ಪತಿಯನ್ನು ರಕ್ಷಿಸಿದ ಕಾರು ತಯಾರಕ ಕಂಪನಿಗೆ ಧನ್ಯವಾದ ಸಲ್ಲಿಸಿದ ಮಹಿಳೆ

ಪ್ರಪಂಚದ ಮೂಲೆ ಮೂಲೆಯಲ್ಲಿ ವಾಹನ-ಅಪಘಾತಗಳು ಪ್ರತಿ ದಿನ ಸಂಭವಿಸುತ್ತಲೇ ಇರುತ್ತವೆ. ಇದರಿಂದ ಭಾರತವು ಹೊರತಾಗಿಲ್ಲ. ಈ ಕಾರಣಕ್ಕೆ ಬಹುತೇಕ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳಲ್ಲಿ ಹೆಚ್ಚು ಸುರಕ್ಷತಾ ಫೀಚರ್ ಗಳನ್ನು ನೀಡುತ್ತವೆ.

ಪತಿಯನ್ನು ರಕ್ಷಿಸಿದ ಕಾರು ತಯಾರಕ ಕಂಪನಿಗೆ ಧನ್ಯವಾದ ಸಲ್ಲಿಸಿದ ಮಹಿಳೆ

ಕಂಪನಿಗಳ ಈ ಕ್ರಮದಿಂದಾಗಿ ಮಾರುಕಟ್ಟೆಯಲ್ಲಿ ಸುರಕ್ಷಿತ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೆಚ್ಚಿನ ಭದ್ರತೆ ಇದ್ದ ಕಾರೊಂದು ಮಹಿಳೆಯೊಬ್ಬರ ಪತಿಯನ್ನು ಭೀಕರ ಅಪಘಾತದಿಂದ ಪಾರು ಮಾಡಿದೆ. ಈ ಕಾರಣಕ್ಕೆ ಆ ಮಹಿಳೆ ಟ್ವಿಟರ್ ಮೂಲಕ ಟೆಸ್ಲಾ ಕಾರು ತಯಾರಕ ಕಂಪನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಪತಿಯನ್ನು ರಕ್ಷಿಸಿದ ಕಾರು ತಯಾರಕ ಕಂಪನಿಗೆ ಧನ್ಯವಾದ ಸಲ್ಲಿಸಿದ ಮಹಿಳೆ

ಪಾಮ್ ಬೇಕರ್ ಎಂಬ ಮಹಿಳೆ ಟ್ವೀಟ್ ಮಾಡಿ, ಎಲಾನ್ ಮಸ್ಕ್ ನೀವು ತಯಾರಿಸಿದ ಕಾರು ನಿನ್ನೆ ನನ್ನ ಪತಿಯನ್ನು ಭೀಕರ ಅಪಘಾತದಿಂದ ಪಾರು ಮಾಡಿದೆ. ಇದಕ್ಕಾಗಿ ನಾನು ಹಾಗೂ ನನ್ನ 4 ಮಕ್ಕಳು ನಿಮಗೆ ಕೃತಜ್ಞರಾಗಿರುತ್ತೇವೆ ಎಂದು ಹೇಳಿದ್ದಾರೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಪತಿಯನ್ನು ರಕ್ಷಿಸಿದ ಕಾರು ತಯಾರಕ ಕಂಪನಿಗೆ ಧನ್ಯವಾದ ಸಲ್ಲಿಸಿದ ಮಹಿಳೆ

ಪಾಮ್ ಬೇಕರ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಪೋಸ್ಟ್ ಜೊತೆಗೆ ಅವರು ತಮ್ಮ ಪತಿ ಚಾಲನೆ ಮಾಡಿದ ಕಾರಿನ ಫೋಟೋವನ್ನೂ ಸಹ ಪೋಸ್ಟ್ ಮಾಡಿದ್ದರು. ಆ ಫೋಟೋದಲ್ಲಿ ಟೆಸ್ಲಾ ಮಾಡೆಲ್ 3 ಕಾರು ನಜ್ಜು ಗುಜ್ಜಾಗಿರುವುದನ್ನು ಕಾಣಬಹುದು.

ಪತಿಯನ್ನು ರಕ್ಷಿಸಿದ ಕಾರು ತಯಾರಕ ಕಂಪನಿಗೆ ಧನ್ಯವಾದ ಸಲ್ಲಿಸಿದ ಮಹಿಳೆ

ಕಾರು ಇಷ್ಟು ಹಾನಿಗೊಳಗಾಗಿದ್ದರೂ ಸಹ ಆ ವ್ಯಕ್ತಿ ಬದುಕುಳಿದಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರಾಗಿದ್ದು, ಈ ಕಾರಿನಲ್ಲಿ ಹೆಚ್ಚಿನ ಸುರಕ್ಷತಾ ಫೀಚರ್ ಗಳನ್ನು ನೀಡಲಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಪತಿಯನ್ನು ರಕ್ಷಿಸಿದ ಕಾರು ತಯಾರಕ ಕಂಪನಿಗೆ ಧನ್ಯವಾದ ಸಲ್ಲಿಸಿದ ಮಹಿಳೆ

ಈ ಕಾರು ಆಟೋಮ್ಯಾಟಿಕ್ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿದ್ದು, ಆಟೋಮ್ಯಾಟಿಕ್ ಆಗಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಜೊತೆಗೆ ಈ ಕಾರಿನಲ್ಲಿ ಏರ್‌ಬ್ಯಾಗ್‌ಗಳಂತಹ ಹೆಚ್ಚುವರಿ ಸುರಕ್ಷತಾ ಫೀಚರ್ ಗಳನ್ನು ನೀಡಲಾಗಿದೆ.

ಪತಿಯನ್ನು ರಕ್ಷಿಸಿದ ಕಾರು ತಯಾರಕ ಕಂಪನಿಗೆ ಧನ್ಯವಾದ ಸಲ್ಲಿಸಿದ ಮಹಿಳೆ

ಈ ಫೀಚರ್ ಗಳೇ ಪಾಮ್ ಬೇಕರ್ ಅವರ ಪತಿಯನ್ನು ಭೀಕರ ಅಪಘಾತದಿಂದ ಪಾರು ಮಾಡಿವೆ. ಟೆಸ್ಲಾ ಮಾಡೆಲ್ 3 ಕಾರು ಸುರಕ್ಷತೆಗಾಗಿ 5 ಸ್ಟಾರ್ ಗಳನ್ನು ಪಡೆದಿದೆ. ಯುರೋ ಎನ್‌ಸಿಎಪಿ ನಡೆಸಿದ ಕ್ರ್ಯಾಶ್ ಟೆಸ್ಟ್ ನಲ್ಲಿ ಟೆಸ್ಲಾ ಮಾಡೆಲ್ 3 ಕಾರು 5 ಸ್ಟಾರ್ ಗಳನ್ನು ಪಡೆದಿತ್ತು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಪತಿಯನ್ನು ರಕ್ಷಿಸಿದ ಕಾರು ತಯಾರಕ ಕಂಪನಿಗೆ ಧನ್ಯವಾದ ಸಲ್ಲಿಸಿದ ಮಹಿಳೆ

ಎನ್‌ಹೆಚ್‌ಡಿಎಸ್‌ಎ ನಡೆಸಿದ ಕ್ರಾಶ್ ಟೆಸ್ಟ್ ನಲ್ಲೂ 5-ಸ್ಟಾರ್ ರೇಟಿಂಗ್ ಪಡೆದಿತ್ತು. ಈ ಕಾರಣಕ್ಕೆ ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರು ಪ್ರಪಂಚದ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ. ಕೆಲವರು ಪಾಮ್ ಬೇಕರ್ ರವರ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿ ಈ ಅಪಘಾತದಿಂದ ನಿಮ್ಮ ಗಂಡ ಪಾರಾಗಲು ದೇವರು ಕಾರಣ, ಈ ಕಾರಣಕ್ಕೆ ದೇವರಿಗೆ ಧನ್ಯವಾದ ಹೇಳಿ ಎಂದಿದ್ದಾರೆ.

