ನೀವು ತಿಳಿದುಕೊಳ್ಳಬೇಕಾದ 8 ಟ್ರಾಫಿಕ್ ನಿಯಮಗಳು

Written By:

ಸಿಗ್ನಲ್ ಗಳಲ್ಲಿ ಉರಿಯುತ್ತಿರುವ ಕೆಂಪು ದೀಪ ಹಾಗೂ ಸೀಟು ಬೆಲ್ಟ್ ಧರಿಸುವುದು ಮಾತ್ರ ಟ್ರಾಫಿಕ್ ನಿಯಮಗಳಲ್ಲ. ಭಾರತದಲ್ಲಿ ಹತ್ತು ಹಲವಾರು ಟ್ರಾಫಿಕ್ ನಿಯಮಗಳಿವೆ. ಅವುಗಳೆನ್ನೆಲ್ಲ ತಿಳಿದುಕೊಳ್ಳುವುದು ಎಲ್ಲ ಪ್ರಜೆಗಳ ಹಕ್ಕು ಆಗಿರುತ್ತದೆ.

Also Read: ರಸ್ತೆ ಸಂಚಾರ ಚಿಹ್ನೆಗಳು ಒಂದು ವಿಸೃತ ಮಾಹಿತಿ

ಸಿಕ್ಕಿ ಬಿದ್ದ ಬಳಿಕ ನ್ಯಾಯಾಲಯದಲ್ಲಿ ತನಗೆ ಈ ನಿಯಮದ ಪರಿಜ್ಞಾನವೇ ಇರಲಿಲ್ಲ ಎಂದು ಸಮಾಜಾಯಿಸಿ ನೀಡುವುದರಲ್ಲಿ ಅರ್ಥವಿಲ್ಲ. ಇನ್ನು ಅಖಂಡ ಭಾರತದ ಟ್ರಾಫಿಕ್ ನಿಯಮ ವಿಚಾರಗಳಿಗೆ ಬಂದಾಗ ಮತ್ತಷ್ಟು ಸಂಕೀರ್ಣವೆನಿಸುತ್ತದೆ. ರಾಜ್ಯಗಳಿಂದ ರಾಜ್ಯಗಳಿಗೆ ಟ್ರಾಫಿಕ್ ನಿಯಮಗಳಲ್ಲಿ ಕೆಲವೊಂದು ಬದಲಾವಣೆ ಕಾಣಸಿಗುತ್ತದೆ. ಭಾರತ ಮೋಟಾರು ವಾಹನ ಕಾಯಿದೆ ರೂಪಿಸಿರುವುದೇ ಚಾಲಕರ ರಕ್ಷಣೆ ಹಾಗೂ ಸುಗಮ ವಾಹನ ಸಂಚಾರಕ್ಕಾಗಿ ಹೊರತಾಗಿ ದಂಡ ವಿಧಿಸಲು ಅಲ್ಲ ಎಂಬುದನ್ನು ಮರೆಯಬಾರದು. ಹೀಗೆ ನಿಮಗೆ ಗೊತ್ತಿರದ ಎಂಟು ಟ್ರಾಫಿಕ್ ನಿಯಮಗಳ ಬಗ್ಗೆ ನಾವಿಲ್ಲಿ ಚರ್ಚಿಸಲಿದ್ದೇವೆ.

To Follow DriveSpark On Facebook, Click The Like Button
01. ವಾಹನ ನಿಲುಗಡೆ

01. ವಾಹನ ನಿಲುಗಡೆ

ದೇಶದ ವಾಹನಗಳ ಸಂಖ್ಯೆಯಲ್ಲಿ ದೈನಂದಿನ ವರ್ಧನೆಯಾಗುತ್ತಿದ್ದು, ವಾಹನ ಪಾರ್ಕಿಂಗ್ ಮಾಡಲು ಜಾಗವೇ ಇಲ್ಲದಂತಹ ಪರಿಸ್ಥಿತಿ ಎದುರಾಗಿದೆ. ಹಾಗೊಂದು ವೇಳೆ ನಿಮ್ಮ ಕಾರಿನ ಡೋರ್ ತೆರೆಯಲು ಆಗದಂತಹ ರೀತಿಯಲ್ಲಿ ಬದಿಯಲ್ಲಿರುವ ವಾಹನ ಪಾರ್ಕಿಂಗ್ ಮಾಡಿದ್ದಲ್ಲಿ ನಿಮಗೆ ಟ್ರಾಫಿಕ್ ಪೊಲೀಸ್ ನೆರವು ಪಡೆಯಬಹುದಾಗಿದೆ. ಪರಿಣಾಮ ಈ ತಪ್ಪಿಗಾಗಿ ಆತ 100 ರುಪಾಯಿಗಳ ದಂಡ ಕಟ್ಟಬೇಕಾಗುತ್ತದೆ.

