ಬಡತನದಲ್ಲೂ ಸಾಧಿಸಬೇಕೆಂಬ ಹಂಬಲ: ಟ್ರಾಫಿಕ್‌ನಲ್ಲೇ ಯುಪಿಎಸ್‌ಸಿ ಪರೀಕ್ಷೆಗೆ ಓದುತ್ತಿರುವ Zomato ಬಾಯ್
ಅಖಿಲ ಭಾರತ ಸೇವೆಗಳು ಮತ್ತು ಕೇಂದ್ರೀಯ ಸೇವೆಗಳಿಗಾಗಿ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ - UPSC) ನಡೆಸುವ ಪರೀಕ್ಷೆಯನ್ನು ದೇಶದಲ್ಲಿಯೇ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಪ್ರತಿವರ್ಷ ಲಕ್ಷಾಂತರ ಸ್ಪರ್ಧಾರ್ಥಿಗಳು ಈ ಪರೀಕ್ಷೆಯನ್ನು ಎದುರಿಸುತ್ತಾರೆ. ಬೆರಳೆಣಿಗೆ ಮಂದಿಯಷ್ಟೇ ಉತ್ತೀರ್ಣರಾಗುತ್ತಾರೆ.
ಸದ್ಯ, ಟ್ರಾಫಿಕ್ ಮಧ್ಯೆಯೇ ಯುಪಿಎಸ್‌ಸಿ ಪರೀಕ್ಷೆಗೆ ಜೊಮಾಟೊ (Zomato) ಡೆಲಿವರಿ ಬಾಯ್ ಓದುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಆಯುಷ್ ಸಂಘಿ ಎನ್ನುವವರೂ ತಮ್ಮ 'ಎಕ್ಸ್' ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, 'ವಿಡಿಯೋ ನೋಡಿದ ಬಳಿಕ, ನೀವು ಕಷ್ಟಪಟ್ಟು ಅಧ್ಯಯನ ಮಾಡಲು ಬೇರೆ ಯಾವ ಪ್ರೇರಣೆ ಬೇಕಿಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ಶೀರ್ಷಿಕೆ ಬರೆದಿದ್ದಾರೆ.

ಮಾರ್ಚ್ 29 ರಂದು ಪೋಸ್ಟ್ ಮಾಡಲಾದ ಈ ವಿಡಿಯೋ 71 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದ್ದು, ಸುಮಾರು 2,000 ಮಂದಿ ಲೈಕ್ ಮಾಡಿದ್ದಾರೆ. ಹೇಗಾದರೂ ಮಾಡಿ ಯುಪಿಎಸ್‌ಸಿ (UPSC) ಪರೀಕ್ಷೆ ಪಾಸ್ ಮಾಡಬೇಕೆಂಬ ಗುರಿಯನ್ನು ಹೊಂದಿರುವ ಜೊಮಾಟೊ ಡೆಲಿವರಿ ಬಾಯ್ ಕಠಿಣ ಪರಿಶ್ರಮಕ್ಕೆ ನೆಟ್ಟಿಗರು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು, 'ಸಮರ್ಪಣಾ ಮನೋಭಾವ ಮತ್ತು ಭಕ್ತಿ ಇದ್ದರೆ ಎಲ್ಲವು ಸಾಧ್ಯ. ಭವಿಷ್ಯದಲ್ಲಿ ಅವರು ಶ್ರೇಷ್ಠ ವ್ಯಕ್ತಿಯಾಗಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಸಂಕಲ್ಪವಿದ್ದರೆ ಕನಸು ನನಸು ಮಾಡಿಕೊಳ್ಳಲು ಅಥವಾ ಗುರಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ಇಚ್ಛೆ ಇರುವಲ್ಲಿ ದಾರಿ ಇರುತ್ತದೆ' ಎಂದು ಹೇಳಿದ್ದಾರೆ.

