ಹೊಸ ಹೋಂಡಾ ಕ್ಲಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಹೋಂಡಾ : ಬೆಲೆ ಮತ್ತು ವಿವರ ಇಲ್ಲಿದೆ

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಎಚ್ಎಂಎಸ್ಐ) ಸಂಸ್ಥೆಯು ಕ್ಲಿಕ್ ಹೆಸರಿನ ಮತ್ತೊಂದು ಸ್ಕೂಟರ್ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.

By Girish

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಎಚ್ಎಂಎಸ್ಐ) ಸಂಸ್ಥೆಯು ಕ್ಲಿಕ್ ಹೆಸರಿನ ಮತ್ತೊಂದು ಸ್ಕೂಟರ್ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಸ್ಕೂಟರಿನ ಬೆಲೆ ರೂ. 42,499 (ಎಕ್ಸ್-ಷೋರೂಂ ದೆಹಲಿ) ನಿಗದಿಪಡಿಸಲಾಗಿದೆ.

ಹೊಸ ಹೋಂಡಾ ಕ್ಲಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಹೋಂಡಾ : ಬೆಲೆ ಮತ್ತು ವಿವರ ಇಲ್ಲಿದೆ

ಹೋಂಡಾ ಕ್ಲಿಕ್ ಅನನ್ಯವಾಗಿ ವಿನ್ಯಾಸಗೊಳಿಸಲಾದ ಯುಟಿಲಿಟಿ ಸ್ಕೂಟರ್ ಆಗಿದೆ ಮತ್ತು ಈ ಸ್ಕೂಟರಿನ ವಿನ್ಯಾಸವು ನವಿಯನ್ನು ಆಧರಿಸಿದೆ ಎಂದು ಕಂಪನಿ ತಿಳಿಸಿದ್ದು, ಆದರೆ ಈ ಸ್ಕೂಟರ್ ದಪ್ಪನಾದ ವಿನ್ಯಾಸವನ್ನು ಪಡೆದುಕೊಂಡಿದೆ.

ಹೊಸ ಹೋಂಡಾ ಕ್ಲಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಹೋಂಡಾ : ಬೆಲೆ ಮತ್ತು ವಿವರ ಇಲ್ಲಿದೆ

ಯುಟಿಲಿಟಿ ಸ್ಕೂಟರ್ ಗ್ರಾಮೀಣ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಉತ್ಪಾದನೆ ಮಾಡಲಾದ ಸ್ಕೂಟರ್ ಆಗಿದ್ದು, ಹೆಚ್ಚು ಬಲಿಷ್ಠವಾಗಿದೆ.

ಹೊಸ ಹೋಂಡಾ ಕ್ಲಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಹೋಂಡಾ : ಬೆಲೆ ಮತ್ತು ವಿವರ ಇಲ್ಲಿದೆ

ಕ್ಲಿಕ್ ಮುಂಭಾಗದಲ್ಲಿ ದೊಡ್ಡ ಏಪ್ರನ್, ದೊಡ್ಡ ಆಸನ ಮತ್ತು ಆಸನದ ಕೆಳಗಡೆ ಇರುವ ಶೇಖರಣಾ ಸ್ಥಳ ಹೆಚ್ಚು ವಿಶಾಲವಾಗಿದೆ.

ಹೊಸ ಹೋಂಡಾ ಕ್ಲಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಹೋಂಡಾ : ಬೆಲೆ ಮತ್ತು ವಿವರ ಇಲ್ಲಿದೆ

ಆಕ್ಟಿವಾ ಸ್ಕೂಟರ್‌ಗೆ ಹೋಲಿಸಿದರೆ ಕಿರಿದಾದ ಸ್ಕೂಟರ್ ಇದಾಗಿದೆ ಮತ್ತು 6 ಕೆ.ಜಿಯಷ್ಟು ಹಗುರವಾಗಿದೆ. ಸ್ಕೂಟರ್ ಹಿಂಭಾಗದಲ್ಲಿ ಕೊಳವೆಯಾಕಾರದ ದೋಣಿ ಹಳಿಗಳನ್ನು ಹೊಂದಿದ್ದು, ಇವು ಕ್ಲಿಕ್ ಸ್ಕೂಟರಿನ ಉಪಯುಕ್ತತೆಯನ್ನು ಆಕರ್ಷಿಸುತ್ತವೆ.

