Russia-Ukraine War: ವಿಶ್ವದ ಅತಿ ದೊಡ್ಡ ಕಾರ್ಗೊ ವಿಮಾನ 'ಮ್ರಿಯಾ' ನಾಶಪಡಿಸಿದ ರಷ್ಯಾ!

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದು, ರಷ್ಯಾ ಸೇನಾಪಡೆಗಳು ಉಕ್ರೇನ್‌ನಲ್ಲಿ ಭಾರೀ ಪ್ರಮಾಣ ಉಂಟುಮಾಡಿದೆ. ಉಕ್ರೇನ್ ಸೇನೆಯು ಕೂಡಾ ರಷ್ಯಾಕ್ಕೆ ಸಾಕಷ್ಟು ಹಾನಿ ಮಾಡಿದರೂ ಉಭಯ ದೇಶಗಳ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಅಪಾರ ಪ್ರಮಾಣದ ಜೀವಹಾನಿ ಜೊತೆ ಆಸ್ತಿಪಾಸ್ತಿ ನಷ್ಟವಾಗುತ್ತಿದೆ.

ವಿಶ್ವದ ಅತಿ ದೊಡ್ಡ ಕಾರ್ಗೊ ವಿಮಾನ 'ಮ್ರಿಯಾ' ನಾಶಪಡಿಸಿದ ರಷ್ಯಾ!

ರಷ್ಯಾ ಸೇನಾ ಪಡೆಯು ಉಕ್ರೇನ್‌ನಲ್ಲಿ ತನ್ನ ಸೇನಾ ಆಕ್ರಮಣವನ್ನು ಮುಂದುವರಿಸಿದ್ದು, ಉಕ್ರೇನ್‌ ಪ್ರಮುಖ ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದೆ. ಜೊತೆಗೆ ಉಕ್ರೇನ್‌ನಲ್ಲಿರುವ ಹಲವು ವಿಮಾನ ನಿಲ್ದಾಣಗಳಿಗೆ ರಷ್ಯಾ ಸೇನಾಪಡೆಗಳು ಭಾರೀ ಪ್ರಮಾಣದ ಹಾನಿಯನ್ನುಂಟುಮಾಡಿದ್ದು, ಮೂರನೇ ದಿನದ ಯುದ್ಧದಲ್ಲಿ ಉಕ್ರೇನ್‌ನಲ್ಲಿರುವ ವಿಶ್ವದ ಅತಿದೊಡ್ಡ ವಿಮಾನವೊಂದು ನಾಶವಾಗಿದೆ.

ವಿಶ್ವದ ಅತಿ ದೊಡ್ಡ ಕಾರ್ಗೊ ವಿಮಾನ 'ಮ್ರಿಯಾ' ನಾಶಪಡಿಸಿದ ರಷ್ಯಾ!

ವಿಶ್ವದ ಅತಿದೊಡ್ಡ ಕಾರ್ಗೊ ವಿಮಾನವೆಂಬ ಖ್ಯಾತಿ ಹೊಂದಿದ್ದ 'ಆಂಟೊನೊವ್ ಎಎನ್-225 ಮ್ರಿಯಾ' ಕಿಯೆವ್‌ನಲ್ಲಿ ರಷ್ಯಾ ಸೇನೆಯ ದಾಳಿಗೆ ಸಂಪೂರ್ಣವಾಗಿ ನಾಶಗೊಂಡಿದ್ದು, ಮ್ರಿಯಾ ವಿಮಾನವನ್ನು ರಷ್ಯಾ ಸೇನೆಯು ನಾಶಪಡಿಸಿರುವ ಬಗ್ಗೆ ಉಕ್ರೇನ್‌ ಸರ್ಕಾರವೇ ಮಾಹಿತಿ ಹಂಚಿಕೊಂಡಿದೆ.

ವಿಶ್ವದ ಅತಿ ದೊಡ್ಡ ಕಾರ್ಗೊ ವಿಮಾನ 'ಮ್ರಿಯಾ' ನಾಶಪಡಿಸಿದ ರಷ್ಯಾ!

