2017ರಲ್ಲಿ ಬಿಡುಗಡೆಯಾದ ಟಾಪ್ 10 ಕಾರುಗಳ ಸಮಗ್ರ ಮಾಹಿತಿ ಇಲ್ಲಿದೆ....

ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಂಡಿರುವ ಪ್ರಮುಖ ವಾಹನ ಸಂಸ್ಥೆಗಳು 2017ನೇ ಸಾಲಿನಲ್ಲಿ ಅನೇಕ ಕಾರುಗಳನ್ನು ಬಿಡುಗಡೆಗೊಳಿಸಿದೆ. ಈ ಪೈಕಿ ಜನ ಮನ ಗೆದ್ದಿರುವ ಅಗ್ರ 10 ಕಾರುಗಳ ಬಗ್ಗೆ ನಾವಿಲ್ಲಿ ಚರ್ಚಿಸುವ ಪ್ರಯತ್ನ ಮಾಡಿದ್ದೇವೆ.

By Praveen

ನೋಡ ನೋಡುತ್ತಿರುವಂತಲೇ ಕಾಲ ಚಕ್ರ ಮಗದೊಂದು ವರ್ಷವನ್ನು ಕ್ರಮಿಸಿರುತ್ತದೆ. 2017ನೇ ಸಾಲಿನಲ್ಲಿ ವಾಹನೋದ್ಯಮವು ಹತ್ತು ಹಲವು ಬದಲಾವಣೆಗಳನ್ನು ಕಂಡಿದ್ದು, ಬಹುತೇಕ ಮುಂಚೂಣಿ ವಾಹನ ಉತ್ಪಾದನಾ ಸಂಸ್ಥೆಗಳು ಭಾರತವನ್ನೇ ತನ್ನ ಕೇಂದ್ರ ಬಿಂದುವನ್ನಾಗಿಸಿದೆ.

ಹೀಗಾಗಿ ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಂಡಿರುವ ಪ್ರಮುಖ ವಾಹನ ಸಂಸ್ಥೆಗಳು 2017ನೇ ಸಾಲಿನಲ್ಲಿ ಅನೇಕ ಕಾರುಗಳನ್ನು ಬಿಡುಗಡೆಗೊಳಿಸಿದೆ. ಈ ಪೈಕಿ ಜನ ಮನ ಗೆದ್ದಿರುವ ಅಗ್ರ 10 ಕಾರುಗಳ ಬಗ್ಗೆ ನಾವಿಲ್ಲಿ ಚರ್ಚಿಸುವ ಪ್ರಯತ್ನ ಮಾಡಿದ್ದೇವೆ.

2017ರಲ್ಲಿ ಬಿಡುಗಡೆಯಾದ ಟಾಪ್ 10 ಕಾರುಗಳ ಸಮಗ್ರ ಮಾಹಿತಿ ಇಲ್ಲಿದೆ...

01. ಜೀಪ್ ಕಂಪಾಸ್

ಪೂರ್ಣ ಪ್ರಮಾಣದಲ್ಲಿ ಮೊದಲ ಬಾರಿಗೆ ದೇಶಿಯವಾಗಿ ಉತ್ಪಾದನೆಗೊಂಡಿರುವ ಜೀಪ್ ಕಂಪಾಸ್ ಎಸ್‌ಯುವಿ ಕಾರು ಮಾದರಿಗಳು ಕಳೆದ ಜುಲೈ 31ರಂದು ಭಾರತದಲ್ಲಿ ಬಿಡುಗಡೆಗೆಗೊಂಡಿದ್ದು, ಬೆಲೆಗಳ ವಿಚಾರವಾಗಿ ಭಾರೀ ಸದ್ದು ಮಾಡುತ್ತಿದೆ.

2017ರಲ್ಲಿ ಬಿಡುಗಡೆಯಾದ ಟಾಪ್ 10 ಕಾರುಗಳ ಸಮಗ್ರ ಮಾಹಿತಿ ಇಲ್ಲಿದೆ...

