ಟಾಟಾ ನೆಕ್ಸನ್ ಕಾರಿನ ಮೊದಲ ಚಾಲನಾ ವಿಮರ್ಶೆಯ ಕಂಪ್ಲೀಟ್ ಡೀಟೇಲ್ಸ್

2014ನೇ ಇಸವಿಯಲ್ಲಿ ನೆಡೆದ ಆಟೋ ಎಕ್ಸ್‌ಪೋದಲ್ಲಿ ಟಾಟಾ ತನ್ನ ನೆಕ್ಸನ್ ಎಸ್‌ಯುವಿ ಪರಿಕಲ್ಪನೆಯನ್ನು ಭಾರತದಲ್ಲಿ ಪರಿಚಯಿಸಿತ್ತು. ಈ ಎಸ್‌ಯುವಿ ಕಾರಿನ ವಿಮರ್ಶೆಯನ್ನು ಡ್ರೈವ್ ಸ್ಪಾರ್ಕ್ ನೆಡೆಸಿದ್ದು,ಈ ರಿವ್ಯೂ ಬಗ್ಗೆ ವಿವರ ಇಲ್ಲಿದೆ.

By Girish

ಈ ಕಾರಿನ ಪ್ರದರ್ಶನದ ಮೂಲಕ ಟಾಟಾ ಮೋಟರ್ಸ್ ಸಾರ್ವಜನಿಕರನ್ನು ತನ್ನೆಡೆ ಸೆಳೆದಿತ್ತು ಈ ಮೂಲಕ ನೆಕ್ಸನ್ ಕಾರಿನ ಉತ್ಪಾದನೆ ನೆಡೆಸಲು ಗ್ರೀನ್ ಸಿಗ್ನಲ್ ಪಡೆದುಕೊಂಡಿತು ಎಂದರೆ ತಪ್ಪಾಗಲಾರದು. ಎರಡು ವರ್ಷಗಳ ನಂತರವು ಸಹ ಎಕ್ಸ್‌ಪೋದಲ್ಲಿ ಪ್ರದರ್ಶನ ಮಾಡಿದ ಮೂಲ ಪರಿಕಲ್ಪನೆಯ ಬಹುತೇಕ ಎಲ್ಲಾ ವಿನ್ಯಾಸ ಸೂಚನೆಗಳನ್ನು ಬಿಡುಗಡೆಗೊಂಡ ಕಾರು ಉಳಿಸಿಕೊಂಡಿದೆ ಎನ್ನಬಹುದು.

ಟಾಟಾ ನೆಕ್ಸನ್ ಕಾರಿನ ಮೊದಲ ಚಾಲನಾ ವಿಮರ್ಶೆಯ ಕಂಪ್ಲೀಟ್ ಡೀಟೇಲ್ಸ್

ಸಾಕಷ್ಟು ವರ್ಷಗಳ ತಯಾರಿಯೊಂದಿಗೆ ಭಾರತೀಯ ಕಾರು ಮಾರುಕಟ್ಟೆಯ ಶ್ರೇಷ ವಿಭಾಗಕ್ಕೆ ಕಾಲಿಟ್ಟಿರುವ ಈ ನೆಕ್ಸನ್ ಎಸ್‌ಯುವಿ ಕಾರು ಈಗಾಗಲೇ ಸುಸಜ್ಜಿತವಾದ ನಿರ್ಮಾಣಗೊಂಡು ಮಾರುಕಟ್ಟೆಯಲ್ಲಿ ಯಶಸ್ವಿಯಾಗಿರುವ ಮಾರುತಿ ವಿಟಾರಾ ಬ್ರೆಝ ಮತ್ತು ಫೋರ್ಡ್ ಎಕೋಸ್ಪೋರ್ಟ್‌ ಹಾಗು ಮುಂತಾದ ಕಾರುಗಳೊಂದಿಗೆ ಪ್ರತಿಸ್ಪರ್ಧೆ ನೆಡೆಸಲಿದೆ. ಇಂತಹ ಕಾರಿನ ಕಾರ್ಯಕ್ಷಮತೆ ಮತ್ತು ನೀಡಿದ ಹಣಕ್ಕೆ ಇದು ಯೋಗ್ಯವಾಗಿದೆಯೇ? ಎಂಬುದನ್ನು ತಿಳಿದುಕೊಳ್ಳುವ ಸಮಯ ಬಂದಿದೆ. ಮುಂದೆ ಓದಿ...

