TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
2017ರಲ್ಲಿ ಬಿಡುಗಡೆಯಾದ ಟಾಪ್ 5 ಸ್ಕೂಟರ್‌ಗಳು ಯಾವವು?
2017ರ ಅವಧಿಯಲ್ಲಿ ಭಾರತೀಯ ಆಟೋ ಉದ್ಯಮವು ಹಲವು ಬದಲಾವಣೆಗಳನ್ನು ಕಂಡಿದ್ದು, ಹತ್ತಾರು ಹೊಸ ಹೊಸ ವಾಹನಗಳ ಬಿಡುಗಡೆಗೆ ಸಾಕ್ಷಿಯಾಗಿದೆ. ಹೀಗಾಗಿ ಗ್ರಾಹಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿಯಾಗಿರುವ ಟಾಪ್ 5 ಸ್ಕೂಟರ್‌ಗಳ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
ಕಳೆದ ಒಂದು ದಶಕ ಅವಧಿಯಲ್ಲಿ ಭಾರತೀಯ ಆಟೋ ಉದ್ಯಮವು ಮಹತ್ವದ ಬದಲಾವಣೆಗಳನ್ನು ಸಾಧಿಸಿದ್ದು, ಜಗತ್ತಿನ ಪ್ರಮುಖ ಆಟೋ ಉತ್ಪಾದಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ. ಹೀಗಾಗಿ ಗರಿಷ್ಠ ಮಾರಾಟ ಗುರಿಯಾಗಿಸಿಕೊಂಡಿರುವ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ಅನೇಕ ಸ್ಕೂಟರ್ ಮಾದರಿಯನ್ನು ಪರಿಚಯಿಸಿದ್ದು, ಈ ಪೈಕಿ ಟಾಪ್ 5 ಸ್ಕೂಟರ್‌ಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.
01. ಒಕಿನಾವಾ ಪ್ರೈಸ್
ದೇಶದ ಅತ್ಯಂತ ವೇಗದ ಇಲೆಕ್ಟ್ರಿಕ್ ಸ್ಕೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪ್ರೈಸ್ ಸ್ಕೂಟರ್ ಕಳೆದ ವಾರವಷ್ಟೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಜಪಾನ್ ಮೂಲದ ಒಕಿನಾವಾ ಕಂಪನಿಗೆ ಸೇರಿದ ಸ್ಕೂಟರ್ ಇದಾಗಿದ್ದು, ತೆಗೆದು ಜೋಡಿಸಬಹುದಾದ ಲೀಥಿಯಂ ಬ್ಯಾಟರಿಯನ್ನು ಈ ಸ್ಕೂಟರ್‌ಗೆ ಅಳವಡಿಸಲಾಗಿದೆ.
ನವದೆಹಲಿಯಲ್ಲಿ ಎಕ್ಸ್-ಶೋರೂಮ್ ಬೆಲೆ 59,889 ರೂ.ಎಂದು ನಿಗದಿ ಮಾಡಲಾಗಿದ್ದು, ಒಂದು ಬಾರಿ ಅದನ್ನು ಚಾರ್ಜ್ ಮಾಡಿದರೆ 170-220 ಕಿಮೀ ವರೆಗೆ ಚಲಿಸುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.