ಈ ಮೂಲಕ ಜೀಪ್ ಸಂಸ್ಥೆಯ ಕಂಪಾಸ್ ಎಸ್‌ಯುವಿ ಮಾದರಿಯೂ ಗ್ರಾಹಕರು ನೀರಿಕ್ಷಿಸಿದ್ದಕ್ಕಿಂತ ಕಡಿಮೆ ಬೆಲೆಗಳಿಗೆ ಬಿಡುಗಡೆಗೊಂಡಿದ್ದು, ಎಕ್ಸ್‌ಶೋರಂ ಪ್ರಕಾರ ಆರಂಭಿಕ ಕಾರು ಮಾದರಿಯ ಬೆಲೆ ರೂ.14.19 ಲಕ್ಷಕ್ಕೆ ಮತ್ತು ಉನ್ನತ ಶ್ರೇಣಿಯ ಕಾರಿನ ಬೆಲೆ ರೂ.20.65 ಲಕ್ಷಕ್ಕೆ ಮಾರಾಟಗೊಳ್ಳುತ್ತಿವೆ.

ಹೆಚ್ಚಿನ ಮಾಹಿತಿಗಾಗಿ-ಅತ್ಯುತ್ತಮ ಬೆಲೆಗಳಿಗೆ ಬಿಡುಗಡೆಯಾದ 'ಮೇಡ್ ಇನ್ ಇಂಡಿಯಾ' ಜೀಪ್ ಕಂಪಾಸ್

2017ರಲ್ಲಿ ಬಿಡುಗಡೆಯಾದ ಟಾಪ್ 10 ಕಾರುಗಳ ಸಮಗ್ರ ಮಾಹಿತಿ ಇಲ್ಲಿದೆ...

02. ಮಾರುತಿ ಸುಜುಕಿ ಡಿಜೈರ್

ಇತ್ತೀಚಿಗಷ್ಟೇ ಭಾರತದಲ್ಲಿ ಬಿಡುಗಡೆಗೊಂಡ ಹೊಸ ಮಾರುತಿ ಡಿಜೈರ್ ಕಾರು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಪ್ರತಿಯೊಬ್ಬರಿಂದಲೂ ಅತ್ಯದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.

2017ರಲ್ಲಿ ಬಿಡುಗಡೆಯಾದ ಟಾಪ್ 10 ಕಾರುಗಳ ಸಮಗ್ರ ಮಾಹಿತಿ ಇಲ್ಲಿದೆ...

ಭಾರತೀಯರ ಮನಗೆದ್ದಿರುವ ಮಾರುತಿ ಸುಜುಕಿ ಸಂಸ್ಥೆಯು ತನ್ನ ಹೊಚ್ಚ ಹೊಸ ಮಾದರಿಯ ಡಿಜೈರ್ ಕಾರನ್ನು ಆರಂಭಿಕ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.5.54ಲಕ್ಷಕ್ಕೆ ನಿಗದಿ ಮಾಡಿದ್ದು, ಉನ್ನತ ಮಾದರಿಯನ್ನು 9.41 ಲಕ್ಷಕ್ಕೆ ನಿಗದಿ ಮಾಡಿ ಮಾರಾಟ ಮಾಡುತ್ತಿದೆ.

ಹೆಚ್ಚಿನ ಮಾಹಿತಿಗಾಗಿ-ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಮಾರುತಿ ವಿನೂತನ ಡಿಜೈರ್..!!

2017ರಲ್ಲಿ ಬಿಡುಗಡೆಯಾದ ಟಾಪ್ 10 ಕಾರುಗಳ ಸಮಗ್ರ ಮಾಹಿತಿ ಇಲ್ಲಿದೆ...

03. ಟಾಟಾ ನೆಕ್ಸನ್

ಕಳೆದ 2 ತಿಂಗಳ ಹಿಂದಷ್ಟೇ ಟಾಟಾ ನೆಕ್ಸನ್ ಭಾರತದಲ್ಲಿ ಬಿಡುಗಡೆಯಾಗಿದ್ದು, ಹೊಚ್ಚ ಹೊಸ ಟಾಟಾ ನೆಕ್ಸನ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ಈ ಕಾರಿನ ಪೆಟ್ರೋಲ್ ಆವೃತಿಯು ರೂ. 5.85 ಲಕ್ಷ ಮತ್ತು ಡೀಸೆಲ್ ಮಾದರಿಯು ರೂ. 6.85 ಲಕ್ಷ (ಬೇಸ್ ರೂಪಾಂತರ) ಎಕ್ಸ್ ಶೋರೂಂ(ದೆಹಲಿ) ಬೆಲೆ ಪಡೆದುಕೊಂಡಿದೆ.

