ಯೂಟ್ಯೂಬ್‌ನಿಂದ ಇಷ್ಟು ಹಣ ಬರುತ್ತಾ? ಮತ್ತೊಂದು ದುಬಾರಿ ಬೆಲೆಯ ಕಾರು ಖರೀದಿಸಿದ ಯೂಟ್ಯೂಬರ್

ಹಿಂದೆ ಸಿನಿಮಾ ಮತ್ತು ಸೀರಿಯಲ್ ಗಳಿಗೆ ದೊಡ್ಡ ಅಭಿಮಾನಿಗಳ ಬಳಗ ಇತ್ತು. ಇವರು ದೊಡ್ಡ ಸಮೂಹದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಇಂದು ಯೂಟ್ಯೂಬರ್‌ಗಳ ಕಾಲವಾಗಿದ್ದು, ಇವರಿಗೆ ದೊಡ್ಡ ಅಭಿಮಾನಿಗಳ ಬಳಗವಿದೆ. ಯೂಟ್ಯೂಬರ್‌ಗಳು ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಜನಪ್ರಿಯ ಯೂಟ್ಯೂಬರ್ ವಿಶಾಖಾ ಹೊಸ ದುಬಾರಿ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ.

ಜನಪ್ರಿಯ ಮಹಿಳಾ ಮೋಟಾರ್‌ಸೈಕ್ಲಿಸ್ಟ್ ಮತ್ತು ಬ್ಲಾಗರ್ "ರೈಡರ್ ಗರ್ಲ್ ವಿಶಾಖಾ ಹೊಸ ಟೊಯೊಟಾ ಇನೋವಾ ಹೈಕ್ರಾಸ್ ಕಾರನ್ನು ಖರೀದಿಸಿದ್ದಾರೆ. ಯೂಟ್ಯೂಬ್ ವೀಡಿಯೊದಲ್ಲಿ, ಭಾರತದ ಮೊದಲ ಮಹಿಳಾ ಮೋಟಾರ್‌ಸೈಕಲ್ ವ್ಲಾಗರ್ ಎಂದು ಹೇಳಿಕೊಳ್ಳುವ ವಿಶಾಖಾ ಅವರು ತಮ್ಮ ಹೊಸ ಟೊಯೊಟಾ ಇನೋವಾ ಹೈಕ್ರಾಸ್ (Toyota Innova HyCros) ಕಾರನ್ನು ತಮ್ಮ ಕುಟುಂಬದೊಂದಿಗೆ ವಿತರಣೆ ಪಡೆದುಕೊಳ್ಳುವ ವೀಡಿಯೊವನು ಹಂಚಿಕೊಂಡಿದ್ದಾರೆ.

YouTuber Vishakha

ರೈಡರ್ ಗರ್ಲ್ ವಿಶಾಖಾ ತನ್ನ ಕುಟುಂಬದ ಸದಸ್ಯರೊಂದಿಗೆ ಟೊಯೊಟಾ ಶೋರೂಮ್‌ಗೆ ತನ್ನ ಮಹೀಂದ್ರಾ ಥಾರ್ ಎಸ್‍ಯುವಿಯನ್ನು ಓಡಿಸಿಕೊಂಡು ಬರುವುದರಿಂದ ವೀಡಿಯೊ ಪ್ರಾರಂಭವಾಗುತ್ತದೆ ಈ ಮಹೀಂದ್ರಾ ಥಾರ್ ತನ್ನ ಮೊದಲ ವಾಹನವಾಗಿದೆ. ಅವರ ಕುಟುಂಬ ಸದಸ್ಯ ಜೊತೆ ಯೂಟ್ಯೂಬರ್ ಮೆಚ್ಚಿನ ಶ್ವಾನವನ್ನು ಕೂಡ ಕರೆದುಕೊಂಡುಬಂದಿದ್ದರು. ಇನ್ನು ಯೂಟ್ಯೂಬರ್ (YouTuber) ವಿಶಾಖಾ (Vishakha) ಅವರು ಕೇವಲ ಏಳು ತಿಂಗಳಲ್ಲಿ ಹಿಂದೆ ತನ್ನ ಈ ಮಹೀಂದ್ರಾ ಥಾರ್ ಖರೀದಿಸಿದ್ದರು.

