ವಿಶ್ವದ ಟಾಪ್ 10 ಅತಿದೊಡ್ಡ ಯುದ್ಧ ವಾಯುಪಡೆಗಳು

By Nagaraja

1912ನೇ ಇಸವಿಯಲ್ಲಿ ಬ್ರಿಟನ್ ರಾಯಲ್ ಫ್ಲೈಯಿಂಗ್ ಕಾರ್ಪ್ಸ್ ರಚನೆಯ ಬಳಿಕ 'ವಾಯು ಶಕ್ತಿ' (air power) ಹಾಗೂ 'ವಾಯು ಶ್ರೇಷ್ಠತೆ'ಗಳೆಂಬ (air superiority) ಪದಗಳು ಸೇನಾ ಕ್ರಮದಲ್ಲಿ ಸರ್ವತ್ರ ಹಾಗೂ ಸಮಾನಾರ್ಥವಾಗಿ ಜಾರಿಗೆ ಬಂದಿತ್ತು.

ಜಗತ್ತಿನ ಪ್ರಖ್ಯಾತ ಸರಕು ಸಾಗಾಣೆ ಸೈನ್ಯ ವಿಮಾನಗಳು

ರಾಷ್ಟ್ರವೊಂದಕ್ಕೆ ಜಾಗತಿಕವಾಗಿ ಗುರುತಿಸಿಕೊಳ್ಳುವುದಕ್ಕೆ ಅಷ್ಟೇ ಪ್ರಬಲವಾದ ವಾಯುಪಡೆ ಇರುವುದು ಅಷ್ಟೇ ಮುಖ್ಯ. ಇದು ಯಾವುದೇ ಸಂದರ್ಭದಲ್ಲಿ ಎದುರಾಗಬಹುದಾದ ಯುದ್ಧಗಳನ್ನು ಎದುರಿಸಲು ಸನ್ನದ್ಧವಾಗಿರಬೇಕು. ಇದರಂತೆ ಜಗತ್ತಿನ 10 ಬಲಿಷ್ಠ ಯುದ್ಧ ವಿಮಾನಗಳನ್ನು ಹೊಂದಿರುವ ವಾಯುದಳಗಳ ಬಗ್ಗೆ ಇಲ್ಲಿ ಪಟ್ಟಿ ಮಾಡಿಕೊಡಲಾಗಿದೆ.

ವಿಶ್ವದ 10 ಅತ್ಯುತ್ತಮ ವಿಮಾನ ನಿಲ್ದಾಣಗಳು

ಆಧುನಿಕ ಜಗತ್ತಿನಲ್ಲಿ ಯುದ್ಧಗಳಿಗೆ ಸಾಧ್ಯವಾದಷ್ಟು ವಿರಾಮ ಹಾಡಲಾಗಿದೆ. ಹೀಗಾಗಿ ಅನೇಕ ವಾಯುಪಡೆಗಳು ಹೆಚ್ಚು ಮಾನವೀಯ ಸಿದ್ಧಾಂತಗಳತ್ತ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ಇದರಂತೆ ಪ್ರಕೃತಿ ವಿಕೋಪ ಪ್ರದೇಶಗಳಿಗೆ ಯುದ್ಧತಂತ್ರದ ವಿಮಾನಗಳಲ್ಲಿ ಅಗತ್ಯ ವಸ್ತುಗಳ ಸಾಗಾಣೆಗಾಗಿ ಬಳಸಿಕೊಳ್ಳುತ್ತಿರುತ್ತಿರುವುದು ಸ್ವಾಗತಾರ್ಹ.

ಸಂಪೂರ್ಣ ಸುದ್ದಿಗಾಗಿ ಕೆಳಗಡೆ ಕೊಟ್ಟಿರುವ ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ವಿಶ್ವದ ಟಾಪ್ 10 ಅತಿದೊಡ್ಡ ಯುದ್ಧ ವಾಯುಪಡೆಗಳು

ಅಷ್ಟಕ್ಕೂ ಭಾರತೀಯ ವಾಯುಪಡೆ ಎಷ್ಟನೇ ಸ್ಥಾನದಲ್ಲಿದೆ? ಉತ್ತರಕ್ಕಾಗಿ ಮುಂದಿನ ಸ್ಲೈಡರ್‌ನತ್ತ ಮುಂದುವರಿಯಿರಿ...

