ದೇಶದ ಆಗರ್ಭ ಶ್ರೀಮಂತ ಉದ್ಯಮಿ ಗೌತಮ್ ಅದಾನಿಯ ಐಷಾರಾಮಿ ಕಾರುಗಳಿವು...
ಗೌತಮ್ ಅದಾನಿ (Gautam Adani) ಭಾರತದ ಶ್ರೀಮಂತ ಉದ್ಯಮಿಯಲ್ಲಿ ಒಬ್ಬರು. ಇವರು ಅದಾನಿ ಗ್ರೂಪ್‌ನ ಅಧ್ಯಕ್ಷರಾಗಿದ್ದಾರೆ. ಈ ಉದ್ಯಮಿ 1 ದಿನದಲ್ಲಿ 8700 ಕೋಟಿ ರೂ ದುಡಿಯುತ್ತಾರೆ. ಇತ್ತೀಚೆಗೆ ಅದಾನಿ ವಿರುದ್ಧ ಜನವರಿಯಲ್ಲಿ ಶಾರ್ಟ್ ಸೆಲ್ಲರ್ ಹಿಂಡನ್‌ಬರ್ಗ್ ರಿಸರ್ಚ್ ವಿವಿಧ ಆರೋಪಗಳನ್ನು ಮಾಡಿತ್ತು. ಈ ಆರೋಪಗಳ ಸಂಬಂದಿಸಿ ದೊಡ್ಡ ಸುದ್ದಿಯಾಗಿತ್ತು.
ಕಾಲೇಜು ಅರ್ಧಕ್ಕೆ ನಿಲ್ಲಿಸಿ ಬಳಿಕ ವಜ್ರದ ವ್ಯಾಪಾರ ಆರಂಭಿಸಿದ್ದ ಈ ವ್ಯಕ್ತಿ ಮುಂದೊಂದು ದಿನ ವಿಶ್ವದ ನಂ. 3 ಶ್ರೀಮಂತನಾಗುತ್ತಾನೆ ಎಂದು ಬಹುಶಃ ಯಾರೂ ನಿರೀಕ್ಷಿಸಿರಲಿಕ್ಕಿಲ್ಲ. ಕಲ್ಲಿದ್ದಲು ಉದ್ಯಮದಲ್ಲಿ ಅದಾನಿ ಅಕ್ಷರಶಃ ಉದ್ಯಮ ಜಗತ್ತಿನಲ್ಲಿ ಮ್ಯಾಜಿಕನ್ನೇ ಸೃಷ್ಟಿಸಿದರು. ಪರಿಣಾಮ ಬಿಲ್ ಗೇಟ್ಸ್, ವಾರೆನ್ ಬಫೆಟ್, ಬರ್ನಾರ್ಡ್ ಅರ್ನಾಲ್ಟ್ ಮೊದಲಾದ ದಿಗ್ಗಜರನ್ನೇ ಹಿಂದಿಕ್ಕಿ ವಿಶ್ವದ ಮೂರನೇ ಅತೀ ಶ್ರೀಮಂತ ವ್ಯಕ್ತಿಯ ಸ್ಥಾನವನ್ನು ಈ ಹಿಂದೆ ಗಳಿಸಿದ್ದರು.

ಗೌತಮ್ ಅದಾನಿ ಅವರು ಕಳೆದ ಕೆಲವು ವರ್ಷಗಳಿಂದ ತಮ್ಮ ಕಲ್ಲಿದ್ದಲು-ಬಂದರು ಕೇಂದ್ರಿತ ಉದ್ಯಮದ ವಿಸ್ತರಣೆಯಲ್ಲಿ ತೊಡಗಿದ್ದಾರೆ. ಇದರಿಂದ ಅದಾನಿ ಸಮೂಹವಿಂದು ಡೇಟಾ ಕೇಂದ್ರಗಳಿಂದ ಸಿಮೆಂಟ್, ಮಾಧ್ಯಮ ಮತ್ತು ಅಲ್ಯೂಮೀನಿಯಂ ಕ್ಷೇತ್ರಗಳಿಗೂ ವಿಸ್ತರಿಸಿದೆ. 5ಜಿ ಹರಾಜಿನಲ್ಲಿ ತರಂಗಾಂತರಗಳನ್ನು ಖರೀದಿಸುವ ಸೂಚನೆಗಳನ್ನು ನೀಡಿದೆ. ಇನ್ನು ಕಳೆದ ಐದು ವರ್ಷಗಳಲ್ಲಿ ಗೌತಮ್ ಅದಾನಿ ಎಷ್ಟು ಸಾಧ್ಯವೋ ಅಷ್ಟು ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಮೂಲಕ ತನ್ನ ಸಾಮ್ರಾಜ್ಯ ವಿಸ್ತರಿಸಿಕೊಂಡಿದ್ದಾರೆ.
