ಕಾರು ಖರೀದಿಗಾಗಿ ಅಪಹರಣದ ನಾಟಕವಾಡಿ ಜೈಲು ಸೇರಿದ 20ರ ಯುವಕ

ಒಂದು ಕಾಲದಲ್ಲಿ ಕಾರುಗಳನ್ನು ಐಷಾರಾಮಿ ವಸ್ತುಗಳೆಂದು ಪರಿಗಣಿಸಲಾಗಿತ್ತು. ಆದರೆ ಈಗ ಕಾರು ಅಗತ್ಯ ವಸ್ತುಗಳಲ್ಲಿ ಒಂದಾಗಿದೆ. ಪ್ರತಿ ಕುಟುಂಬಕ್ಕೂ ಕಾರು ಅಗತ್ಯವೆನ್ನುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ.

ಕಾರು ಖರೀದಿಗಾಗಿ ಅಪಹರಣದ ನಾಟಕವಾಡಿ ಜೈಲು ಸೇರಿದ 20ರ ಯುವಕ

ಅದರಲ್ಲೂ ಕರೋನಾ ವೈರಸ್‌ ಸಾಂಕ್ರಾಮಿಕ ಸಮಯದಲ್ಲಿ ಸುರಕ್ಷಿತ ಪ್ರಯಾಣಕ್ಕೆ ಕಾರು ಅತ್ಯಗತ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್, ಆಟೋ, ಟ್ಯಾಕ್ಸಿ ಮುಂತಾದ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಿದರೆ ಕರೋನಾ ಸೋಂಕು ಹರಡುವ ಸಾಧ್ಯತೆಗಳಿವೆ. ಈ ಕಾರಣಕ್ಕೆ ಸಾರ್ವಜನಿಕರು ಸ್ವಂತ ಕಾರುಗಳಲ್ಲಿ ಪ್ರಯಾಣಿಸುವುದನ್ನು ಸುರಕ್ಷಿತವೆಂದು ಭಾವಿಸಿದ್ದಾರೆ. ಈ ಕಾರಣಕ್ಕೆ ಈಗ ಭಾರತದಲ್ಲಿ ಕಾರು ಮಾರಾಟವು ಹೆಚ್ಚುತ್ತಿದೆ.

ಕಾರು ಖರೀದಿಗಾಗಿ ಅಪಹರಣದ ನಾಟಕವಾಡಿ ಜೈಲು ಸೇರಿದ 20ರ ಯುವಕ

ಈಗಿನ ಯುವ ಜನರು ಚಿಕ್ಕ ವಯಸ್ಸಿನಲ್ಲಿಯೇ ತಮ್ಮದೇ ಆದ ಕಾರನ್ನು ಹೊಂದಲು ಬಯಸುತ್ತಾರೆ. ಕೆಲವರು ಅದರಲ್ಲಿ ಯಶಸ್ವಿಯೂ ಆಗುತ್ತಾರೆ. ಕಾರು ಖರೀದಿಸಲು ಯುವಕನೊಬ್ಬ ಏನು ಮಾಡಿದ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಕಾರು ಖರೀದಿಗಾಗಿ ಅಪಹರಣದ ನಾಟಕವಾಡಿ ಜೈಲು ಸೇರಿದ 20ರ ಯುವಕ

ಕಾರು ಖರೀದಿಸಲು ತನ್ನ ಅಪಹರಣವಾಗಿದೆ ಎಂಬ ನಾಟಕವಾಡಿದ 20 ವರ್ಷದ ಯುವಕನನ್ನು ಉತ್ತರ ಪ್ರದೇಶದ ಘಜಿಯಾಬಾದ್ ಪೊಲೀಸರು ನಿನ್ನೆ ಬಂಧಿಸಿದ್ದಾರೆ. ದೆಹಲಿಯ ಪ್ರಗತಿ ವಿಹಾರ ಮೂಲದ ಆಕಾಶ್ ಸಿಂಗ್ ಹಾಗೂ ಆತನ ಇಬ್ಬರು ಸ್ನೇಹಿತರು ಈ ಅಪಹರಣ ಪ್ರಹಸನದ ರೂವಾರಿಗಳು.