Recommended Video

Tata Nexon Review: Specs
ಟಾಟಾ ನೆಕ್ಸನ್ ಕಾರಿನ ಮೊದಲ ಚಾಲನಾ ವಿಮರ್ಶೆಯ ಕಂಪ್ಲೀಟ್ ಡೀಟೇಲ್ಸ್

ಕಾರಿನ ಹೊರಭಾಗ :

ಎಸ್‌ಯುವಿಗಳ ಪ್ರಪಂಚದಲ್ಲಿ, ನೆಕ್ಸನ್ ವಿನ್ಯಾಸವು ತಾಜಾ ಗಾಳಿಯ ಉಸಿರಾಟದ ರೀತಿಯಲ್ಲಿ ಬಂದಿದ್ದು, ಇಂಪ್ಯಾಕ್ಟ್ ಡಿಸೈನ್ ಫಿಲಾಸಫಿ ತಂತ್ರಜ್ಞಾನ ಪಡೆದುಕೊಂಡಿರುವ ಈ ಕಾರು, ಮಸ್ಕುಲರ್ ಲುಕ್ ಮತ್ತು ಕೂಪೆ ರೀತಿಯ ರೂಫ್ ವಿನ್ಯಾಸ ಹೊಂದಿರಲಿದೆ.

ಟಾಟಾ ನೆಕ್ಸನ್ ಕಾರಿನ ಮೊದಲ ಚಾಲನಾ ವಿಮರ್ಶೆಯ ಕಂಪ್ಲೀಟ್ ಡೀಟೇಲ್ಸ್

ಎಂದಿನಂತೆ ಸಾಂಪ್ರದಾಯಿಕ ಎಸ್‌ಯುವಿಗಳ ವಿನ್ಯಾಸದ ಅಂಶಗಳ ಮಿಶ್ರಣದೊಂದಿಗೆ ಈ ಹೊಸ ಟಾಟಾ ನೆಕ್ಸನ್ ಕಾರು ಬಿಡುಗಡೆಗೊಳ್ಳುವ ಮೂಲಕ ಜಗತ್ತಿನಲ್ಲಿ ಎಲ್ಲಾ ಎಸ್‌ಯುವಿ ಕಾರುಗಳ ಮದ್ಯೆ ಎದ್ದುಕಾಣುವಂತೆ ಮಾಡುತ್ತದೆ. ಮುಂಭಾಗದಲ್ಲಿ, ಉನ್ನತ ದರ್ಜೆಯ ಹೆಡ್‌ಲ್ಯಾಂಪ್‌ಗಳ ಇರಿಸಲಾಗಿದೆ ಮತ್ತು ಬೆಕ್ಕಿ ಕಣ್ಣಿನ ಆಕಾರದ ಹಗಲು ಹೊತ್ತು ಬೆಳಗುವ ಎಲ್ಇಡಿ ದೀಪಗಳನ್ನು ಮತ್ತು ತಿರುವು ಸಂಕೇತಗಳನ್ನು ಈ ಕಾರು ಹೊಂದಿದೆ.

ಟಾಟಾ ನೆಕ್ಸನ್ ಕಾರಿನ ಮೊದಲ ಚಾಲನಾ ವಿಮರ್ಶೆಯ ಕಂಪ್ಲೀಟ್ ಡೀಟೇಲ್ಸ್

ಕಾರಿನ ಬದಿಯಿಂದ ನೋಡಿದಾಗ, ಕ್ರೀಡಾ ಆವೃತಿಯು ಸ್ವೊಪಿ ರೂಫ್‌ಲೈನ್ ವಿನ್ಯಾಸದ ನೆಕ್ಸನ್ ಕಾರು ಪಡೆದುಕೊಂಡಿದೆ. ತೇಲುವ ಮೇಲ್ಛಾವಣಿಯು ವಿನ್ಯಾಸವು ಗಾಢ ಬೂದು ಬಣ್ಣದ ಕೆಲಸವನ್ನು ಹೊಂದಿದೆ, ಇದು ನೆಕ್ಸನ್ ಪ್ರಕಾಶಮಾನವಾದ ವರ್ಣಮಯ ಕೆಲಸದೊಂದಿಗೆ ಭಿನ್ನವಾಗಿದೆ.

ಟಾಟಾ ನೆಕ್ಸನ್ ಕಾರಿನ ಮೊದಲ ಚಾಲನಾ ವಿಮರ್ಶೆಯ ಕಂಪ್ಲೀಟ್ ಡೀಟೇಲ್ಸ್

16 ಇಂಚಿನ ಮಷೀನ್-ಕಟ್ ಡ್ಯೂಯಲ್-ಟೋನ್ ಮಿಶ್ರಲೋಹದ ಚಕ್ರಗಳನ್ನು ಈ ಕಾರು ಒಳಗೊಂಡಿದ್ದು, ಹಿಂಭಾಗದ ವಿಂಡ್‌ಸ್ಕ್ರೀನ್ ಚುರುಕಾಗಿ ಚೂಪು ವಿನ್ಯಾಸ ಹೊಂದಿದೆ ಮತ್ತು ಬಿಳಿ ಸಿರಾಮಿಕ್ ಪ್ಲ್ಯಾಸ್ಟಿಕ್ ಟಾಟಾ ಬ್ಯಾಡ್ಜ್ ಆತಿಥ್ಯವಹಿಸುತ್ತದೆ.

ಟಾಟಾ ನೆಕ್ಸನ್ ಕಾರಿನ ಮೊದಲ ಚಾಲನಾ ವಿಮರ್ಶೆಯ ಕಂಪ್ಲೀಟ್ ಡೀಟೇಲ್ಸ್

ಹಿಂಭಾಗದ ಬೂಟ್ ವಿಭಾಗವು 350 ಲೀಟರ್‌ಗಳಷ್ಟು ಶೇಖರಣಾ ಪ್ರಮಾಣವನ್ನು ಹೊಂದಿದೆ, ಎರಡನೇ ಮತ್ತು ಮೂರನೇ ಸಾಲುಗಳ ಸೀಟುಗಳನ್ನು ಮುಚ್ಚುವ ಮೂಲಕ 690 ಲೀಟರ್‌ಗಳವರೆಗೆ ಈ ಶೇಖರಣಾ ಪ್ರಮಾಣವನ್ನು ವಿಸ್ತರಿಸಬಹುದಾಗಿದೆ.

ಟಾಟಾ ನೆಕ್ಸನ್ ಕಾರಿನ ಮೊದಲ ಚಾಲನಾ ವಿಮರ್ಶೆಯ ಕಂಪ್ಲೀಟ್ ಡೀಟೇಲ್ಸ್

ಒಳಭಾಗ :

ನೆಕ್ಸನ್ ಕಾರಿನ ಆಂತರಿಕ ಗುಣಮಟ್ಟ ಮತ್ತು ವಿನ್ಯಾಸ ಎರಡೂ ವಿಭಾಗದಲ್ಲಿ ಈ ಕಾರು ಶ್ರೇಷ್ಠತೆಯನ್ನು ಕಾಪಾಡಿಕೊಂಡಿದೆ ಮತ್ತು ಬೂದು ಬಣ್ಣದಲ್ಲಿ ಇರುವಂತಹ ದೊಡ್ಡದಾದ ಡ್ಯಾಶ್‌ಬೋರ್ಡ್ ನೋಡಬಹುದಾಗಿದೆ. ದೀರ್ಘಾವಧಿಯ ಪ್ರಯಾಣದಲ್ಲೂ ಸಹ ಚಾಲಕ ಮತ್ತು ಮುಂದಿರುವ ಪ್ರಯಾಣಿಕ ಹೆಚ್ಚು ಶ್ರಮವಾಗದಂತೆ ಮುಂಭಾಗದ ಸೀಟುಗಳನ್ನು ವಿನ್ಯಾಸ ಮಾಡಲಾಗಿದೆ.