ಕೇವಲ ಏಳು ತಿಂಗಳ ನಂತರ ಈ ದುಬಾರಿ ಟೊಯೊಟಾ ಇನೋವಾ ಹೈಕ್ರಾಸ್ ಕಾರು ಖರೀದಿಸಿದ್ದಾರೆ. ಇನ್ನು ಮಹೀಂದ್ರಾ ಥಾರ್ ಖರೀದಿಸುವಾಗ ಕೂಡ ವೀಡಿಯೊ ಪೋಸ್ಟ್ ಮಾಡಿದ್ದರು. ರೈಡರ್ ಗರ್ಲ್ ವಿಶಾಖಾ ಅವರು ಶೋರೂಮ್‌ಗೆ ಬರುವವರೆಗೂ ತಮ್ಮ ಕುಟುಂಬ ಸದಸ್ಯರಿಂದ ಸರ್ಪೈಸ್ ಆಗಿತ್ತು. ಆಕೆ ತನ್ನ ಕುಟುಂಬಕ್ಕೆ ವಾಹನವನ್ನು ಹೇಗೆ ಉಡುಗೊರೆಯಾಗಿ ನೀಡಿದಳು ಎಂಬುದನ್ನು ವಿವರಿಸುವಾಗ ವೀಡಿಯೊ ಭಾವನಾತ್ಮಕ ಕ್ಷಣಗಳನ್ನು ಸೆರೆಹಿಡಿಯುತ್ತದೆ.

YouTuber Vishakha

ರೈಡರ್ ಗರ್ಲ್ ವಿಶಾಖಾ ಖರೀದಿಸಿದ ಟೊಯೊಟಾ ಇನೋವಾ ಹೈಕ್ರಾಸ್ ಟಾಪ್-ಸ್ಪೆಕ್ ZX(O) ರೂಪಾಂತರವಾಗಿದ್ದು, ಬ್ಲ್ಯಾಕ್‌ಲಿಶ್ ಅಗೆಹಾ ಗ್ಲಾಸ್ ಫ್ಲೇಕ್ ಬಣ್ಣದ ಮಾದರಿಯಾಗಿದೆ. ಈ ಆವೃತ್ತಿಯು ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟ್‌ಗಳೊಂದಿಗೆ ಬರುತ್ತದೆ. ವೀಡಿಯೊದ ಕೊನೆಯಲ್ಲಿ, ರೈಡರ್ ಗರ್ಲ್ ವಿಶಾಖಾ ಅವರು ಹೊಸದಾಗಿ ಖರೀದಿಸಿದ ಟೊಯೊಟಾ ಇನೋವಾ ಹೈಕ್ರಾಸ್ ಅನ್ನು ಮಹೀಂದ್ರ ಥಾರ್ ಮತ್ತು ಹೋಂಡಾ ಮೊಬಿಲಿಯೊ ಸೇರಿದಂತೆ ತನ್ನ ಇತರ ವಾಹನಗಳೊಂದಿಗೆ ಪ್ರದರ್ಶಿಸಿದರು.

ವೀಡಿಯೊದ ಕೊನೆಯಲ್ಲಿ, ರೈಡರ್ ಗರ್ಲ್ ವಿಶಾಖಾ ಅವರು ಹೊಸದಾಗಿ ಖರೀದಿಸಿದ ಟೊಯೊಟಾ ಇನ್ನೋವಾ ಹೈಕ್ರಾಸ್ ಅನ್ನು ಮಹೀಂದ್ರ ಥಾರ್ ಮತ್ತು ಹೋಂಡಾ ಮೊಬಿಲಿಯೊ ಸೇರಿದಂತೆ ತನ್ನ ಇತರ ವಾಹನಗಳೊಂದಿಗೆ ಪ್ರದರ್ಶಿಸಿದರು. ಆಕೆಯ ಕಸ್ಟಮೈಸ್ ಮಾಡಿದ KTM ಡ್ಯೂಕ್ 390 ಮತ್ತು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಗಳನ್ನು ಕೂಡ ಹೊಂದಿದ್ದಾರೆ.