02. ಹಾರ್ನ್ ಇಲ್ಲವೇ?

02. ಹಾರ್ನ್ ಇಲ್ಲವೇ?

ಸಂಚಾರ ವ್ಯವಸ್ಥೆಯಲ್ಲಿ ಹಾರ್ನ್ ಪಾತ್ರ ಬಹಳ ಮುಖ್ಯವೆನಿಸುತ್ತದೆ. ಯಾವುದೇ ರೀತಿಯಲ್ಲಿ ಶಬ್ದ ಮಾಲಿನ್ಯಕ್ಕೆ ಆಸ್ಪದ ಕೊಡದೇ ಇದನ್ನು ಮಿತವಾಗಿ ಬಳಸುವುದು ನಮ್ಮ ಕರ್ತವ್ಯ. ಹಾಗಿರಬೇಕಾದರೆ ಹಾರ್ನ್ ಇಲ್ಲದೇ ಸಂಚರಿಸುವುದು ಕೂಡಾ ಅಷ್ಟೇ ಅಪರಾಧವೆನಿಸುತ್ತದೆ. ಟ್ರಾಫಿಕ್ ನಿಯಮಗಳ ಪ್ರಕಾರ ಹಾರ್ನ್ ಇಲ್ಲದೇ ಕಾರಿನಲ್ಲಿ ಸಂಚರಿಸಿದರೆ ಅಥವಾ ಹಾರ್ನ್ ಕೆಟ್ಟು ಹೋದರೆ 100 ರುಪಾಯಿ ದಂಡ ಕಟ್ಟಬೇಕಾಗುತ್ತದೆ. ಏಕೆಂದರೆ ಇತರ ಚಾಲಕರನ್ನು ಎಚ್ಚರಿಸುವುದರಲ್ಲಿ ಹಾರ್ನ್ ಬಹಳ ಮುಖ್ಯ ಪಾತ್ರ ವಹಿಸುತ್ತದೆ.

03. ಪ್ರಥಮ ಚಿಕಿತ್ಸಾ ಪೆಟ್ಟಿಗೆ

03. ಪ್ರಥಮ ಚಿಕಿತ್ಸಾ ಪೆಟ್ಟಿಗೆ

ಚೆನ್ನೈ ಹಾಗೂ ಕೋಲ್ಕತ್ತಾಗಳಂತಹ ನಗರಗಳಲ್ಲಿ ಈ ನಿಯಮ ಹೆಚ್ಚು ಪ್ರಚಲಿತವಾಗಿದೆ ಎಂದೇ ಹೇಳಬೇಕು. ಯಾಕೆಂದರೆ ಅಪಘಾತದಂತಹ ತುರ್ತು ಸಂದರ್ಭದಲ್ಲಿ ಚಾಲಕ ತಮ್ಮ ಸಹ ಪ್ರಯಾಣಿಕರಿಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಒದಗಿಸದಿದ್ದಲ್ಲಿ 500 ರು.ಗಳ ದಂಡ ಅಥವಾ ಮೂರು ತಿಂಗಳ ವರೆಗೂ ಜೈಲುವಾಸ ಅನುಭವಿಸಬೇಕಾಗುತ್ತದೆ.

04. ಕಾರಿನೊಳಗೆ ಧೂಮಪಾನ

04. ಕಾರಿನೊಳಗೆ ಧೂಮಪಾನ

ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬುದನ್ನು ಪದೇ ಪದೇ ಹೇಳುವ ಅಗತ್ಯವಿಲ್ಲ. ಇನ್ನು ಕೆಲವು ಅತಿ ಬುದ್ಧವಂತ ಚಾಲಕರು ಕಾರು ಓಡಿಸುವಾಗ ಅಥವಾ ನಿಂತ ಕಾರಿನೊಳಗೆ ಧೂಮಪಾನ ಸೇದುತ್ತಾರೆ. ಈ ನಿಟ್ಟಿನಲ್ಲಿ ಪರಿಣಾಮಕಾರಿ ನಿಯಮ ರೂಪಿಸಿರುವ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಾರಿನೊಳಗೆ ಧೂಮಪಾನ ಮಾಡಿದ್ದಲ್ಲಿ 100 ರುಪಾಯಿ ದಂಡ ವಿಧಿಸಲಾಗುತ್ತದೆ.