ಟಾಟಾ ನೆಕ್ಸನ್ ಕಾರಿನ ಮೊದಲ ಚಾಲನಾ ವಿಮರ್ಶೆಯ ಕಂಪ್ಲೀಟ್ ಡೀಟೇಲ್ಸ್

ಚಾಲಕನ ಆಸನವು ಕ್ರೀಡಾ ಕಾರಿನ ರೀತಿಯಲ್ಲಿ ಇರುವಂತೆ, ಎತ್ತರ ಹೊಂದಾಣಿಕೆ ಸರಿಹೊಂದಿಸುವ ಸ್ಟೀರಿಂಗ್ ಜೊತೆಗೆ ಚಾಲಕರು ರಸ್ತೆಯ ಬಗ್ಗೆ ತೀಕ್ಷ್ಣರೀತಿಯ ನೋಟವನ್ನು ಪಡೆದುಕೊಂಡಿದೆ. ನಕ್ಸನ್ ಕಾರಿನ ಹಿಂಭಾಗದ ಮೂರು ಆಸನಗಳೂ ಸಹ ವಿಶಾಲಗಿದ್ದು, ಹಿಗ್ಗಿಸಲಾದ ಈ ಆಸನಗಳು ದೀರ್ಘ ಪ್ರಯಾಣವನ್ನು ಅನುಕೂಲಗೊಳಿಸುತ್ತದೆ.

ಟಾಟಾ ನೆಕ್ಸನ್ ಕಾರಿನ ಮೊದಲ ಚಾಲನಾ ವಿಮರ್ಶೆಯ ಕಂಪ್ಲೀಟ್ ಡೀಟೇಲ್ಸ್

ನೆಕ್ಸನ್ ಕಾರು 6.5-ಇಂಚಿನ ಎಚ್‌ಡಿ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಡಿಸ್‌ಪ್ಲೇ, ಇನ್ಸ್ಟ್ರು‌ಮೆಂಟ್ ಬಿನ್ನಾಕಲ್(ಟಿಗೋರ್ ಕಾರಿನಿಂದ ತೆಗೆದುಕೊಳ್ಳಲಾಗಿದೆ) ಮತ್ತು ಸ್ಟೀರಿಂಗ್ ಚಕ್ರ (ಝೆಸ್ಟ್ ಕಾರಿನಿಂದ ಎರವಲು ಪಡೆದಿದೆ) ಹಾಗು ಮುಂತಾದ ಸೌಲಭ್ಯಗಳನ್ನು ಡ್ಯಾಶ್‌ಬೋರ್ಡ್ ಪಡೆದುಕೊಂಡಿದೆ. ಈ ಕಾರಿನ ಡಿಸ್‌ಪ್ಲೇ ಬಳಸಲು ಸುಲಭವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಚಲನೆಯಲ್ಲಿದ್ದಾಗ ಚಾಲಕರನ್ನು ಬೇರೆಡೆಗೆ ತಿರುಗಿಸದಂತೆ ಎಚ್ಚರ ವಹಿಸುತ್ತದೆ ಹಾಗು ಹಿಂಭಾಗಕ್ಕೆ ಚಲಿಸುವಾಗ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಬಳಸುತ್ತದೆ.