ಅದಾನಿ ಗ್ರೂಪ್ ಪ್ರಸ್ತುತ ಭಾರತದ ಅತೀದೊಡ್ಡ ಖಾಸಗಿ ವಲಯದ ಬಂದರು ಹಾಗೂ ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆಯಾಗಿದೆ. ಅದಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದರೆ, ಅಂಬಾನಿ 11ನೇ ಸ್ಥಾನದಲ್ಲಿದ್ದಾರೆ. ಅಂಬಾನಿ ಫ್ಯಾಮಿಲಿಯ ಕಾರುಗಳು ಆಗಾಗ ಸುದ್ದಿಯಾಗುತ್ತಿರುತ್ತದೆ. ಆದರೆ ಗೌತಮ್ ಅದಾನಿಯವರ ಕಾರುಗಳ ಸುದ್ದಿ ಅಪರೂಪ. ಗೌತಮ್ ಅದಾನಿಯವರ ಐಷಾರಾಮಿ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ರೋಲ್ಸ್ ರಾಯ್ಸ್ ಘೋಸ್ಟ್: ರೋಲ್ಸ್ ರಾಯ್ಸ್ ಘೋಸ್ಟ್ ಅದಾನಿ ಬಳಿ ವಿಶೇಷ ಕಾರು ಮತ್ತು ಅವರು ಈ ಕಾರನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಳಸುತ್ತಾರೆ. ಇದು ಸ್ಟ್ಯಾಂಡರ್ಡ್ ರೋಲ್ಸ್ ರಾಯ್ಸ್ ಘೋಸ್ಟ್ ಅಲ್ಲ ಅದಾನಿ ಅವರ ಕಾರಿನಲ್ಲಿ ಕೆಲವು ಆಯ್ಕೆಗಳನ್ನು ಕಸ್ಟಮೈಸ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಐಷಾರಾಮಿ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನ ಬಗ್ಗೆ ಹೇಳುವುದಾದರೆ, ಈ ಕಾರಿನಲ್ಲಿ 6.6 ಲೀಟರ್ ವಿ12 ಟ್ವಿನ್-ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ.
ಈ ಎಂಜಿನ್ 562 ಬಿಹೆಚ್‍ಫಿ ಪವರ್ ಮತ್ತು 780 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ ರೋಲ್ಸ್ ರಾಯ್ಸ್ ಘೋಸ್ಟ್ ಬೆಲೆಯು ವರ್ಷಗಳಲ್ಲಿ ಹೆಚ್ಚುತ್ತಿದೆ ಮತ್ತು ಒಂದು ಹೊಚ್ಚ ಹೊಸದಕ್ಕೆ ರೂ.6.95 ಕೋಟಿ ಗಳಿಂದ 7.95 ಕೋಟಿ ರೂಪಾಯಿಗಳವರೆಗೆ ಇದೆ. ಇದು ಎಕ್ಸ್ ಶೋರೂಂ ಪ್ರಕಾರವಾಗಿದೆ. ಕಾರಿಗೆ ಮಾಡುವ ಕಸ್ಟಮೈಸೇಶನ್‌ಗಳ ಆಧಾರದ ಮೇಲೆ ಬೆಲೆ ಹೆಚ್ಚಾಗುತ್ತದೆ.

ಈ ರೋಲ್ಸ್ ರಾಯ್ಸ್ ಕಾರುಗಳು ಅದರ ಪ್ರಯಾಣಿಕರಿಗೆ ಅತ್ಯಂತ ಆರಾಮದಾಯಕವಾದ ಸವಾರಿ ಅನುಭವವನ್ನು ನೀಡುತ್ತವೆ. ಅದು ಸೆಲೆಬ್ರಿಟಿಗಳಲ್ಲಿ ಜನಪ್ರಿಯ ಕಾರಾಗಿರುವ ಕಾರಣಗಳಲ್ಲಿ ಒಂದಾಗಿದೆ. ರೋಲ್ಸ್ ರಾಯ್ಸ್ ಕಾರುಗಳು ಹಲವಾರು ಭಾರತೀಯ ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳ ಒಡೆತನದಲ್ಲಿದೆ. ಸಂಜಯ್ ದತ್, ಪ್ರಿಯಾಂಕಾ ಚೋಪ್ರಾ, ಹೃತಿಕ್ ರೋಷನ್, ಅಕ್ಷಯ್ ಕುಮಾರ್, ಶಾರುಖ್ ಖಾನ್, ಬಾಲಿವುಡ್ ರಾಪರ್ ಬಾದ್‌ಶಾ ಅವರಂತಹ ನಟರು ಸಹ ರೋಲ್ಸ್ ರಾಯ್ಸ್ ಹೊಂದಿದ್ದಾರೆ.
ಫೆರಾರಿ ಕ್ಯಾಲಿಫೋರ್ನಿಯಾ: ಫೆರಾರಿ ಇಲ್ಲದ ಬಿಲಿಯನೇರ್‌ನ ಕಾರು ಸಂಗ್ರಹವು ಅಪೂರ್ಣವಾಗಿದೆ. ಫೆರಾರಿ ಕ್ಯಾಲಿಫೋರ್ನಿಯಾವು ತನ್ನ ಬಿಡುಗಡೆ ಸಮಯದಲ್ಲಿ ಅತ್ಯಂತ ಕೈಗೆಟುಕುವ ಫೆರಾರಿಯಾಗಿದ್ದರೂ, ಅದು ಈಗ ದುಬಾರಿಯಾಗಿದೆ. ಅದಾನಿ ಸಾಮಾನ್ಯವಾಗಿ ಈ ಕಾರನ್ನು ದೀರ್ಘ ಮತ್ತು ವಿಶ್ರಾಂತಿ ಸವಾರಿಗಾಗಿ ಬಳಸಲು ಇಷ್ಟಪಡುತ್ತಾರೆ. ಫೆರಾರಿ ಕ್ಯಾಲಿಫೋರ್ನಿಯಾ ಕಾರಿನಲ್ಲಿ 4.3-ಲೀಟರ್, ನ್ಯಾಚುರಲ್ ಆಸ್ಪೈರಡ್ ವಿ8 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಈ ಎಂಜಿನ್ 453 ಬಿಹೆಚ್‍ಪಿ ಪವರ್ ಮತ್ತು 485 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 7-ಸ್ಪೀಡ್ ಡ್ಯುಯಲ್-ಕ್ಲಚ್ ಗೇರ್‌ಬಾಕ್ಸ್ ಮೂಲಕ ಪವರ್ ಅನ್ನು ಹಿಂದಿನ ವ್ಹೀಲ್ ಗಳಿಗೆ ಮಾತ್ರ ಕಳುಹಿಸಲಾಗುತ್ತದೆ. ಬಿಎಂಡಬ್ಲ್ಯು 7 ಸೀರಿಸ್ ಅದಾನಿ ಅವರು ಬಿಎಂಡಬ್ಲ್ಯು 7 ಸೀರಿಸ್ ಸೆಡಾನ್ ಅನ್ನು ಹೊಂದಿದ್ದಾರೆ. ಅದಾನಿ ಅವರು ಈ ಬಿಎಂಡಬ್ಲ್ಯು 7 ಸೀರಿಸ್ ಕಾರಿನಲ್ಲಿ ಹೆಚ್ಚು ಗುರುತಿಸಲ್ಪಟ್ಟಿದ್ದಾರೆ. ಈ ಐಷಾರಾಮಿ ಬಿಎಂಡಬ್ಲ್ಯು 7 ಸೀರಿಸ್ ಸೆಡಾನ್ ಅದಾನಿ ಅವರ ಮೆಚ್ಚಿನ ಕಾರ್ ಆಗಿರಬಹುದು ಎಂದು ನಿರೀಕ್ಷಿಸುತ್ತೇವೆ.