Recommended Video

Horrifying Footage Of A Cargo Truck Going In Reverse, Without A Driver - DriveSpark
2017ರಲ್ಲಿ ಬಿಡುಗಡೆಯಾದ ಟಾಪ್ 10 ಕಾರುಗಳ ಸಮಗ್ರ ಮಾಹಿತಿ ಇಲ್ಲಿದೆ...

ಸಬ್ ಕಂಪಾಂಕ್ಟ್ ಟಾಟಾ ನೆಕ್ಸನ್ ಕಾರಿನ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳು XE, XM, XT ಮತ್ತು XZ+ ಎಂಬ ನಾಲ್ಕು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದ್ದು, ಗ್ರಾಹಕರು ತಮಗಿಷ್ಟವಾದ ಮಾದರಿಯನ್ನು ಆಯ್ದುಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ-ಟಾಟಾ ನೆಕ್ಸನ್ ಕಾರಿನ ಮೊದಲ ಚಾಲನಾ ವಿಮರ್ಶೆಯ ಕಂಪ್ಲೀಟ್ ಡೀಟೇಲ್ಸ್

2017ರಲ್ಲಿ ಬಿಡುಗಡೆಯಾದ ಟಾಪ್ 10 ಕಾರುಗಳ ಸಮಗ್ರ ಮಾಹಿತಿ ಇಲ್ಲಿದೆ...

04. ಹ್ಯುಂಡೈ ವೆರ್ನಾ

ಮೂರನೆಯ ತಲೆಮಾರಿನ ನೂತನ ಹ್ಯುಂಡೈ ಎಕ್ಸಿಕ್ಯೂಟಿವ್ ಸೆಡಾನ್ ವೆರ್ನಾ ಕಾರು ಕಳೆದ ಆಗಸ್ಟ್‌ನಲ್ಲಿ ಭಾರತದಲ್ಲಿ ಅನಾವರಣಗೊಂಡಿದ್ದು, ಈ ಕಾರು ಹೋಂಡಾ ಕಂಪನಿಯ ಸಿಟಿ, ಮಾರುತಿ ಸುಜುಕಿ ಸಿಯಾಜ್ ಎಸ್ ಕಾರುಗಳೊಂದಿಗೆ ತೀವ್ರ ಪೈಪೋಟಿ ನಡೆಸುತ್ತಿದೆ.

2017ರಲ್ಲಿ ಬಿಡುಗಡೆಯಾದ ಟಾಪ್ 10 ಕಾರುಗಳ ಸಮಗ್ರ ಮಾಹಿತಿ ಇಲ್ಲಿದೆ...

ನೂತನ ಹ್ಯುಂಡೈ ಎಕ್ಸಿಕ್ಯೂಟಿವ್ ಸೆಡಾನ್ ವೆರ್ನಾ ಕಾರು ಮಾದರಿಯು ಈ ಹಿಂದಿನ ಸೆಡಾನ್ ಮಾದರಿಗಳಿಂತಲೂ ಹೆಚ್ಚಿನ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಆರಂಭಿಕ ಬೆಲೆ 7.99 ಲಕ್ಷ ಹಾಗೂ ಉನ್ನತ ಮಾದರಿಯ ಬೆಲೆ ರೂ.12.39 ಲಕ್ಷಕ್ಕೆ ಲಭ್ಯವಿರಲಿದೆ.

ಹೆಚ್ಚಿನ ಮಾಹಿತಿಗಾಗಿ-ಹ್ಯುಂಡೈ ವೆರ್ನಾ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ರೂ.7.99 ಲಕ್ಷ

2017ರಲ್ಲಿ ಬಿಡುಗಡೆಯಾದ ಟಾಪ್ 10 ಕಾರುಗಳ ಸಮಗ್ರ ಮಾಹಿತಿ ಇಲ್ಲಿದೆ...

