ನಡು ರಸ್ತೆಯಲ್ಲೇ ಕಿತ್ತಾಟ- ವೃದ್ಧ ಕ್ಯಾಬ್ ಚಾಲಕನ ಮೇಲೆ ಹಲ್ಲೆ ಮಾಡಿದ ಯುವತಿಯ ವಿಡಿಯೋ ವೈರಲ್
ಕಾರಿನ ಮಿರರ್ ಟಚ್ ಆಗಿದ್ದಕ್ಕೆ ವೃದ್ದ ಕ್ಯಾಬ್ ಚಾಲಕನ ಮೇಲೆ ಯುವತಿಯೊಬ್ಬಳು ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಜನ ದಟ್ಟಣೆ ರಸ್ತೆಗಳು ಅಂದ ಮೇಲೆ ಸಣ್ಣ ಪುಟ್ಟ ಅಪಘಾತಗಳು ಕಾಮನ್. ಆದ್ರೆ ಕೆಲ ಬಾರಿ ಸಣ್ಣ ಪುಟ್ಟ ವಿಚಾರಗಳೇ ದೊಡ್ಡ ಸುದ್ದಿಗಳಾಗಿ ಬಿಡುತ್ತವೆ. ಇಲ್ಲೂ ಕೂಡಾ ಅಂತದ್ದೇ ಒಂದು ಪ್ರಕರಣ ನಡೆದಿದ್ದು, ಕಾರಿನ ಮಿರರ್ ಟಚ್ ಆಗಿದ್ದಕ್ಕೆ ವೃದ್ದ ಕ್ಯಾಬ್ ಚಾಲಕನ ಮೇಲೆ ಯುವತಿಯೊಬ್ಬಳು ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಕಾರಿನ ಮಿರರ್ ಕೈಗೆ ಟಚ್ ಆದ ಹಿನ್ನೆಲೆ ನಡುರಸ್ತೆಯಲ್ಲೇ ಕ್ಯಾಬ್ ತಡೆ ಹಿಡಿದ ಯುವತಿ ವೃದ್ಧ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ತದನಂತರ ಮಾತಿ ಮಾತಿಗೆ ಬೆಳೆದಿದ್ದು, ಈ ವೇಳೆ ಯುವತಿ ವೃದ್ಧ ಚಾಲಕನ ಕೆನ್ನೆಗೆ ಬಾರಿಸಿದ್ದಾಳೆ.

ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಯುವತಿಯು ವೃದ್ದನ ಹಲ್ಲೆ ಮಾಡುತ್ತಿರುವುದನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Recommended Video


ವಿಡಿಯೋದಲ್ಲಿನ ಮಾಹಿತಿ ಪ್ರಕಾರ ಈ ಘಟನೆಯು ಫಿಲಿಫೀನ್ಸ್‌ನ ಮನಾಯ್ ನಗರದಲ್ಲಿ ನಡೆದಿದ್ದು, ಯುವತಿ ಕೈಗೆ ಕ್ಯಾಬ್ ಮಿರರ್ ಟಚ್ ಆಗಿದ್ದಕ್ಕೆ ನಡೆದ ಹಲ್ಲೆ ಎನ್ನಲಾಗಿದೆ.

ಇನ್ನು ಹಲ್ಲೆಗೆ ಒಳಗಾದ ವೃದ್ದ ಕ್ಯಾಬ್ ಚಾಲಕ ಯುವತಿ ವರ್ತನೆಯಿಂದ ಕಂಗಾಲಾಗಿದ್ದಲ್ಲದೇ ರಸ್ತೆ ಬಳಿ ಕುಳಿತು ಸುಧಾರಿಸಿಕೊಂಡಿದ್ದಾನೆ. ನಂತರ ಸಾರ್ವಜನಿಕರ ಮಧ್ಯ ಪ್ರವೇಶದಿಂದ ಜಗಳ ಶಮನವಾಗಿದ್ದು, ಯುವತಿಯ ವರ್ತನೆ ಬಗ್ಗೆ ಸಾಮಾಜಿಕ ಭಾರೀ ಆಕ್ರೋಶ ವ್ಯಕ್ತವಾಗಿದೆ.
ತಪ್ಪದೇ ಓದಿ-2017ರಲ್ಲಿ ಬಿಡುಗಡೆಯಾದ ಟಾಪ್ 10 ಕಾರುಗಳ ಸಮಗ್ರ ಮಾಹಿತಿ ಇಲ್ಲಿದೆ....

ಇನ್ನು ಘಟನೆಯಿಂದ ಸ್ಥಳದಲ್ಲೇ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದಲ್ಲದೇ ಯುವತಿಯ ವರ್ತನೆ ಕಂಡು ಅಲ್ಲಿದ್ದ ಜನ ಬೈಯ್ದುಕೊಂಡಿದ್ದು ಮಾತ್ರ ಸುಳ್ಳಲ್ಲ..
Trending DriveSpark YouTube Videos
Subscribe To DriveSpark Kannada YouTube Channel - Click Here


Click it and Unblock the Notifications








