ಟೈರ್ ಸ್ಪೋಟಿಸಿದರೆ ಅಪಘಾತ ಖಚಿತ? ತಡೆಗಟ್ಟುವುದು ಹೇಗೆ?

By Nagaraja

ನೆರೆಯ ತಮಿಳುನಾಡಿನ ಧರ್ಮಪುರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದರಲ್ಲಿ ಕರ್ನಾಟಕ ನೊಂದಣಿ ಸಂಖ್ಯೆ ಹೊಂದಿರುವ ಕಾರೊಂದು ಟ್ರಕ್‌ಗೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಆರು ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಚಲಿಸುತ್ತಿರುವ ಕಾರಿನ ಟೈರ್ ಸ್ಪೋಟಗೊಂಡು ನಿಯಂತ್ರಣ ತಪ್ಪಿ ಟ್ರಕ್‌ಗೆ ಮುಖಾಮುಖಿ ಢಿಕ್ಕಿಯಾಗಿರುವುದೇ ಭಾರಿ ದುರಂತಕ್ಕೆ ಕಾರಣವಾಗಿದೆ.

Also Read: ಕಾರು ಶುಚಿಯಾಗಿಡಲು 10 ಸುಲಭ ವಿಧಾನಗಳು

ಅಷ್ಟಕ್ಕೂ ಟೈರ್ ಸ್ಪೋಟದ ಹಿಂದಿರುವ ಕಾರಣಗಳೇನು? ಈ ಬಗ್ಗೆ ನಿಖರ ಮಾಹಿತಿಗಾಗಿ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಬೇಸಿಗೆ ಕಾಲವಾಗಿರುವುದರಿಂದ ಸೂರ್ಯ ತಾಪಮಾನವೂ ಗರಿಷ್ಠ ಮಟ್ಟದಲ್ಲಿದ್ದು, ಹಾಗಾಗಿ ಅಪಾಯ ಆಹ್ವಾನಿಸುವ ಮೊದಲು ಕೆಲವೊಂದು ಎಚ್ಚರಿಕೆಗಳನ್ನು ಕೈಗೊಂಡಲ್ಲಿ ಒಳಿತು.

01. ದೂರ ಪ್ರಯಾಣಕ್ಕೂ ಮುನ್ನ ಚಕ್ರ ಪರಿಶೀಲಿಸಿ

01. ದೂರ ಪ್ರಯಾಣಕ್ಕೂ ಮುನ್ನ ಚಕ್ರ ಪರಿಶೀಲಿಸಿ

ನೀವು ಬೇಸಿಗೆ ಕಾಲದಲ್ಲಿ ದೂರ ಪ್ರಯಾಣ ಹಮ್ಮಿಕೊಳ್ಳುವ ಮೊದಲು ಅಧಿಕೃತ ಸರ್ವಿಸ್ ಸೆಂಟರ್ ಗೆ ತೆರಳಿ ಚಕ್ರಗಳನ್ನು ಪರಿಶೀಲಿಸುತ್ತಿರಿ. ಇದರಿಂದ ನಿಮ್ಮ ಗಮನಕ್ಕೆ ಬಾರದೇ ಯಾವುದೇ ಸ್ಕ್ರೂ ಅಥವಾ ಇನ್ನಿತರ ಕಬ್ಬಿಣದ ತುಣುಕುಗಳು ಚಕ್ರದಡಿಯಲ್ಲಿ ಸೇರಿಕೊಂಡಿದ್ದಲ್ಲಿ ಸರಿಪಡಿಸಲು ಸಾಧ್ಯ. ಅಲ್ಲದೆ ಅಗತ್ಯ ಥ್ರೆಡ್ ಗಳಿದೆಯೇ ಎಂಬುದನ್ನು ಖಚಿತಪಡಿಸಿ.

02. ನಿಗದಿತ ಚಕ್ರದೊತ್ತಡ

02. ನಿಗದಿತ ಚಕ್ರದೊತ್ತಡ

ಪ್ರತಿಯೊಂದು ವಾಹನ ಸಂಸ್ಥೆಗಳು ನಿರ್ದಿಷ್ಟ ಪ್ರಮಾಣದ ಚಕ್ರದೊತ್ತಡವನ್ನು ಹೊಂದಿರುತ್ತದೆ. ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಚಕ್ರದೊತ್ತಡದಲ್ಲಿ ಏರು ಪೇರು ಸಂಭವಿಸಿದ್ದಲ್ಲಿ ಅಪಾಯ ಆಹ್ವಾನಿಸುವ ಸಾಧ್ಯತೆ ಜಾಸ್ತಿಯಿದ್ದು, ವಾಹನದ ಹ್ಯಾಂಡ್ಲಿಂಗ್ ಮೇಲೆ ನೇರ ಪರಿಣಾಮ ಬೀರಲಿದೆ.

