ಕರೋನಾ ಸೋಂಕಿತರಿಗೆ ನೆರವಾಗಲು ನೆಚ್ಚಿನ ಕಾರನ್ನೇ ಮಾರಾಟ ಮಾಡಿದ ಯುವಕ
ಕರೋನಾ ವೈರಸ್, ಭಾರತ ಸೇರಿದಂತೆ ಎಲ್ಲಾ ದೇಶಗಳಲ್ಲೂ ತನ್ನ ಅಟ್ಟಹಾಸವನ್ನು ತೋರುತ್ತಿದೆ. ಈ ಸಂಕಷ್ಟದ ಸಮಯದಲ್ಲಿ ಹಲವರು ತಮ್ಮ ಕೈಲಾದ ನೆರವನ್ನು ನೀಡಿ, ಈ ಜಗತ್ತಿನಲ್ಲಿ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ಸಾಬೀತುಪಡಿಸುತ್ತಿದ್ದಾರೆ.

ಅಂತಹವರಲ್ಲಿ ಶಹನವಾಜ್ ಶೇಖ್ ಸಹ ಒಬ್ಬರು. ಇವರು ಮುಂಬೈನ ಉಪನಗರದ ಮಾಲಾಡ್‌ನ ನಿವಾಸಿ. ಮೇ 28ರಂದು ಅವರ ಜೀವನದಲ್ಲಿ ಒಂದು ದುರಂತ ಘಟನೆ ನಡೆಯಿತು.ಶಹನಾವಾಜ್ ಶೇಖ್‌ರವರ ಬಿಸಿನೆಸ್ ಪಾರ್ಟ್‌ನರ್ ಸಹೋದರಿ ಆ ದಿನ ಕರೋನಾ ವೈರಸ್‌ನಿಂದ ಮೃತಪಟ್ಟರು. ಇನ್ನೂ ದುರಂತದ ಸಂಗತಿಯೆಂದರೆ ಅವರು 6 ತಿಂಗಳ ಗರ್ಭಿಣಿಯಾಗಿದ್ದರು.

ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ದಾಖಲಿಸಿಕೊಳ್ಳಲು 5 ಆಸ್ಪತ್ರೆಗಳು ನಿರಾಕರಿಸಿದವು. ನಂತರ ಅವರು 6ನೇ ಆಸ್ಪತ್ರೆಯ ಹೊರಗಿದ್ದ ಆಟೋರಿಕ್ಷಾದಲ್ಲಿ ಕೊನೆಯುಸಿರೆಳೆದರು. ಈ ಘಟನೆ ಶಹನವಾಜ್ ಶೇಖ್ ಅವರ ಮನಸ್ಸಿನ ಮೇಲೆ ಪರಿಣಾಮ ಬೀರಿತು.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಸಿಲಿಂಡರ್ ದೊರೆತಿದ್ದರೆ, ಮೃತ ಮಹಿಳೆಯು ಬದುಕುಳಿಯುವ ಸಾಧ್ಯತೆಗಳಿದ್ದವು. ಈ ಕಾರಣಕ್ಕೆ ಶಹನಾವಾಜ್ ಶೇಖ್ ತಮ್ಮ ಬಳಿಯಿದ್ದ ಕಾರ್ ಅನ್ನು ಮಾರಾಟ ಮಾಡಿ ಅಗತ್ಯವಿರುವವರಿಗೆ ಆಕ್ಸಿಜನ್ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದರು.

31 ವರ್ಷದ ಶಹನವಾಜ್ ಶೇಖ್ ತಮ್ಮ ಫೋರ್ಡ್ ಎಂಡೀವರ್ ಎಸ್‌ಯುವಿಯನ್ನು ಮಾರಾಟ ಮಾಡಿದ್ದಾರೆ. ಈ ಎಸ್‌ಯುವಿ ಭಾರತದ ಜನಪ್ರಿಯ ಎಸ್‌ಯುವಿಗಳಲ್ಲಿ ಒಂದಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಫೋರ್ಡ್ ಎಂಡೀವರ್, ಟೊಯೋಟಾ ಫಾರ್ಚೂನರ್ ಎಸ್‌ಯುವಿಗೆ ಪೈಪೋಟಿ ನೀಡುತ್ತದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಶಹನವಾಜ್ ಶೇಖ್‌ರವರ ಬಳಿಯಿದ್ದ ಅತ್ಯಮೂಲ್ಯ ಆಸ್ತಿಯೆಂದರೆ ಈ ಫೋರ್ಡ್ ಎಂಡೀವರ್. ಈ ಎಸ್‌ಯುವಿಯನ್ನು ಅವರು ಕಳೆದ ವರ್ಷ ಖರೀದಿಸಿದ್ದರು. ಶಹನವಾಜ್ ಶೇಖ್ ಈ ಎಸ್‌ಯುವಿಗಾಗಿ 007 ನಂಬರ್ ಪಡೆಯಲು ಹಾಗೂ ಮ್ಯೂಸಿಕ್ ಸಿಸ್ಟಂ ಅಳವಡಿಸಲು ಸಾಕಷ್ಟು ಹಣವನ್ನು ಖರ್ಚು ಮಾಡಿದ್ದರು.

ಲಾಕ್‌ಡೌನ್ ಅವಧಿಯಲ್ಲಿ ತಮ್ಮ ಕಾರ್ ಅನ್ನು ತಾತ್ಕಾಲಿಕ ಆಂಬ್ಯುಲೆನ್ಸ್ ಆಗಿ ಬಳಸುತ್ತಿದ್ದರು. ಆದರೆ ತಮ್ಮ ಪಾಲುದಾರನ ಸಹೋದರಿ ಮೃತಪಟ್ಟ ನಂತರ ತಮ್ಮ ಕಾರನ್ನು ಮಾರಾಟ ಮಾಡಿ ಆಕ್ಸಿಜನ್ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲು ಮುಂದಾದರು.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಜೂನ್ 5ರಂದು ಉಚಿತವಾಗಿ ಆಕ್ಸಿಜನ್ ಸಿಲಿಂಡರ್‌ಗಳನ್ನು ನೀಡುವ ಕೆಲಸವನ್ನು ಆರಂಭಿಸಿದ, ಅವರು ಅಂದಿನಿಂದ ಕರೋನಾ ವೈರಸ್ ಸೋಂಕಿಗೆ ಒಳಗಾಗಿರುವ 250ಕ್ಕೂ ಹೆಚ್ಚು ಕುಟುಂಬಗಳಿಗೆಆಕ್ಸಿಜನ್ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಿದ್ದಾರೆ.

ಶಹನವಾಜ್ ಶೇಖ್ ಅವರ ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಆಕ್ಸಿಜನ್ ಸಿಲಿಂಡರ್‌ಗಳ ಅಗತ್ಯವಿರುವವರು ಅವುಗಳನ್ನು ಪಡೆಯಲು ತಮ್ಮನ್ನು ಸಂಪರ್ಕಿಸುವಂತೆ ಶಹನವಾಜ್ ಶೇಖ್ ಹಾಗೂ ಅವರ ಸ್ನೇಹಿತರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಮುಂಬೈ ಮಿರರ್ ವರದಿ ಮಾಡಿದೆ.


Click it and Unblock the Notifications