ಸ್ಕೋಡಾ 2017 ಒಕ್ಟಾವಿಯಾ ಫೇಸ್‌ಲಿಫ್ಟ್ ಕಾರು ಭಾರತದಲ್ಲಿ ಬಿಡುಗಡೆ

Written By:

ವಾಹನ ತಾಯಾರಕ ಸಂಸ್ಥೆಯಾದ ಸ್ಕೋಡಾ ತನ್ನ 2017 ಒಕ್ಟಾವಿಯಾ ಫೇಸ್‌ಲಿಫ್ಟ್ ಕಾರನ್ನು ಭಾರತ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ಜೆಕ್ ಗಣರಾಜ್ಯದ ಪ್ರಖ್ಯಾತ ವಾಹನ ಸಂಸ್ಥೆ ಸ್ಕೋಡಾ, 2017 ಒಕ್ಟಾವಿಯಾ ಫೇಸ್‌ಲಿಫ್ಟ್ ಕಾರನ್ನು ಅನಾವರಣಗೊಳಿಸಿದ್ದು, ಭಾರತದಲ್ಲಿ ಸ್ಕೋಡಾ ಒಕ್ಟಾವಿಯಾ ಫೇಸ್‌ಲಿಫ್ಟ್ ಕಾರಿನ ಬೆಲೆ ರೂ. 15.49 ಲಕ್ಷ (ಎಕ್ಸ್ ಷೋ ರೂಂ ಇಂಡಿಯಾ)ದಿಂದ ಆರಂಭವಾಗಲಿದೆ.

2001ರಲ್ಲಿ ಒಕ್ಟಾವಿಯಾ ಕಾರಿನ ಬಿಡುಗಡೆ ಮಾಡುವ ಮೂಲಕ ಸ್ಕೋಡಾ ಸಂಸ್ಥೆಯು ಭಾರತದಲ್ಲಿ ಅಮೋಘ ಪ್ರವೇಶ ಪಡೆದುಕೊಂಡಿತು ಎಂಬ ವಿಚಾರ ನಾವು ಇಲ್ಲಿ ಗಮನಿಸಬಹುದಾಗಿದೆ.

ಸರಿ ಸುಮಾರು 16 ವರ್ಷಗಳ ಅಂತರದಲ್ಲಿ ಒಕ್ಟಾವಿಯಾ ಕಾರು ಮೂರು ಪೀಳಿಗೆಯನ್ನು ಕಂಡಿದ್ದು, ಹೊಸ ಒಕ್ಟಾವಿಯಾವು ಮಿಡ್-ಲೈಫ್ ಫೇಸ್‌ಲಿಫ್ಟ್ ಅಂಶಗಳನ್ನು ಪಡೆದುಕೊಂಡು ಬಿಡುಗಡೆಗೊಂಡಿದೆ.

ಹೊಸ 2017 ಸ್ಕೋಡಾ ಒಕ್ಟಾವಿಯಾ ಕಾರು, ಆಂಬಿಷನ್, ಸ್ಟೈಲ್ ಮತ್ತು ಸ್ಟೈಲ್ ಪ್ಲಸ್ ಎಂಬ ಮೂರು ವಿವಿಧ ರೂಪಾಂತರ ಆಯ್ಕೆಗಳಲ್ಲಿ ಲಭ್ಯವಿದೆ. ಈ ಮೂರೂ ವಿಧಗಳೂ ಸಹ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಅವುಗಳಿಗುಣವಾಗಿ ವಿಭಜನೆ ಮಾಡಲಾಗಿದೆ.

ಆಂಬಿಷನ್ ಮಾದರಿಯಲ್ಲಿ ಮ್ಯಾನ್ಯುವಲ್ ಗೇರ್‌ಬಾಕ್ಸ್ ಪೆಟ್ರೋಲ್ ಮತ್ತು ಡೀಸಲ್ ಎಂಜಿನ್ ಆಯ್ಕೆ ನೀಡಲಾಗಿದೆ. ಇನ್ನು ಸ್ಟೈಲ್ ಮಾದರಿಯು ಸ್ವಯಂಚಾಲಿತ ಮತ್ತು ಮಾನ್ಯುಯಲ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿದೆ.