ಹೆಚ್ಚಿನ ಮಾಹಿತಿಗಾಗಿ-ಬಲಿಷ್ಠ ಒಕಿನಾವಾ ಪ್ರೈಸ್ ಎಲೆಕ್ಟ್ರಿಕ್ ವಾಹನದ ತಿಳಿದುಕೊಳ್ಳಲೇ ಬೇಕಾದ ಮಾಹಿತಿ ಇಲ್ಲಿದೆ
02. ಹೋಂಡಾ ಗ್ರಾಜಿಯಾ
ಕಳೆದ ತಿಂಗಳಷ್ಟೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಹೋಂಡಾ ನಿರ್ಮಾಣ ಹೊಸ ಸ್ಕೂಟರ್ ಮಾದರಿ ಗ್ರಾಜಿಯಾ ಹಲವು ವಿಶೇಷತೆ ಕಾರಣವಾಗಿದ್ದು, ಎಲ್ಲಾ ವರ್ಗದ ಜನರನ್ನು ಸೆಳೆಯುವ ಉದ್ದೇಶದಿಂದ ಗ್ರಾಜಿಯಾ ಸ್ಕೂಟರ್ ಅನ್ನು ಪ್ರಮುಖ ಮೂರು ಮಾದರಿಗಳಲ್ಲಿ ಪರಿಚಯಿಸಲಾಗಿದೆ.
ಆಕ್ಟಿವಾ ಮಾದರಿಯಲ್ಲೇ 124.9ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಹೊಸ ಸ್ಕೂಟರ್ ಆರಂಭಿಕ ಬೆಲೆಯನ್ನು ರೂ.57,827 ಗಳಿಗೆ ಮತ್ತು ಉನ್ನತ ಮಾದರಿಯ ಬೆಲೆಯನ್ನು ರೂ.62,269ಗಳಿಗೆ ನಿಗದಿಗೊಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ- ಮಾರುಕಟ್ಟೆಗೆ ಲಗ್ಗೆಯಿಟ್ಟ ಹೋಂಡಾ ಹೊಸ ಸ್ಕೂಟರ್ ಗ್ರಾಜಿಯಾ..!
03. ಹೋಂಡಾ ಕ್ಲಿಕ್
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಎಚ್ಎಂಎಸ್ಐ) ಸಂಸ್ಥೆಯು ಕ್ಲಿಕ್ ಹೆಸರಿನ ಮತ್ತೊಂದು ಸ್ಕೂಟರ್ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಸ್ಕೂಟರಿನ ಬೆಲೆ ರೂ. 42,499 (ಎಕ್ಸ್-ಷೋರೂಂ ದೆಹಲಿ) ನಿಗದಿಪಡಿಸಲಾಗಿದೆ.
ಹೋಂಡಾ ಕ್ಲಿಕ್ ಅನನ್ಯವಾಗಿ ವಿನ್ಯಾಸಗೊಳಿಸಲಾದ ಯುಟಿಲಿಟಿ ಸ್ಕೂಟರ್ ಆಗಿದೆ ಮತ್ತು ಈ ಸ್ಕೂಟರಿನ ವಿನ್ಯಾಸವು ನವಿಯನ್ನು ಆಧರಿಸಿದೆ ಎಂದು ಕಂಪನಿ ತಿಳಿಸಿದ್ದು, ಆದರೆ ಈ ಸ್ಕೂಟರ್ ದಪ್ಪನಾದ ವಿನ್ಯಾಸವನ್ನು ಪಡೆದುಕೊಂಡಿದೆ.
ಹೆಚ್ಚಿನ ಮಾಹಿತಿಗಾಗಿ-ಹೊಸ ಹೋಂಡಾ ಕ್ಲಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಹೋಂಡಾ : ಬೆಲೆ ಮತ್ತು ವಿವರ ಇಲ್ಲಿದೆ...
04. ಟಿವಿಎಸ್ ಜೂಪಿಟರ್ ಕ್ಲಾಸಿಕ್
ಟಿವಿಎಸ್ ತನ್ನ ಜೂಪಿಟರ್ ಕ್ಲಾಸಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಟಿವಿಎಸ್ ಜುಪಿಟರ್ ಸ್ಕೂಟರ್ ಭಾರತದಲ್ಲಿ ರೂ. 55,266 ಸಾವಿರ ಎಕ್ಸ್ ಷೋರೂಂ ಬೆಲೆ ಪಡೆದುಕೊಂಡಿದೆ.
