999.6 ಸಿಸಿಯ ಏಪ್ರಿಲಿಯಾ ಸೂಪರ್ ಬೈಕ್

ನೂತನ ತಂತ್ರಜ್ಞಾನದೊಂದಿಗೆ ಬಂದಿರುವ ಏಪ್ರಿಲಿಯಾ, ಕಂಪನಿಯ ಬ್ರಾಂಡ್ ಇಮೇಜ್ ಹೆಚ್ಚಿಸಲು ನೆರವಾಗುತ್ತದೆ ಎಂದು ಕಂಪನಿಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ. ಬೆಂಗಳೂರು, ಚೆನ್ನೈ, ದೆಹಲಿ, ಹೈದ್ರಾಬಾದ್, ಮುಂಬೈ ಮತ್ತು ಪುಣೆಯಲ್ಲಿರುವ ಡೀಲರ್ ಗಳಲ್ಲಿ ನೂತನ ಏಪ್ರಿಲಿಯಾ ಸೂಪರ್ ಬೈಕ್ ದೊರಕುತ್ತಿದೆ.
ಕಳೆದ ಸುಮಾರು ಎರಡು ದಶಕದಿಂದ ಏಪ್ರಿಲಿಯಾ ಜಾಗತಿಕ ಮಾರುಕಟ್ಟೆಯಲ್ಲಿ ಅತ್ಯುತ್ತಮ ಬೇಡಿಕೆ ಪಡೆದುಕೊಂಡಿತ್ತು. ಈ ಸೆಗ್ಮೆಂಟ್ ಬೈಕ್ ನಲ್ಲಿ ಇದು ತಾಂತ್ರಿಕವಾಗಿ ಅತ್ಯುತ್ತಮವಾಗಿರುವುದರಿಂದ ಸೂಪರ್ ಬೈಕ್ ಪ್ರೇಮಿಗಳಿಗೆ ಹೆಚ್ಚು ಇಷ್ಟವಾಗಿದೆ. ಇದು ಅತ್ಯುತ್ತಮ ರೇಸಿಂಗ್ ಬೈಕ್ ಕೂಡ ಹೌದು. ಇದು ಸುಮಾರು 45ಕ್ಕೂ ಹೆಚ್ಚು ವಿಶ್ವ ರೇಸಿಂಗ್ ಚಾಂಪಿಯನ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಸುಮಾರು 36 ಸ್ಪೀಡ್ ರೇಸಿಂಗ್ ಸ್ಪರ್ಧೆಗಳಲ್ಲಿ ಚಾಂಪಿಯನ್ ಪಡೆದಿದೆ. ಏಪ್ರಿಲಿಯಾ ಅತ್ಯಧಿಕ ಶಕ್ತಿಶಾಲಿ 180 ಎಚ್ ಪಿ, 999.6 ಸಿಸಿ, 65 ಡಿಗ್ರಿ ವಿ-ಫೋರ್ ಸಿಲಿಂಡರ್ ಎಂಜಿನ್ ಹೊಂದಿದೆ.


Click it and Unblock the Notifications








