ಅವಾಚ್ಯ ಶಬ್ದ ಬಳಸಿದ ಟ್ರಾಫಿಕ್ ಪೊಲೀಸ್ ಕಪಾಳಕ್ಕೆ ಬಾರಿಸಿದ ಮಹಿಳೆ

ಮಹಿಳೆಯೊಬ್ಬರು ಟ್ರಾಫಿಕ್ ಪೊಲೀಸ್ ಒಬ್ಬರಿಗೆ ಕಪಾಳಮೋಕ್ಷ ಮಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟ್ರಾಫಿಕ್ ಪೊಲೀಸ್ ವಯಸ್ಸಿನಲ್ಲಿ ತನಗಿಂತ ಹಲವು ವರ್ಷ ದೊಡ್ಡವನಾಗಿದ್ದರೂ ಆ ಮಹಿಳೆ ಸಾರ್ವಜನಿಕರ ಎದುರಲ್ಲೇ ಕಪಾಳ ಮೋಕ್ಷ ಮಾಡಿದ್ದಾರೆ.

ಅವಾಚ್ಯ ಶಬ್ದ ಬಳಸಿದ ಟ್ರಾಫಿಕ್ ಪೊಲೀಸ್ ಕಪಾಳಕ್ಕೆ ಬಾರಿಸಿದ ಮಹಿಳೆ

ಟ್ರಾಫಿಕ್ ಪೊಲೀಸ್ ತನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣಕ್ಕೆ ತಾನು ಹೀಗೆ ಮಾಡುತ್ತಿರುವುದಾಗಿ ಮಹಿಳೆ ಅಲ್ಲಿ ನೆರೆದಿದ್ದವರಿಗೆ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆಯ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಅವಾಚ್ಯ ಶಬ್ದ ಬಳಸಿದ ಪೊಲೀಸ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅವಾಚ್ಯ ಶಬ್ದ ಬಳಸಿದ ಟ್ರಾಫಿಕ್ ಪೊಲೀಸ್ ಕಪಾಳಕ್ಕೆ ಬಾರಿಸಿದ ಮಹಿಳೆ

ಈ ಘಟನೆ ಅಕ್ಟೋಬರ್ 23ರಂದು ಮುಂಬೈನಲ್ಲಿ ನಡೆದಿದೆ.ಈ ವೀಡಿಯೊ ಈಗ ವೈರಲ್ ಆಗಿದ್ದು, ಘಟನೆಯ ಬಗ್ಗೆ ಹೊರ ಪ್ರಪಂಚಕ್ಕೆ ಮಾಹಿತಿ ಲಭಿಸಿದೆ. ಈ ವೀಡಿಯೊದಲ್ಲಿ ಪೊಲೀಸಪ್ಪನಿಗೆ ಬಾರಿಸುತ್ತಿರುವ ಮಹಿಳೆಯನ್ನು ಮುಂಬೈನ ಮಸೀದಿ ಬಂದರ್ ಪ್ರದೇಶದ 30 ವರ್ಷ ವಯಸ್ಸಿನ ಸಾತ್ವಿಕಾ ತಿವಾರಿ ಎಂದು ಗುರುತಿಸಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಅವಾಚ್ಯ ಶಬ್ದ ಬಳಸಿದ ಟ್ರಾಫಿಕ್ ಪೊಲೀಸ್ ಕಪಾಳಕ್ಕೆ ಬಾರಿಸಿದ ಮಹಿಳೆ

ಅಕ್ಟೋಬರ್ 23ರಂದು ಸಾತ್ವಿಕಾ ತಿವಾರಿ ಹೆಲ್ಮೆಟ್ ಹಾಗೂ ಫೇಸ್ ಮಾಸ್ಕ್ ಧರಿಸದೇ ದ್ವಿಚಕ್ರ ವಾಹನವನ್ನು ಚಾಲನೆ ಮಾಡುವಾಗ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸ್ ಏಕನಾಥ್ ಬಾರ್ಡೆ ಆಕೆಯನ್ನು ತಡೆದಿದ್ದಾರೆ.

ಅವಾಚ್ಯ ಶಬ್ದ ಬಳಸಿದ ಟ್ರಾಫಿಕ್ ಪೊಲೀಸ್ ಕಪಾಳಕ್ಕೆ ಬಾರಿಸಿದ ಮಹಿಳೆ

ಈ ವೇಳೆ ಏಕನಾಥ್ ಬಾರ್ಡೆ ಹಾಗೂ ಸಾತ್ವಿಕಾ ತಿವಾರಿ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿನ ಚಕಮಕಿ ವೇಳೆ ಏಕನಾಥ್ ಬಾರ್ಡೆ ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಅವಾಚ್ಯ ಶಬ್ದ ಬಳಸಿದ ಟ್ರಾಫಿಕ್ ಪೊಲೀಸ್ ಕಪಾಳಕ್ಕೆ ಬಾರಿಸಿದ ಮಹಿಳೆ

ಇದರಿಂದ ಆಕ್ರೋಶಗೊಂಡ ಸಾತ್ವಿಕಾ ತಿವಾರಿ, ಪೊಲೀಸ್ ಎಂಬುದನ್ನೂ ನೋಡದೇ ಏಕನಾಥ್ ಬಾರ್ಡೆಯವರ ಕಪಾಳಕ್ಕೆ ಬಾರಿಸಿದ್ದಾರೆ. ಈ ಘಟನೆಯನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ.