10. ಜರ್ಮನ್ ಏರ್ ಫೋರ್ಸ್: 423 ಯುದ್ಧ ವಿಮಾನ

10. ಜರ್ಮನ್ ಏರ್ ಫೋರ್ಸ್: 423 ಯುದ್ಧ ವಿಮಾನ

ಯುದ್ಧ ವಿಮಾನಗಳನ್ನು ನಿರ್ವಹಿಸುವುದರ ಪೈಕಿ 10ನೇ ಸ್ಥಾನದಲ್ಲಿರುವ ಜರ್ಮನಿಯು ಅತ್ಯಾಧುನಿಕ ಯುರೋಫೈಟರ್ ತೈಫೂನ್ ಮತ್ತು ಜನಪ್ರಿಯ ಪನವಿಯಾ ಟರ್ನಾಡೊಗಳಂತಹ ಯುದ್ಧ ವಿಮಾನಗಳನ್ನು ಹೊಂದಿದೆ. ಎರಡನೇ ಮಹಾಯುದ್ದ ಬಳಿಕ 1956ನೇ ಇಸವಿಯಲ್ಲಿ ಸ್ಥಾಪನೆಯಾಗಿರುವ ಜರ್ಮನಿಯ ಏರ್ ಫೋರ್ಸ್‌ನಲ್ಲಿ 30ಕ್ಕೂ ಹೆಚ್ಚು ಸಾವಿರ ಮಂದಿ ಇದ್ದಾರೆ.

9. ರಿಪಬ್ಲಿಕ್ ಆಫ್ ಕೊರಿಯಾ ಏರ್ ಫೋರ್ಸ್ (ದಕ್ಷಿಣ ಕೊರಿಯಾ): 458 ಯುದ್ಧ ವಿಮಾನ

9. ರಿಪಬ್ಲಿಕ್ ಆಫ್ ಕೊರಿಯಾ ಏರ್ ಫೋರ್ಸ್ (ದಕ್ಷಿಣ ಕೊರಿಯಾ): 458 ಯುದ್ಧ ವಿಮಾನ

1949ನೇ ಇಸವಿಯಲ್ಲಿ ಸ್ಥಾಪನೆಯಾಗಿರುವ ರಿಪಬ್ಲಿಕ್ ಆಫ್ ಕೊರಿಯೊ ಏರ್ ಫೋರ್ಸ್ (ಆರ್‌ಒಕೆಎಎಫ್), ನೆರೆಯ ಉತ್ತಮ ಕೊರಿಯಾ ದಾಳಿ ಭೀತಿಯಿಂದಾಗಿ ನಿರಂತರವಾಗಿ ಯುದ್ಧ ವಿಮಾನಗಳನ್ನು ಅಭಿವೃದ್ಧಿಪಡಿಸುತ್ತಲೇ ಬಂದಿವೆ. ಇದು ಅಮೆರಿಕದ ಜನಪ್ರಿಯ ಎಫ್-16 ಫೈಟಿಂಗ್ ಫಾಲ್ಕನ್ ಮತ್ತು ನಾರ್ಥ್‌ರಾಪ್ ಎಫ್-5ಗಳಂತಹ ಯುದ್ಧ ವಿಮಾನಗಳನ್ನು ಹೊಂದಿವೆ. ಅಲ್ಲದೆ ಭಯೋತ್ಪಾದನೆ ವಿರುದ್ಧ ನಡೆಯುತ್ತಿರುವ ಜಾಗತಿಕ ಸಮರದಲ್ಲೂ ಭಾಗಿಯಾಗಿದೆ.

