ಯಮಹಾ ಬೈಕ್‌ ಪ್ರಿಯರಿಗೆ ಒಂದು ದಿನದ ರೇಸರ್ ಆಗುವ ಅವಕಾಶ: ಹೆಚ್ಚಿನ ಮಾಹಿತಿ ಇಲ್ಲಿದೆ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ಮಾರ್ಚ್‌ 13 ರಂದು ಯಮಹಾ ಟ್ರ್ಯಾಕ್ ಡೇ ಅನ್ನು ಆಯೋಜನೆ ಮಾಡಿದೆ. ಈ ವಿಶೇಷ ಕಾರ್ಯಕ್ರದಲ್ಲಿ ಪಾಲ್ಗೊಳ್ಳುವವರಿಗೆ ಒಂದು ದಿನದ ರೇಸರ್ ಆಗುವ ಅವಕಾಶವನ್ನು ಕಂಪನಿ ನೀಡುತ್ತಿದೆ.

ಒಂದು ದಿನದ ಯಮಹಾ ಬೈಕ್‌ ರೇಸರ್ ಆಗುವ ಅವಕಾಶ: ಹೆಚ್ಚಿನ ಮಾಹಿತಿ ಇಲ್ಲಿದೆ

ಹೌದು.. ಇದೇ 13 ರಂದು ಪ್ರಸಿದ್ಧ ದ್ವಿಚಕ್ರ ವಾಹನ ತಯಾರಕ ಯಮಹಾ ಕಂಪನಿ ಚೆನ್ನೈನಲ್ಲಿ ಟ್ರ್ಯಾಕ್ ಡೇ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮವು ಇರಂಗಟು ಫೋರ್ಟ್‌ನಲ್ಲಿರುವ ಮದ್ರಾಸ್ ರೇಸ್ ಟ್ರ್ಯಾಕ್‌ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು ಎಂದು ಕಂಪನಿ ತಿಳಿಸಿದೆ. ಆದರೆ, ಒಂದು ದಿನ ರೇಸರ್ ಆಗಲು ನೋಂದಾಯಿಸಿಕೊಳ್ಳುವುದು ಮುಖ್ಯ.

ಒಂದು ದಿನದ ಯಮಹಾ ಬೈಕ್‌ ರೇಸರ್ ಆಗುವ ಅವಕಾಶ: ಹೆಚ್ಚಿನ ಮಾಹಿತಿ ಇಲ್ಲಿದೆ..

ಇದಕ್ಕಾಗಿ ಕಂಪನಿಯು ನಿರ್ದಿಷ್ಟ ಸ್ಲಾಟ್‌ಗಳನ್ನು ಕಾಯ್ದಿರಿಸಿದೆ. ಆದರೆ ಅವುಗಳನ್ನು ಬುಕ್ ಮಾಡಲು ಸಾಧ್ಯವಿಲ್ಲ. ಈಗಾಗಲೇ ಹಲವರು ಆಸಕ್ತರಿಂದ ಎಲ್ಲಾ ಸ್ಲ್ಯಾಟ್‌ಗಳನ್ನು ಕಾಯ್ದಿರಿಸಲಾಗಿದೆ ಎಂದು ಕಂಪನಿ ಹೇಳಿದೆ. ಈ ಟ್ರ್ಯಾಕ್ ಡೇಗೆ ನೀವು ನೋಂದಣಿ ಮಾಡಿದ್ದರೆ, ಒಂದು ದಿನ ರೇಸರ್ ಆಗಿ ಯಮಹಾದ ಎಲ್ಲಾ ಉತ್ಪನ್ನಗಳನ್ನು ಓಡಿಸುವ ಅವಕಾಶ ನಿಮಗೆ ಸಿಗಲಿದೆ. ಯಮಹಾದ ಎಲ್ಲಾ ಉತ್ಪನ್ನಗಳನ್ನು ಈ ಟ್ರ್ಯಾಕ್ ಡೇ ದಿನದಂದು ಪ್ರದರ್ಶನಕ್ಕೆ ಇಡಲಾಗುತ್ತಿದೆ.

ಒಂದು ದಿನದ ಯಮಹಾ ಬೈಕ್‌ ರೇಸರ್ ಆಗುವ ಅವಕಾಶ: ಹೆಚ್ಚಿನ ಮಾಹಿತಿ ಇಲ್ಲಿದೆ..

ಟ್ರ್ಯಾಕ್ ಡೇಯಲ್ಲಿ ಭಾಗವಹಿಸುವ ಜನರಿಗೆ ಮಾಸ್ಕ್, ಯಮಹಾ ಲೋಗೋ ಹೊಂದಿರುವ ಟಿ-ಶರ್ಟ್ ಮತ್ತು ಲೇನ್ ಯಾರ್ಡ್ ಸೇರಿದಂತೆ ಇತರ ಉಚಿತ ಸೌಲಭ್ಯಗಳನ್ನು ಒದಗಿಸಲಾಗುವುದು. ಇದಲ್ಲದೆ, ರೇಸ್ ಟ್ರ್ಯಾಕ್‌ನಲ್ಲಿ ವಾಹನವನ್ನು ಓಡಿಸುವ ರೇಸರ್‌ಗಳಿಗೆ ರೈಡಿಂಗ್ ಗೇರ್ ಒದಗಿಸುವುದಾಗಿ ಯಮಹಾ ಕಂಪನಿ ತಿಳಿಸಿದೆ. ಆದರೆ ಅದನ್ನು ಹಂಚಿಕೆಯ ಆಧಾರದ ಮೇಲೆ ಒದಗಿಸಲಾಗುವುದು.

ಒಂದು ದಿನದ ಯಮಹಾ ಬೈಕ್‌ ರೇಸರ್ ಆಗುವ ಅವಕಾಶ: ಹೆಚ್ಚಿನ ಮಾಹಿತಿ ಇಲ್ಲಿದೆ..

ಆದ್ದರಿಂದ, ನೀವು ನಿಮ್ಮ ರೈಡಿಂಗ್ ಗೇರ್ ಹೊಂದಿದ್ದರೆ, ಅದನ್ನು ತರಬಹುದು. ಈ ಮೂಲಕ ಸವಾರಿ ಅನುಭವವನ್ನು ಪಡೆಯಬಹುದು ಎಂದು ಕಂಪನಿ ಹೇಳಿದೆ. ಅದೇ ರೀತಿ, ಯಮಹಾ ತನ್ನ ಸ್ವಂತ ವಾಹನಗಳನ್ನು ಟ್ರ್ಯಾಕ್‌ನಲ್ಲಿ ಓಡಿಸಲು ಮತ್ತು ನಿರ್ವಹಿಸಲು ಅವಕಾಶವನ್ನು ನೀಡುತ್ತದೆ ಎಂದು ತಿಳಿಸಿದೆ.

ಒಂದು ದಿನದ ಯಮಹಾ ಬೈಕ್‌ ರೇಸರ್ ಆಗುವ ಅವಕಾಶ: ಹೆಚ್ಚಿನ ಮಾಹಿತಿ ಇಲ್ಲಿದೆ..

ಇದೇ ವೇಳೆ ರೇಸ್ ಟ್ರ್ಯಾಕ್‌ನಲ್ಲಿ ಯಮಹಾ ವಾಹನಗಳನ್ನು ನಿರ್ವಹಿಸಲು ಪರವಾನಗಿಯಂತಹ ಮಹತ್ವದ ದಾಖಲೆಗಳು ಅಗತ್ಯ ಎಂದು ಹೇಳಲಾಗಿದೆ. ರೇಸ್ ಟ್ರ್ಯಾಕ್ ಈವೆಂಟ್ ಸಮಯದಲ್ಲಿ ವಾಹನವನ್ನು ಚಾಲನೆ ಮಾಡುವ ಮತ್ತು ವೀಕ್ಷಿಸುವ ಅನುಭವದ ಹೊರತಾಗಿ, ಕಂಪನಿಯು ತನ್ನ ಸೂಪರ್ ಬೈಕ್ ಅನ್ನು ಪ್ರದರ್ಶಿಸಲು ಯೋಜಿಸಿದೆ.

ಒಂದು ದಿನದ ಯಮಹಾ ಬೈಕ್‌ ರೇಸರ್ ಆಗುವ ಅವಕಾಶ: ಹೆಚ್ಚಿನ ಮಾಹಿತಿ ಇಲ್ಲಿದೆ..

ಯಮಹಾ ಆ ದಿನದಂದು ಫೋಟೋಗ್ರಫಿ, ಅಕ್ಸೆಸೊರಿಗಳು ಮತ್ತು ರೈಡಿಂಗ್ ಗೇರ್ ವಿಶುಲೈಸೇಶನ್ ಅನ್ನು ಸಹ ಮಾಡಲಿದೆ. 3.71 ಕಿ.ಮೀ, 12 ತಿರುವುಗಳ ಟ್ರಾಕ್ ಮತ್ತು ಇನ್ನು ಹಲವು ವೈಶಿಷ್ಟ್ಯಗಳನ್ನು ಮದ್ರಾಸ್ ಮೋಟಾರ್ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಏರ್ಪಡಿಸಲಾಗಿದೆ.

Most Read Articles

Kannada
Read more on ಯಮಹಾ yamaha
English summary
Yamaha announced trackday event chennai
Story first published: Tuesday, March 8, 2022, 20:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X