ಹೆಲ್ಮೆಟ್ ಕಡ್ದಾಯ ಮಾಡಿದ ಪೊಲೀಸರ ವಿರುದ್ದ ತಿರುಗಿಬಿದ್ದ ಬೈಕ್ ಸವಾರರು

ಟ್ರಾಫಿಕ್ ನಿಯಮಗಳಲ್ಲಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದು ಕಡ್ಡಾಯ. ಹೀಗಾಗಿ ಮಾರುಕಟ್ಟೆಯಲ್ಲಿ ರೂ. 300 ರಿಂದ ಲಕ್ಷದ ವರೆಗು ಉತ್ತಮ ಗುಣಮಟ್ಟದ ಹೆಲ್ಮೆಟ್‍ಗಳು ಲಭ್ಯವಿದೆ. ಹೀಗಿರುವಾಗ ಬೈಕ್ ಸವಾರರು ಪೊಲೀಸರ ವಿರುದ್ದವೆ ತಿರುಗಿಬಿದ್ದಿರುವ ಘಟನೆ ಪುಣೆಯಲ್ಲಿ ನಡೆದಿದೆ.

ಖಡ್ಡಾಯವಾಗಿ ಹೆಲ್ಮೆಟ್ ಧರಿಸಿ ಎಂಬ ಆದೇಶವನ್ನು ತಿರಸ್ಕರಿಸಿದ ನಾಗರೀಕರು..

ಹೆಲ್ಮೆಟ್ ರಹಿತ ಬೈಕ್ ಚಾಲನೆಯಿಂದಾಗಿ ಅಪಘಾತಗಳು ಸಂಭವಿಸುತ್ತಿದ್ದು, ದಿನಕ್ಕೆ ದೇಶದಲ್ಲಿ ನೂರಾರು ಮಂದಿ ಹೆಲ್ಮೆಟ್ ರಹಿತ ಚಾಲನೆಯಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಪುಣೆ ಜನರು ಮಾತ್ರ ಕಡ್ಡಾಯ ಹೆಲ್ಮೆಟ್ ನಿಯಮ ಮಾಡಿದ ಟ್ರಾಫಿಕ್ ಪೊಲೀಸರ ವಿರುದ್ದವೆ ಪ್ರತಿಭಟನೆಗೆ ಇಳಿದಿದ್ದಾರೆ.

ಖಡ್ಡಾಯವಾಗಿ ಹೆಲ್ಮೆಟ್ ಧರಿಸಿ ಎಂಬ ಆದೇಶವನ್ನು ತಿರಸ್ಕರಿಸಿದ ನಾಗರೀಕರು..

ಹೌದು, ಈ ಘಟನೆಯು ಕಳೆದ ವಾರ ಪುಣೆ ನಗರದಲ್ಲಿ ನಡೆದಿದ್ದು, ಪುಣೆ ನಗರದ ಪೊಲೀಸ್ ಕಮಿಷನರ್ ಕೆ.ವೆಂಕಟಾಚಲಂ ಅವರು ಜನವರಿ 1, 2018 ರಿಂದ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು ಎಂದು ಆದೇಶಿಸಿದ್ದಾರೆ. ಇದರಿಂದ ವಾಹನ ಸವಾರರು ಪೊಲೀಸರ ವಿರುದ್ದ ತಿರುಗಿಬಿದ್ದಿದ್ದಾರೆ.

ಖಡ್ಡಾಯವಾಗಿ ಹೆಲ್ಮೆಟ್ ಧರಿಸಿ ಎಂಬ ಆದೇಶವನ್ನು ತಿರಸ್ಕರಿಸಿದ ನಾಗರೀಕರು..

ಪೊಲೀಸ್ ಕಮಿಷನರ್ ಕೆ.ವೆಂಕಟಾಚಲಂ ಅವರ ಈ ಆದೇಶವನ್ನು ತಿರಸ್ಕರಿಸಿ ಸಾಮಾಜಿಕ ಕಾರ್ಯಕರ್ತರು, ರಾಜಕೀಯ ಪ್ರತಿನಿಧಿಗಳು, ಉದ್ಯಮಿಗಳು, 'ಎನ್‍ಜಿಒ'ಗಳು ಮತ್ತು ಆರ್‍‍ಟಿಐ ಕಾರ್ಯಕರ್ತರನ್ನು ಒಳಗೊಂಡಂತೆ ಪ್ರತಿಭಟಿಸುತ್ತಿದ್ದು, ಯಾವುದೇ ಕಾರಣಕ್ಕು ಹೆಲ್ಮೆಟ್ ಕಡ್ದಾಯ ಬೇಡ ಎನ್ನುತ್ತಿದ್ದಾರೆ.