8. ಟರ್ಕಿಶ್ ಏರ್ ಫೋರ್ಸ್: 465 ಯುದ್ಧ ವಿಮಾನ

8. ಟರ್ಕಿಶ್ ಏರ್ ಫೋರ್ಸ್: 465 ಯುದ್ಧ ವಿಮಾನ

ನೈಜ ಮಿಲಿಟರಿ ಪವರ್ ಹೌಸ್ ಎನಿಸಿಕೊಂಡಿರುವ ಟರ್ಕಿ, ನಾಲ್ಕು ಲಕ್ಷಕ್ಕೂ ಹೆಚ್ಚು ವಾಯು ದಳವನ್ನು ಹೊಂದಿದೆ. ಟರ್ಕಿ ಸಹ ಎಫ್-16 ಫೈಟಿಂಗ್ ಫಾಲ್ಕನ್ ಯುದ್ಧ ವಿಮಾನಗಳನ್ನು ನಿರ್ವಹಿಸುತ್ತಿದೆ.

7. ಪಾಕಿಸ್ತಾನ ಏರ್ ಫೋರ್ಸ್: 502 ಯುದ್ಧ ವಿಮಾನ

7. ಪಾಕಿಸ್ತಾನ ಏರ್ ಫೋರ್ಸ್: 502 ಯುದ್ಧ ವಿಮಾನ

ಭಾರತದ ಸಾಂಪ್ರಾದಾಯಿಕ ವೈರಿ ಆಗಿರುವ ಪಾಕಿಸ್ತಾನ, ತನ್ನ ಬತ್ತಳಿಕೆಯಲ್ಲಿ ಚೈನೀಸ್ ಚೆಂಗ್ಡು ಜೆ-7, ಎಫ್-16 ಫೈಟಿಂಗ್ ಫಾಲ್ಕನ್‌, ಫ್ರೆಂಚ್ ಫೈಟರ್ ಏರ್‌ಕ್ರಾಫ್ಟ್, ಡಸ್ಸಾಲ್ಟ್ ಮಿರಾಜ್ 5 ಮತ್ತು ಮಿರಾಜ್ III ಗಳಂತಹ ಯುದ್ಧ ವಿಮಾನಗಳನ್ನು ಹೊಂದಿದೆ.

6. ಕೊರಿಯನ್ ಪೀಪಲ್ಸ್ ಏರ್ ಫೋರ್ಸ್ (ಉತ್ತರ ಕೊರಿಯಾ): 662 ಯುದ್ಧ ವಿಮಾನ

6. ಕೊರಿಯನ್ ಪೀಪಲ್ಸ್ ಏರ್ ಫೋರ್ಸ್ (ಉತ್ತರ ಕೊರಿಯಾ): 662 ಯುದ್ಧ ವಿಮಾನ

ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪ್ರಕಾರ ಜಿಡಿಪಿಯಲ್ಲಿ 170ನೇ ಸ್ಥಾನದಲ್ಲಿರುವ ಉತ್ತರ ಕೊರಿಯಾ ಬಡ ರಾಷ್ಟ್ರವಾಗಿರುವ ಹೊರತಾಗಿಯೂ, ಬೃಹತ್ ಯುದ್ಧ ವಿಮಾನ ಶಕ್ತಿಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿದೆ. ನಿಸ್ಸಂಶವಾಗಿಯೂ ಉತ್ತರ ಕೊರಿಯಾಕ್ಕೆ ಚೀನಾದಿಂದಲೇ ದೊಡ್ಡ ಪ್ರಮಾಣದ ಯುದ್ಧ ವಿಮಾನಗಳ ಆಮದಾಗುತ್ತಿದೆ.