05. ರೆನಾಲ್ಟ್ ಕ್ಯಾಪ್ಚರ್

ದೇಶದಲ್ಲಿ ಅತಿ ಶೀಘ್ರವಾಗಿ ಬೆಳೆಯುತ್ತಿರುವ ಆಟೋಮೋಟಿವ್‌ ಬ್ರ್ಯಾಂಡ್‌ಗಳಲ್ಲೊಂದಾದ ರೆನಾಲ್ಟ್ ಇಂಡಿಯಾ ಸಂಸ್ಥೆಯು ಪ್ರೀಮಿಯಂ ಎಸ್‌ಯುವಿ ಸರಣಿಯಲ್ಲಿ "ರೆನೋ ಕ್ಯಾಪ್ಚರ್‌' ಕಾರನ್ನು ಕಳೆದ ತಿಂಗಳವಷ್ಟೇ ಬಿಡುಗಡೆ ಮಾಡಿದ್ದು, ವಿವಿಧ 7 ವೆರಿಯಂಟ್ ಹಾಗೂ 5 ಬಣ್ಣಗಳಲ್ಲಿ ಆಯ್ಕೆ ಮಾಡಬಹುದಾಗಿದೆ.

2017ರಲ್ಲಿ ಬಿಡುಗಡೆಯಾದ ಟಾಪ್ 10 ಕಾರುಗಳ ಸಮಗ್ರ ಮಾಹಿತಿ ಇಲ್ಲಿದೆ...

ಆಲ್ ವಿಲ್ಹ್ ಡ್ರೈವ್ ಮಾಡುವಂತಹ ಸೌಲಭ್ಯ ರೆನಾಲ್ಟ್ ಕ್ಯಾಪ್ಚರ್ ಎಸ್‌ಯುವಿ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯವನ್ನು ಶುರು ಮಾಡಿದ್ದು, ಹೊಸ ಕಾರಿನ ಆರಂಭಿಕ ಬೆಲೆಯು ರೂ.9.99 ಲಕ್ಷಕ್ಕೆ ಹಾಗೂ ಟಾಪ್ ವೆರಿಯಂಟ್ ರೂ.13.88 ಲಕ್ಷಕ್ಕೆ ಲಭ್ಯವಾಗಿದೆ.

ಹೆಚ್ಚಿನ ಮಾಹಿತಿಗಾಗಿ-ರೂ.9.99 ಲಕ್ಷ ಆರಂಭಿಕ ಬೆಲೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ರೆನಾಲ್ಟ್ ಕ್ಯಾಪ್ಚರ್

2017ರಲ್ಲಿ ಬಿಡುಗಡೆಯಾದ ಟಾಪ್ 10 ಕಾರುಗಳ ಸಮಗ್ರ ಮಾಹಿತಿ ಇಲ್ಲಿದೆ...

06. ಟಾಟಾ ಹೆಕ್ಸಾ

ಸಾಧಾರಣ ಟಾಟಾ ಕಾರುಗಿಂತಲೂ ವಿಭಿನ್ನವಾಗಿ ಹೆಚ್ಚು ಪರಿಣಾಮಕಾರಿ, ಸ್ಪಷ್ಟತೆಯ ವಿನ್ಯಾಸವು ಟಾಟಾ ಹೆಕ್ಸಾದಲ್ಲಿ ನಿಮ್ಮ ಅನುಭವಕ್ಕೆ ಬರಲಿದೆ. ಎಕ್ಸ್ಈ, ಎಕ್ಸ್ಎಂ, ಎಕ್ಸ್ ಟಿ, ಎಕ್ಸ್ಎಂಎ, ಎಕ್ಸ್ ಟಿಎ ಮತ್ತು ಎಕ್ಸ್ ಟಿ ಎಂಬ ಆರು ವಿಧಗಳಲ್ಲಿ ಖರೀದಿಗೆ ಲಭ್ಯವಿದೆ.

2017ರಲ್ಲಿ ಬಿಡುಗಡೆಯಾದ ಟಾಪ್ 10 ಕಾರುಗಳ ಸಮಗ್ರ ಮಾಹಿತಿ ಇಲ್ಲಿದೆ...

ಹೊಚ್ಚ ಹೊಸ ಹೆಕ್ಸಾ ನೆಕ್ಸ್ಟ್ ಜನರೇಷನ್ ಆವೃತ್ತಿಯು 2.2-ಲೀಟರ್ ವ್ಯಾರಿಕೋರ್ ಎಂಜಿನ್ ಹೊಂದಿದ್ದು, ಆರಂಭಿಕ ಮಾದರಿಯ ಕಾರಿನ ಬೆಲೆಯು 11.77 ಲಕ್ಷ ಮತ್ತು ಉನ್ನತ ಆವೃತ್ತಿ ರೂ.17.11 ಲಕ್ಷಕ್ಕೆ ಖರೀದಿಸಬಹುದು.

ಹೆಚ್ಚಿನ ಮಾಹಿತಿಗಾಗಿ-ಅಪನಗದೀಕರಣ ಅವಧಿಯಲ್ಲೂ ಟಾಟಾ ಹೆಕ್ಸಾ ಭರ್ಜರಿ ಮಾರಾಟ

2017ರಲ್ಲಿ ಬಿಡುಗಡೆಯಾದ ಟಾಪ್ 10 ಕಾರುಗಳ ಸಮಗ್ರ ಮಾಹಿತಿ ಇಲ್ಲಿದೆ...

07. ಫೋರ್ಡ್ ಇಕೋಸ್ಪೋರ್ಟ್ ಫೇಸ್‌ಲಿಫ್ಟ್

ಅಮೆರಿಕ ಮೂಲದ ಮುಂಚೂಣಿಯ ವಾಹನ ಉತ್ಪಾದನಾ ಸಂಸ್ಥೆಯಾದ ಫೋರ್ಡ್ ತನ್ನ ಜನಪ್ರಿಯ ಇಕೋಸ್ಪೋರ್ಟ್ ಫೇಸ್‌ಲಿಫ್ಟ್ ಮಾದರಿಯನ್ನ ಹೊಸ ರೂಪದೊಂದಿದೆ ಪರಿಚಯಿಸಿದ್ದು, ಹೊಸ ಕಾರಿನ ಆರಂಭಿಕ ಬೆಲೆಯನ್ನು ರೂ. 7.31 ಲಕ್ಷಕ್ಕೆ ಹಾಗೂ ಟಾಪ್ ವೆರಿಯಂಟ್ ಮಾದರಿಯನ್ನು ರೂ. 10.67 ಲಕ್ಷಕ್ಕೆ ನಿಗದಿ ಮಾಡಿದೆ.

2017ರಲ್ಲಿ ಬಿಡುಗಡೆಯಾದ ಟಾಪ್ 10 ಕಾರುಗಳ ಸಮಗ್ರ ಮಾಹಿತಿ ಇಲ್ಲಿದೆ...

ಫೋರ್ಡ್ ಪರಿಚಯಿಸಿರುವ ಫೇಸ್‌ಲಿಫ್ಟ್ ಇಕೋಸ್ಪೋರ್ಟ್‌ ಕಾರುಗಳು ಡೀಸೆಲ್ ಮತ್ತು ಪೆಟ್ರೋಲ್ ಆವೃತ್ತಿಯಲ್ಲಿ ಖರೀದಿ ಲಭ್ಯವಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ 10 ಪ್ರಮುಖ ಮಾದರಿಗಳನ್ನು ಅಭಿವೃದ್ಧಿ ಮಾಡಿದೆ.

ಹೆಚ್ಚಿನ ಮಾಹಿತಿಗಾಗಿ-ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಫೋರ್ಡ್ ಇಕೋಸ್ಪೋರ್ಟ್ ಫೇಸ್‌ಲಿಫ್ಟ್

2017ರಲ್ಲಿ ಬಿಡುಗಡೆಯಾದ ಟಾಪ್ 10 ಕಾರುಗಳ ಸಮಗ್ರ ಮಾಹಿತಿ ಇಲ್ಲಿದೆ...