ಬಿಎಂಡಬ್ಲ್ಯು 7 ಸೀರಿಸ್: ಅದಾನಿ ಒಡೆತನದ ಹೆಚ್ಚಿನ ಬಿಎಂಡಬ್ಲ್ಯು 7 ಸೀರಿಸ್ ಸೆಡಾನ್‌ಗಳು ಟಾಪ್-ಸ್ಪೆಕ್ ರೂಪಾಂತರಗಳಾಗಿವೆ ಎಂದು ವರದಿಯಾಗಿದೆ. ಇದರರ್ಥ ಶ್ರೀ ಅದಾನಿಯವರ ಬಿಎಂಡಬ್ಲ್ಯು 7 ಸೀರಿಸ್ ಸೆಡಾನ್ 6.6-ಲೀಟರ್, ಟರ್ಬೋಚಾರ್ಜ್ಡ್ V12 ಎಂಜಿನ್ ಅನ್ನು ಹೊಂದಿರುತ್ತದೆ, ಈ ಎಂಜಿನ್ 602 ಬಿಹೆಚ್‍ಪಿ ಪವರ್ ಮತ್ತು 800 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ಆಡಿ ಕ್ಯೂ7: ಈ ಆಡಿ ಕ್ಯೂ7 ಭಾರತದಲ್ಲಿ ಡುಗಡೆ ಮಾಡಿದಾಗ, ಅದು ಶೀಘ್ರವಾಗಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳ ನೆಚ್ಚಿನ ಎಸ್‍ಯುವಿಯಾಯ್ತು. ಅದಾನಿ ತಮ್ಮ ಆಡಿ ಕ್ಯೂ7 ಎಸ್‍ಯುವಿಯನ್ನು ಹೆಚ್ಚಾಗಿ ಕಡಿಮೆ ದೂರದ ಪ್ರಯಾಣಕ್ಕಾಗಿ ಬಳಸುತ್ತಾರೆ. ಈ ಆಡಿ ಕ್ಯೂ7 ಎಸ್‍ಯುವಿಯಲ್ಲಿ 3.0-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 245 ಬಿಹೆಚ್‍ಪಿ ಪವರ್ ಮತ್ತು 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಇನ್ನು ಅದಾನಿ 3 ಖಾಸಗಿ ಜೆಟ್‌ಗಳನ್ನು ಹೊಂದಿದ್ದಾರೆ. ಇದರಲ್ಲಿ ಎಂಬ್ರೇರ್ ಲೆಗಸಿ 650, ಬೊಂಬಾರ್ಡಿಯರ್ ಚಾಲೆಂಜರ್ 605 ಮತ್ತು ಹಾಕರ್ ಬೀಚ್‌ಕ್ರಾಫ್ಟ್ 850XP ಸೇರಿವೆ. ಇವುಗಳ ಜೊತೆಗೆ, ಅದಾನಿ 3 ಹೆಲಿಕಾಪ್ಟರ್‌ಗಳನ್ನು ಹೊಂದಿದ್ದಾರೆ ಮತ್ತು ಅವುಗಳಲ್ಲಿ ಒಂದು ಅಗಸ್ಟಾ ವೆಸ್ಟ್‌ಲ್ಯಾಂಡ್ AW139 ಹೆಲಿಕಾಪ್ಟರ್ ಆಗಿದೆ.


Click it and Unblock the Notifications