ರೂ. 9.99 ಲಕ್ಷ ಆರಂಭಿಕ ಬೆಲೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ರೆನಾಲ್ಟ್ ಕ್ಯಾಪ್ಚರ್

ಎಸ್‌ಯುವಿ ಕಾರು ವಿಭಾಗಕ್ಕೆ ಹೊಸ ಮಾದರಿಯೊಂದನ್ನು ಪರಿಚಯಿಸಿರುವ ರೆನಾಲ್ಟ್ ಇಂಡಿಯಾ ಸಂಸ್ಥೆಯು ವಿನೂತನ ಕ್ಯಾಪ್ಚರ್ ಕಾರನ್ನು ಬಿಡುಗಡೆ ಮಾಡಿದ್ದು, ವಿವಿಧ 7 ವೆರಿಯಂಟ್ ಹಾಗೂ 5 ಬಣ್ಣಗಳ ಆಯ್ಕೆಯನ್ನು ಒದಗಿಸಿದೆ.

By Praveen

ಎಸ್‌ಯುವಿ ಕಾರು ವಿಭಾಗಕ್ಕೆ ಹೊಸ ಮಾದರಿಯೊಂದನ್ನು ಪರಿಚಯಿಸಿರುವ ರೆನಾಲ್ಟ್ ಇಂಡಿಯಾ ಸಂಸ್ಥೆಯು ವಿನೂತನ ಕ್ಯಾಪ್ಚರ್ ಕಾರನ್ನು ಬಿಡುಗಡೆ ಮಾಡಿದ್ದು, ವಿವಿಧ 7 ವೆರಿಯಂಟ್ ಹಾಗೂ 5 ಬಣ್ಣಗಳ ಆಯ್ಕೆಯನ್ನು ಒದಗಿಸಿದೆ.

ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ರೆನಾಲ್ಟ್ ಹೊಸ ಕಾರು ಕ್ಯಾಪ್ಚರ್

ಆಲ್ ವಿಲ್ಹ್ ಡ್ರೈವ್ ಮಾಡುವಂತಹ ಸೌಲಭ್ಯ ರೆನಾಲ್ಟ್ ಕ್ಯಾಪ್ಚರ್ ಎಸ್‌ಯುವಿ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯವನ್ನು ಶುರು ಮಾಡಿದ್ದು, ಹೊಸ ಕಾರಿನ ಆರಂಭಿಕ ಬೆಲೆಯು ರೂ.9.99 ಲಕ್ಷಕ್ಕೆ ಹಾಗೂ ಟಾಪ್ ವೆರಿಯಂಟ್ ರೂ.13.88 ಲಕ್ಷಕ್ಕೆ ಲಭ್ಯವಾಗಿದೆ.

ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ರೆನಾಲ್ಟ್ ಹೊಸ ಕಾರು ಕ್ಯಾಪ್ಚರ್

ರೆನಾಲ್ಟ್ ನಿರ್ಯಾಣದ ಕ್ರಾಸ್ ಓವರ್ ಆವೃತ್ತಿಯಾಗಿರುವ ಕ್ಯಾಪ್ಚರ್ ಕಾರು ಉಳಿದೆಲ್ಲಾ ಮಧ್ಯಮ ಗಾತ್ರದ ಎಸ್‌ಯುವಿಯಲ್ಲೇ ಉತ್ತಮ ಚಾರ್ಸಿ ವ್ಯವಸ್ಥೆಯನ್ನು ಹೊಂದಿರುವ ಕಾರು ಮಾದರಿಯಾಗಿದ್ದು, ಹ್ಯುಂಡೈ ಕ್ರೇಟಾ ಹಾಗೂ ಟಾಟಾ ಹೆಕ್ಸಾ ಆವೃತ್ತಿಗಳಿಗೆ ತೀವ್ರ ಪ್ರತಿಸ್ಪರ್ಧಿಯಾಗಲಿದೆ.

ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ರೆನಾಲ್ಟ್ ಹೊಸ ಕಾರು ಕ್ಯಾಪ್ಚರ್

ಈ ಮೂಲಕ ಎಸ್‌ಯುವಿ ಪ್ರಿಯರನ್ನು ಸೆಳೆಯಲು ಸಜ್ಜುಗೊಂಡಿರುವ ರೆನಾಲ್ಟ್ ಕ್ಯಾಪ್ಚರ್ ಕಾರು ಡೀಸೆಲ್ ಮತ್ತು ಪೆಟ್ರೋಲ್ ಆವೃತ್ತಿಗಳಲ್ಲಿ ಲಭ್ಯವಿದ್ದು, ಗ್ರಾಹಕರ ಬೇಡಿಕೆಯಂತೆ ವಿವಿಧ ಮಾದರಿಗಳನ್ನು ಆಯ್ಕೆ ಮಾಡಬಹುದಾಗಿದೆ.

Recommended Video

2018 Renault Duster Revealed - DriveSpark
ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ರೆನಾಲ್ಟ್ ಹೊಸ ಕಾರು ಕ್ಯಾಪ್ಚರ್

ಕಾರಿನ ವಿಧಗಳು -ಬೆಲೆ( ಎಕ್ಸ್‌ಶೋರಂ)

ಆರ್‌ಎಕ್ಸ್ಇ (ಪೆಟ್ರೋಲ್) -ರೂ. 9.99 ಲಕ್ಷ

ಆರ್‌ಎಕ್ಸ್ಇ (ಡೀಸೆಲ್) - ರೂ. 11.39 ಲಕ್ಷ

ಆರ್‌ಎಕ್ಸ್ಎಲ್ (ಪೆಟ್ರೋಲ್) -ರೂ. 11.07 ಲಕ್ಷ

ಆರ್‌ಎಕ್ಸ್ಎಲ್ (ಡೀಸೆಲ್) -ರೂ.12.47 ಲಕ್ಷ

ಆರ್‌ಎಕ್ಸ್‌ಟಿ (ಪೆಟ್ರೋಲ್) -ರೂ. 11.69 ಲಕ್ಷ

ಆರ್‌ಎಕ್ಸ್‌ಟಿ (ಡೀಸೆಲ್) - ರೂ. 13.09 ಲಕ್ಷ

ಪ್ಲ್ಯಾಟಿನೆ (ಡೀಸೆಲ್) - ರೂ.13. 88 ಲಕ್ಷ

ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ರೆನಾಲ್ಟ್ ಹೊಸ ಕಾರು ಕ್ಯಾಪ್ಚರ್

ಎಂಜಿನ್ ಸಾಮರ್ಥ್ಯ

ಈ ಹಿಂದಿನ ಡಸ್ಟರ್ ಕಾರು ಮಾದರಿಯಲ್ಲೇ ಕ್ಯಾಪ್ಚರ್ ಕೂಡಾ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, ಪೆಟ್ರೋಲ್ ಕಾರುಗಳು 105-ಬಿಎಚ್‌ಪಿ, 142-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ ಡೀಸೆಲ್ ಕಾರುಗಳು 119-ಬಿಎಚ್‌ಪಿ ಮತ್ತು 240-ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

ತಪ್ಪದೇ ಓದಿ-ರಸ್ತೆ ಬದಿ ಇದ್ದ ಹೆಲ್ಮೆಟ್‌ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದ್ದೇಕೆ?

ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ರೆನಾಲ್ಟ್ ಹೊಸ ಕಾರು ಕ್ಯಾಪ್ಚರ್

ಜೊತೆಗೆ ಪೆಟ್ರೋಲ್ ಕಾರುಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಒದಗಿಸಲಾಗಿದ್ದು, ಡೀಸೆಲ್ ಆವೃತ್ತಿಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್, 17-ಇಂಚಿನ ಅಲಾಯ್ ಚಕ್ರಗಳನ್ನು ಅಳವಡಿಕೆ ಮಾಡಲಾಗಿದೆ.

ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ರೆನಾಲ್ಟ್ ಹೊಸ ಕಾರು ಕ್ಯಾಪ್ಚರ್

ಇನ್ನು ಒಳ ಮತ್ತು ಹೊರ ವಿನ್ಯಾಸದಲ್ಲಿ ಗುರುತರ ಬದಲಾವಣೆ ತಂದಿರುವ ರೆನಾಲ್ಟ್ ಸಂಸ್ಥೆಯು, 310-ಲೀಟರ್ ಬೂಟ್ ಸ್ಪೆಸ್, 50 ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್, 210 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ತಪ್ಪದೇ ಓದಿ-ಡಿಜಿ ಲಾಕರ್ ಬಳಸಿದ್ದೇ ತಪ್ಪಾಯ್ತಾ? ಬೈಕ್ ಸವಾರನಿಗೆ 5 ಸಾವಿರ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!!

ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ರೆನಾಲ್ಟ್ ಹೊಸ ಕಾರು ಕ್ಯಾಪ್ಚರ್

ವೈಶಿಷ್ಟ್ಯತೆಗಳು

ಡ್ಯುಯಲ್ ಟೋನ್ ಬಣ್ಣದೊಂದಿಗೆ ಹೊಸ ಲುಕ್ ಪಡೆದುಕೊಂಡಿರುವ ಕ್ಯಾಪ್ಚರ್ ಕಾರು ಬ್ಲ್ಯಾಕ್ ಆ್ಯಂಡ್ ವೈಟ್ ಥೀಮ್ ಹೊಂದಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೊಲರ್, ಬ್ಲ್ಯೂಟೂತ್ ಕನೆಕ್ವಿಟಿ, ಧ್ವನಿ ನಿಯಂತ್ರಣ ಘಟಕ ಪಡೆದುಕೊಂಡಿದೆ.

ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ರೆನಾಲ್ಟ್ ಹೊಸ ಕಾರು ಕ್ಯಾಪ್ಚರ್

ಲಭ್ಯವಿರುವ ಕಾರಿನ ಬಣ್ಣಗಳು- ಮೂನ್ ಲೈಟ್ ಸಿಲ್ವರ್, ಪ್ಲ್ಯಾನೆಟ್ ಗ್ರೇ, ಕೆಯೆನಿ ಆರೆೇಂಜ್, ಮೊಹೊಗೆನಿ ಬ್ರೌನ್ ಮತ್ತು ಪರ್ಲ ವೈಟ್

ರೂ. 9.99 ಲಕ್ಷ ಆರಂಭಿಕ ಬೆಲೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ರೆನಾಲ್ಟ್ ಕ್ಯಾಪ್ಚರ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಪ್ರಿಮಿಯಂ ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯ ಆರಂಭಿಸಿರುವ ರೆನಾಲ್ಟ್ ಸಂಸ್ಥೆಯು ಕ್ಯಾಪ್ಚರ್ ಮೂಲಕ ಭಾರತೀಯ ಗ್ರಾಹಕನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿದ್ದು, ಇದರಿಂದ ಟಾಟಾ ಹೆಕ್ಸಾ ಮತ್ತು ಹ್ಯುಂಡೈ ಕ್ರೇಟಾಗೆ ತೀವ್ರ ಹೊಡೆತ ಬೀಳುವುದಲ್ಲಿ ಯಾವುದೇ ಅನುಮಾನವಿಲ್ಲ.

Trending On DriveSpark Kannada:

ಸ್ಪ್ಲೆಂಡರ್ ಪ್ಲಸ್ ಬೈಕಿಗೆ 10,800 ರೂ ದಂಡ ಹಾಕಿದ್ರು !! ನಗರದಲ್ಲಿ ನಡೀತಿದೆ 'ಆಪರೇಷನ್‌ ಚೀತಾ'

ಡಿಸೆಂಬರ್ 1ರ ನಂತರ ಟೋಲ್‌ಗಳಲ್ಲಿ ಕಾರುಗಳು ಕಾಯುವ ಹಾಗಿಲ್ಲ !!

Most Read Articles

Kannada
English summary
Read in Kannada about Renault Captur Launched In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X