ಖಡ್ಡಾಯವಾಗಿ ಹೆಲ್ಮೆಟ್ ಧರಿಸಿ ಎಂಬ ಆದೇಶವನ್ನು ತಿರಸ್ಕರಿಸಿದ ನಾಗರೀಕರು..

ಈ ಬಗ್ಗೆಪುಣೆ ಮಿರರ್‍‍ನೊಂದಿಗೆಮಾತನಾಡಿದ ಎನ್‍ಸಿಪಿ ಮುಖಂಡ ಮತ್ತು ಸಲಹಾ ಸಮಿತಿಯ ಸದಸ್ಯರಾದ ಅಂಕುಶ್‍ರವರು 'ನಾವು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂಬ ಆದೇಶವನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ. ಏಕೆಂದರೆ ಇದು ಬೈಕ್ ಸವಾರರಿಗೆ ಭಾರೀ ಅನಾನುಕೂಲತೆಯನ್ನು ಉಂಟು ಮಾಡುತ್ತದೆ. ಮತ್ತು ನಗರ ವ್ಯಾಪ್ತಿಯಲ್ಲಿ ವಾಹನಗಳ ವೇಗವು 20-25 ಕಿ.ಮೀ ಗಿಂತಾ ಹೆಚ್ಚಾಗದಿದ್ದಾಗ ಹೆಲ್ಮೆಟ್‍ನ ಅಗತ್ಯವೇನು.?'

ಖಡ್ಡಾಯವಾಗಿ ಹೆಲ್ಮೆಟ್ ಧರಿಸಿ ಎಂಬ ಆದೇಶವನ್ನು ತಿರಸ್ಕರಿಸಿದ ನಾಗರೀಕರು..

ಈ ಆದೇಶವನ್ನು ಹಿಂಪಡೆಯಲು ನಾವು ಆಯುಕ್ತರನ್ನು ಕೇಳಿಕೊಳ್ಳುತ್ತಿದ್ದೇವೆ. ಅವರು ಇದಕ್ಕೆ ಸಮ್ಮತಿಸದಿದ್ದರೆ, ಇದರ ವಿರುದ್ಧ ಮತ್ತಷ್ಟು ಪ್ರತಿಭಟನೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಖಡ್ಡಾಯವಾಗಿ ಹೆಲ್ಮೆಟ್ ಧರಿಸಿ ಎಂಬ ಆದೇಶವನ್ನು ತಿರಸ್ಕರಿಸಿದ ನಾಗರೀಕರು..

'ನಗರಕ್ಕೆ ಬರುವ ಪ್ರತಿಯೊಬ್ಬ ಪೊಲೀಸ್ ಕಮಿಷನರ್ ಒಂದೊಂದು ಹೊಸ ರೂಲ್ಸ್ ತರುತ್ತಿದ್ದಾರೆ. ಇಲ್ಲಿಯವರೆಗೆ ಇದು ಐದನೆಯ ಬಾರಿ ಇಂತಹ ಹಠಾತ್ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಬೈಕ್ ಸವಾರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎನ್ನುವುದು ಅಲ್ಲಿನ ನಾಗರೀಕರ ಅಳಲು.

ಖಡ್ಡಾಯವಾಗಿ ಹೆಲ್ಮೆಟ್ ಧರಿಸಿ ಎಂಬ ಆದೇಶವನ್ನು ತಿರಸ್ಕರಿಸಿದ ನಾಗರೀಕರು..

ಇದಲ್ಲದೇ ಪುಣೆ ನಗರದಲ್ಲಿ ಟ್ರಾಫಿಕ್ ಸಮಸ್ಯೆಯು ಹೆಚ್ಚಾಗಿಯೆ ಇದೆ. ಜೊತೆಗೆ ಕಿರಿದಾದ ರಸ್ತೆಯಲ್ಲಿ ಚಲಿಸುವ ಕಾರಣ ಹೆಲ್ಮೆಟ್ ನಮಗೆ ಬೇಕಾಗಿಲ್ಲ. ಆದ್ದರಿಂದ ಮೊದಲು ಮೂಲಭೂತ ಸಂಚಾರ ಸಮಸ್ಯೆಗಳನ್ನು ಪರಿಹರಿಸಿ' ಎಂದು ಆರ್‍‍‍ಟಿಐ ಕಾರ್ಯಕರ್ತ ಮತ್ತು ಸಜಗ್ ನಾಗರೀಕ್ ಮಂಚ್ ಅಧ್ಯಕ್ಷ ವಿವೇಕ್ ವೇಲಂಕರ್ ಅವರು ಹೇಳಿಕೊಂಡಿದ್ದಾರೆ.