ಟಾಟಾ ನೆಕ್ಸನ್ ಕಾರಿನ ಮೊದಲ ಚಾಲನಾ ವಿಮರ್ಶೆಯ ಕಂಪ್ಲೀಟ್ ಡೀಟೇಲ್ಸ್

ಕಾರಿನಲ್ಲಿರುವ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಹೊಂದಿದೆ, ಇದು ಬಳಕೆದಾರರಿಗೆ ಕರೆಗಳನ್ನು ಮಾಡಲು, ಸಂದೇಶಗಳನ್ನು ಓದಲು, ನಿರ್ದೇಶಿಸಲು, ಸಂಗೀತವನ್ನು ಬದಲಿಸಲು ಮತ್ತು ಗೂಗಲ್ ನಕ್ಷೆಗಳ ಮೂಲಕ ಟರ್ನ್-ಬೈ-ಟರ್ನ್ ನ್ಯಾವಿಗೇಶನ್ ಲಾಭವನ್ನು ಪಡೆಯಲು ಅನುಮತಿಸುತ್ತದೆ. ಟಾಟಾ ಕಂಪನಿಯು ಆಪಲ್ ಕಾರ್‌ಪ್ಲೇ ಶೀಘ್ರವಾಗಿ ಸಿಸ್ಟಮ್‌ಗೆ ತಲುಪಲಿದೆ ಎಂದು ಭರವಸೆ ನೀಡಿದೆ.

ಟಾಟಾ ನೆಕ್ಸನ್ ಕಾರಿನ ಮೊದಲ ಚಾಲನಾ ವಿಮರ್ಶೆಯ ಕಂಪ್ಲೀಟ್ ಡೀಟೇಲ್ಸ್

ಬ್ಲೋವರ್ ನಿಯಂತ್ರಣಗಳೊಂದಿಗೆ ಹಿಂಭಾಗದ ಎಸಿ ದ್ವಾರಗಳ ಜೊತೆಗೆ ಎರಡು 12 ವ್ಯಾಟ್ ಚಾರ್ಜಿಂಗ್ ಪಾಯಿಂಟ್‌ಗಳನ್ನು(ಒಂದು ಡ್ಯಾಶ್ ಕೆಳಭಾಗದಲ್ಲಿ ಮತ್ತೊಂದು ಹಿಂಭಾಗದಲ್ಲಿ ಪಾರ್ಸೆಲ್ ಟ್ರೇ ಸ್ಥಳದಲ್ಲಿ) ಸಹ ಈ ಕಾರು ಪಡೆದುಕೊಂಡಿದೆ.

ಟಾಟಾ ನೆಕ್ಸನ್ ಕಾರಿನ ಮೊದಲ ಚಾಲನಾ ವಿಮರ್ಶೆಯ ಕಂಪ್ಲೀಟ್ ಡೀಟೇಲ್ಸ್

ನೆಕ್ಸನ್ ಒಳಾಂಗಣದಲ್ಲಿ ಸಹ ಕೊಂಚ ಮಟ್ಟಿನ ದೋಷ ನಾವು ಕಾಣಬಹುದಾಗಿದ್ದು, ಡ್ಯಾಶ್‌ಬೋರ್ಡ್‌ನ ಕೆಲವು ಬಟನ್‌ಗಳು ತುಂಬಾ ಚಿಕ್ಕದಾಗಿವೆ ಮತ್ತು ಕೆಲವು ಬಟನ್‌ಗಳು ಯಾವುದೇ ಕಾರ್ಯವನ್ನು ಹೊಂದಿರುವುದಿಲ್ಲ. ಉಳಿದ ಉಪಕರಣಗಳಿಗೆ ಹೋಲಿಸಿದರೆ ರೋಟರಿ ಡ್ರೈವ್ ಮೋಡ್ ಸೆಲೆಕ್ಟರ್ ಗಾತ್ರದಲ್ಲಿ ಸ್ವಲ್ಪ ದೊಡ್ಡದು ಎಂಬಂತೆ ತೋರುತ್ತದೆ ಮತ್ತು ಯುಎಸ್‌ಬಿ ಮತ್ತು ಎಯುಎಕ್ಸ್ ಬಳಸುವಾಗ ಮುಂಭಾಗದಲ್ಲಿರುವ 12 ವೋಲ್ಟ್ ಪೋರ್ಟ್ ಸ್ವಲ್ಪ ಗೇರ್ ಸ್ಟಿಕ್‌ನಿಂದ ತಡೆಹಿಡಿಯುತ್ತದೆ.