08. ಹೋಂಡಾ ಡಬ್ಲ್ಯುಆರ್-ವಿ

ಹೋಂಡಾ ಸಂಸ್ಥೆ ಬಿಡುಗಡೆ ಮಾಡಿರುವ ಡಬ್ಲ್ಯುಆರ್-ವಿ ಕಾರು ವಿಶಿಷ್ಟ ವಿನ್ಯಾಸವನ್ನು ಹೊಂದಿದ್ದು, ನಗರ ಪ್ರದೇಶದಲ್ಲಿರುವ ಯುವ ಪೀಳಿಗೆಯ ಗ್ರಾಹಕರಿಗಾಗಿ ಹೊಸ ಕಾರನ್ನು ಅಭಿವೃದ್ಧಿ ಮಾಡಲಾಗಿದ್ದು, ರೂ. 9.99 ಲಕ್ಷ ರೂ. (ಡೀಸೆಲ್) ಹಾಗೂ 8.99 ಲಕ್ಷ ರೂ. (ಪೆಟ್ರೋಲ್) ಎಕ್ಸ್ ಶೋರೂಂ ಬೆಲೆ ನಿಗದಿ ಪಡಿಸಲಾಗಿದೆ.

2017ರಲ್ಲಿ ಬಿಡುಗಡೆಯಾದ ಟಾಪ್ 10 ಕಾರುಗಳ ಸಮಗ್ರ ಮಾಹಿತಿ ಇಲ್ಲಿದೆ...

ಡೀಸೆಲ್ ವಿಭಾಗದಲ್ಲಿ ಪ್ರತಿ ಲೀಟರ್​ಗೆ 25 ಕಿಮೀ ಹಾಗೂ ಪೆಟ್ರೋಲ್​ನಲ್ಲಿ 17.5 ಕಿಮೀ ಇಂಧನ ಕ್ಷಮತೆ ಹೊಂದಿದೆ. 1.5 ಲೀಟರ್ ಶಕ್ತಿಶಾಲಿ ಎಂಜಿನ್​ನೊಂದಿಗೆ ಕಾರು ಅಭಿವೃದ್ಧಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ- ವಿನೂತನ ಹೋಂಡಾ WR-V ಕಾರು- ಬಿಡುಗಡೆಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ..!!

2017ರಲ್ಲಿ ಬಿಡುಗಡೆಯಾದ ಟಾಪ್ 10 ಕಾರುಗಳ ಸಮಗ್ರ ಮಾಹಿತಿ ಇಲ್ಲಿದೆ...

09.ಮಾರುತಿ ಸುಜುಕಿ ಇಗ್ನಿಸ್ (ಎಎಂಟಿ)

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಾರುತಿ ಸುಜುಕಿ ಸಂಸ್ಥೆಯು ಇಗ್ನಿಸ್ ಆಲ್ಫಾ ಎಎಂಟಿ (ಆಟೋಮ್ಯಾಟಿಕ್ ಗೇರ್‌ಬಾಕ್ಸ್) ಆವೃತ್ತಿಯನ್ನು ಪರಿಚಯಿಸಿದ್ದು, ಆರಂಭಿಕ ಕಾರು ಮಾದರಿಯ ಬೆಲೆ ರೂ.7.02 ಲಕ್ಷಕ್ಕೆ ಲಭ್ಯವಿದೆ.

2017ರಲ್ಲಿ ಬಿಡುಗಡೆಯಾದ ಟಾಪ್ 10 ಕಾರುಗಳ ಸಮಗ್ರ ಮಾಹಿತಿ ಇಲ್ಲಿದೆ...

