ಟಾಟಾ ಟಿಯಾಗೋ ಎಕ್ಸ್‌ಟಿಎ ಎಎಂಟಿ ಕಾರು ಆವೃತ್ತಿ ಬಿಡುಗಡೆ

Written By:

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಟಾಟಾ ಸಂಸ್ಥೆಯು ತನ್ನ ಬಹುಬೇಡಿಕೆಯಲ್ಲಿರುವ ಟಿಯಾಗೋ ಕಾರು ಆವೃತ್ತಿಯನ್ನು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ವ್ಯವಸ್ಥೆಯೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಮಾಹಿತಿ ಇಲ್ಲಿದೆ.

To Follow DriveSpark On Facebook, Click The Like Button
ಟಾಟಾ ಟಿಯಾಗೋ ಎಕ್ಸ್‌ಟಿಎ ಎಎಂಟಿ ಕಾರು ಆವೃತ್ತಿ ಬಿಡುಗಡೆ

ಹ್ಯಾಚ್‌ಬ್ಯಾಕ್ ಮಾದರಿಗಳಲ್ಲೇ ಅತಿ ಹೆಚ್ಚು ಬೇಡಿಕೆ ಸೃಷ್ಠಿಸಿರುವ ಟಾಟಾ ಟಿಯಾಗೋ ಕಾರು ಆವೃತ್ತಿಯನ್ನು ಸದ್ಯದ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಅಭಿವೃದ್ಧಿ ಮಾಡಲಾಗಿದ್ದು, ಈ ಹಿಂದಿನ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ ಇನ್ಮುಂದೆ ಎಎಂಟಿ (ಆಟೋ ಮ್ಯಾಟಿಕ್ ಗೇರ್‌ಬಾಕ್ಸ್)ನೊಂದಿಗೆ ಖರೀದಿಗೆ ಲಭ್ಯವಿರಲಿದೆ.

ಟಾಟಾ ಟಿಯಾಗೋ ಎಕ್ಸ್‌ಟಿಎ ಎಎಂಟಿ ಕಾರು ಆವೃತ್ತಿ ಬಿಡುಗಡೆ

ಪ್ರಸ್ತುತ ಹ್ಯಾಚ್‌ಬ್ಯಾಕ್ ಮಾದರಿಗಳಿಗೆ ಸ್ಪರ್ಧೆ ಒಡ್ಡುವ ನಿಟ್ಟಿನಲ್ಲಿ ಟಿಯಾಗೋ ಎಕ್ಸ್‌ಟಿಎ ಎಎಂಟಿ ಹೊಸ ಕಾರನ್ನು ಬಿಡುಗಡೆ ಮಾಡಿರುವ ಟಾಟಾ, ಆರಂಭಿಕ ಕಾರು ಆವೃತ್ತಿಯ ಬೆಲೆಯನ್ನು ರೂ.4.79 ಲಕ್ಷಕ್ಕೆ ನಿಗದಿಗೊಳಿಸಿದೆ.

ಟಾಟಾ ಟಿಯಾಗೋ ಎಕ್ಸ್‌ಟಿಎ ಎಎಂಟಿ ಕಾರು ಆವೃತ್ತಿ ಬಿಡುಗಡೆ

ಟಾಟಾ ಜನಪ್ರಿಯ ಕಾರು ಉನ್ನತಗಳಾದ ಜೆಸ್ಟ್ ಮತ್ತು ನ್ಯಾನೋ ಕಾರುಗಳಲ್ಲಿ ಬಳಕೆ ಮಾಡಿರುವ 'ಈಸಿ ಶಿಫ್ಟ್' ತಂತ್ರಜ್ಞಾನವನ್ನು ಟಿಯಾಗೋ ಎಎಂಟಿ ಆವೃತ್ತಿಯಲ್ಲಿ ಬಳಕೆ ಮಾಡಲಾಗಿದ್ದು, ಉತ್ತಮ ಇಂಧನ ಕಾರ್ಯಕ್ಷಮತೆ ಪಡೆದುಕೊಳ್ಳುವಲ್ಲಿ ಸಹಕಾರಿಯಾಗಿದೆ.