ಸ್ಟೈಲ್ ಪ್ಲಸ್ ಮಾದರಿಯ ಕಾರು ಟಾಪ್ ಮಾಡೆಲ್ ಆಗಿದ್ದು, ಉನ್ನತ ಮಟ್ಟದ ಆಯ್ಕೆಯೊಂದಿಗೆ ಪೆಟ್ರೋಲ್ ಮತ್ತು ಡೀಸಲ್ ಎಂಜಿನ್ ಸ್ವಯಂಚಾಲಿತ ರೂಪಾಂತರ ಪಡೆದುಕೊಂಡಿದೆ.

ಈ ಸ್ಕೋಡಾ ಕಾರು ಎರಡು ಪೆಟ್ರೋಲ್ ಮತ್ತು ಒಂದು ಡೀಸೆಲ್(ಒಟ್ಟು 3)ಇಂಜಿನ್ ಆಯ್ಕೆಯೊಂದಿಗೆ ಬಿಡುಗಡೆಗೊಂಡಿದ್ದು, ಪೆಟ್ರೋಲ್ ಕಾರು 1.4 ಲೀಟರ್ ಮತ್ತು 1.8 ಲೀಟರ್ ಆಯ್ಕೆ ಹೊಂದಿರಲಿದೆ.

1.4 ಲೀಟರ್ ಹೊಂದಿರುವ ಪೆಟ್ರೋಲ್ ಕಾರು 148 ರಷ್ಟು ಅಶ್ವಶಕ್ತಿ ಹೊಂದಿರಲಿದ್ದು, 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಮತ್ತು ಲೀಟರ್‌ಗೆ 16.7 ಕಿ.ಮೀ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.

1.8 ಲೀಟರ್ ಪಡೆದುಕೊಂಡಿರುವ ಕಾರು 178 ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡುವಷ್ಟು ಬಲಿಷ್ಠವಾಗಿದ್ದು, 7-ಸ್ಪೀಡ್ DSG ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು ಲೀಟರ್‌ಗೆ 15.1 ಕಿ.ಮೀ ಮೈಲೇಜ್ ನೀಡಲಿದೆ ಎಂದು ಕಂಪನಿ ತಿಳಿಸಿದೆ.

2.0-ಲೀಟರ್ ಟರ್ಬೊ‌ಚಾರ್ಜ್ಡ್ ಡೀಸೆಲ್ ಎಂಜಿನ್ ಕಾರು 141 ರಷ್ಟು ಅಶ್ವಶಕ್ತಿ ನೀಡಲಿದ್ದು, 6-ಸ್ಪೀಡ್ ಮಾನ್ಯುಯಲ್ ಮತ್ತು 6-ಸ್ಪೀಡ್ DSG ಆಟೋಮ್ಯಾಟಿಕ್ ಎಂಬ ಎರಡು ರೀತಿಯ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಈ ಕಾರು ಬಿಡುಗಡೆಗೊಂಡಿದೆ.

ಸುರಕ್ಷತೆಯ ವಿಷಯದಲ್ಲಿ, ಓಕ್ಟಾವಿಯ ಕಾರು ಎಂಟು ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಈಬಿಡಿ, ಹಿಲ್ ಹೋಲ್ಡ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ವಿಶಿಷ್ಟ ಲಾಕ್, ಟೈಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್, ಡ್ರೈವರ್ ಫ್ಯಾಟಿಗ್ ವಾರ್ನಿಂಗ್ ಸಿಸ್ಟಮ್ ಮತ್ತು ಮಲ್ಟಿ-ಕಲೋಸಿಯನ್ ಬ್ರೆಕಿಂಗ್ ಸಿಸ್ಟಮ್ ಪಡೆದುಕೊಳ್ಳಲಿದೆ.

Skoda Octavia Petrol Price List (All India)

Variant Price Ex-Showroom
 Octavia Ambition 1.4 TSI MT Rs 15,49,405  
 Octavia Style 1.4 TSI MT Rs 17,49,605  
 Octavia Style 1.8 TSI AT  Rs 18,59,429  
 Octavia Style Plus 1.8 TSI AT  Rs 20,89,900  

Skoda Octavia Diesel Price List (All India)

Variant Price Ex-Showroom
 Octavia Ambition 2.0 TDI CR MT Rs 16,89,974 
 Octavia Style 2.0 TDI CR MT Rs 18,95,608 
 Octavia Style 2.0 TDI CR AT  Rs 20,49,619 
 Octavia Style Plus 2.0 TDI CR AT  Rs 22,89,573 

English summary
2017 Skoda Octavia launched in India. Prices for the Skoda Octavia facelift in India start at Rs 15.49 lakh ex-showroom (pan India).
Please Wait while comments are loading...

Latest Photos