ಮರುಭೂಮಿಯ ರೇಸ್ ಗಾಡಿ ಹೇಂಗಿದೆ ನೋಡಿ ?

By Nagaraja

ಮರುಭೂಮಿಯಿಂದ ಆವರಿಸಿರುವ ದುಬೈ ಮೂಲದ ಸಂಸ್ಥೆಯಾಗಿರುವ ಝರೂಕ್ ಮೋಟಾರ್ಸ್ ಅತಿ ನೂತನ ಸ್ಯಾಂಡರ್ ರೇಸರ್ ಗಾಡಿಯನ್ನು ಅನಾವರಣಗೊಳಿಸಿದೆ. ಇದು ಆಫ್ ರೋಡ್ ಚಾಲನಾ ಪ್ರಿಯರಿಗೆ ಅತ್ಯುತ್ತಮ ಆಯ್ಕೆಯಾಗಿರಲಿದೆ.

ಪ್ರಮುಖವಾಗಿಯೂ ಮರಳುಗಾಡಿನಲ್ಲಿ ನಡೆಯಲಿರುವ ಚಾಂಪಿಯನ್ ಶಿಪ್ ರೇಸ್ ನಲ್ಲಿ ಭಾಗವಹಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಅಂದರೆ ರಸ್ತೆಯಲ್ಲಿ ಚಲಿಸಲು ಇದಕ್ಕೆ ಕಾನೂನಿನ ತೊಡಕು ಎದುರಾಗಲಿದೆ.

ಝರೂಕ್ ಸ್ಯಾಂಡ್ ರೇಸ್ ಗಾಡಿ

2016ನೇ ಸಾಲಿನಲ್ಲಷ್ಟೇ ಝರೂಕ್ ಸ್ಯಾಂಡ್ ರೇಸರ್ ಮಾರಾಟಕ್ಕೆ ಲಭ್ಯವಾಗಲಿದೆ. ಇದನ್ನು ಲೈಕನ್ ಕಾರುಗಳನ್ನು ವಿನ್ಯಾಸಗೊಳಿಸಿದ ಪ್ರಖ್ಯಾತ ವಿನ್ಯಾಸಗಾರರೇ ವಿನ್ಯಾಸಗೊಳಸಿರುವುದು ಮಗದೊಂದು ವಿಶೇಷತೆಯಾಗಿದೆ.

ಝರೂಕ್ ಸ್ಯಾಂಡ್ ರೇಸ್ ಗಾಡಿ

3.5 ಲೀಟರ್ ಸಿಕ್ಸ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಸ್ಯಾಂಡ್ ರೋಸರ್ 371 ಎನ್ ಎಂ ತಿರುಗುಬಲದಲ್ಲಿ 304 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ವಿಶಿಷ್ಟ ಟ್ಯೂನ್ ಮಾಡುವ ಮೂಲಕ 400ರಿಂದ 500 ಅಶ್ವಶಕ್ತಿಯ ವರೆಗೂ ಉತ್ಪಾದಿಸುವ ಹಾಗೆ ಮಾರ್ಪಾಡುಗೊಳಿಸಬಹುದಾಗಿದೆ.

ಝರೂಕ್ ಸ್ಯಾಂಡ್ ರೇಸ್ ಗಾಡಿ

ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿದ್ದು, ಮರುಭೂಮಿಯಲ್ಲಿ ಯಾವುದೇ ರೀತಿಯ ವಾತಾವರಣ ಬದಲಾವಣೆಯನ್ನು ಎದುರಿಸುವಷ್ಟು ಶಕ್ತವಾಗಿದೆ.

ಝರೂಕ್ ಸ್ಯಾಂಡ್ ರೇಸ್ ಗಾಡಿ

ಇನ್ನು ವಾಹನದೊಳಗೂ ಗರಿಷ್ಠ ವೈಶಿಷ್ಟ್ಯಗಳಿಗೆ ಮನೆ ಹಾಕಲಾಗಿದೆ. ಇದರಲ್ಲಿ ಎಲ್ ಸಿಡಿ ಪರದೆಯು ಪ್ರಮುಖವಾಗಿರಲಿದೆ.

ಝರೂಕ್ ಸ್ಯಾಂಡ್ ರೇಸ್ ಗಾಡಿ

ಹೆಚ್ಚು ಆರಾಮದಾಯಕವಾದ ಸೀಟು ಹಾಗೂ ಸ್ಥಳಾವಕಾಶವು ರೇಸರ್ ಗಳಿಗೆ ಪರಿಪೂರ್ಣ ಚಾಲನಾ ಅನುಭವ ಓದಗಿಸಲಿದೆ.

ಝರೂಕ್ ಸ್ಯಾಂಡ್ ರೇಸ್ ಗಾಡಿ

ಅಂತೆಯೇ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ , ಎಲ್ ಇಡಿ ಟರ್ನ್ ಸಿಗ್ನಲ್ ಗಳು ಇದರಲ್ಲಿರುತ್ತದೆ.

More from DriveSpark

Article Published On: Wednesday, December 2, 2015, 18:32 [IST]
English summary
Zarooq Motors Unveils SandRacer — A Road Legal Dune Buggy
Read more on ರೇಸ್ race
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+