ಪತಿಯನ್ನು ರಕ್ಷಿಸಿದ ಕಾರು ತಯಾರಕ ಕಂಪನಿಗೆ ಧನ್ಯವಾದ ಸಲ್ಲಿಸಿದ ಮಹಿಳೆ

ಇನ್ನೂ ಕೆಲವರು ಈ ಅಪಘಾತದಲ್ಲಿ ವ್ಯಕ್ತಿ ಬದುಕುಳಿಯಲು ಕಾರಿನಲ್ಲಿದ್ದ ಎಬಿಎಸ್ ಬ್ರೇಕಿಂಗ್ ಸೌಲಭ್ಯವೇ ಕಾರಣ ಎಂದು ಹೇಳಿದ್ದಾರೆ. ಈ ಅಂಶಗಳನ್ನು ಬದಿಗಿಟ್ಟು ವೈಜ್ಞಾನಿಕವಾಗಿ ಪರಿಶೀಲಿಸಿದರೆ, ಕಾರಿನಲ್ಲಿ ಸುರಕ್ಷತೆಗಾಗಿ ನೀಡಲಾಗಿರುವ ಫೀಚರ್ ಗಳೇ ವ್ಯಕ್ತಿಯು ಸಣ್ಣ ಗಾಯಗಳೊಂದಿಗೆ ಪಾರಾಗಲು ಕಾರಣವೆಂಬುದು ಕಂಡು ಬರುತ್ತದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಪತಿಯನ್ನು ರಕ್ಷಿಸಿದ ಕಾರು ತಯಾರಕ ಕಂಪನಿಗೆ ಧನ್ಯವಾದ ಸಲ್ಲಿಸಿದ ಮಹಿಳೆ

ಈ ಕಾರಿನಲ್ಲಿದ್ದ ಏರ್‌ಬ್ಯಾಗ್‌ ಹಾಗೂ ಆಟೋಮ್ಯಾಟಿಕ್ ಬ್ರೇಕ್‌ಗಳ ನೆರವಿನಿಂದ ಪಾಮ್ ಬೇಕರ್‌ರ ಪತಿ ಪಾರಾಗಿದ್ದಾರೆ. ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರು ಸುರಕ್ಷತೆಯ ದೃಷ್ಟಿಯಿಂದ ಮಾತ್ರವಲ್ಲದೆ, ವ್ಯಾಪ್ತಿ ಹಾಗೂ ತಂತ್ರಜ್ಞಾನದ ದೃಷ್ಟಿಯಿಂದಲೂ ಗಮನ ಸೆಳೆಯುತ್ತದೆ. ಈ ಕಾರನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 530 ಕಿ.ಮೀಗಳವರೆಗೆ ಚಲಿಸುತ್ತದೆ.

ಪತಿಯನ್ನು ರಕ್ಷಿಸಿದ ಕಾರು ತಯಾರಕ ಕಂಪನಿಗೆ ಧನ್ಯವಾದ ಸಲ್ಲಿಸಿದ ಮಹಿಳೆ

ಟ್ರಾಫಿಕ್ ಜಾಮ್ ಇಲ್ಲದ ಮಾರ್ಗದಲ್ಲಿ ಪ್ರಯಾಣಿಸಿದರೆ ಇದಕ್ಕಿಂತ ಹೆಚ್ಚು ದೂರ ಚಲಿಸುತ್ತದೆ. ಈ ಕಾರಿನಲ್ಲಿರುವ ಸೂಪರ್ ಚಾರ್ಜಿಂಗ್ ಸಿಸ್ಟಂ, ಕಾರನ್ನು ಕೇವಲ 30 ನಿಮಿಷಗಳಲ್ಲಿ 270 ಕಿ.ಮೀಗಳವರೆಗೆ ಚಲಿಸುವಷ್ಟು ಚಾರ್ಜ್ ಮಾಡುತ್ತದೆ. ಇದಕ್ಕಾಗಿ ಸೂಪರ್ ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ ಹೊಂದಿರುವುದು ಅವಶ್ಯಕ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಪತಿಯನ್ನು ರಕ್ಷಿಸಿದ ಕಾರು ತಯಾರಕ ಕಂಪನಿಗೆ ಧನ್ಯವಾದ ಸಲ್ಲಿಸಿದ ಮಹಿಳೆ

ಈ ಕಾರು ಹಲವು ಆಧುನಿಕ ಟೆಕ್ನಾಲಜಿಗಳನ್ನು ಹೊಂದಿದೆ. ಈ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಟೆಕ್ನಾಲಜಿಗಳೇ ಅಡ್ಡಿಯಾಗಿವೆ. ಈ ಕಾರಣಕ್ಕೆ ಈ ಕಾರಿನ ಬಿಡುಗಡೆಯನ್ನು ಮುಂದೂಡಲಾಗುತ್ತಿದೆ. ಶೀಘ್ರದಲ್ಲೇ ಈ ಕಾರು ಭಾರತದಲ್ಲಿಯೂ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

Most Read Articles

Kannada
English summary
Woman thanks Tesla CEO Elon Musk for manufacturing safest car. Read in Kannada.
Story first published: Saturday, September 19, 2020, 19:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X