ರಷ್ಯಾದ ದಾಳಿಯನ್ನು ಎದುರಿಸುತ್ತಿರುವ ಉಕ್ರೇನ್ ಸರ್ಕಾರವು ರಷ್ಯಾ ದಾಳಿಗೆ ಪ್ರತ್ಯುತ್ತರ ನೀಡುತ್ತಿದ್ದು, ಆಂಟೊನೊವ್ ಎಎನ್-225 ಮ್ರಿಯಾ ನಾಶಪಡಿಸಿದ ರಷ್ಯಾಕ್ಕೆ ಮತ್ತೊಂದು ಸವಾಲು ಹಾಕಿದೆ. ತನ್ನ ಜನಪ್ರಿಯ ವಿಮಾನವಾದ ಆಂಟೊನೊವ್ ಎಎನ್ 225 ಅನ್ನು ಮತ್ತೆ ಮರುನಿರ್ಮಾಣ ಮಾಡುವುದಾಗಿ ಟ್ವಿಟ್ ಮಾಡಿದ್ದು,"ನಾವು ಈ ವಿಮಾನವನ್ನು ಮತ್ತೆ ನಿರ್ಮಾಣ ಮಾಡುತ್ತೇವೆ. ನಾವು ಬಲವಾದ, ಸ್ವತಂತ್ರ ಮತ್ತು ಪ್ರಜಾಪ್ರಭುತ್ವದ ಉಕ್ರೇನ್‌ ಕನಸನ್ನು ಈಡೇರಿಸುತ್ತೇವೆ" ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

ವಿಶ್ವದ ಅತಿ ದೊಡ್ಡ ಕಾರ್ಗೊ ವಿಮಾನ 'ಮ್ರಿಯಾ' ನಾಶಪಡಿಸಿದ ರಷ್ಯಾ!

ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಕೂಡಾ ಟ್ವಿಟರ್‌ನಲ್ಲಿ ಮ್ರಿಯಾ ಧ್ವಂಸಗೊಳಿಸಿದ ಬೆಳವಣಿಗೆಯನ್ನು ಖಚಿತಪಡಿಸಿದ್ದು, ರಷ್ಯಾ ನಮ್ಮ 'ಮ್ರಿಯಾ'ವನ್ನು ನಾಶ ಮಾಡಿರಬಹುದು. ಆದರೆ ಬಲವಾದ, ಮುಕ್ತ ಮತ್ತು ಪ್ರಜಾಪ್ರಭುತ್ವದ ಯುರೋಪಿಯನ್ ರಾಜ್ಯದ ನಮ್ಮ ಕನಸನ್ನು ಅವರು ಎಂದಿಗೂ ನಾಶಮಾಡಲು ಸಾಧ್ಯವಾಗುವುದಿಲ್ಲವೆಂದು ರಷ್ಯಾದ ವಿರುದ್ದ ಕಿಡಿಕಾರಿದ್ದಾರೆ.

ವಿಶ್ವದ ಅತಿ ದೊಡ್ಡ ಕಾರ್ಗೊ ವಿಮಾನ 'ಮ್ರಿಯಾ' ನಾಶಪಡಿಸಿದ ರಷ್ಯಾ!

ಎಎನ್-225 ಮ್ರಿಯಾ ಕಾರ್ಗೊ ವಿಮಾನವನ್ನು ಉಕ್ರೇನ್ ಮೂಲದ ವಿಮಾನ ತಯಾರಕ ಕಂಪನಿಯಾದ ಆಂಟೊನೊವ್ ನಿರ್ಮಾಣ ಮಾಡಿದ್ದು, ಎಎನ್225 ಮ್ರಿಯಾ ಕಾರ್ಗೊ ವಿಮಾನವು ಬಿ747-8ಐ ಮತ್ತು ಎ380-800 ಕಾರ್ಗೊ ವಿಮಾನಗಳಿಂತಲೂ ಹೆಚ್ಚುವರಿಯಾಗಿ 600 ಟನ್‌ಗಳಷ್ಟು ಭಾರ ಹೊತ್ತು ಸಾಗುವ ಸಾಮರ್ಥ್ಯ ಹೊಂದಿದೆ.