ಹೊಚ್ಚ ಹೊಸ ಸ್ಕೂಟರ್ ಮಾದರಿಯಾದ ಟಿವಿಎಸ್ ಜೂಪಿಟರ್ ಕ್ಲಾಸಿಕ್, 109.7 ಸಿಸಿ ಸಿಂಗಲ್-ಸಿಲಿಂಡರ್ ಎಂಜಿನ್ ಹೊಂದಿದ್ದು, 8-ಬಿಎಚ್‌ಪಿ ಮತ್ತು 8.4-ಎಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.
ಹೆಚ್ಚಿನ ಮಾಹಿತಿಗಾಗಿ-ಭಾರತದಲ್ಲಿ ಬಿಡುಗಡೆಗೊಂಡ ಟಿವಿಎಸ್ ಜೂಪಿಟರ್ ಕ್ಲಾಸಿಕ್ ಸ್ಕೂಟರ್: ಬೆಲೆ ರೂ. 55,266
05. ಹೋಂಡಾ ಆಕ್ಟಿವಾ 4ಜಿ
ಭಾರತದ ಪ್ರತಿಷ್ಠಿತ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ತಯಾರಕ ಕಂಪನಿ ಹೋಂಡಾ ತನ್ನ ಬಹುನೀರೀಕ್ಷಿತ ಸ್ವಯಂಚಾಲಿತ ಹೆಡ್ ಲ್ಯಾಂಪ್(AHO) ಹೊಂದಿರುವ ಹೋಂಡಾ 4ಜಿ ಸ್ಕೂಟರನ್ನು ಕಳೆದ ಮಾರ್ಚ್ 1ರಂದು ಬಿಡುಗಡೆಗೊಳಿಸಿತ್ತು.
ಹೊಸ ಆಕ್ಟಿವಾ 4ಜಿ ಸ್ಕೂಟರ್ ಮ್ಯಾಟೆ ಸೆಲೆನ್ ಸಿಲ್ವರ್ ಮೆಟಾಲಿಕ್ ಮತ್ತು ಮ್ಯಾಟೆ ಆಕ್ಸಿಸ್ ಗ್ರೇ ಮೆಟಾಲಿಕ್ ಎಂಬ ಎರಡು ಹೊಚ್ಚ ಹೊಸ ಬಣ್ಣಗಳಲ್ಲಿ ಆಯ್ಕೆಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 50,730 ಬೆಲೆ ಹೊಂದಿದೆ.
ಹೆಚ್ಚಿನ ಮಾಹಿತಿಗಾಗಿ-ಹೊಸ ಹೋಂಡಾ ಆಕ್ಟಿವಾ 4ಜಿ ಬಿಡುಗಡೆ: ಸ್ಕೂಟರಿನಲ್ಲೇ ಮೊಬೈಲ್ ಚಾರ್ಜ್ ಮಾಡ್ಕೊಳಿ
ಇದರೊಂದಿಗೆ ಯಮಹಾ, ಮಹೀಂದ್ರಾ, ಹಿರೋ, ಸುಜುಕಿ ಮತ್ತು ಎಪ್ರಿಲಿಯಾ ನಿರ್ಮಾಣದ ಕೆಲ ಸ್ಕೂಟರ್ ಮಾದರಿಗಳ ಮುಂದುವರಿದ ಆವೃತ್ತಿಗಳು ಕೂಡಾ ಬಿಡುಗಡೆಯಾಗಿದ್ದು, ಮೇಲೆ ನೀಡಲಾಗಿರುವ ಸ್ಕೂಟರ್ ಮಾದರಿಗಳು ಗ್ರಾಹಕರ ಮೆಚ್ಚುಗೆಗೆ ಪಾತ್ರವಾದ ಸ್ಕೂಟರ್ ಮಾದರಿಗಳಾಗಿವೆ.
Trending DriveSpark YouTube Videos
Subscribe To DriveSpark Kannada YouTube Channel - Click Here