ಟಾಟಾ ನೆಕ್ಸನ್ ಕಾರಿನ ಮೊದಲ ಚಾಲನಾ ವಿಮರ್ಶೆಯ ಕಂಪ್ಲೀಟ್ ಡೀಟೇಲ್ಸ್

ಸುರಕ್ಷತೆ :

ಟಾಟಾ ತನ್ನ ಹೊಸ ನೆಕ್ಸನ್ ಕಾರಿನ ಎಲ್ಲ ರೂಪಾಂತರಗಳಲ್ಲಿ ಎರಡು ಏರ್‌ಬ್ಯಾಗ್, ಇಲೆಕ್ಟ್ರಾನಿಕ್ ಬ್ರೆಕ್‌ಫೋರ್ಸ್ ಪ್ರಸರಣೆ ಜೊತೆ ಆಂಟಿ ಬ್ರೆಕಿಂಗ್ ಸಿಸ್ಟಮ್ ಆಯ್ಕೆಯನ್ನು ನೀಡಿರುವುದನ್ನು ಗಮನಿಸಿದರೆ ಈ ಕಾರಿನ ಸುರಕ್ಷತೆಯ ಬಗ್ಗೆ ಕಂಪನಿ ಹೆಚ್ಚು ಮಹತ್ವ ನೀಡಿದೆ ಎಂಬುದು ತಿಳಿದು ಬರುತ್ತದೆ.

ಟಾಟಾ ನೆಕ್ಸನ್ ಕಾರಿನ ಮೊದಲ ಚಾಲನಾ ವಿಮರ್ಶೆಯ ಕಂಪ್ಲೀಟ್ ಡೀಟೇಲ್ಸ್

ಟಾಟಾ ನೆಕ್ಸನ್ ಎಂಜಿನ್ ಮತ್ತು ಕಾರ್ಯಕ್ಷಮತೆ :

ನೆಕ್ಸನ್ ಕಾರಿನ ವಿನ್ಯಾಸವು ಎಲ್ಲಾ ಮಹತ್ವವನ್ನು ಪಡೆದುಕೊಳ್ಳಬಹುದಾದರೂ, ಈ ಕಾರಿನ ಬಾನೆಟ್ ಅಡಿಯಲ್ಲಿ ಇರುವಂತಹ ಎರಡು ಹೊಸ ಎಂಜಿನ್ ಆಯ್ಕೆಗಳ ಬಗ್ಗೆ ಟಾಟಾ ಮೋಟಾರ್ಸ್ ತುಂಬಾ ಮುಂಜಾಗ್ರತೆ ವಹಿಸಿ ನಿರ್ಮಾಣ ಮಾಡಿದೆ ಎನ್ನಬಹುದು. ಇವೆರಡೂ ಆಯ್ಕೆಗಳು 6 ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಅಳವಡಿಕೆಯಾಗಿವೆ.