ಇನ್ನೊಬ್ಬ ನೆಟ್ಟಿಗ, 'ಸ್ಥಳವಲ್ಲ. ಸ್ಥಾನ ಮುಖ್ಯವೆಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, 'ಈ ವಿಡಿಯೋ ತುಂಬಾ ಸ್ಪೂರ್ತಿದಾಯಕವಾಗಿದೆ. ಇದು ಹಿಂದೆಂದಿಗಿಂತಲೂ ಹೆಚ್ಚು ಕಷ್ಟಪಡುವಂತೆ ಮಾಡುತ್ತದೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಸಾಮಾಜಿಕ ಜಾಲತಾಣ ಬಳಕೆದಾರೊಬ್ಬರು ಜೊಮಾಟೊ ಡೆಲಿವರಿ ಬಾಯ್ ಹಾಗೂ ಇತರೆ ವಾಹನ ಸವಾರರ ಸುರಕ್ಷತೆಯ ಬಗ್ಗೆಯೂ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಇನ್ನೊಬ್ಬ ಸಾಮಾಜಿಕ ಜಾಲತಾಣ ಬಳಕೆದಾರ, 'ತುಂಬಾ ಸ್ಪೂರ್ತಿದಾಯಕ. ಆದರೆ ಇದು ಅತ್ಯಂತ ಅಪಾಯಕಾರಿ! ಸಂಪೂರ್ಣ ಏಕಾಗ್ರತೆಯಿಂದ ಚಾಲನೆ ಮಾಡುತ್ತಿರುವಾಗಲೂ ಈ ದಿನಗಳಲ್ಲಿ ರಸ್ತೆಗಳು ಅಷ್ಟೋ ಸುರಕ್ಷಿತವಾಗಿಲ್ಲ. ಒಂದು ಕಡೆ ಅಧ್ಯಯನ ಮಾಡುತ್ತಲೇ, ಗ್ರಾಹಕರೊಂದಿಗೂ ಮಾತನಾಡಿಕೊಂಡು ಚಾಲನೆ ಮಾಡುವುದು ಹೇಗೆ? ಇದನ್ನು ಮಾಡಬೇಡಿ' ಎಂದಿದ್ದಾರೆ. ಮತ್ತೊಬ್ಬರು, 'ಇದೊಂದು ರೋಗ.. ಪ್ರೇರಣೆ ಅಲ್ಲ' ಎಂದು ಕಾಮೆಂಟ್ ಮಾಡಿದ್ದಾರೆ.
ಟ್ರಾಫಿಕ್ ಮಧ್ಯೆಯೇ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿಯನ್ನು ನಡೆಸುತ್ತಿರುವ ಜೊಮಾಟೊ ಡೆಲಿವರಿ ಬಾಯ್, ಎಷ್ಟೋ ಮಂದಿಗೆ ನಿಜಕ್ಕೂ ಸ್ಫೂರ್ತಿಯಾಗಿದ್ದಾನೆ. ಬಡತನದಲ್ಲೂ ಸಾಧಿಸಬೇಕೆಂಬ ದೃಢ ಸಂಕಲ್ಪವನ್ನು ಮೆಚ್ಚಲೇಬೇಕು. ಇಲ್ಲಿ ಸುರಕ್ಷತೆಯೂ ಮುಖ್ಯವಾಗಿದ್ದು, ವಾಹನ ಚಲಾಯಿಸುವಾಗ ನಮ್ಮ ಸಂಪೂರ್ಣ ಗಮನವನ್ನು ರಸ್ತೆಯ ಮೇಲೆ ಕೇಂದ್ರೀಕರಿಸಬೇಕು. ಜೊತೆಗೆ ಅಕ್ಕ - ಪಕ್ಕದಲ್ಲಿ ಬರುವ ವಾಹನಗಳ ಮೇಲು ಹೆಚ್ಚಿನ ಗಮನವನ್ನು ಹರಿಸಬೇಕು. ಆ ಮೂಲಕ ಮುಂದಾಗಬಹುದಾದ ಅಪಾಯವನ್ನು ತಪ್ಪಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications