ದೇಶೀಯ ಇವಿ ಬ್ರಾಂಡ್‌ಗಳ ಅಬ್ಬರ: ಹೊಸ ಉತ್ಪಾದನಾ ಘಟಕ ಉದ್ಘಾಟನೆ: ಉದ್ಯೋಗ ಸೃಷ್ಟಿ!

ಹೊಸ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಝೆನ್ ಮೊಬಿಲಿಟಿ, ಗುರ್ಗಾಂವ್‌ನ ಮಾನೇಸರ್‌ನಲ್ಲಿ ತನ್ನ ಅತ್ಯಾಧುನಿಕ ಉತ್ಪಾದನಾ ಘಟಕದ ಉದ್ಘಾಟನೆ ಮಾಡಿದೆ. ಸುಸ್ಥಿರ ಮೈಕ್ರೋ-ಮೊಬಿಲಿಟಿ ಪರಿಹಾರಗಳಿಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವುದಾಗಿ ಕಂಪನಿ ಹೇಳಿದೆ.

ವಿಸ್ತಾರವಾದ 2.5 ಎಕರೆ ಕ್ಯಾಂಪಸ್‌ನಲ್ಲಿ ನೆಲೆಗೊಂಡಿರುವ ಹೊಸ ಉತ್ಪಾದನಾ ಘಟಕದಲ್ಲಿನ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಮೂಲಸೌಕರ್ಯವನ್ನು ಝೆನ್ ಮೊಬಿಲಿಟಿ ಬಳಸಿಕೊಳ್ಳಲಿದೆ. ಜೊತೆಗೆ 500 ಕ್ಕೂ ಹೆಚ್ಚು ಮಂದಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಭರವಸೆಯನ್ನು ನೀಡಿದೆ. ವರ್ಷಕ್ಕೆ 50,000 ಯೂನಿಟ್‌ ವಾಹನಗಳ ನಿರ್ಮಾಣದೊಂದಿಗೆ, ಈ ಸೌಲಭ್ಯವು ಝೆನ್ ಮೈಕ್ರೋ ಪಾಡ್‌ಗಳ ಉತ್ಪಾದನೆ ಮತ್ತು ಜೋಡಣೆ ಮಾಡಲಾಗುವುದು. ಉತ್ಪಾದನೆಯ ಆಚೆಗೆ, ವಿನ್ಯಾಸ ಎಂಜಿನಿಯರಿಂಗ್ ಮತ್ತು ಉತ್ಪನ್ನ ಯೋಜನೆಗಾಗಿ ಸುಧಾರಿತ ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯಗಳು, ರೋಲರ್ ಪರೀಕ್ಷೆ ಮತ್ತು ಡೈನೋ ಪರೀಕ್ಷೆ ಸೇರಿದಂತೆ ಸಮಗ್ರ ಪರೀಕ್ಷಾ ಸಾಮರ್ಥ್ಯಗಳನ್ನು ಹೊಂದಿದೆ.

zen-mobility-unveiled-manufacturing-hub-for-zen-micro-pods

ಝೆನ್ ಮೊಬಿಲಿಟಿಯ ಸಂಸ್ಥಾಪಕ ನಮಿತ್ ಜೈನ್ ಮಾತನಾಡಿ, 'ನಮ್ಮ ಅತ್ಯಾಧುನಿಕ ಸೌಲಭ್ಯದಿಂದ ಈಗ 10,000 ಯುನಿಟ್‌ ವಾಹನಗಳ ನಿರ್ಮಾಣ ಮಾಡಲಾಗುವುದು. ಕೈಯಲ್ಲಿರುವ ಆರ್ಡರ್‌ಗಳನ್ನು ಡೆಲಿವರಿ ನೀಡಲು ಎರಡು ಪಾಳಿಗಳಲ್ಲಿ ಕಾರ್ಯನಿರ್ವಹಿಸಲಾಗುವುದು. ನಮ್ಮ ವರ್ಧಿತ ಉತ್ಪಾದನಾ ಸಾಮರ್ಥ್ಯಗಳು ಮತ್ತು ಸುಧಾರಿತ ಪರೀಕ್ಷಾ ಸೌಲಭ್ಯಗಳು ಇ-ಕಾಮರ್ಸ್ ಮತ್ತು ಫ್ಲೀಟ್ ಕಂಪನಿಗಳಿಗೆ ಪರಿಣಾಮಕಾರಿಯಾಗಿ ಡೆಲಿವರಿ ನೀಡಲು ಅನುವು ಮಾಡಿಕೊಡುತ್ತದೆ ಎಂದರು.

ನಮ್ಮ ಮುಂಬರುವ ಬಹುಪಯೋಗಿ 4-ವೀಲರ್ ಲೈಟ್ ಎಲೆಕ್ಟ್ರಿಕ್ ವೆಹಿಕಲ್ಸ್, ಝೆನ್ ಮ್ಯಾಕ್ಸಿ ಪಾಡ್‌ಗಳ ಭವಿಷ್ಯದ ಉತ್ಪಾದನೆಗೆ ಅನುಕೂಲವಾಗುವಂತೆ ಸ್ಥಾವರವನ್ನು ನಿಖರವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಸುಸ್ಥಿರ ನಗರ ಚಲನಶೀಲತೆ ಪರಿಹಾರಗಳ ಪ್ರವರ್ತಕ ಝೆನ್ ಮೊಬಿಲಿಟಿಯ ಬದ್ಧತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ಸಂಸ್ಥಾಪಕ ನಮಿತ್ ಜೈನ್ ವಿಶ್ವಾಸ ವ್ಯಕ್ತಪಡಿಸಿದರು.

zen-mobility-unveiled-manufacturing-hub-for-zen-micro-pods

ಇ-ಕಾಮರ್ಸ್, ದಿನಸಿ ವಿತರಣೆ, ಆಹಾರ ವಿತರಣೆ, ಎಫ್‌ಎಂಸಿಜಿ ಲಾಜಿಸ್ಟಿಕ್ಸ್, ಥರ್ಡ್-ಪಾರ್ಟಿ ಲಾಜಿಸ್ಟಿಕ್ಸ್‌ನಂತಹ ವೈವಿಧ್ಯಮಯ ಅಪ್ಲಿಕೇಶನ್‌ಗಳನ್ನು ಪೂರೈಸುವ ನವೀನ ಕಾರ್ಗೋ ಬಾಕ್ಸ್ ಪರಿಹಾರಗಳಿಗಾಗಿ ಸಂಪೂರ್ಣ ಆಂತರಿಕ ಗ್ರಾಹಕೀಕರಣವನ್ನು ಒದಗಿಸುವ ಸಾಮರ್ಥ್ಯವು ಹೊಸ ಸೌಲಭ್ಯದ ಒಂದು ವಿಶಿಷ್ಟ ಲಕ್ಷಣವಾಗಿದೆ. ಇದರಲ್ಲಿ ಕೋಲ್ಡ್ ಚೈನ್ ಮ್ಯಾನೇಜ್ಮೆಂಟ್, ಡೈರಿ ಉತ್ಪನ್ನ ವಿತರಣೆ, ಔಷಧೀಯ ಲಾಜಿಸ್ಟಿಕ್ಸ್ ನಂತಹ ಹಲವು ಇರಲಿವೆ. ಉತ್ಪಾದನಾ ಪ್ರಕ್ರಿಯೆಯಲ್ಲಿ ಗ್ರಾಹಕೀಕರಣ ಸಾಮರ್ಥ್ಯಗಳನ್ನು ಸಂಯೋಜಿಸುವ ಮೂಲಕ, ಝೆನ್ ಮೊಬಿಲಿಟಿ ನಗರ ಲಾಜಿಸ್ಟಿಕ್ಸ್‌ನ ಅನನ್ಯ ಅಗತ್ಯಗಳನ್ನು ಪರಿಹರಿಸಲು ಮತ್ತು ಗ್ರಾಹಕರಿಗೆ ಸೂಕ್ತವಾದ ಪರಿಹಾರಗಳನ್ನು ತಲುಪಿಸುವ ಗುರಿಯನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ಝೆನ್ ಮೊಬಿಲಿಟಿಯು ಭಾರತದ 10 ಕ್ಕೂ ಹೆಚ್ಚು ನಗರಗಳಲ್ಲಿ ವಾಹನಗಳನ್ನು ನಿಯೋಜಿಸಲು ಪ್ರಮುಖ ಆಹಾರ, ದಿನಸಿ ವಿತರಣೆ ಮತ್ತು ಇ-ಕಾಮರ್ಸ್ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ. ವಿತರಣಾ ಸವಾರರಿಗೆ ಆದಾಯದ ಅವಕಾಶಗಳನ್ನು ಹೆಚ್ಚಿಸಲಿದ್ದು, ಇ-ಕಾಮರ್ಸ್ ಮತ್ತು ಫ್ಲೀಟ್ ಆಪರೇಟರ್‌ಗಳಿಗೆ ಸಮರ್ಥ ಫ್ಲೀಟ್ ನಿರ್ವಹಣೆಯನ್ನು ಸಕ್ರಿಯಗೊಳಿಸುತ್ತದೆ.

ಭಾರತದ ಬೆಳವಣಿಗೆಯನ್ನು ಬೆಂಬಲಿಸಲು ಮತ್ತು 2070 ರ ವೇಳೆಗೆ ದೇಶದ ಕಾರ್ಬನ್ ಅನ್ನು ಶೂನ್ಯಕ್ಕೆ ತರುವ ಗುರಿಯನ್ನು ಹೊಂದಿದೆ. ಪ್ರತಿಷ್ಠಿತ ಹೋಮೋಲೋಗೇಶನ್ ಪ್ರಮಾಣಪತ್ರದ ಅನುಸರಣೆಯೊಂದಿಗೆ, ಝೆನ್ ಮೊಬಿಲಿಟಿ ಉದ್ಯಮದ ನಿಯಮಗಳ ಅನುಸರಣೆಯನ್ನು ಖಾತ್ರಿಗೊಳಿಸಲಿದೆ, ಉತ್ಪಾದನಾ ಶ್ರೇಷ್ಠತೆಗೆ ಅದರ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, May 6, 2024, 15:58 [IST]
English summary
Zen mobility unveiled manufacturing hub for zen micro pods
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+