ಅವಾಚ್ಯ ಶಬ್ದ ಬಳಸಿದ ಟ್ರಾಫಿಕ್ ಪೊಲೀಸ್ ಕಪಾಳಕ್ಕೆ ಬಾರಿಸಿದ ಮಹಿಳೆ

ಕೆಲವರು ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವ ವೇಳೆಗೆ ಆ ಮಹಿಳೆ ಟ್ರಾಫಿಕ್ ಪೊಲೀಸ್ ಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಅವರನ್ನು ಸಾರ್ವಜನಿಕರು ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಅವರ ಕೋಪ ತಣ್ಣಗಾಗಿಲ್ಲ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಅವಾಚ್ಯ ಶಬ್ದ ಬಳಸಿದ ಟ್ರಾಫಿಕ್ ಪೊಲೀಸ್ ಕಪಾಳಕ್ಕೆ ಬಾರಿಸಿದ ಮಹಿಳೆ

ಘಟನಾ ಸ್ಥಳಕ್ಕೆ ಆಗಮಿಸಿದ ಮಹಿಳಾ ಪೊಲೀಸ್ ಅಧಿಕಾರಿ ಕೂಡ ಸಾತ್ವಿಕಾ ತಿವಾರಿಯನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದಾರೆ. ಸಾತ್ವಿಕಾ ತಿವಾರಿ ಆ ಮಹಿಳಾ ಅಧಿಕಾರಿಯೊಂದಿಗೂ ವಾಗ್ವಾದ ನಡೆಸಿದ್ದಾರೆ.

ಅವಾಚ್ಯ ಶಬ್ದ ಬಳಸಿದ ಟ್ರಾಫಿಕ್ ಪೊಲೀಸ್ ಕಪಾಳಕ್ಕೆ ಬಾರಿಸಿದ ಮಹಿಳೆ

ಈ ಘಟನೆಯಿಂದಾಗಿ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪೊಲೀಸರು ಟ್ರಾಫಿಕ್ ಪೊಲೀಸ್ ಏಕನಾಥ್ ಬಾರ್ಡೆ ಹಾಗೂ ಸಾತ್ವಿಕಾ ತಿವಾರಿ ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಟ್ರಾಫಿಕ್ ಪೊಲೀಸ್ ನೀಡಿದ ದೂರಿನ ಮೇರೆಗೆ ಪೊಲೀಸರು ಸಾತ್ವಿಕಾ ತಿವಾರಿ ವಿರುದ್ಧ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಆದರೆ ಮಹಿಳೆಯನ್ನು ಅವಾಚ್ಯವಾಗಿ ನಿಂದಿಸಿದ ಟ್ರಾಫಿಕ್ ಪೊಲೀಸ್ ವಿರುದ್ಧ ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ. ಈ ಕಾರಣಕ್ಕೆ ಸಾತ್ವಿಕಾ ತಿವಾರಿ ಪೊಲೀಸ್ ಠಾಣೆಯಲ್ಲೂ ವಾಗ್ವಾದ ನಡೆಸಿದ್ದಾರೆ. ಸಾತ್ವಿಕಾ ತಿವಾರಿ ವಿರುದ್ಧ ಐಪಿಸಿ ಸೆಕ್ಷನ್ 571/2020, 353, 332, 504, 506, 34ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇವು ಅತ್ಯಂತ ಗಂಭೀರ ಸ್ವರೂಪದ ಪ್ರಕರಣಗಳಾಗಿವೆ. ಈ ಎಲ್ಲಾ ಅಪರಾಧಗಳಿಗೆ ಶಿಕ್ಷೆಯಾದರೆ ಆಕೆಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಬಹುದು. ನ್ಯಾಯಾಲಯವು ಮುಂದೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಘಟನೆಯಲ್ಲಿ ಪೊಲೀಸರು ಪಕ್ಷಪಾತ ಧೋರಣೆ ತೋರಿದ್ದಾರೆ ಎಂದು ದೂರಲಾಗಿದೆ. ಇತ್ತೀಚಿಗೆ ಇದೇ ರೀತಿಯ ವರ್ತನೆ ತೋರಿದ ಮಹಿಳಾ ಜೊಮಾಟೊ ಉದ್ಯೋಗಿಗೆ ಮುಂಬೈನ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಅವಾಚ್ಯ ಶಬ್ದ ಬಳಸಿದ ಟ್ರಾಫಿಕ್ ಪೊಲೀಸ್ ಕಪಾಳಕ್ಕೆ ಬಾರಿಸಿದ ಮಹಿಳೆ

ಈಗ ಮುಂಬೈನಲ್ಲಿಯೇ ಮತ್ತೊಬ್ಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಈ ಎರಡು ಘಟನೆಗಳು ಮುಂಬೈನಲ್ಲಿ ನಡೆದಿವೆ.

Most Read Articles

Kannada
English summary
Woman slaps traffic police in Mumbai for using abuse word. Read in Kannada.
Story first published: Monday, October 26, 2020, 14:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X