ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಫೋರ್ಡ್ ಇಕೋಸ್ಪೋರ್ಟ್ ಫೇಸ್‌ಲಿಫ್ಟ್

ಫೋರ್ಡ್ ತನ್ನ ಜನಪ್ರಿಯ ಇಕೋಸ್ಪೋರ್ಟ್ ಫೇಸ್‌ಲಿಫ್ಟ್ ಮಾದರಿಯನ್ನ ಹೊಸ ರೂಪದೊಂದಿದೆ ಪರಿಚಯಿಸಿದ್ದು, ಹೊಸ ಕಾರಿನ ಆರಂಭಿಕ ಬೆಲೆಯನ್ನು ರೂ. 7.31 ಲಕ್ಷಕ್ಕೆ ಹಾಗೂ ಟಾಪ್ ವೆರಿಯಂಟ್ ಮಾದರಿಯನ್ನು ರೂ. 10.67 ಲಕ್ಷಕ್ಕೆ ನಿಗದಿ ಮಾಡಿದೆ.

By Praveen

ಅಮೆರಿಕ ಮೂಲದ ಮುಂಚೂಣಿಯ ವಾಹನ ಉತ್ಪಾದನಾ ಸಂಸ್ಥೆಯಾದ ಫೋರ್ಡ್ ತನ್ನ ಜನಪ್ರಿಯ ಇಕೋಸ್ಪೋರ್ಟ್ ಫೇಸ್‌ಲಿಫ್ಟ್ ಮಾದರಿಯನ್ನ ಹೊಸ ರೂಪದೊಂದಿದೆ ಪರಿಚಯಿಸಿದ್ದು, ಹೊಸ ಕಾರಿನ ಆರಂಭಿಕ ಬೆಲೆಯನ್ನು ರೂ. 7.31 ಲಕ್ಷಕ್ಕೆ ಹಾಗೂ ಟಾಪ್ ವೆರಿಯಂಟ್ ಮಾದರಿಯನ್ನು ರೂ. 10.67 ಲಕ್ಷಕ್ಕೆ ನಿಗದಿ ಮಾಡಿದೆ.

ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್

ಎಸ್‌ಯುವಿ ವಿಭಾಗದಲ್ಲಿ ಗ್ರಾಹಕನ್ನು ತನ್ನತ್ತ ಸೆಳೆಯಲು ಮುಂದಾಗಿರುವ ಫೋರ್ಡ್ ಸಂಸ್ಥೆಯು 2017 ಫೋರ್ಡ್ ಇಕೋಸ್ಪೋರ್ಟ್ ಮಾದರಿಯ ಅಂದತೆಯಲ್ಲಿ ಮಾತ್ರವಲ್ಲದೆ ಎಂಜಿನ್ ತಾಂತ್ರಿಕತೆಯಲ್ಲೂ ಗಮನಾರ್ಹ ಬದಲಾವಣೆಗಳು ತರುವ ಮೂಲಕ ಎಂಜಿನ್ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ.

ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್

ಫೋರ್ಡ್ ಪರಿಚಯಿಸಿರುವ ಫೇಸ್‌ಲಿಫ್ಟ್ ಇಕೋಸ್ಪೋರ್ಟ್‌ ಕಾರುಗಳು ಡೀಸೆಲ್ ಮತ್ತು ಪೆಟ್ರೋಲ್ ಆವೃತ್ತಿಯಲ್ಲಿ ಖರೀದಿ ಲಭ್ಯವಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ 10 ಪ್ರಮುಖ ಮಾದರಿಗಳನ್ನು ಅಭಿವೃದ್ಧಿ ಮಾಡಿದೆ.

ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್

ಹೊಸ ಕಾರಿನ ಬೆಲೆಗಳ ಸಂಪೂರ್ಣ ಮಾಹಿತಿ

ಇಕೋಸ್ಪೋರ್ಟ್ (ಪೆಟ್ರೋಲ್ ಕಾರುಗಳು) -ಬೆಲೆಗಳು

ಆ್ಯಂಬಿಯಂಟ್ ( ಮ್ಯಾನುವಲ್) - ರೂ. 7.31 ಲಕ್ಷ

ಟ್ರೆಂಡ್ (ಮ್ಯಾನುವಲ್) - ರೂ. 8.04 ಲಕ್ಷ

ಟ್ರೆಂಡ್ ಪ್ಲಸ್ (ಆಟೋಮ್ಯಾಟಿಕ್) -ರೂ. 9.34 ಲಕ್ಷ

ಟೈಟಾನಿಯಂ (ಮ್ಯಾನುವಲ್) -ರೂ. 9.17 ಲಕ್ಷ

ಟೈಟಾನಿಯಂ ಪ್ಲಸ್ (ಆಟೋಮ್ಯಾಟಿಕ್) -ರೂ. 10.99 ಲಕ್ಷ

ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್

ಇಕೋಸ್ಪೋರ್ಟ್( ಡೀಸೆಲ್ ಕಾರುಗಳು) -ಬೆಲೆಗಳು

ಆ್ಯಂಬಿಯಂಟ್ (ಮ್ಯಾನುವಲ್) - ರೂ. 8.01 ಲಕ್ಷ

ಟ್ರೆಂಡ್ (ಮ್ಯಾನುವಲ್) - ರೂ. 8.71 ಲಕ್ಷ

ಟ್ರೆಂಡ್ ಪ್ಲಸ್ (ಆಟೋಮ್ಯಾಟಿಕ್) - ರೂ. 9.10 ಲಕ್ಷ

ಟೈಟಾನಿಯಂ (ಮ್ಯಾನುವಲ್) - ರೂ. 9.85 ಲಕ್ಷ

ಟೈಟಾನಿಯಂ ಪ್ಲಸ್ (ಆಟೋಮ್ಯಾಟಿಕ್) - 10.67 ಲಕ್ಷ

ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್

ಎಂಜಿನ್ ಸಾಮರ್ಥ್ಯ

ಫೋರ್ಡ್ ಇಕೋಸ್ಪೋರ್ಟ್ ಹೊಸ ಕಾರುಗಳಲ್ಲಿ ಡಿಸೇಲ್ ಆವೃತ್ತಿಯು 1.5 ಲೀಟರ್ ತ್ರಿ ಸಿಲಿಂಡರ್ ಎಂಜಿನ್ ಹೊಂದಿದ್ದು, ಪೆಟ್ರೋಲ್ ಆವೃತ್ತಿ ಕೂಡಾ 1.5 ಲೀಟರ್ ತ್ರಿ ಸಿಲಿಂಡರ್ ಡ್ರ್ಯಾಗನ್ ಎಂಜಿನ್ ಪಡೆದುಕೊಂಡಿವೆ.

ತಪ್ಪದೇ ಓದಿ- ನೀವು ತಿಳಿದುಕೊಳ್ಳಬೇಕಾದ 8 ಟ್ರಾಫಿಕ್ ನಿಯಮಗಳು

ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್

ಇನ್ನು ಹೊಸ ಕಾರಿನ ಮುಂಭಾಗದಲ್ಲಿ ದೊಡ್ಡದಾದ ನವೀಕೃತ ಗ್ರಿಲ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್ ಜತೆಗೆ ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್, ಫಾಗ್ ಲ್ಯಾಂಪ್ಸ್, 17 ಇಂಚುಗಳ ಅಲಾಯ್ ಚಕ್ರಗಳು ಪ್ರಮುಖ ವೈಶಿಷ್ಟ್ಯಗಳಾಗಿವೆ.

ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್

ಕಾರಿನೊಳಗೆ ಎಂಟು ಇಂಚುಗಳ ತೇಲುವ ಟಚ್ ಸ್ಕ್ರೀನ್, ಸಿಂಕ್ 3 ಇನ್ಪೋಟೈನ್ಮೆಂಟ್ ಸಿಸ್ಟಂ, ಬ್ಲೂಟೂತ್, ಯುಎಸ್‌ಬಿ, ಆಕ್ಸ್, ಆಂಡ್ರಾಯ್ಡ್ ಆಟೋ, ಆ್ಯಪಲ್ ಕ್ಲಾರ್ ಪ್ಲೇ ಸಹ ಬೆಂಬಲಿಸಲಿದೆ. ಸಂಪೂರ್ಣ ಸೆಂಟ್ರಲ್ ಕನ್ಸಾಲ್ ತಾಜಾತನ ಪಡೆದಿದ್ದು, ಬೇಸ್ ವೆರಿಯಂಟ್‌ಗಳಲ್ಲಿ 6.5 ಇಂಚುಗಳ ಟಚ್ ಸ್ಕ್ರೀನ್ ಲಭ್ಯವಾಗಲಿದೆ.

ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್

ನೂತನ ಫೋರ್ಡ್ ಇಕೋಸ್ಪೋರ್ಟ್ ನಲ್ಲಿ ಫೋರ್ ಸಿಲಿಂಡರ್ 1.0 ಲೀಟರ್ ಇಕೊಬೂಸ್ಟ್ ಎಂಜಿನ್ ಬದಲಾಗಿ ನೂತನ 1.5 ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಕಂಡುಬರಲಿದೆ. ಹಾಗೆಯೇ ಆರು ಸ್ಪೀಡ್ ಡಿಸಿಟಿ (ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್) ಆಟೋಮ್ಯಾಟಿಕ್ ಬದಲಿಗೆ ನೂತನ ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇರಲಿದೆ. ಹೀಗಾಗಿ ಇದರ ಎಂಜಿನ್ 150ಎನ್ಎಂ ತಿರುಗುಬಲದಲ್ಲಿ 121ಬಿಎಚ್‌ಪಿ ಉತ್ಪಾದಿಸಲಿದೆ.

ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್

ಅಂತೆಯೇ 1.5 ಲೀಟರ್ ಡೀಸೆಲ್ ಎಂಜಿನ್ ಕೂಡಾ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದ್ದು, 205 ಎನ್‌ಎಂ ತಿರುಗುಬಲದಲ್ಲಿ 98.6 ಅಶ್ವಶಕ್ತಿ ಉತ್ಪಾದಿಸಲಿದೆ. ಹೀಗಾಗಿ ಡೀಸೆಲ್ ಎಂಜಿನ್‌ನಲ್ಲಿ ಬದಲಾವಣೆ ಕಂಡುಬಂದಿಲ್ಲ. ಆದ್ರೆ ಪ್ರತಿ ಲೀಟರ್‌ಗೆ 23 ಕೀ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್

ಇದರ ಜೊತೆಗೆ ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಆರು ಏರ್ ಬ್ಯಾಗ್, ಎಬಿಎಸ್ ಸ್ಟ್ಯಾಂಡರ್ಡ್ ಆಗಿ ಲಭ್ಯವಾಗಿದ್ದು, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲರ್, ತುರ್ತು ಬ್ರೇಕ್ ಸೌಲಭ್ಯ, ಇಬಿಡಿ, ಹಿಲ್ ಸ್ಟಾರ್ಟ್ ಅಸಿಸ್ಟ್ ಅನ್ನು ಕೂಡಾ ಒದಗಿಸಲಾಗಿದೆ.

ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್

ಲಭ್ಯವಿರುವ ಬಣ್ಣಗಳು

ಹೊಸ ಇಕೋಸ್ಪೋರ್ಟ್ ಕಾರುಗಳು ವಿವಿಧ 7 ಬಣ್ಣಗಳಲ್ಲಿ ಆಯ್ಕೆ ಮಾಡಬಹುದಾಗಿದ್ದು, ಲೈಟಿಂಗ್ ಬ್ಲೂ, ಕ್ಯಾನ್ಯಾನ್ ರಿಡ್ಜ್, ಡೈಮಂಡ್ ವೈಟ್, ಮೂನ್‌ಡಸ್ಟ್ ಸಿಲ್ವರ್, ರೇಸ್ ರೆಡ್, ಅಬ್ಸೊಲ್ಯೂಟ್ ಬ್ಲ್ಯಾಕ್ ಮತ್ತು ಸ್ಪೋಕ್ ಗ್ರೇ ನಲ್ಲಿ ಖರೀದಿ ಮಾಡಬಹುದಾಗಿದೆ.

ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್

ಪ್ರತಿಸ್ಪರ್ಧಿಗಳು:

ಸದ್ಯ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಎಸ್‌ಯುವಿಗಳಿಗೆ ಸಾಕಷ್ಟು ಬೇಡಿಕೆ ಇದ್ದು, ಈ ಹಿನ್ನೆಲೆ ಜನಪ್ರಿಯ ಮಾದರಿಗಳಾದ ಮಾರುತಿ ಸುಜುಕಿ ವಿಟಾರಾ ಬ್ರಿಝಾ, ರೆನಾಲ್ಟ್ ಡಸ್ಟರ್, ಟಾಟಾ ನೆಕ್ಸನ್ ಮಾದರಿಗಳು ಹೊಸ ಇಕೋ ಸ್ಪೋರ್ಟ್ ಮಾದರಿಗೆ ತೀವ್ರ ಸ್ಪರ್ಧೆ ಒಡ್ಡುವ ಸಾಧ್ಯತೆಗಳಿವೆ.

Trending On DriveSpark Kannada:

ವಾಹನ ಚಾಲನೆ ವೇಳೆ ಅಪ್ಪಿತಪ್ಪಿಯೂ ಈ ತಪ್ಪಗಳನ್ನು ಮಾಡಲೇಬೇಡಿ..!!

ಟೈರ್ ಸ್ಪೋಟಿಸಿದರೆ ಅಪಘಾತ ಖಚಿತ? ತಡೆಗಟ್ಟುವುದು ಹೇಗೆ?

Most Read Articles

Kannada
English summary
Read in Kannada about 2017 Ford EcoSport Facelift Launched At Rs 7.31 Lakh In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X