ಕಾರು ಖರೀದಿಗಾಗಿ ಅಪಹರಣದ ನಾಟಕವಾಡಿ ಜೈಲು ಸೇರಿದ 20ರ ಯುವಕ

ತನ್ನ ಹೆತ್ತವರಿಂದ ಹಣ ಪಡೆದು ಕಾರು ಖರೀದಿಸುವುದು ಆತನ ಯೋಜನೆಯಾಗಿತ್ತು. ಈ ಕಾರಣಕ್ಕೆ ಉತ್ತರ ಪ್ರದೇಶದ ನೋಯ್ಡಾದ ಹೋಟೆಲ್‌ನಲ್ಲಿ ರೂಂ ಬಾಡಿಗೆಗೆ ಪಡೆದಿದ್ದಾನೆ. ಇದಕ್ಕಾಗಿ ಸಕಲ ರೀತಿಯ ತಯಾರಿಯನ್ನು ಮಾಡಿದ್ದಾನೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಕಾರು ಖರೀದಿಗಾಗಿ ಅಪಹರಣದ ನಾಟಕವಾಡಿ ಜೈಲು ಸೇರಿದ 20ರ ಯುವಕ

ಸೋಮವಾರ ಬೆಳಿಗ್ಗೆ 8 ಗಂಟೆಗೆ ಆಕಾಶ್ ಸಿಂಗ್ ತನ್ನ ಮನೆಯಿಂದ ಹೊರಟಿದ್ದಾನೆ. ಆತನ ಸ್ನೇಹಿತ ಆತನ ತಾಯಿಗೆ ಕರೆ ಮಾಡಿ ಸಂಜೆ ವೇಳೆಗೆ ಆಕಾಶ್ ಸಿಂಗ್ ಮನೆಗೆ ಬರುತ್ತಾನೆ ಎಂದು ಹೇಳಿದ್ದಾನೆ.

ಕಾರು ಖರೀದಿಗಾಗಿ ಅಪಹರಣದ ನಾಟಕವಾಡಿ ಜೈಲು ಸೇರಿದ 20ರ ಯುವಕ

ನಾನು ಸೋಮವಾರ ಸಂಜೆ ತನಕ ಆಕಾಶ್ ಸಿಂಗ್ ಬರಬಹುದೆಂದು ಕಾಯುತ್ತಿದ್ದೆ. ಆದರೆ ಆತ ಬರಲಿಲ್ಲ ಎಂದು ಆಕಾಶ್ ಸಿಂಗ್ ತಾಯಿ ಕಿರಣ್ ಸಿಂಗ್ ಹೇಳಿದ್ದಾರೆ. ಈ ಕಾರಣಕ್ಕೆ ನಾವು ಬೇರೆ ಬೇರೆ ಸ್ಥಳಗಳಲ್ಲಿ ಹುಡುಕಾಟ ನಡೆಸಿದೆವು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಕಾರು ಖರೀದಿಗಾಗಿ ಅಪಹರಣದ ನಾಟಕವಾಡಿ ಜೈಲು ಸೇರಿದ 20ರ ಯುವಕ

ಆದರೂ ಆಕಾಶ್ ಸಿಂಗ್ ಸಿಗಲಿಲ್ಲ. ಸೋಮವಾರ ರಾತ್ರಿ 11 ಗಂಟೆಗೆ ಅಪರಿಚಿತ ವ್ಯಕ್ತಿಯೊಬ್ಬ ನಮಗೆ ಫೋನ್ ಕರೆ ಮಾಡಿದ. ನಮ್ಮೊಂದಿಗೆ ಮಾತನಾಡಿದ ವ್ಯಕ್ತಿ ನಿಮ್ಮ ಮಗ ನನ್ನೊಂದಿಗಿದ್ದಾನೆ ಎಂದು ಹೇಳಿದ.

ಕಾರು ಖರೀದಿಗಾಗಿ ಅಪಹರಣದ ನಾಟಕವಾಡಿ ಜೈಲು ಸೇರಿದ 20ರ ಯುವಕ

ಆತನನ್ನು ಬಿಡಬೇಕಾದರೆ ರೂ.2 ಲಕ್ಷ ನೀಡಬೇಕು. ಯಾರಿಗಾದರೂ ಈ ವಿಷಯವನ್ನು ಬಾಯಿ ಬಿಟ್ಟರೆ ನನ್ನ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಎಂದು ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ಕಿರಣ್ ಸಿಂಗ್ ಈ ಎಲ್ಲ ಮಾಹಿತಿಯನ್ನು ನೀಡಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಕಾರು ಖರೀದಿಗಾಗಿ ಅಪಹರಣದ ನಾಟಕವಾಡಿ ಜೈಲು ಸೇರಿದ 20ರ ಯುವಕ

ಬೆದರಿಕೆ ಕರೆ ಬಂದ ಕೂಡಲೇ ಆಕಾಶ್ ಸಿಂಗ್ ನ ಪೋಷಕರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಆಕಾಶ್ ಸಿಂಗ್ ಅವರ ಪೋಷಕರಿಗೆ ಅದೇ ಫೋನ್ ನಂಬರ್ ನಿಂದ ಒಟ್ಟು ನಾಲ್ಕು ಬಾರಿ ಕರೆ ಮಾಡಲಾಗಿದೆ.

ಕಾರು ಖರೀದಿಗಾಗಿ ಅಪಹರಣದ ನಾಟಕವಾಡಿ ಜೈಲು ಸೇರಿದ 20ರ ಯುವಕ

ಈ ಕರೆಗಳ ಆಧಾರದ ಮೇಲೆ ಲೋಕೇಷನ್ ಪತ್ತೆ ಹಚ್ಚಿದ ಪೊಲೀಸರು ನೋಯ್ಡಾದ ಸೆಕ್ಟರ್ 22 ಪ್ರದೇಶದ ಹೋಟೆಲ್‌ನಲ್ಲಿದ್ದ ಆಕಾಶ್ ಸಿಂಗ್ ಹಾಗೂ ಆತನ ಸ್ನೇಹಿತರಾದ ಅಂಕಿತ್ ಕುಮಾರ್ ಹಾಗೂ ಕರಣ್ ಕುಮಾರ್ ರವರನ್ನು ವಶಕ್ಕೆ ಪಡೆದಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕಾರು ಖರೀದಿಗಾಗಿ ಅಪಹರಣದ ನಾಟಕವಾಡಿ ಜೈಲು ಸೇರಿದ 20ರ ಯುವಕ

ಆಕಾಶ್ ಸಿಂಗ್ ಕಾರು ಕೊಡಿಸುವಂತೆ ತನ್ನ ಪೋಷಕರನ್ನು ಒತ್ತಾಯಿಸಿದ್ದಾನೆ. ಆಕಾಶ್ ಸಿಂಗ್ ತನ್ನ ಅಣ್ಣನ ಬೈಕ್ ಅನ್ನು ಹೊಂದಿದ್ದಾನೆ. ಆದರೆ ಕಾರು ಖರೀದಿಸಬೇಕೆಂಬುದು ಆತನ ಆಸೆಯಾಗಿತ್ತು. ಈ ಕಾರಣಕ್ಕೆ ಈ ಅಪಹರಣದ ನಾಟಕವಾಡಿದ್ದಾನೆ.

ಕಾರು ಖರೀದಿಗಾಗಿ ಅಪಹರಣದ ನಾಟಕವಾಡಿ ಜೈಲು ಸೇರಿದ 20ರ ಯುವಕ

ಈಗ ಆಕಾಶ್ ಸಿಂಗ್ ಹಾಗೂ ಅಂಕಿತ್ ಕುಮಾರ್ ಇಬ್ಬರನ್ನೂ ಬಂಧಿಸಲಾಗಿದ್ದು, ತಲೆ ಮರೆಸಿಕೊಂಡಿರುವ ಕರಣ್ ಕುಮಾರ್ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಕಾರು ಖರೀದಿಗಾಗಿ ಅಪಹರಣದ ನಾಟಕವಾಡಿ ಜೈಲು ಸೇರಿದ 20ರ ಯುವಕ

ಕಾರು ಇದ್ದರೆ ಪ್ರಯಾಣವು ಸುಗಮವಾಗುವುದು ನಿಜವಾದರೂ 20ನೇ ವಯಸ್ಸಿನಲ್ಲಿಯೇ ಕಾರು ಬೇಕೆಂದು ಅಪಹರಣದ ನಾಟಕವಾಡಿರುವುದು ನಿಜಕ್ಕೂ ಆಘಾತಕರವಾಗಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Young man from Delhi arrested for fake kidnapping. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X