19ರ ಹರೆಯದ ಚೆಲುವೆ ವಿಶ್ವದ ಅತಿ ಕಿರಿಯ ಬಿಲಿಯನೇರ್
ಪ್ರಸಿದ್ಧ ನಿಯತಕಾಲಿಕ ಫೋರ್ಬ್ಸ್ ಪ್ರಕಟಿಸಿರುವ ವಿಶ್ವದ ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ನಾರ್ವೇ ಯುವತಿ ಅಲೆಕ್ಸಾಂಡ್ರಾ ಆಂಡ್ರೆಸನ್ ವಿಶ್ವದ ಅತಿ ಕಿರಿಯ ಬಿಲಿಯನೇರ್ ಎನಿಸಿಕೊಂಡಿದ್ದಾರೆ. 19ರ ಹರೆಯದ ಈಕೆ ಈಗ ಯುವ ಮನಸ್ಕರಲ್ಲಿ ಸದ್ಯದ ಹಾಟ್ ಚರ್ಚಾ ವಿಷಯ.
Also Read: ಮುಖೇಶ್ ಅಂಬಾನಿ ಶತಕೋಟಿ ಅರಮನೆಯೊಳಗೆ ಇಣುಕು ನೋಟ
ಕೋಟ್ಯಧಿಪತಿ ಆಗಬೇಕೆಂಬ ಕನಸನ್ನು ಹಲವರು ಕಟ್ಟಿಕೊಂಡಿರುತ್ತಾರೆ. ಕೊನೆಗೆ ಏನೂ ಸಾಧ್ಯವಾಗದೇ ತಮ್ಮ ಕನಸನ್ನೆಲ್ಲ ಹೊತ್ತುಕೊಂಡು ಇಹಲೋಕ ತ್ಯಜಿಸುತ್ತಾರೆ. ಹಾಗೆರಬೇಕೆಂದರೆ ಅಲೆಕ್ಸಾಂಡ್ರಾ ಚಿಕ್ಕ ವಯಸ್ಸಿನಲ್ಲೇ ಬಿಲಿಯನೇರ್ ಪದವಿ ಆಲಂಕರಿಸಿದ್ದಾರೆ.

ನಾರ್ವೇ ಯುವರಾಣಿ ಎಂದೇ ಬಿಂಬಿಸಲಾಗುತ್ತಿರುವ ಅಲೆಕ್ಸಾಂಡ್ರಾ ಈಗ 1.2 ಬಿಲಿಯನ್ ಅಮೆರಿಕನ್ ಡಾಲರ್ ಗಳ ಒಡತಿಯಾಗಿದ್ದಾರೆ. ಈಕೆಯ ಸದೋರಿ ಕ್ಯಾಥರಿನಾ ಸಹ ಅಷ್ಟೇ ಮೊತ್ತವನ್ನು ಹೊಂದಿದ್ದಾರೆ.

ನಾರ್ವೇಜಿಯನ್ ತಂಬಾಕು ಉದ್ಯಮಿ ಜೋಹಾನ್ ಆಂಡ್ರೆಸನ್ ತಮ್ಮ ಮುದ್ದಿನ ಮಕ್ಕಳಿಗೆ ಇಷ್ಟೊಂದು ದೊಡ್ಡ ಮೊತ್ತದ ಸೊತ್ತನ್ನು ಹಂಚಿಕೊಂಡಿದ್ದರು.

ಕುದುರೆ ಸವಾರಿಯನ್ನು ಅತಿ ಹೆಚ್ಚು ಇಷ್ಟಪಡುವ ಈಕೆ ವೃತ್ತಿಪರ ರೈಡರ್ ಎನಿಸಿಕೊಳ್ಳುವಲ್ಲಿ ಉತ್ಸಾಹಿತರಾಗಿದ್ದಾರೆ. ಅಲ್ಲದೆ ಕಾರುಗಳ ಮೇಲೂ ತಮ್ಮ ಪ್ರೀತಿಯನ್ನು ತೋರಿದ್ದಾರೆ.

ಇಷ್ಟೊಂದು ದೊಡ್ಡ ಮೊತ್ತವನ್ನು ಏನು ಮಾಡುವೀರಾ ಎಂಬ ಪ್ರಶ್ನೆಗೆ ಹಸನ್ಮುಖಿಯಾಗಿಯೇ ಉತ್ತರಿಸುವ ಅಲೆಕ್ಸಾಂಡ್ರಾ, ಭದ್ರವಾಗಿಟ್ಟುಕೊಳ್ಳುವುದಾಗಿ ವಿವರಿಸುತ್ತಾರೆ.

ಬಿಲ್ ಗೇಟ್ಸ್
22 ವರ್ಷಗಳಲ್ಲಿ 17ನೇ ಬಾರಿಗೂ ವಿಶ್ವದ ಶ್ರೀಮಂತ ವ್ಯಕ್ತಿ ಎಂಬ ಗೌರವಕ್ಕೆ ಅಮೆರಿಕದ ಬಿಲ್ ಗೇಟ್ಸ್ ಪಾತ್ರವಾಗಿದ್ದಾರೆ. ವಾಹನ ಪ್ರೇಮಿಯೂ ಆಗಿರುವ ಬಿಲ್ ಗೇಟ್ಸ್ ಬಳಿ ಅತಿ ದುಬಾರಿ ಪೋರ್ಷೆ ಕಾರಿದೆ.

ಬಿಲ್ ಗೇಟ್ಸ್
ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಗೂ ಕೋಟ್ಯಾಧಿಪತಿ ಬಿಲ್ ಗೇಟ್ಸ್ ಗೂ ಪೋರ್ಷ್ ಕಂಪನಿಯ ಕಾರುಗಳಿಗೂ ಅವಿನಾಭಾವ ನಂಟಿದೆ. ಅವರು ಪ್ರತಿ ದಿನದ ಸವಾರಿಗಾಗಿ ಪೋರ್ಷೆ 911 ಕನ್ವರ್ಟಿಬಲ್ ಕಾರನ್ನು ಬಳಕೆ ಮಾಡುತ್ತಿದ್ದರು.

ವಾರೆನ್ ಬಫೆಟ್
ಫೋರ್ಬ್ಸ್ ಪಟ್ಟಿಯ ವಿಶ್ವದ ಶ್ರೀಮಂತರ ಕೋಟ್ಯಾಧಿಪತಿಗಳ ಸಾಲಿನಲ್ಲಿ ಉದ್ಯಮಿ ಹಾಗೂ ಹೂಡಿಕೆದಾರ ವಾರೆನ್ ಬಫೆಟ್ ಮೂರನೇ ಸ್ಥಾನದಲ್ಲಿದ್ದಾರೆ. ಅಲ್ಲದೆ ಸಹಾಯಾರ್ಥ ಸಂಸ್ಥೆಗಳಿಗೆ ಹೆಚ್ಚಿನ ಮೊತ್ತವನ್ನು ದಾನ ನೀಡಲು ಉತ್ಸುಕರಾಗಿರುತ್ತಾರೆ.

ವಾರೆನ್ ಬಫೆಟ್
ಪ್ರಸಿದ್ಧ ವ್ಯಕ್ತಿಗಳು ಬಳಕೆ ಮಾಡುತ್ತಿದ್ದ ಲಿಂಕನ್ ಟೌನ್ ಕಾರನ್ನು ವಾರೆನ್ ಬಫೆಟ್ ತಮ್ಮದಾಗಿಸಿಕೊಂಡಿದ್ದರು. ಇದರ ಸರಳ ಜೀವನಕ್ಕೆ ಹೆಚ್ಚಿನ ತೂಕ ನೀಡುವಂತಾಗಿತ್ತು.

ಮಾರ್ಕ್ ಜುಕರ್‌ಬರ್ಗ್
ಅತ್ತ ಫೇಸ್‌ಬುಕ್ ಸಾಮಾಜಿಕ ಜಾಲ ತಾಣದ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಫೋರ್ಬ್ಸ್ ಅತಿ ಶ್ರೀಮಂತರ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ.

ಮಾರ್ಕ್ ಜುಕರ್‌ಬರ್ಗ್
ಇತರ ಶ್ರೀಮಂತ ವ್ಯಕ್ತಿಗಳನ್ನು ಹೋಲಿಸಿದರೆ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ತುಂಬಾನೇ ಸರಳ ವ್ಯಕ್ತಿಯಾಗಿದ್ದಾರೆ. ಸಾಮಾನ್ಯವಾಗಿ ಶ್ರೀಮಂತ ವ್ಯಕ್ತಿಗಳು ಐಷಾರಾಮಿ ಕಾರುಗಳಲ್ಲಿ ಸಂಚರಿಸಲು ಇಷ್ಟಪಡುತ್ತಾರೆ. ಆದರೆ ಇದಕ್ಕೆ ತೀರಾ ವ್ಯತಿರಿಕ್ತವಾಗಿರುವ ಜುಕರ್ ಬರ್ಗ್ ಫೋಕ್ಸ್‌ವ್ಯಾಗನ್ ಗಾಲ್ಫ್‌ನಲ್ಲಿ ಪಯಣಿಸಲು ಬಯಸುತ್ತಾರೆ.

ಮುಖೇಶ್ ಅಂಬಾನಿ
ದೇಶದ ಶ್ರೀಮಂತ ಉದ್ಯಮಿ ಆಗಿರುವ ಮುಖೇಶ್ ಅಂಬಾನಿ ಫೋರ್ಬ್ಸ್ ಪಟ್ಟಿಯಲ್ಲಿ 36ನೇ ಸ್ಥಾನದಲ್ಲಿದ್ದಾರೆ.

ಮುಖೇಶ್ ಅಂಬಾನಿ
ಭಾರತ ಪ್ರಧಾನಿ ನರೇಂದ್ರ ಮೋದಿಗೆ ಸಮಾನವಾಗಿ ಮುಖೇಶ್ ಅಂಬಾನಿ ಅವರು ಗರಿಷ್ಠ ಭದ್ರತೆಯನ್ನು ನೀಡಲು ಸಮರ್ಥವಾಗಿರುವ ಬಿಎಂಡಬ್ಲ್ಯು 7 ಸಿರೀಸ್ ಹೈ ಸೆಕ್ಯೂರಿಟಿ ವಾಹನವನ್ನು ಖರೀದಿಸಿದ್ದಾರೆ.

ದೇಶದ ಪ್ರಖ್ಯಾತ ಉದ್ಯಮಿಗಳ ಜನಪ್ರಿಯ ಕಾರುಗಳು


Click it and Unblock the Notifications