ಟಾಟಾ ನೆಕ್ಸನ್ ಕಾರಿನ ಮೊದಲ ಚಾಲನಾ ವಿಮರ್ಶೆಯ ಕಂಪ್ಲೀಟ್ ಡೀಟೇಲ್ಸ್

44 ಲೀಟರ್ ಫ್ಯುಯೆಲ್ ಟ್ಯಾಂಕ್ ಕೆಪ್ಯಾಸಿಟಿ ಹೊಂದಿರುವ ಟಾಟಾ ನೆಕ್ಸನ್ ಕಾರನ್ನು ಇಕೋ, ಸಿಟಿ ಮತ್ತು ಸ್ಪೋರ್ಟ್ ಎಂಬ ಮೂರು ರೀತಿಯ ಡ್ರೈವಿಂಗ್ ಮೋಡ್‌ಗಳಲ್ಲಿ ಚಾಲನೆ ಮಾಡಬಹುದು. ಈ ಕಾರು 1.2 ಲೀಟರ್ ರೆವೊಟ್ರೋನ್ ಮತ್ತು 1.5 ಲೀಟರ್ ರೆವೊಟೊರ್ಕ್ ಎಂಬ ಎರಡು ಎಂಜಿನ್ ಆಯ್ಕೆಗಳಲ್ಲಿ ಬಿಡುಗಡೆಗೊಂಡಿದೆ. ಮೂರು ಸಿಲಿಂಡರ್ 1.2 ಲೀಟರ್ ರೆವೊಟ್ರೋನ್ ಪೆಟ್ರೋಲ್ ಕಾರು,108.5 ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದ್ದು, ನಾಲ್ಕು ಸಿಲಿಂಡರ್ 1.5 ಲೀಟರ್ ರೆವೊಟೊರ್ಕ್ ಡೀಸೆಲ್ ಕಾರು,108.5 ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದೆ.

ಟಾಟಾ ನೆಕ್ಸನ್ ಕಾರಿನ ಮೊದಲ ಚಾಲನಾ ವಿಮರ್ಶೆಯ ಕಂಪ್ಲೀಟ್ ಡೀಟೇಲ್ಸ್

ಪೆಟ್ರೋಲ್ ಎಂಜಿನ್ ಕಾರು ಕಡಿಮೆ ಆರ್‌ಪಿಎಂಗಳಲ್ಲಿ(1,800 ಕ್ಕಿಂತ ಕಡಿಮೆ) ಕೊಂಚ ಮಟ್ಟಿನ ಎಳೆತವನ್ನು ಈ ಕಾರು ಹೊಂದಿರಲಿದೆ, ಜೊತೆಗೆ ಮಧ್ಯದ ಶ್ರೇಣಿಯಲ್ಲಿ ಚಲಿಸುವಾಗ ಗುರುಗುಟ್ಟುವಿಕೆಯು ನಿಮ್ಮ ಅನುಭವಕ್ಕೆ ಬರುತ್ತದೆ. ಸ್ಪೋರ್ಟ್ಸ್ ಮೋಡ್ ಅಥವಾ 6,000 ಆರ್‌ಪಿಎಂ ಲೆಕ್ಕದಲ್ಲಿ ಈ ಎಂಜಿನ್ ಬಲಿಷ್ಠತೆ ಬಗ್ಗೆ ನಿಮಗೆ ಅರಿವು ಮೂಡದೇ ಇರಲಾರದು.

ಟಾಟಾ ನೆಕ್ಸನ್ ಕಾರಿನ ಮೊದಲ ಚಾಲನಾ ವಿಮರ್ಶೆಯ ಕಂಪ್ಲೀಟ್ ಡೀಟೇಲ್ಸ್

ಇನ್ನು ಡೀಸೆಲ್ ಎಂಜಿನ್ ಬಗ್ಗೆ ಹೇಳುವುದಾದರೆ, ಡೀಸೆಲ್ ಎಂಜಿನ್ ಕಡಿಮೆ ಆರ್‌ಪಿಎಂಗಳಲ್ಲಿ ಸುಲಭವಾಗಿ ತನ್ನ ಶಕ್ತಿಯನ್ನು ನೀಡಲಿದೆ. ಆದಾಗ್ಯೂ, 4,500 ಆರ್‌ಪಿಎಂ ಮತ್ತು 3,500 ಆರ್‌ಪಿಎಂ ನಡುವೆ ಶಕ್ತಿ ಪಡೆಯುವಲ್ಲಿ ಕಾರು ಕೊಂಚ ಮಟ್ಟಿಗೆ ವಿಫಲವಾಗುತ್ತದೆ.