5. ಈಜಿಪ್ಟಿಯನ್ ಏರ್ ಫೋರ್ಸ್: 900 ಯುದ್ಧ ವಿಮಾನ

5. ಈಜಿಪ್ಟಿಯನ್ ಏರ್ ಫೋರ್ಸ್: 900 ಯುದ್ಧ ವಿಮಾನ

ಒಟ್ಟಾರೆಯಾಗಿ 1300ರಷ್ಟು ಯುದ್ಧ ವಿಮಾನಗಳನ್ನು ಕಾರ್ಯ ನಿರ್ವಹಿಸುತ್ತಿರುವ ಈಜಿಪ್ಟ್ ಏರ್ ಫೋರ್ಸ್ (ಇಎಎಫ್) 240ರಷ್ಟು ಎಫ್-16 ಫೈಟಿಂಗ್ ಫಾಲ್ಕನ್ ಹೊಂದಿದೆ.

4. ಇಂಡಿಯನ್ ಏರ್ ಫೋರ್ಸ್: 1080 ಯುದ್ಧ ವಿಮಾನ

4. ಇಂಡಿಯನ್ ಏರ್ ಫೋರ್ಸ್: 1080 ಯುದ್ಧ ವಿಮಾನ

ನಿಮಗೆಲ್ಲರಿಗೂ ಚಿರಪರಿಚವಾಗಿರುವ 1932ನೇ ಇಸವಿಯಲ್ಲಿ ಸ್ಥಾಪನೆಯಾಗಿರುವ ನಮ್ಮ ಭಾರತೀಯ ವಾಯು ಸೇನೆಯಲ್ಲಿ 1,27,000ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಭಾರತೀಯ ವಾಯುಪ್ರದೇಶದ ರಕ್ಷಣೆ ಹಾಗೂ ಯುದ್ಧ ಸಂದರ್ಭಗಳಲ್ಲಿ ವೈಮಾನಿಕ ಸಂಗ್ರಾಮ ನಡೆಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ. ಭಾರತ ತನ್ನದೇ ಆದ ಯುದ್ಧ ವಿಮಾನ ಜೋಡಣೆ ಹಾಗೂ ನಿರ್ಮಿಸುವ ಶಕ್ತಿ ಹೊಂದಿರುವುದಲ್ಲದೆ ನೂರಾರು ಪ್ರಮಾಣದಲ್ಲಿ ಸುಖೋಯ್ ಎಸ್‌ಯು-30 ಎಂಕೆಐ ಯುದ್ಧ ವಿಮಾನಗಳನ್ನು ತಯಾರಿಸಿವೆ.

3. ಪೀಪಲ್ಸ್ ಲಿಬರೇಷನ್ ಆರ್ಮಿ ಏರ್ ಫೋರ್ಸ್ (ಚೀನಾ): 1500 ಯುದ್ಧ ವಿಮಾನ

3. ಪೀಪಲ್ಸ್ ಲಿಬರೇಷನ್ ಆರ್ಮಿ ಏರ್ ಫೋರ್ಸ್ (ಚೀನಾ): 1500 ಯುದ್ಧ ವಿಮಾನ

ಭಾರತೀಯ ವಾಯುಪಡೆಯನ್ನು ಮೀರಿಸುವಂತಹ ಸಾಮರ್ಥ್ಯ ಹೊಂದಿರುವ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಏರ್ ಫೋರ್ಸ್, ಸರಿ ಸುಮಾರು 1500ರಷ್ಟು ಯುದ್ಧ ವಿಮಾನಗಳನ್ನು ಹೊಂದಿವೆ. ಭಾರತದಂತೆ ಚೀನಾವು ಸಹ ತನ್ನದೇ ಆದ ಯುದ್ಧ ವಿಮಾನಗಳನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ 20,000 ಎಲ್‌ಬಿಎಸ್‌ಗಿಂತಲೂ ಹೆಚ್ಚು ಭಾರದ ಬಾಂಬರ್‌ಗಳನ್ನು ಹೊತ್ತೊಯ್ಯಬಲ್ಲ ಶೆನ್ಯಾಂಗ್ ಜೆ-11 ಕ್ಸಿಯಾನ್ ಎಚ್ 6 ಪ್ರಮುಖವಾಗಿದೆ.

2. ರಷ್ಯಾ ಏರ್ ಫೋರ್ಸ್: 1900 ಯುದ್ಧ ವಿಮಾನ

2. ರಷ್ಯಾ ಏರ್ ಫೋರ್ಸ್: 1900 ಯುದ್ಧ ವಿಮಾನ

ಸೋವಿಯತ್ ಏರ್ ಫೋರ್ಸ್ ಬಳಿಕ 1992ನೇ ಇಸವಿಯಲ್ಲಿ ಸ್ಥಾಪನೆಯಾಗಿರುವ ರಷ್ಯಾ ಏರ್ ಫೋರ್ಸ್, ಹಣಕಾಸು ಹಿನ್ನಡೆ ಅನುಭವಿಸಿತ್ತು. ಹಾಗಿದ್ದರೂ ಬಳಿಕ ಎಚ್ಚೆತ್ತುಕೊಂಡಿರು ರಷ್ಯಾ ಬಳಿ ಗಂಟೆಗೆ 1860 ಮೈಲ್‌ಗಿಂತಲೂ ವೇಗತೆ ಹಾಗೆಯೇ 67,6000 ಫೀಟ್ ಎತ್ತರದಲ್ಲಿ ಚಲಿಸಬಲ್ಲ ಮಿಕೊಯಾನ್ ಮಿಗ್-31 ಯುದ್ಧ ವಿಮಾನಗಳಿವೆ. ಅದೇ ರೀತಿ ದೊಡ್ಡದಾ ಟುಪೊಲೆವ್ ಟು-160, 88,185 ಎಲ್‌ಬಿಎಸ್ ಭಾರದ ಯುದ್ಧ ಸಾಮಾಗ್ರಿಗಳನ್ನು ಗಂಟೆಗೆ 1380 ಮೈಲ್ ವೇಗತೆಯಲ್ಲಿ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ.

1. ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್: 3,318 ಯುದ್ಧ ವಿಮಾನ

1. ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್: 3,318 ಯುದ್ಧ ವಿಮಾನ

ನಿಮೆಗಲ್ಲರಿಗೂ ತಿಳಿದಿರುವಂತೆಯೇ ವಿಶ್ವಕ್ಕೆ ಅಗ್ರಜನಾಗಿರುವ ಅಮೆರಿಕ ಬಳಿಕ 1,245ರಷ್ಟು ಫೈಟಿಂಗ್ ಫಾಲ್ಕನ್‌ಗಳಿವೆ. ಅಷ್ಟೇ ಅಲ್ಲದೆ ನೂರಾರು ಎಫ್-15ಇ ಸ್ಟ್ಟೈಕ್ ಈಗಲ್ಸ್, ಎಫ್-22 ರಾಪ್ಟರ್ಸ್ ಮತ್ತು ಎಫ್-35 ಲೈಟಿಂಗ್ IIಗಳಿವೆ. ಇದು ಸಾಕಾಗದಿದ್ದಲ್ಲಿ ದೈತ್ಯ ಬಾಂಬ್ ದಾಳಿ ನಡೆಸುವಂತಹ ಜನಪ್ರಿಯ ಬೋಯಿಂಗ್ ಬಿ-52 ಸ್ಟ್ಟಾಟೊಫೋರ್ಟ್ರೆಸ್ ಮತ್ತು ಫ್ಯೂಚರಿಸ್ಟಿಕ್ ನಾರ್ಥ್‌ರಾಪ್ ಗ್ರೂಮಾನ್ ಬಿ-2 ಸ್ಪಿರಿಟ್‌ಗಳಂತಹ ಯುದ್ಧ ವಿಮಾನಗಳಿವೆ.

ಫೋಟೋ ಕೃಪೆ: ದಿ ರಿಚ್ಚೆಸ್ಟ್ ಡಾಟ್ ಕಾಮ್

Most Read Articles

Kannada
English summary
Take a look at the Top 10 Largest Combat Air Forces in the World. These 10 countries know the value of a large, strong combat air force, with the highest numbers of combat aircraft in the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X