 05. ಬಸ್ ಸ್ಟಾಪ್‌ನಲ್ಲಿ ಪಾರ್ಕಿಂಗ್

05. ಬಸ್ ಸ್ಟಾಪ್‌ನಲ್ಲಿ ಪಾರ್ಕಿಂಗ್

ಕೋಲ್ಕತ್ತಾದಂತಹ ನಗರಗಳಲ್ಲಿ ಬಸ್ ಸ್ಟಾಪ್ ಅಥವಾ ಸಾರ್ವಜನಿಕ ಬಳಕೆಯ ಪ್ರದೇಶಗಳಲ್ಲಿ ವಾಹನ ಪಾರ್ಕಿಂಗ್ ಮಾಡಿದ್ದಲ್ಲಿ 100 ರುಪಾಯಿ ದಂಡ ಕಟ್ಟಬೇಕಾಗುತ್ತದೆ.

06. ಸ್ನೇಹಿತನ ಗಾಡಿ

06. ಸ್ನೇಹಿತನ ಗಾಡಿ

ಹಾಗೊಂದು ವೇಳೆ ಸ್ನೇಹಿತನ ಗಾಡಿ ಬಳಕೆ ಮಾಡುತ್ತಿದ್ದಲ್ಲಿ ಈ ವಿಚಾರ ಮೊದಲೇ ಆತನಿಗೆ ತಿಳಿಸಲು ಮರೆಯದಿರಿ. ಯಾಕೆಂದರೆ ಚೆನ್ನೈ ನಗರದಲ್ಲಿ ಕಾರು ಮಾಲಿಕನಿಗೆ ಗೊತ್ತಿಲ್ಲದೆಯೇ ಆತನ ಕಾರಿನೊಂದಿಗೆ ತೆರಳಿ ಪೊಲೀಸ್ ಬಲೆಗೆ ಸಿಕ್ಕಿ ಬಿದ್ದಲ್ಲಿ 500 ರುಪಾಯಿ ದಂಡ ಅಥವಾ ಮೂರು ತಿಂಗಳುಗಳ ಜೈಲು ಸಜೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಕಾರು ಓಡಿಸುವ ಮೊದಲು ಒಂದು ವಿಚಾರ ಆತನಿಗೆ ಹೇಳಿಬಿಡಿ.

07. ಡ್ಯಾಶ್ ಬೋರ್ಡ್ ನಲ್ಲಿ ಟಿವಿ

07. ಡ್ಯಾಶ್ ಬೋರ್ಡ್ ನಲ್ಲಿ ಟಿವಿ

ಮುಂಬೈನಲ್ಲಿ ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಟಿವಿ ಅಥವಾ ಇನ್ನಿತರ ಯಾವುದೇ ವಿಡಿಯೋ ಡಿವೈಸ್ ಲಗತ್ತಿಸುವುದು ಅಪರಾಧವಾಗಿದ್ದು, ತಪ್ಪಿತ್ತಸ್ಥರು 100 ರುಪಾಯಿ ದಂಡ ಕಟ್ಟಬೇಕಾಗುತ್ತದೆ.

08. ಕಾರು ಆನ್

08. ಕಾರು ಆನ್

ಹಾಗೊಂದು ವೇಳೆ ಮುಂಬೈನಲ್ಲಿ ನೀವು ಕಾರು ಆನ್ ಮಾಡಿಟ್ಟುಕೊಂಡು (ಐಡಲ್) ಕಾರಿನಿಂದ ಹೊರ ತೆರಳಿದರೆ 100 ರುಪಾಯಿ ದಂಡ ಕಟ್ಟಬೇಕಾಗುತ್ತದೆ.

ಇವನ್ನೂ ಓದಿ

ಕಾರು ಎಂಜಿನ್ ಐಡ್ಲಿಂಗ್ ಮಾರಕವೇ? ಇಲ್ಲಿದೆ 5 ಕಾರಣ

 

English summary
8 traffic laws you don't know about
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark