ಕರೋನಾ ವೈರಸ್ ಎಫೆಕ್ಟ್: ಹೊಸ ವಾಹನ ಖರೀದಿಗೆ ಬ್ರೇಕ್ ಹಾಕಿದ ಸರ್ಕಾರ

ವೈರಸ್ ಹರಡುವ ಭಯದಿಂದಾಗಿ ಇಡೀ ದೇಶವನ್ನು ಲಾಕ್‌ಡೌನ್ ಮಾಡಲಾಗಿದೆ. ಇದರಿಂದಾಗಿ ಎಲ್ಲಾ ಕ್ಷೇತ್ರಗಳ ವ್ಯವಹಾರ ಕುಂಠಿತಗೊಂಡಿದೆ. ಜೊತೆಗೆ ದೇಶದ ಆರ್ಥಿಕ ವ್ಯವಸ್ಥೆಯು ಕುಸಿದಿದೆ. ಇದರಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಣಕಾಸಿನ ಕೊರತೆಯನ್ನು ಎದುರಿಸುತ್ತಿವೆ.

ಕರೋನಾ ವೈರಸ್ ಎಫೆಕ್ಟ್: ಹೊಸ ವಾಹನ ಖರೀದಿಗೆ ಬ್ರೇಕ್ ಹಾಕಿದ ಸರ್ಕಾರ

ರಾಜ್ಯಗಳ ಹಣಕಾಸಿನ ಪರಿಸ್ಥಿತಿ ತೀರಾ ಹದಗೆತ್ತಿದೆ. ಹಲವು ರಾಜ್ಯಗಳಿಗೆ ಕೇಂದ್ರ ಸರ್ಕಾರವು ಇದುವರೆಗೂ ಆ ರಾಜ್ಯಗಳ ಪಾಲಿನ ಜಿಎಸ್‌ಟಿ ತೆರಿಗೆಯನ್ನು ನೀಡಿಲ್ಲ. ಡಿಸೆಂಬರ್‌ನಿಂದ ಮಾರ್ಚ್‌ವರೆಗಿನ ಜಿಎಸ್‌ಟಿಯನ್ನು ರಾಜ್ಯಗಳಿಗೆ ನೀಡಿಲ್ಲ ಎಂಬುದು ಗಮನಾರ್ಹ. ಕರೋನಾ ವೈರಸ್ ಹಾವಳಿಯಿಂದಾಗಿ ರಾಜ್ಯ ಸರ್ಕಾರಗಳು ಹಣದ ಕೊರತೆಯನ್ನು ಎದುರಿಸುತ್ತಿವೆ.

ಕರೋನಾ ವೈರಸ್ ಎಫೆಕ್ಟ್: ಹೊಸ ವಾಹನ ಖರೀದಿಗೆ ಬ್ರೇಕ್ ಹಾಕಿದ ಸರ್ಕಾರ

ಈ ಕಾರಣಕ್ಕೆ ಹಲವು ರಾಜ್ಯ ಸರ್ಕಾರಗಳು ವೆಚ್ಚ ಕಡಿತಕ್ಕೆ ಮುಂದಾಗಿವೆ. ಉತ್ತರ ಪ್ರದೇಶ ರಾಜ್ಯ ಸರ್ಕಾರವು ಹೊಸ ವಾಹನಗಳ ಖರೀದಿಯನ್ನು ತಾತ್ಕಾಲಿಕವಾಗಿ ರದ್ದುಪಡಿಸಿದೆ. ಇದರ ಜೊತೆಗೆ ಸರ್ಕಾರಿ ನೌಕರರ ಅನಗತ್ಯ ಪ್ರಯಾಣ ವೆಚ್ಚವನ್ನು ಕಡಿಮೆ ಮಾಡಲು ಸೂಚಿಸಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕರೋನಾ ವೈರಸ್ ಎಫೆಕ್ಟ್: ಹೊಸ ವಾಹನ ಖರೀದಿಗೆ ಬ್ರೇಕ್ ಹಾಕಿದ ಸರ್ಕಾರ

ಸದ್ಯಕ್ಕೆ ಅಸ್ತಿತ್ವದಲ್ಲಿರುವ ಆರ್ಥಿಕ ಹೊರೆ ಹೆಚ್ಚಾಗುವುದನ್ನು ತಪ್ಪಿಸಲು ಯುಪಿ ಸರ್ಕಾರವು ವೆಚ್ಚ ಕಡಿತಕ್ಕೆ ಮುಂದಾಗಿದೆ. ಸಭೆಗಳನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಮಾಡುವಂತೆ ಸೂಚಿಸಲಾಗಿದೆ. ಇದರಿಂದ ಸಭಾಂಗಣಗಳ ಬಾಡಿಗೆ ಹಾಗೂ ಪ್ರಯಾಣ ವೆಚ್ಚವನ್ನು ತಪ್ಪಿಸಿದಂತಾಗುತ್ತದೆ.

ಕರೋನಾ ವೈರಸ್ ಎಫೆಕ್ಟ್: ಹೊಸ ವಾಹನ ಖರೀದಿಗೆ ಬ್ರೇಕ್ ಹಾಕಿದ ಸರ್ಕಾರ

ಹಳೆಯ ಸರ್ಕಾರಿ ವಾಹನಗಳು ಹಾನಿಗೊಳಗಾಗಿದ್ದರೆ, ನಿಷ್ಪ್ರಯೋಜಕವಾಗಿದ್ದರೆ ಅವುಗಳನ್ನು ಹೊರಗುತ್ತಿಗೆಗೆ ನೀಡುವಂತೆ ತಿಳಿಸಲಾಗಿದೆ. ಕೆಲಸಕ್ಕೆ ಬಾರದ ಅನುಪಯುಕ್ತ ವಾಹನಗಳನ್ನು ಪತ್ತೆ ಹಚ್ಚಿ ಅವುಗಳನ್ನು ಸ್ಕ್ರ್ಯಾಪ್ ಮಾಡಲು ಆದೇಶಿಸಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವೈರಸ್ ಎಫೆಕ್ಟ್: ಹೊಸ ವಾಹನ ಖರೀದಿಗೆ ಬ್ರೇಕ್ ಹಾಕಿದ ಸರ್ಕಾರ

ಇದರ ಜೊತೆಗೆ ಉನ್ನತಾಧಿಕಾರಿಗಳ ವಾಯುಯಾನವನ್ನು ಬಿಜಿನೆಸ್ ಹಾಗೂ ಎಕ್ಸಿಕ್ಯೂಟಿವ್ ಕ್ಲಾಸ್‌ಗಳಿಗೆ ಸೀಮಿತಗೊಳಿಸಲಾಗಿದೆ. ಹೊಸ ಉದ್ಯೋಗಿಗಳ ನೇಮಕ್ಕೆ ಹಾಗೂ ಹೊಸ ವಾಹನಗಳ ಖರೀದಿಗೆ ಉತ್ತರ ಪ್ರದೇಶ ಸರ್ಕಾರವು ತಾತ್ಕಾಲಿಕವಾಗಿ ತಡೆ ನೀಡಿದೆ.

ಕರೋನಾ ವೈರಸ್ ಎಫೆಕ್ಟ್: ಹೊಸ ವಾಹನ ಖರೀದಿಗೆ ಬ್ರೇಕ್ ಹಾಕಿದ ಸರ್ಕಾರ

ಇದರ ಬದಲಿಗೆ ಗುತ್ತಿಗೆ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗುವುದು ಎಂದು ಹೇಳಲಾಗಿದೆ. ಅಗತ್ಯ ನಿರ್ಮಾಣವನ್ನು ಹೊರತುಪಡಿಸಿ ಬೇರೆ ಯಾವುದೇ ನಿರ್ಮಾಣ ಕಾರ್ಯಗಳನ್ನು ಕೈಗೆತ್ತಿಕೊಳ್ಳಬಾರದು ಎಂದು ತಿಳಿಸಲಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕರೋನಾ ವೈರಸ್ ಎಫೆಕ್ಟ್: ಹೊಸ ವಾಹನ ಖರೀದಿಗೆ ಬ್ರೇಕ್ ಹಾಕಿದ ಸರ್ಕಾರ

ಹಣದ ಕೊರತೆ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಸರ್ಕಾರವು ಈ ಕ್ರಮಗಳನ್ನು ಕೈಗೊಂಡಿದೆ. ಈ ಹೊಸ ಆದೇಶದ ಬಗ್ಗೆ ಯುಪಿ ಸರ್ಕಾರವು ಎಲ್ಲಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಮುಖ್ಯ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರಿಗೆ ನೋಟಿಸ್ ಕಳುಹಿಸಿದೆ.

Article Published On: Thursday, May 21, 2020, 11:38 [IST]
English summary
Yogi Adityanath govt bans purchase of new vehicles for officials. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+