ಖಡ್ಡಾಯವಾಗಿ ಹೆಲ್ಮೆಟ್ ಧರಿಸಿ ಎಂಬ ಆದೇಶವನ್ನು ತಿರಸ್ಕರಿಸಿದ ನಾಗರೀಕರು..

'ನಾವು ಹೆದ್ದಾರಿಗಳಲ್ಲಿ ಹೆಲ್ಮೆಟ್ ರಹಿತ ಚಾಲನೆಯನ್ನು ವಿರೋಧಿಸುತ್ತೇವೆ ಆದರೆ ನಗರ ಪ್ರದೇಶಗಳಲ್ಲಿ ನಾಗರೀಕರು ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡುವುದರಿಂದ ಅದರ ಭಾರದಿಂದ ಸ್ಪೊಂಡಿಲಿಸ್ಟ್ಸ್ ಎಂಬ ಖಾಯಿಲೆಗೆ ಗುರಿಯಾಗುತ್ತಾರೆ ಮತ್ತು ಅದರಿಂದ ಅವರಿಗೆ ಕೇಳಲು ಕಷ್ಟವಾಗುತ್ತದೆ' ಎಂದು ಕ್ರಿಯೇಟಿವ್ ಫೌಂಡೇಷನ್‍ನ ಸಂದೀಪ್ ಖರ್ಡೆಕರ್ ಅವರು ಹೇಳಿದ್ದಾರೆ.

ಖಡ್ಡಾಯವಾಗಿ ಹೆಲ್ಮೆಟ್ ಧರಿಸಿ ಎಂಬ ಆದೇಶವನ್ನು ತಿರಸ್ಕರಿಸಿದ ನಾಗರೀಕರು..

ಒಟ್ಟಿನಲ್ಲಿ ಯಾರೇನೆ ಹೇಳಿದರು 'ಈ ವರ್ಷ ರಸ್ತೆ ಅಪಘಾತದಲ್ಲಿ ಸುಮಾರು 200ಕ್ಕು ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ, ವಾಹನ ಚಾಲನೆ ವೇಳೆ ಹೆಲ್ಮೆಟ್ ಧರಿಸಿದರೆ ಅದು ನಮಗೆ ಒಳ್ಳೆಯದು. ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ ಮಾಡಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬದವರ ಬಗ್ಗೆ ಪ್ರತಿಭಟನಾಕಾರರು ಒಂದು ಬಾರಿ ಯೋಚಿಸುವುದು ಒಳಿತು.

ಖಡ್ಡಾಯವಾಗಿ ಹೆಲ್ಮೆಟ್ ಧರಿಸಿ ಎಂಬ ಆದೇಶವನ್ನು ತಿರಸ್ಕರಿಸಿದ ನಾಗರೀಕರು..

ನಾವು ಈ ವರೆಗು ನಾಗರೀಕರ ವಿರುದ್ಧವಾಗಿ ಯಾವುದೇ ಆದೇಶವನ್ನು ನೀಡಲಿಲ್ಲ, ಹೆಲ್ಮೆಟ್ ವಾಹನ ಚಾಲನೆ ವೇಳೆ ನಮ್ಮ ಶಿರವನ್ನು ಕಾಪಾಡುತ್ತದೆ ಎಂದು ಹೇಳಿರುವ ಪುಣೆ ಪೊಲೀಸ್ ಕಮಿಷನರ್ ಕೆ.ವೆಂಕಟೇಶ್ ಅವರು ವಾಹನ ಸವಾರರ ಸಲುವಾಗಿ ಇಂತಹ ಕಾಯಿದೆಯನ್ನು ತರುವುದು ತಪ್ಪೇನಿಲ್ಲವೆಂದು ಸಮರ್ಥಿಸಿಕೊಂಡಿದ್ದಾರೆ.

Most Read Articles

Kannada
English summary
Citizens join hands to oppose cop drive mandating helmets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more