ಇಗ್ನಿಸ್ ಆಲ್ಫಾ ಎಎಂಟಿ ಆವೃತ್ತಿಯಲ್ಲೇ ಮತ್ತೇರಡು ಹೊಸ ಮಾದರಿಗಳು ಕೂಡಾ ಬಿಡುಗಡೆಯಾಗಿದ್ದು, ಉನ್ನತ ಶ್ರೇಣಿಯ ಪೆಟ್ರೋಲ್ ಕಾರಿನ ಬೆಲೆಯೂ ರೂ. 8,08,050 ಗಳಿಗೆ ಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ-ಮಾರುತಿ ಸುಜುಕಿ ಇಗ್ನಿಸ್ ಆಲ್ಫಾ ಎಎಂಟಿ ಆವೃತ್ತಿ ಬಿಡುಗಡೆ

2017ರಲ್ಲಿ ಬಿಡುಗಡೆಯಾದ ಟಾಪ್ 10 ಕಾರುಗಳ ಸಮಗ್ರ ಮಾಹಿತಿ ಇಲ್ಲಿದೆ...

10. ಸ್ಕೋಡಾ ಆಕ್ಟೀವಿಯಾ ಆರ್‌ಎಸ್

ಸ್ಕೋಡಾ ಇಂಡಿಯಾ ಸಂಸ್ಥೆಯು ಭಾರತದಲ್ಲಿ ತನ್ನ ಆಕ್ಟೇವಿಯಾ ಆರ್‌ಎಸ್ ಕಾರನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಬಿಡುಗಡೆಗೊಳಿಸಿದ್ದು, ಈ ಕಾರು ರೂ.24.62 ಲಕ್ಷ ಎಕ್ಸ್ ಶೋ ರೂಂ ಬೆಲೆ ಹೊಂದಿದೆ.

2017ರಲ್ಲಿ ಬಿಡುಗಡೆಯಾದ ಟಾಪ್ 10 ಕಾರುಗಳ ಸಮಗ್ರ ಮಾಹಿತಿ ಇಲ್ಲಿದೆ...

ಆಕ್ಟೇವಿಯಾ ಆರ್‌ಎಸ್ ಕಾರು, 2.0 ಲೀಟರ್ ಟಿಎಸ್ಐ ಎಂಜಿನ್ ಪಡೆದುಕೊಳ್ಳಲಿದ್ದು, ಈ ಎಂಜಿನ್ 350 ಎನ್ಎಂ ತಿರುಗುಬಲದಲ್ಲಿ 226 ಬಿಎಚ್‌ಪಿ ಶಕ್ತಿ ಉತ್ಪಾದನೆ ಮಾಡಲಿದೆ 6-ವೇಗ ಡಿಎಸ್‌ಜಿ ಗೇರ್ ಬಾಕ್ಸ್ ಅಳವಡಿಕೆಯೊಂದಿಗೆ ಬಿಡುಗಡೆಯಾಗಲಿದೆ.

ಹೆಚ್ಚಿನ ಮಾಹಿತಿಗಾಗಿ-ಸ್ಕೋಡಾ ಆಕ್ಟೇವಿಯಾ ಆರ್‌ಎಸ್ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ರೂ. 24.62 ಲಕ್ಷ

2017ರಲ್ಲಿ ಬಿಡುಗಡೆಯಾದ ಟಾಪ್ 10 ಕಾರುಗಳ ಸಮಗ್ರ ಮಾಹಿತಿ ಇಲ್ಲಿದೆ...

ಇವುಗಳಷ್ಟೇ ಅಲ್ಲದೇ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಗಳಾದ ಟೊಯೊಟಾ, ಮಹೀಂದ್ರಾ, ಫೋಕ್ಸ್‌ವ್ಯಾಗನ್, ಮರ್ಸಿಡಿಸ್ ಬೆಂಝ್, ಬಿಎಂಡಬ್ಲ್ಯು ನಿರ್ಮಾಣದ ಹಲವು ಕಾರು ಮಾದರಿಗಳು ಭಾರತೀಯ ಮಾರಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ನಿಮ್ಮ ನೆಚ್ಚಿನ ಕಾರುಗಳ ಬಗೆಗೆ ಓದುಗ ಮಿತ್ರರು ಮುಕ್ತವಾಗಿ ನಿಮ್ಮ ಅಭಿಪ್ರಾಯಗಳನ್ನು ಲೇಖನ ಕೆಳಗಿನ ಕಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಳ್ಳಬಹುದು.

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
Read more on flashback 2017 top 10
English summary
Read in Kannada about Best Cars Of 2017 In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X