ಹೊಸ ಹೋಂಡಾ ಕ್ಲಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಹೋಂಡಾ : ಬೆಲೆ ಮತ್ತು ವಿವರ ಇಲ್ಲಿದೆ

ಹೊಸದಾಗಿ ಬಿಡುಗಡೆಯಾಗಿರುವ ಈ ಕ್ಲಿಕ್ ಸ್ಕೂಟರಿನ ಎತ್ತರ ಕಡಿಮೆ ಇದ್ದು, ಕೇವಲ 743 ಮಿಮಿಗಳಷ್ಟು ಎತ್ತರ ಹೊಂದಿದೆ. ಇದರಿಂದಾಗಿ ಮಹಿಳೆಯರಿಗೆ ಈ ಸ್ಕೂಟರ್ ಸವಾರಿ ಮಾಡಲು ಬಹಳಷ್ಟು ಸುಲಭವಾಗಲಿದೆ.

ಹೊಸ ಹೋಂಡಾ ಕ್ಲಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಹೋಂಡಾ : ಬೆಲೆ ಮತ್ತು ವಿವರ ಇಲ್ಲಿದೆ

ಕ್ಲಿಕ್ ಸ್ಕೂಟರಿನ ಇಂಧನ ಟ್ಯಾಂಕ್ ಕೇವಲ 3.5-ಲೀಟರ್ ಇಂಧನ ಸಾಮರ್ಥ್ಯ ಹೊಂದಿದ್ದು, ಅದು ಆಕ್ಟಿವಾ ಮತ್ತು ನವಿ ಸ್ಕೂಟರ್‌ಗಳಿಗಿಂತ ಕಡಿಮೆ ಎನ್ನಬಹುದು.

ಹೊಸ ಹೋಂಡಾ ಕ್ಲಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಹೋಂಡಾ : ಬೆಲೆ ಮತ್ತು ವಿವರ ಇಲ್ಲಿದೆ

ಇದಲ್ಲದೆ, ಕ್ಲಿಕ್ ಸ್ಕೂಟರ್ ಕಾಂಬಿ ಬ್ರೇಕಿಂಗ್ ಸಿಸ್ಟಮ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಟ್ಯೂಬ್‌ಲೆಸ್ ಟೈರುಗಳು ಮತ್ತು ನಿರ್ವಹಣೆ ಮುಕ್ತ ಬ್ಯಾಟರಿ ಹೊಂದಿದೆ.

ಹೊಸ ಹೋಂಡಾ ಕ್ಲಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಹೋಂಡಾ : ಬೆಲೆ ಮತ್ತು ವಿವರ ಇಲ್ಲಿದೆ

ಕ್ಲಿಕ್ ಸ್ಕೂಟರ್ 8.94 ಎನ್‌ಎಂ ತಿರುಗುಬಲದಲ್ಲಿ 8.04 ಅಶ್ವಶಕ್ತಿ ಉತ್ಪಾದಿಸುವ 109.19 ಸಿಸಿ ಎಂಜಿನ್ ಹೊಂದಿದೆ ಮತ್ತು ಗರಿಷ್ಠ 83 ಕಿ.ಮೀ ವೇಗವನ್ನು ಪಡೆದುಕೊಂಡಿದೆ.

Most Read Articles

Kannada
English summary
Read in kannada about Honda (HMSI) company has launched yet another scooter, the Cliq in the Indian market. The Honda Cliq is priced at Rs 42,499 ex-showroom (Delhi).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X