28 ವರ್ಷದ ಮಹಿಳೆ ಸಾವು..

ಪಿಂಜೋರ್‍‌ನಲ್ಲಿರುವ ಯಾದವಿಂದ್ರ ಉದ್ಯಾನವನದ ಪಕ್ಕದ ಅಮ್ಯೂಸ್ ಮೆಂಟ್ ಪಾರ್ಕ್‍ನಲ್ಲೇ ಈ ಘಟನೆ ನಡೆದಿದ್ದು, ಕುಟುಂಬ ಸಮೇತರಾಗಿ ಗೋ ಕಾರ್ಟ್ ಅಡ್ವೆಂಚರ್‌ನಲ್ಲಿ ಭಾಗವಹಿಸಿದ್ದಾಗ ಈ ದುರಂತ ನಡೆದಿದೆ.

ಗೋ ಕಾರ್ಟ್ ಅಡ್ವೆಂಚರ್ ವೇಳೆ ದುರಂತ- ತಲೆಗೂದಲು ಸಿಲುಕಿ 28 ವರ್ಷದ ಮಹಿಳೆ ಸಾವು..

ಮೃತ ಪುನೀತ್ ಕೌರ್ ಬಥಿಂಡಾದ ರಾಮ್‍ಪುರ ಪೂಲ್ ನ ನಿವಾಸಿಯಾಗಿದ್ದು, ಪತಿ ಅಮರ್‍‌ದೀಪ್ ಎರಡು ವರ್ಷದ ಮಗು ಮತ್ತು ಇತರೆ ಕುಟುಂಬ ಸದಸ್ಯರ ಜೊತೆ ಬಂದಿದ್ದರು. ಆದ್ರೆ ದುರ್ದೈವ ಗೋ ಕಾರ್ಟ್‌ಗೆ ತಲೆಗೂದಲು ಸಿಕ್ಕಿಗೊಂಡು ಮಹಿಳೆಯ ಜೀವವನ್ನೇ ಪಡೆದಿದೆ.

ಗೋ ಕಾರ್ಟ್ ಅಡ್ವೆಂಚರ್ ವೇಳೆ ದುರಂತ- ತಲೆಗೂದಲು ಸಿಲುಕಿ 28 ವರ್ಷದ ಮಹಿಳೆ ಸಾವು..

ಕುಟುಂಬ ಸಮೇತರಾಗಿ ಬಂದಿದ್ದ ಪುನೀತ್ ಕೌರ್ ಮತ್ತು ಅಮರ್‌ದೀಪ್ ದಂಪತಿ ಘಟನೆಗೂ ಮುನ್ನ ಒಟ್ಟು ಎರಡು ಗೋ ಕಾರ್ಟ್‍ಗಳನ್ನು ಬುಕ್ ಮಾಡಿದ್ದರು. ಒಂದರಲ್ಲಿ ಪುನೀತ್ ಕೌರ್ ಮತ್ತು ಪತಿ ಹಾಗೂ ಮತ್ತೊಂದರಲ್ಲಿ ಮೊಮ್ಮಗ ಹಾಗೂ ಅಜ್ಜಿ ಕುಳಿತುಕೊಂಡಿದ್ದರು.

ಗೋ ಕಾರ್ಟ್ ಅಡ್ವೆಂಚರ್ ವೇಳೆ ದುರಂತ- ತಲೆಗೂದಲು ಸಿಲುಕಿ 28 ವರ್ಷದ ಮಹಿಳೆ ಸಾವು..

ಮೊದಲು ಒಂದೆರಡು ಸುತ್ತು ಸುತ್ತಾಡಿದ ನಂತರ ಈ ಅವಘಡ ನಡೆದಿದ್ದು, ಪುನೀತ್ ಕೌರ್ ತಲೆಗೂದಲು ಗೋ ಕಾರ್ಟ್‍ನ ಚಕ್ರಕ್ಕೆ ಸಿಲುಕಿಕೊಂಡಿದೆ. ಪರಿಣಾಮ ವೇಗದಲ್ಲಿದ್ದ ಗೋ ಕಾರ್ಟ್ ಚಕ್ರದಲ್ಲಿ ಮಹಿಳೆಯ ತಲೆಯ ಚರ್ಮವೇ ಕಿತ್ತು ಬಂದಿದೆ.

ಗೋ ಕಾರ್ಟ್ ಅಡ್ವೆಂಚರ್ ವೇಳೆ ದುರಂತ- ತಲೆಗೂದಲು ಸಿಲುಕಿ 28 ವರ್ಷದ ಮಹಿಳೆ ಸಾವು..

ತಕ್ಷಣವೇ ಗೋ ಕಾರ್ಟ್ ನಿಲ್ಲಿಸಿದ ಪತಿ ಅಮರ್‌ದೀಪ್ ಸ್ಥಳೀಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ. ಆದ್ರೆ ಗಂಭೀರವಾಗಿ ಗಾಯಗೊಂಡಿದ್ದ ಪುನೀತ್ ಕೌರ್ ಚಿಕಿತ್ಸೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ.

ಗೋ ಕಾರ್ಟ್ ಅಡ್ವೆಂಚರ್ ವೇಳೆ ದುರಂತ- ತಲೆಗೂದಲು ಸಿಲುಕಿ 28 ವರ್ಷದ ಮಹಿಳೆ ಸಾವು..

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿರುವ ಪಿಂಜೋರ್ ನಗರ ಪೊಲೀಸರು ಘಟನೆಗೆ ನಿಖರ ಏನು ಎನ್ನುವ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು, ಗೋ ಕಾರ್ಟ್ ಅಡ್ವೆಂಚರ್ ಬಗ್ಗೆ ಎಚ್ಚರಿಕೆ ವಹಿಸುವಂತೆ ಪ್ರವಾಸಿಗರಿಗೆ ಮನವಿ ಮಾಡಿದ್ದಾರೆ.

Trending On DriveSpark Kannada:

ಸದ್ಯದಲ್ಲೇ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

ಬರ್ತ್ ಡೇ ಸ್ಪೆಷಲ್- ನಟ ದರ್ಶನ್‌ಗೆ ಸಿಕ್ತು ಭರ್ಜರಿ ಉಡುಗೊರೆ..!!

20 ಕೋಟಿಯ ಆ ಕಾರಿಗೆ 25 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಪೆಷಲ್ ಪೇಂಟ್..

More from DriveSpark

Article Published On: Friday, February 16, 2018, 18:32 [IST]
English summary
Woman Killed In Freak Accident After Hair Gets Tangled In Go Kart Wheel.
Read more on accident off beat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+