03. ಚಕ್ರದ ಗಾತ್ರ

03. ಚಕ್ರದ ಗಾತ್ರ

ಮೀತಿ ಮೀರಿದ ವಾಹನ ಪ್ರೇಮಿಗಳು ಕಾರು ಖರೀದಿಸಿದ ಬೆನ್ನಲ್ಲೇ ನೇರವಾಗಿ ಗ್ಯಾರೇಜ್ ಗೆ ತೆರಳಿ ಕಸ್ಟಮೈಸ್ಡ್ ಚಕ್ರಗಳನ್ನು ಬಳಕೆ ಮಾಡುತ್ತಾರೆ. ಇದು ನಿಮ್ಮ ವಾಹನಗಳಿಗೆ ಬಲವಾದ ಸಾನಿಧ್ಯ ನೀಡುವುದಾದರೂ ಒಟ್ಟಾರೆ ಜೋಡಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ರಸ್ತೆ ಹಂಪ್ ಗಳಲ್ಲಿ ಸಂಚರಿಸುವಾಗ ವಾಹನಗಳ ದೇಹಗಳಿಗೆ ಬಲವಾದ ಹೊಡೆತ ನೀಡುವ ಭೀತಿಯಿರುತ್ತದೆ.

04. ಸರಿಯಾದ ಚಕ್ರಗಳ ಆಯ್ಕೆ

04. ಸರಿಯಾದ ಚಕ್ರಗಳ ಆಯ್ಕೆ

ವಾಹನ ಸಂಸ್ಥೆಗಳು ಸೂಚಿಸಿದ ಚಕ್ರಗಳನ್ನು ಮಾತ್ರ ಆಯ್ಕೆ ಮಾಡಿ. ಕೆಲವೊಂದು ಬಾರಿ ಆಫ್ ರೋಡ್ ಚಕ್ರಗಳನ್ನು ಜೋಡಿಸಿದ ಎಸ್‌ಯುವಿಗಳು ಸಾಮಾನ್ಯ ರಸ್ತೆಗಳಲ್ಲಿ ಓಡಾಡುತ್ತಿರುವುದನ್ನು ಗಮನಿಸಿರಬಹುದು. ಇದು ನೋಡಲು ವಿಶಿಷ್ಟವಾಗಿ ಕಾಣಿಸಿದರೂ ನಯವಾದ ರಸ್ತೆಯು ಚಕ್ರದ ಉರುಳುವಿಕೆಯನ್ನು ತಪ್ಪಿಸುವ ಭೀತಿ ಕಾಡುತ್ತದೆ. ಇದರಿಂದ ಬ್ರೇಕಿಂಗ್ ಮೇಲಿನ ನಿಯಂತ್ರಣವೂ ತಪ್ಪಲಿದೆ.

05. ಚಕ್ರದ ಸಮತೋಲನೆ/ಜೋಡಣೆ ಸಮರ್ಪಕವಾಗಿರಲಿ

05. ಚಕ್ರದ ಸಮತೋಲನೆ/ಜೋಡಣೆ ಸಮರ್ಪಕವಾಗಿರಲಿ

ಸುರಕ್ಷಿತ ಚಾಲನೆಗಾಗಿ ನಿರಂತರ ಅಂತರಾಳದಲ್ಲಿ ಚಕ್ರದ ಪರಿಶೀಲನೆ ಅವಶ್ಯಕ. ನಿಮ್ಮ ಕಾರಿನ ಚಕ್ರದ ಸಮತೋಲನೆ ಹಾಗೂ ಜೋಡಣೆ ಸಮರ್ಪಕವಾಗಿದೆಯೇ ಎಂಬುದನ್ನು ನೋಡಿಕೊಳ್ಳಿರಿ. ಇನ್ನೊಂದು ಅರ್ಥದಲ್ಲಿ ಹೇಳುವುದಾದ್ದಲ್ಲಿ ಜೋಡಣೆ ಸಮರ್ಪಕವಿಲ್ಲದ ಚಕ್ರಗಳು ಟೈಮ್ ಬಾಂಬ್ ಇದ್ದ ಹಾಗೇ, ಎಚ್ಚರ! ಯಾವಾಗ ಬೇಕಾದರೂ ಸ್ಪೋಟಿಸಬಹುದು.

 06. ಎಲ್ಲ ನಾಲ್ಕು ಚಕ್ರಗಳನ್ನು ಬದಲಾಯಿಸಿ

06. ಎಲ್ಲ ನಾಲ್ಕು ಚಕ್ರಗಳನ್ನು ಬದಲಾಯಿಸಿ

ಕೇಡು ಸಂಭವಿಸಿದ ಒಂದೆರಡು ಚಕ್ರಗಳನ್ನು ಮಾತ್ರ ಬದಲಾಯಿಸದೇ ಎಲ್ಲ ನಾಲ್ಕು ಚಕ್ರಗಳನ್ನು ಏಕಕಾಲಕ್ಕೆ ಬದಲಾಯಿಸಿದರೆ ಒಳಿತು. ಇಲ್ಲವಾದ್ದಲ್ಲಿ ಹ್ಯಾಂಡ್ಲಿಂಗ್, ಉರುಳುವಿಕೆ, ಜೋಡಣೆ, ಮೈಲೇಜ್ ಹಾಗೂ ಚಕ್ರಗಳ ಬಾಳ್ವಿಕೆ ಮೇಲೆಯೂ ಪರಿಣಾಮ ಬೀರಲಿದೆ.