ಟಾಟಾ ನೆಕ್ಸನ್ ಕಾರಿನ ಮೊದಲ ಚಾಲನಾ ವಿಮರ್ಶೆಯ ಕಂಪ್ಲೀಟ್ ಡೀಟೇಲ್ಸ್
Tested Tata Nexon
Price (estimated) Rs 6–9.5 lakh
Engine (petrol) 1,198cc three-cylinder turbo petrol/ 1,497cc four-cylinder turbo diesel
Gearbox 6-speed manual
Power/Torque (petrol)

108.5bhp @ 5,000rpm/ 170Nm @ 1750-4,000rpm

Power/Torque (diesel) 108.5bhp @ 3,750rpm/ 260Nm @ 1,500-2,700rpm
Fuel Tank Capacity 44 litres
Ground Clearance (unladen) 209mm
Weight 1237kg (petrol)/ 1305kg (diesel)
Tyres Goodyear 215/60 R16
ಟಾಟಾ ನೆಕ್ಸನ್ ಕಾರಿನ ಮೊದಲ ಚಾಲನಾ ವಿಮರ್ಶೆಯ ಕಂಪ್ಲೀಟ್ ಡೀಟೇಲ್ಸ್

ತೀರ್ಪು :

ನೆಕ್ಸನ್ ಕಾರು ವೈಶಿಷ್ಟ್ಯತೆ ಮತ್ತು ತಾರುಣ್ಯದ ವಿನ್ಯಾಸಕ್ಕೆ ಹೇಳಿ ಮಾಡಿಸಿದ ಕಾರಾಗಿದೆ. ಇದು, ಹೊಸ ಎಂಜಿನ್ ಆಯ್ಕೆ ಮತ್ತು ಕ್ಯಾಬಿನ್‌ನಲ್ಲಿ ಸಾಕಷ್ಟು ಸ್ಥಳಾವಕಾಶ ಸಂಯೋಜನೆಯಿಂದಾಗಿ ಭಾರತದಲ್ಲಿ ಎಸ್‌ಯುವಿ ಕಾರಿನ ಆಟಕ್ಕೆ ಇಳಿಯುತ್ತಿರುವ ಖರೀದಿದಾರರಿಗೆ ಬಲವಾದ ಪ್ಯಾಕೇಜ್ ಎಂಬುದು ಸತ್ಯ.

ಟಾಟಾ ನೆಕ್ಸನ್ ಕಾರಿನ ಮೊದಲ ಚಾಲನಾ ವಿಮರ್ಶೆಯ ಕಂಪ್ಲೀಟ್ ಡೀಟೇಲ್ಸ್

ನೆಕ್ಸನ್ ತನ್ನ ವಿನ್ಯಾಸದೊಂದಿಗೆ ಬೇರೆಲ್ಲಾ ಕಾರುಗಳಿಗಿಂತ ಭಿನ್ನವಾಗಿ ನಿಲ್ಲಲಿದೆ. ಇದರ ಒಳನೋಟ, ಆಕ್ರಮಣಕಾರಿ ಲುಕ್ ಎಲ್ಲಾ ಸೇರಿ ಕಾರಿಗೆ ಒಂದು ವಿಶಿಷ್ಟ ಸ್ಥಾನ ಕಲ್ಪಿಸುವಲ್ಲಿ ಟಾಟಾ ಸಫಲವಾಗಿದೆ ಎನ್ನಬಹುದು. ಟಾಟಾದ ಈ ಕಾಂಪ್ಯಾಕ್ಟ್ ಎಸ್‌ಯುವಿ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಭದ್ರವಾಗಿ ತಳವೂರಲಿದೆ ಎಂಬ ಎಲ್ಲಾ ಸೂಚನೆ ಸಿಕ್ಕಿದ್ದು, ಅದರಲ್ಲಿಯೂ ವಿಶೇಷವಾಗಿ ಹೊಸ ಡೀಸೆಲ್ ಎಂಜಿನ್ ಎಲ್ಲರನ್ನು ಮೋಡಿ ಮಾಡಲಿರುವುದಂತೂ ಖಂಡಿತ.

Most Read Articles

Kannada
English summary
The year was 2014 when Tata stole the show at the bi-annual Auto Expo in the Nation's capital with its Nexon concept SUV. Now, Tata released this SUV car in indian market. Know more about this SUV, review, seecification, details and more
Story first published: Thursday, October 5, 2017, 12:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X