ವಿಶ್ವದ ಅತಿ ದೊಡ್ಡ ಕಾರ್ಗೊ ವಿಮಾನ 'ಮ್ರಿಯಾ' ನಾಶಪಡಿಸಿದ ರಷ್ಯಾ!

ಅತಿ ಹೆಚ್ಚು ಸರಕು ಹೊತ್ತು ಸಾಗಬಲ್ಲ ಎಎನ್-225 ಮ್ರಿಯಾ ಕಾರ್ಗೊ ವಿಮಾನವು ಒಟ್ಟು 32-ಚಕ್ರಗಳ ಲ್ಯಾಂಡಿಂಗ್ ವ್ಯವಸ್ಥೆಯೊಂದಿಗೆ ಗರಿಷ್ಠ 4,500 ಕಿಮೀ ದೂರವನ್ನು ಕ್ರಮಿಸಬಲ್ಲ ವೈಶಿಷ್ಟ್ಯತೆ ಹೊಂದಿತ್ತು.

ವಿಶ್ವದ ಅತಿ ದೊಡ್ಡ ಕಾರ್ಗೊ ವಿಮಾನ 'ಮ್ರಿಯಾ' ನಾಶಪಡಿಸಿದ ರಷ್ಯಾ!

ಹೆಚ್ಚುವರಿಯಾಗಿ ಇದು 3,00,000 ಕೆಜಿಯ ಸಂಪೂರ್ಣ ಇಂಧನ ಪೇಲೋಡ್ ಅನ್ನು ಸಹ ಸಾಗಿಸಬಲ್ಲ ವೈಶಿಷ್ಟ್ಯತೆ ಹೊಂದಿದ್ದು, ಎಎನ್-225 ಅನ್ನು ತಜ್ಞರು ಪರಿಶೀಲಿಸುವವರೆಗೆ ವಿಮಾನದ ತಾಂತ್ರಿಕ ಸ್ಥಿತಿಗತಿಯ ಬಗ್ಗೆ ಯಾವುದೇ ರೀತಿಯ ವರದಿ ಮಾಡಲು ಸಾಧ್ಯವಿಲ್ಲ ಎಂದು ಆಂಟೊನೊವ್ ಕಂಪನಿಯು ತನ್ನ ಅಧಿಕೃತ ಖಾತೆಯ ಮೂಲಕ ಟ್ವೀಟ್‌ ಮಾಡಿದೆ.

ವಿಶ್ವದ ಅತಿ ದೊಡ್ಡ ಕಾರ್ಗೊ ವಿಮಾನ 'ಮ್ರಿಯಾ' ನಾಶಪಡಿಸಿದ ರಷ್ಯಾ!

ಎಎನ್-225 ಮ್ರಿಯಾ ಕಾರ್ಗೊ ವಿಮಾನವನ್ನು ಆರಂಭದಲ್ಲಿ ಸೋವಿಯತ್ ಏರೋನಾಟಿಕಲ್ ಯೋಜನೆಯ ಭಾಗವಾಗಿ ನಿರ್ಮಿಸಲಾಗಿತ್ತು. 1988ರಲ್ಲಿ ತನ್ನ ಮೊದಲ ಹಾರಾಟವನ್ನು ಮಾಡಿದ್ದ ಮ್ರಿಯಾ ಕಾರ್ಗೊ ವಿಮಾನವು ಸೋವಿಯತ್ ಒಕ್ಕೂಟದ ಪತನದ ನಂತರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು.

ವಿಶ್ವದ ಅತಿ ದೊಡ್ಡ ಕಾರ್ಗೊ ವಿಮಾನ 'ಮ್ರಿಯಾ' ನಾಶಪಡಿಸಿದ ರಷ್ಯಾ!

2001 ರಲ್ಲಿಕಿಯೆವ್‌‌ನಿಂದ ಸುಮಾರು 20 ಕಿಮೀ ದೂರದಲ್ಲಿರುವ ಗೊಸ್ಟೊಮೆಲ್‌ನಲ್ಲಿ ಪರೀಕ್ಷಾ ಹಾರಾಟವನ್ನು ನಡೆಸಿ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಸರಕು ವಿಮಾನಗಳಿಗಾಗಿ ಉಕ್ರೇನ್‌ನ ಆಂಟೊನೊವ್ ಏರ್‌ಲೈನ್ಸ್ ನಿರ್ವಹಣೆಯಲ್ಲಿದ್ದ ಎಎನ್-225 ಮ್ರಿಯಾ ಕಾರ್ಗೊ ವಿಮಾನವು ಕೋವಿಡ್-19 ಸಾಂಕ್ರಾಮಿಕದ ಪ್ರಾರಂಭದ ಸಮಯದಲ್ಲಿ ಲಸಿಕೆ ಸಾಗಾಟಕ್ಕಾಗಿ ಹೆಚ್ಚಿನ ಬೇಡಿಕೆಯಲ್ಲಿತ್ತು.

ವಿಶ್ವದ ಅತಿ ದೊಡ್ಡ ಕಾರ್ಗೊ ವಿಮಾನ 'ಮ್ರಿಯಾ' ನಾಶಪಡಿಸಿದ ರಷ್ಯಾ!

ಇದೀಗ ರಷ್ಯಾ ಸೇನೆಯು ಮ್ರಿಯಾ ವಿಮಾನವನ್ನು ಉಕ್ರೇನ್ ಸೇನೆಯು ಹೆಚ್ಚಿನ ಸಂಖ್ಯೆಯಲ್ಲಿ ಶಸ್ತ್ರ ಸಾಗಾಟ ಬಳಕೆ ಮಾಡಿಕೊಳ್ಳಬಹುದೆಂಬ ಕಾರಣಕ್ಕಾಗಿ ನಾಶಪಡಿಸಿದ್ದು, ಇದನ್ನು ಮರುಸ್ಥಾಪಿಸಲು ಅಂದಾಜು 3 ಬಿಲಿಯನ್ ಡಾಲರ್ ವೆಚ್ಚವಾಗಲಿದೆ ಎನ್ನಲಾಗಿದೆ.

ವಿಶ್ವದ ಅತಿ ದೊಡ್ಡ ಕಾರ್ಗೊ ವಿಮಾನ 'ಮ್ರಿಯಾ' ನಾಶಪಡಿಸಿದ ರಷ್ಯಾ!

ಮ್ರಿಯಾ ಕಾರ್ಗೊ ವಿಮಾನಕ್ಕಾಗಿ ಸುಮಾರು ಐದು ವರ್ಷಗಳವರೆಗೆ ತೆಗೆದುಕೊಳ್ಳಬಹುದು ಎಂದು ಶಸ್ತ್ರಾಸ್ತ್ರ ತಯಾರಕ ಉಕ್ರೊಬೊರೊನ್‌ ಪ್ರೊಮ್ ಮಾಹಿತಿ ಹಂಚಿಕೊಂಡಿದ್ದು, ರಷ್ಯಾದ ಆಕ್ರಮಕಾರಿ ಯುದ್ದ ನೀತಿಯು ಉಕ್ರೇನ್‌ಗೆ ಭಾರೀ ಹೊಡೆತ ನೀಡುತ್ತಿದೆ.

More from DriveSpark

Article Published On: Monday, February 28, 2022, 16:05 [IST]
English summary
Worlds largest cargo airplane antonov 225 mriya destroyed by russia in ukraine
Read more on ವಿಮಾನ plane
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+