 07. ಅಧಿಕೃತ ಡೀಲರ್

07. ಅಧಿಕೃತ ಡೀಲರ್

ಯಾವತ್ತೂ ವಾಹನ ಸಂಸ್ಥೆಗಳು ಸೂಚಿಸುವ ಅಧಿಕೃತ ಡೀಲರುಗಳಿಂದಲೇ ಚಕ್ರಗಳನ್ನು ಖರೀದಿಸಿರಿ. ಅಲ್ಲಿ ಮಾತ್ರ ಉಚಿತ ತಪಾಸಣೆ, ಸಲಹೆ, ವಾರಂಟಿ ಹಾಗೂ ಇನ್ನಿತರ ಸೌಲಭ್ಯಗಳು ಲಭ್ಯವಾಗಲಿದೆ.

08. ಸರಾಸರಿ ವೇಗ

08. ಸರಾಸರಿ ವೇಗ

ಪ್ರತಿಯೊಂದು ಕಾರಿನಲ್ಲೂ ಜೋಡಣೆ ಮಾಡಲಾದ ಚಕ್ರಗಳು ಗರಿಷ್ಠ ಎಷ್ಟು ವೇಗದಲ್ಲಿ ಸಂಚರಿಸಬಹುದು ಎಂಬುದಕ್ಕೆ ಸಂಬಂಧಪಟ್ಟಂತೆ ನಿರ್ವಹಣಾ ಅಂಶವಿರುತ್ತದೆ. ಇದು ಕಾರಿನ ಒಟ್ಟಾರೆ ವೇಗಕ್ಕಿಂತಲೂ ಜಾಸ್ತಿಯಾಗಿರುತ್ತದೆ. ಇದರರ್ಥ ಎಷ್ಟು ವೇಗದಲ್ಲಿ ಬೇಕಾದರೂ ಚಲಿಸಬಹುದು ಎಂಬುದಲ್ಲ. ಅಮಿತ ವೇಗದಲ್ಲಿ ಸಂಚರಿಸುವಾಗ ಚಕ್ರಗಳಿಗೆ ಬೇಗನೇ ಬಿಸಿ ಮುಟ್ಟುವ ಸಾಧ್ಯತೆಯಿದ್ದು, ಇದು ಕೂಡಾ ಸ್ಪೋಟಕ್ಕೆ ಕಾರಣವಾಗಬಹುದು. .

09. ವಿಶ್ರಾಂತಿ ಅಗತ್ಯ

09. ವಿಶ್ರಾಂತಿ ಅಗತ್ಯ

ಬೇಸಿಗೆ ಕಾಲದಲ್ಲಿ ಕನಿಷ್ಠ ಪಕ್ಷ ಪ್ರತಿ ಎರಡು-ಮೂರು ತಾಸಿನ ಪ್ರಯಾಣದ ನಡುವೆ 15 ನಿಮಿಷಗಳ ವಿರಾಮ ಪಡೆದುಕೊಳ್ಳಲು ಮರೆಯದಿರಿ. ಈ ಮೂಲಕ ಚಕ್ರಗಳನ್ನು ತಂಪಾಗಿಡಲು ನೆರವಾಗಲಿದೆ.

10. ಒರಟಾದ ಚಾಲನೆ

10. ಒರಟಾದ ಚಾಲನೆ

ಒರಟಾದ ಚಾಲನೆಯಿಂದಾಗಿ ಪದೇ ಪದೇ ಬ್ರೇಕ್, ಆಕ್ಸಿಲೇಟರ್ ಅದುಮುವುದರಿಂದ ಚಕ್ರಗಳ ಬಾಳ್ವಿಕೆ ಗಣನೀಯವಾಗಿ ಕಡಿಮೆಯಾಗಲಿದೆ. ಈ ನಿಟ್ಟಿನಲ್ಲಿ ಸುರಕ್ಷಿತ ಚಾಲನೆಗೆ ಒತ್ತು ಕೊಟ್ಟು ನಯವಾಗಿ ಬ್ರೇಕ್ ಹಾಗೂ ಆಕ್ಸಿಲೇಟರ್ ಗಳ ನಿರ್ವಹಣೆ ಮಾಡಿ.

ಇವನ್ನೂ ಓದಿ...

ಬೇಸಿಗೆಯಲ್ಲಿ ಬೈಕ್ ರೈಡಿಂಗ್; ಅತ್ಯವಶ್ಯಕ 10 ಸಲಹೆಗಳು

ಉಫ್..! ಸುಡುವ ಬೇಸಗೆ, ಕಾಡುವ ಚಿಂತೆ; ಕಾರಿನ ಚಿಕಿತ್ಸೆ ಹೇಗೆ?

Most Read Articles

Kannada
English summary
Tyre Explosion Leads To Accident; Here Are Tips To Avoid Such Mishaps
Story first published: Monday, March 28, 2016, 17:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X