ಟಾಟಾ ಟಿಯಾಗೋ ಎಕ್ಸ್‌ಟಿಎ ಎಎಂಟಿ ಕಾರು ಆವೃತ್ತಿ ಬಿಡುಗಡೆ

ಎಂಜಿನ್

ಎಎಂಟಿಯೊಂದಿಗೆ ಬಿಡುಗಡೆಯಾಗಿರುವ ಟಿಯಾಗೋ ಆವೃತ್ತಿಯು 1.2-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 84-ಬಿಎಚ್‌ಪಿ ಮತ್ತು 114-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದೆ.

ಟಾಟಾ ಟಿಯಾಗೋ ಎಕ್ಸ್‌ಟಿಎ ಎಎಂಟಿ ಕಾರು ಆವೃತ್ತಿ ಬಿಡುಗಡೆ

ಇದರ ಜೊತೆಗೆ ಆಟೋಮ್ಯಾಟಿಕ್, ರಿವರ್ಸ್, ನ್ಯೂಟರಲ್ ಮತ್ತು ಮ್ಯಾನುವಲ್ ಚಾಲನಾ ವೈಶಿಷ್ಟ್ಯತೆಗಳನ್ನು ಕೂಡಾ ಪಡೆದುಕೊಂಡಿದ್ದು, ಸ್ಪೋರ್ಟ್ ಮತ್ತು ಸಿಟಿ ಡ್ರೈವಿಂಗ್ ಮೂಡ್‌ಗಳನ್ನು ಬದಲಾಯಿಸಬಹುದಾಗಿದೆ.

Recommended Video
2018 Hyundai Verna Indian Model Unveiled | In Kannada - DriveSpark ಕನ್ನಡ
ಟಾಟಾ ಟಿಯಾಗೋ ಎಕ್ಸ್‌ಟಿಎ ಎಎಂಟಿ ಕಾರು ಆವೃತ್ತಿ ಬಿಡುಗಡೆ

ಮಾರುತಿ ಸುಜುಕಿ ಸೆಲೆರಿಯೊ ಎಎಂಟಿ, ಹ್ಯುಂಡೈ ಗ್ರ್ಯಾಂಡ್ ಐ10 ಆಟೋಮ್ಯಾಟಿಕ್, ಮಾರುತಿ ಸುಜುಕಿ ಇಗ್ನಿಸ್ ಎಎಂಟಿ ಮತ್ತು ರೆನಾಲ್ಟ್ ಕ್ವಿಡ್ 1.0-ಲೀಟರ್ ಎಎಂಟಿ ಆವೃತ್ತಿಗಳಿಗೆ ಸ್ಪರ್ಧೆ ಒಡ್ಡುವ ನಿಟ್ಟಿನಲ್ಲಿ ಟಿಯಾಗೋ ಎಕ್ಸ್‌ಟಿಎ ಎಎಂಟಿ ಆವೃತ್ತಿಯನ್ನು ಅಭಿವೃದ್ಧಿ ಮಾಡಲಾಗಿದೆ.

ಟಾಟಾ ಟಿಯಾಗೋ ಎಕ್ಸ್‌ಟಿಎ ಎಎಂಟಿ ಕಾರು ಆವೃತ್ತಿ ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈಗಾಗಲೇ ಟಿಯಾಗೋ ಮ್ಯಾನುವಲ್ ಗೇರ್‌ಬಾಕ್ಸ್ ಆವೃತ್ತಿಗಳ ಮಾರಾಟದಲ್ಲಿ ಟಾಟಾ ಮೋಟಾರ್ಸ್ ಹೊಸ ದಾಖಲೆ ಕಂಡಿದ್ದು, ಇದೀಗ ಎಎಂಟಿ ಆವೃತ್ತಿಯನ್ನು ಪರಿಚಯಿಸುವ ಮೂಲಕ ಟಾಟಾ ಪ್ರಿಯರಿಗೆ ಗಿಫ್ಟ್ ನೀಡಿದಿರುವುದು ಗಮನಾರ್ಹ ಸಂಗತಿ.

English summary
Read in Kannada about Tata Tiago XTA AMT Variant Launched In India.
Story first published: Thursday, August 17, 2017, 11:48 [IST]
Please Wait while comments are loading...

Latest Photos