ರೈಡರ್ ಗರ್ಲ್ ವಿಶಾಖಾ ಖರೀದಿಸಿದ ಟೊಯೊಟಾ ಇನೋವಾ ಹೈಕ್ರಾಸ್ ಕಾರಿನ ಬಗ್ಗೆ ಹೇಳುವುದಾ, ಈ ಬಹುಬೇಡಿಕೆಯ, ಇನೋವಾ ಹೈಕ್ರಾಸ್ ಕಾರಿನಲ್ಲಿ ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಇದು 2.0-ಲೀಟರ್ ನ್ಯಾಚುರಲ್-ಆಸ್ಪೈರ್ಡ್ ಮತ್ತು 2.0-ಲೀಟರ್ ಪೆಟ್ರೋಲ್ ಜೊತೆಗೆ ಟೊಯೊಟಾದ ಸೆಲ್ಫ್ ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನ. ಹೈಬ್ರಿಡ್ ಅಲ್ಲದ ಆವೃತ್ತಿಯು 172 ಬಿಹೆಚ್‍ಪಿ ಪವರ್ ಮತ್ತು 205 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತದೆ.

ಇನ್ನು ಹೈಬ್ರಿಡ್ ಪವರ್‌ಟ್ರೇನ್ 186 ಬಿಎಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಟೊಯೊಟಾ ಇನೋವಾ ಹೈಕ್ರಾಸ್ ಮಾದರಿಯು ಇನೋವಾ ಕ್ರಿಸ್ಟಾಗಿಂತ 20 ಎಂಎಂ ಉದ್ದ ಮತ್ತು ಅಗಲವಾಗಿದೆ. ಆದರೆ ಇದರ ಎತ್ತರವು ಒಂದೇ ಆಗಿರುತ್ತದೆ, ಆದರೆ ವೀಲ್ ಬೇಸ್ ಅನ್ನು 100 ಎಂಎಂವರೆಗೆ ವಿಸ್ತರಿಸಲಾಗಿದೆ. ವ್ಹೀಲ್‌ಬೇಸ್‌ನ ಹೆಚ್ಚಳವು ಉತ್ತಮ ಕ್ಯಾಬಿನ್ ಜಾಗವನ್ನು ನೀಡುತ್ತದೆ.

ಈ ಹೊಸ ಹೈಕ್ರಾಸ್ ಎಂಪಿವಿಯು ಟೊಯೋಟಾ ಸೇಫ್ಟಿ ಸೆನ್ಸ್ ಸೂಟ್ ಆಫ್ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟ್ಸ್ ಸಿಸ್ಟಂ) ನೊಂದಿಗೆ ಬರುತ್ತದೆ. ಈ ಕಾರಿನ ADAS ವೈಶಿಷ್ಟ್ಯಗಳು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾನಿಟರ್, ಲೇನ್ ಕೀಪ್ ಅಸಿಸ್ಟ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ ಮತ್ತು ಪ್ರಿ-ಕೊಲಿಷನ್ ಸಿಸ್ಟಂ ಅನ್ನು ಒಳಗೊಂಡಿದೆ.ಇತರ ಸುರಕ್ಷತಾ ವೈಶಿಷ್ಟ್ಯಗಳಲ್ಲಿ 6 ಏರ್‌ಬ್ಯಾಗ್‌ಗಳು, ಟ್ರ್ಯಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಮತ್ತು EBD ಜೊತೆಗೆ ABS ಸೇರಿವೆ.

Article Published On: Friday, August 4, 2023, 16:49 [IST]
English summary
Youtuber vishakha buys new toyota innova hycross details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+